ಹುಣಸೆಹಣ್ಣನ್ನು ಚಪ್ಪರಿಸಿ ತಿನ್ನುವವರಿಗೆ ಈ ಆರೋಗ್ಯ ಸಮಸ್ಯೆಗಳು ಎಂದಿಗೂ ಬರುವುದಿಲ್ಲ

ಹುಣಸೆಹಣ್ಣು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲಿಯೂ ಈಗ ಮಾರುಕಟ್ಟೆಯಲ್ಲಿ ಇದು ಯಥೇಚ್ಛವಾಗಿ ಲಭ್ಯವಿರುವುದರಿಂದ ಕೊಂಡು ತಂದು ಸೇವನೆ ಮಾಡಬಹುದಾಗಿದೆ. ಸಾಮಾನ್ಯವಾಗಿ ಹುಣಸೆಹಣ್ಣನ್ನು ಅದರ ಸುವಾಸನೆ ಮತ್ತು ಅದರಲ್ಲಿರುವ ರುಚಿಗೆ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದಿಲ್ಲದೆ ಕೆಲವು ಆಹಾರಗಳು ಅಪೂರ್ಣ ಎನಿಸಿಕೊಳ್ಳುತ್ತವೆ. ಹಾಗಾದರೆ ಹುಣಸೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಹುಣಸೆಹಣ್ಣನ್ನು ಚಪ್ಪರಿಸಿ ತಿನ್ನುವವರಿಗೆ ಈ ಆರೋಗ್ಯ ಸಮಸ್ಯೆಗಳು ಎಂದಿಗೂ ಬರುವುದಿಲ್ಲ
Imli Health Benefits

Updated on: Jan 01, 2026 | 5:47 PM

ಹುಣಸೆಹಣ್ಣು (Tamarind’s) ಎಂಬ ಹೆಸರು ಕೇಳಿದಾಕ್ಷಣ ಯಾರಿಗಾದರೂ ಬಾಯಲ್ಲಿ ನೀರು ಬರುವುದು ಸಹಜ. ಹುಳಿ ಮತ್ತು ಸಿಹಿಯ ಮಿಶ್ರಣವಾದ ಹುಣಸೆಹಣ್ಣು ತಿನ್ನುವುದಕ್ಕೆ ರುಚಿಕರ ಮಾತ್ರವಲ್ಲ, ಆರೋಗ್ಯ ಪ್ರಯೋಜನಗಳಿಂದಲೂ ಸಮೃದ್ಧವಾಗಿದೆ. ಸಾಮಾನ್ಯವಾಗಿ ಹುಣಸೆಹಣ್ಣನ್ನು ಅದರ ಸುವಾಸನೆ ಮತ್ತು ಅದರಲ್ಲಿರುವ ರುಚಿಗೆ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಇದಿಲ್ಲದೆ ಕೆಲವು ಆಹಾರಗಳು ಅಪೂರ್ಣ ಎನಿಸಿಕೊಳ್ಳುತ್ತವೆ. ಹಾಗಾದರೆ ಹುಣಸೆಹಣ್ಣು ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು, ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಹುಣಸೆಹಣ್ಣಿನಲ್ಲಿ ಉತ್ಕರ್ಷಣ ನಿರೋಧಕಗಳು, ಫೈಟೊಕೆಮಿಕಲ್‌ಗಳು, ವಿಟಮಿನ್ ಎ, ಸಿ, ಇ, ಕೆ, ಬಿ6, ಮೆಗ್ನೀಸಿಯಮ್, ರಂಜಕ, ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಇತರ ಅಗತ್ಯ ಪೋಷಕಾಂಶಗಳಿವೆ. ಇವು ದೇಹವನ್ನು ವಿವಿಧ ಆರೋಗ್ಯ ಸಮಸ್ಯೆಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹುಣಸೆಹಣ್ಣು ತಿನ್ನುವುದರಿಂದ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಜೊತೆಗೆ, ತೂಕವನ್ನು ಕಡಿಮೆ ಮಾಡಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು.

ರಕ್ತದೊತ್ತಡವನ್ನು ನಿಯಂತ್ರಿಸಲು ಸಹಕಾರಿ

ಹುಣಸೆಹಣ್ಣು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬಲವಾದ ರೋಗನಿರೋಧಕ ಶಕ್ತಿ ದೇಹವನ್ನು ಅನೇಕ ರೀತಿಯ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಆದರೆ ಇದರ ಸೇವನೆ ಮಿತವಾಗಿರಲಿ. ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ಅಸ್ವಸ್ಥತೆಗೆ ಹುಣಸೆಹಣ್ಣು ಒಳ್ಳೆಯದು. ಇದು ಮುಟ್ಟಿನ ಸೆಳೆತವನ್ನು ನಿವಾರಿಸಲು, ದೇಹದಲ್ಲಿ ಎಲ್ಡಿಎಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಮತ್ತು ಎಚ್ಡಿಎಲ್ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಕಾರಿಯಾಗಿದೆ ಅಷ್ಟು ಮಾತ್ರವಲ್ಲ, ಇದು ರಕ್ತದೊತ್ತಡ ಮತ್ತು ಹೃದಯ ಬಡಿತವನ್ನು ನಿಯಂತ್ರಿಸಲು ಮತ್ತು ದೇಹದ ದ್ರವಗಳನ್ನು ಸಮತೋಲನಗೊಳಿಸಲು ಉಪಯುಕ್ತವಾಗಿದೆ.

ಇದನ್ನೂ ಓದಿ: ಚರ್ಮರೋಗ ಇದ್ಯಾ? ಚಳಿಗಾಲದಲ್ಲಿ ಸ್ನಾನ ಮಾಡುವಾಗ ಈ ತಪ್ಪು ಮಾಡಿದ್ರೆ ಸಮಸ್ಯೆ ಉಲ್ಬಣವಾಗುವುದು ಗ್ಯಾರೆಂಟಿ

ಚರ್ಮದ ಮೇಲಿನ ಸುಕ್ಕುಗಳಿಂದ ಮುಕ್ತಿ ನೀಡುತ್ತದೆ:

ಹುಣಸೆ ನೀರು ಮೊಡವೆಗಳಿಗೆ ರಾಮಬಾಣವಾಗಿದೆ. ಇದು ಚರ್ಮದ ಮೇಲಿನ ಸುಕ್ಕುಗಳು ಮತ್ತು ಕಲೆಗಳನ್ನು ತೆಗೆದುಹಾಕುತ್ತದೆ. ಸಣ್ಣ ಗಾಯಗಳು ಮತ್ತು ಸುಟ್ಟ ಗಾಯಗಳಿಂದ ಉಂಟಾಗುವ ಗುರುತುಗಳನ್ನು ತೆಗೆಯಲು ಸಹಾಯ ಮಾಡುತ್ತದೆ. ಜೊತೆಗೆ ಕೂದಲನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಹಾಗಾಗಿ ಇದನ್ನು ಮಿತವಾಗಿ ಸೇವನೆ ಮಾಡುವುದರಿಂದ ಅನೇಕ ರೀತಿಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:46 pm, Thu, 1 January 26