ಮಲಬದ್ಧತೆ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳಿಂದ ತ್ವರಿತ ಪರಿಹಾರವನ್ನು ಪಡೆಯಲು ಸಹಾಯ ಮಾಡುವ ಹಲವಾರು ಮನೆಮದ್ದುಗಳಿವೆ. ಅರಿಶಿನ, ಬಾಳೆಹಣ್ಣು, ಸೌತೆಕಾಯಿ, ನಾರಿನಂಶವಿರುವ ಸೊಪ್ಪುಗಳು, ಹಣ್ಣುಗಳು, ತರಕಾರಿಗಳನ್ನು ಸೇವಿಸಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಮಲಬದ್ಧತೆ ಬಾರದಂತೆ ತಡೆಯಲು ಸುಲಭ ಉಪಾಯವೆಂದರೆ ಹೆಚ್ಚು ದ್ರವ ಪದಾರ್ಥವನ್ನು ಸೇವಿಸುವುದು. ಇದು ಮಲಬದ್ಧತೆಯಿಂದ ಪರಿಹಾರವನ್ನು ಪಡೆಯಲು ಸಹಾಯ ಮಾಡುತ್ತದೆ.