ಹುಣಸೆಹಣ್ಣು ಕಟುವಾದ ಹುಳಿ ಮತ್ತು ಮಸಾಲೆಯುಕ್ತ ಪರಿಮಳಕ್ಕೆ ಹೆಸರುವಾಸಿಯಾಗಿದೆ. ಅಡುಗೆಗೆ ಮಾತ್ರವಲ್ಲದೆ ಆರೋಗ್ಯಕ್ಕೂ ಹುಣಸೆಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಹುಣಸೆಹಣ್ಣು (Tamarind) ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವಾಗಿದೆ. ಈ ಹುಣಸೆಯಲ್ಲಿ ವಿಶೇಷವಾಗಿ ವಿಟಮಿನ್ ಸಿ, ಫ್ಲೇವನಾಯ್ಡ್, ಕ್ಯಾರೋಟಿನ್, ವಿಟಮಿನ್ ಬಿ ಕಾಂಪ್ಲೆಕ್ಸ್ ಹೇರಳವಾಗಿದೆ. ಇದು ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸುಧಾರಿಸಲು ಮತ್ತು ಬಲಪಡಿಸಲು ಸಹಾಯ ಮಾಡುತ್ತದೆ. ಆದರೆ, ಅತಿಯಾದ ಹುಣಸೆಹಣ್ಣಿನ ಬಳಕೆಯು ಕೆಲವು ಅಡ್ಡಪರಿಣಾಮಗಳನ್ನು ಬೀರೀತು ಎಚ್ಚರ!
ಹುಣಸೆಹಣ್ಣುಗಳಲ್ಲಿ ಪೊಟ್ಯಾಸಿಯಂ ಅಂಶ ಹೆಚ್ಚಾಗಿದೆ. ಇದನ್ನು ಹೃದಯ ಬಡಿತವನ್ನು ನಿಯಂತ್ರಿಸಲು ಮತ್ತು ದ್ರವದ ಅಂಶವನ್ನು ಸಮತೋಲನಗೊಳಿಸಲು ಬಳಸಲಾಗುತ್ತದೆ. ಇದು ಫ್ಲೇವನಾಯ್ಡ್‌ಗಳಂತಹ ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ನಂಜುನಿವಾರಕ, ಶುಚಿಗೊಳಿಸುವ ಶಕ್ತಿಯನ್ನು ಹೊಂದಿರುವ ಹುಣಸೆಹಣ್ಣನ್ನು ಪಾತ್ರೆಗಳನ್ನು ಸ್ವಚ್ಛಗೊಳಿಸುವ ಲಿಕ್ವಿಡ್ನಲ್ಲಿಯೂ ಬಳಸಲಾಗುತ್ತದೆ. ಹುಣಸೆಹಣ್ಣು ನಮ್ಮ ಹೊಟ್ಟೆಯಲ್ಲಿನ ಹುಳುಗಳನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಟಿವೈರಲ್ ಏಜೆಂಟ್, ಆ್ಯಂಟಿ ಫಂಗಲ್ ಆಗಿದೆ. ಹಾಗೇ, ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ.
ಹುಣಸೆಹಣ್ಣು ಗಾಯವನ್ನು ಗುಣಪಡಿಸಲು ಸಹಾಯಕವಾಗಿದೆ. ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸುತ್ತದೆ. ಮಲಬದ್ಧತೆಯನ್ನು ಗುಣಪಡಿಸುತ್ತದೆ. ಕಫವನ್ನು ಕಡಿಮೆ ಮಾಡಲು ಹುಣಸೆಹಣ್ಣು ಸಹಕಾರಿ. ಹುಣಸೆಹಣ್ಣು ರಕ್ತದ ಟಾನಿಕ್ ಆಗಿ ಕಾರ್ಯನಿರ್ವಹಿಸುತ್ತದೆ. ದೇಹದಲ್ಲಿ ಹೆಚ್ಚು ರಕ್ತವನ್ನು ಉತ್ಪಾದಿಸಲು ಹುಣಸೆಹಣ್ಣು ಬಳಸಬಹುದು. ಹುಣಸೆಹಣ್ಣು ಸೇವಿಸುವುದರಿಂದ ಮಧುಮೇಹ ನಿವಾರಣೆಯಾಗುತ್ತದೆ.
ಇದನ್ನೂ ಓದಿ: Constipation Remedies: ಮಲಬದ್ಧತೆಯಿಂದ ಬಳಲುತ್ತಿದ್ದೀರಾ?; ಮನೆಯಲ್ಲೇ ಈ 5 ಪಾನೀಯ ಕುಡಿದು ನೋಡಿ
ಹುಣಸೆಹಣ್ಣು ಅನೇಕ ಉತ್ಕರ್ಷಣ ನಿರೋಧಕ ಸಂಯುಕ್ತಗಳ ಸಮೃದ್ಧ ಮೂಲವಾಗಿದೆ. ಆಂಟಿಆಕ್ಸಿಡೆಂಟ್ ಚಟುವಟಿಕೆಯು ಕ್ಯಾನ್ಸರ್ನಂತಹ ಅನೇಕ ಆರೋಗ್ಯ ಪರಿಸ್ಥಿತಿಗಳಿಗೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹುಣಸೆ ಹಣ್ಣನ್ನು ಸೇವಿಸುವುದರಿಂದ ಕಬ್ಬಿಣದ ಕೊರತೆಯ ರಕ್ತಹೀನತೆಯನ್ನು ತಡೆಯಬಹುದು. ಏಕೆಂದರೆ ಇದು ವಿಟಮಿನ್ ಸಿ ಅನ್ನು ಹೊಂದಿರುತ್ತದೆ. ಇದು ದೇಹದಲ್ಲಿ ಕಬ್ಬಿಣದ ಜೈವಿಕ ಲಭ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ದಿನಕ್ಕೆ ಸುಮಾರು 10 ಗ್ರಾಂ ಹುಣಸೆಹಣ್ಣು ಸೇವಿಸುವುದರಿಂದ ಯಾವುದೇ ತೊಂದರೆಯಿಲ್ಲ. ಹುಣಸೆಹಣ್ಣನ್ನು ಅತಿಯಾಗಿ ಸೇವಿಸಿದರೆ ಆರೋಗ್ಯದ ಮೇಲೆ ಏನೆಲ್ಲ ದುಷ್ಪರಿಣಾಮಗಳು ಉಂಟಾಗುತ್ತವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
– ಹಲ್ಲಿನ ಒಸಡಿಗೆ ಹಾನಿಯಾಗಬಹುದು. ಹುಣಸೆಹಣ್ಣು ಹೆಚ್ಚು ಹುಳಿ ಅಂಶವನ್ನು ಹೊಂದಿರುತ್ತದೆ. ಇದನ್ನು ಹೆಚ್ಚು ಸೇವಿಸಿದರೆ ಹಲ್ಲಿನ ಹಾನಿಯನ್ನು ಉಂಟುಮಾಡಬಹುದು. ನೀವು ಹೆಚ್ಚು ಹುಣಸೆಹಣ್ಣು ಸೇವಿಸಿದರೆ ಹಲ್ಲಿನ ಒಸಡಿನಲ್ಲಿರುವ ಆಮ್ಲದ ಅಂಶವು ಹೆಚ್ಚಾಗುತ್ತದೆ.
– ಅಲರ್ಜಿಯ ಪ್ರತಿಕ್ರಿಯೆಗಳಿಗೆ ಕಾರಣವಾಗಬಹುದು. ಹುಣಸೆಹಣ್ಣಿನ ಸಾಮಾನ್ಯ ನ್ಯೂನತೆಗಳಲ್ಲಿ ಒಂದೆಂದರೆ ಅಲರ್ಜಿ. ಅನೇಕರು ಹುಣಸೆಹಣ್ಣನ್ನು ಆಹಾರದಲ್ಲಿ ಸೇರಿಸಿಕೊಂಡು ಸೇವಿಸುವ ಬದಲು ನೇರವಾಗಿ ತಿನ್ನಲು ಬಯಸುತ್ತಾರೆ. ಆದರೆ ಇದು ರಿಂಗ್ವರ್ಮ್, ತುರಿಕೆ, ಊತ, ತಲೆತಿರುಗುವಿಕೆ, ಮೂರ್ಛೆ, ವಾಂತಿ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗಬಹುದು.
ಇದನ್ನೂ ಓದಿ: ಬಾಯಿಯ ದುರ್ವಾಸನೆಗೆ ಕಾರಣವೇನು? ಇದಕ್ಕೆ ಮನೆಮದ್ದುಗಳು ಯಾವುವು?
– ಹುಣಸೆಹಣ್ಣು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುವ ಹಣ್ಣು. ತಿನ್ನುವಾಗ ಇದು ಹೊಟ್ಟೆ ಮತ್ತು ಜಠರಗರುಳಿನ ಪ್ರದೇಶದಲ್ಲಿ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ‘ಆಸಿಡ್ ರಿಫ್ಲಕ್ಸ್’ ನಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗುತ್ತದೆ.
– ನೀವು ಯಾವುದಾದರೂ ಸಮಸ್ಯೆಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ನೀವು ಹುಣಸೆಹಣ್ಣು ತಿನ್ನುವುದನ್ನು ನಿಲ್ಲಿಸಬೇಕು. ಇದರ ಅತಿಯಾದ ಸೇವನೆಯು ರಕ್ತ ಕಣಗಳು ಕುಗ್ಗಲು ಕಾರಣವಾಗಬಹುದು. ಹುಣಸೆ ಹಣ್ಣಿನ ತಿರುಳು ವಿರೇಚಕ ಗುಣಗಳನ್ನು ಹೊಂದಿದೆ. ನೀವು ಔಷಧಿ ಸೇವಿಸುತ್ತಿದ್ದರೆ, ಹುಣಸೆಹಣ್ಣು ತಿನ್ನುವುದನ್ನು ನಿಲ್ಲಿಸಿ.
– ಹುಣಸೆಹಣ್ಣಿನ ಸೇವನೆಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಧುಮೇಹಿಗಳು ಈಗಾಗಲೇ ಮಧುಮೇಹದ ಔಷಧಿಯನ್ನು ತೆಗೆದುಕೊಳ್ಳುತ್ತಿರುವವರು ಹುಣಸೆಹಣ್ಣನ್ನು ತ್ಯಜಿಸಬೇಕು.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ