ಚಳಿಗಾಲದಲ್ಲಿ ಐಸ್ ಕ್ರೀಮ್ ತಿಂದ್ರೆ ನಿಜವಾಗಿಯೂ ನೆಗಡಿ, ಕೆಮ್ಮು ಬರುತ್ತಾ? ಇಲ್ಲಿದೆ ತಜ್ಞರು ನೀಡಿದ ಅಚ್ಚರಿ ಮಾಹಿತಿ
ಐಸ್ ಕ್ರೀಮ್ ಯಾರಿಗೆ ತಾನೇ ಇಷ್ಟ ಆಗಲ್ಲ ಹೇಳಿ? ಕೆಲವರಂತೂ ಮಳೆಯಾಗಲಿ, ಚಳಿಯಾಗಲಿ ಸಮಯವನ್ನು ಲೆಕ್ಕಿಸದೆಯೇ ಐಸ್ ಕ್ರೀಮ್ ತಿನ್ನುತ್ತಾರೆ. ಆದರೆ, ಮನೆಯಲ್ಲಿ ಹಿರಿಯರು ಮಾತ್ರ ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನೆಗಡಿ ಮತ್ತು ಕೆಮ್ಮು ಬರುತ್ತೆ ತಿನ್ನಬೇಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಹಾಗಾದರೆ, ಇದು ಎಷ್ಟು ನಿಜ! ಚಳಿಗಾಲದಲ್ಲಿ ತಣ್ಣನೆಯ ಆಹಾರ ಸೇವನೆ ಮಾಡುವುದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತದೆಯೇ... ಈ ಕುರಿತಂತೆ ತಜ್ಞರು ನೀಡಿದ ಅಚ್ಚರಿಯ ಮಾಹಿತಿ ಇಲ್ಲಿದೆ.

ಹೊರಗೆ ಎಷ್ಟೇ ಚಳಿ (Winter) ಇರಲಿ ಐಸ್ ಕ್ರೀಮ್ ಪಾರ್ಲರ್ ಗಳಲ್ಲಿ ಜನ ಕಡಿಮೆಯಾಗುವುದಿಲ್ಲ. ಕೆಲವರಿಗೆ ಐಸ್ ಕ್ರೀಮ್ ತಿನ್ನುವುದಕ್ಕೆ ಸಮಯವಿರುವುದಿಲ್ಲ. ಯಾವಾಗ ಕೊಟ್ಟರು ಖುಷಿಯಿಂದ ತಿನ್ನುತ್ತಾರೆ. ಆದರೆ, ಮನೆಯಲ್ಲಿ ಹಿರಿಯರು ಮಾತ್ರ ಚಳಿಗಾಲದಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನೆಗಡಿ ಮತ್ತು ಕೆಮ್ಮು ಬರುತ್ತೆ ತಿನ್ನಬೇಡಿ ಎಂದು ಎಚ್ಚರಿಸುತ್ತಲೇ ಇರುತ್ತಾರೆ. ಹಾಗಾದರೆ, ಇದು ಎಷ್ಟು ನಿಜ! ಚಳಿಗಾಲದಲ್ಲಿ ತಣ್ಣನೆಯ ಆಹಾರ ಸೇವನೆ ಮಾಡುವುದರಿಂದ ನಿಜವಾಗಿಯೂ ಆರೋಗ್ಯ ಹಾಳಾಗುತ್ತದೆಯೇ… ಈ ಕುರಿತಂತೆ ತಜ್ಞರು ನೀಡಿದ ಮಾಹಿತಿ ಇಲ್ಲಿದೆ.
ಐಸ್ ಕ್ರೀಮ್ ತಿನ್ನುವುದರಿಂದ ನೆಗಡಿಯಾಗುತ್ತದೆಯೇ?
ತಜ್ಞರ ಪ್ರಕಾರ, ಐಸ್ ಕ್ರೀಮ್ ತಿನ್ನುವುದರಿಂದ ನೇರವಾಗಿ ನೆಗಡಿಯಾಗುವುದಿಲ್ಲ. ಸಾಮಾನ್ಯವಾಗಿ ಶೀತ ಮತ್ತು ಜ್ವರ ವೈರಸ್ ಅಥವಾ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ, ಶೀತ ತಾಪಮಾನದಿಂದಲ್ಲ. ತಣ್ಣನೆಯ ಆಹಾರ ಹೊಟ್ಟೆಗೆ ಹೋದಾಗ, ನಮ್ಮ ದೇಹದ ಆಂತರಿಕ ವ್ಯವಸ್ಥೆಯು ಅದನ್ನು ತಕ್ಷಣವೇ ಬೆಚ್ಚಗಾಗಿಸಲು ಪ್ರಯತ್ನಿಸುತ್ತದೆ. ಆದ್ದರಿಂದ, ದೇಹದ ಉಷ್ಣತೆ ಹಠಾತ್ತನೆ ಕಡಿಮೆಯಾಗುವುದಿಲ್ಲ. ಅದಲ್ಲದೆ ಐಸ್ ಕ್ರೀಮ್ ತಿನ್ನುವುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ರಿಲ್ಯಾಕ್ಸ್ ಆಗುತ್ತೆ. ಅದಕ್ಕಾಗಿಯೇ ಅನೇಕರು ಚಳಿಗಾಲದಲ್ಲಿಯೂ ಸಹ ಐಸ್ ಕ್ರೀಮ್ ತಿನ್ನಲು ಇಷ್ಟಪಡುತ್ತಾರೆ.
ಐಸ್ ಕ್ರೀಮ್ ಯಾರಿಗೆ ಒಳ್ಳೆಯದಲ್ಲ?
ಆರೋಗ್ಯವಂತರು ಐಸ್ ಕ್ರೀಮ್ ತಿನ್ನುವುದರಿಂದ ಹೆಚ್ಚಿನ ತೊಂದರೆಯಾಗುವುದಿಲ್ಲ, ಆದರೆ ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದರಿಂದ ದೂರವಿರುವುದೇ ಉತ್ತಮ.
ಗಂಟಲಿನ ಸಮಸ್ಯೆ: ಈಗಾಗಲೇ ಗಂಟಲು ನೋವು ಇರುವವರಿಗೆ, ತಣ್ಣನೆಯ ಐಸ್ ಕ್ರೀಮ್ ಆ ಅಸ್ವಸ್ಥತೆಯನ್ನು ಇನ್ನಷ್ಟು ಹದಗೆಡಿಸಬಹುದು.
ಅಸ್ತಮಾ, ಕೆಮ್ಮು ಇರುವವರು: ಉಸಿರಾಟದ ತೊಂದರೆ ಅಥವಾ ಆಗಾಗ ಕೆಮ್ಮು ಇರುವವರಿಗೆ ಒಳ್ಳೆಯದಲ್ಲ.
ತೇವಾಂಶದ ಕೊರತೆ: ಚಳಿಗಾಲದಲ್ಲಿ, ಗಾಳಿಯಲ್ಲಿ ಕಡಿಮೆ ಆರ್ದ್ರತೆ ಇರುತ್ತದೆ. ಐಸ್ ಕ್ರೀಮ್ ತಿನ್ನುವುದರಿಂದ ಗಂಟಲು ಮತ್ತಷ್ಟು ಒಣಗಬಹುದು, ಇದು ವೈರಲ್ ಸೋಂಕುಗಳಿಗೆ ಕಾರಣವಾಗಬಹುದು.
ಇದನ್ನೂ ಓದಿ: ಈ ಆರೋಗ್ಯ ಸಮಸ್ಯೆ ಇರುವವರು ಚಳಿಗಾಲದಲ್ಲಿ ಅಪ್ಪಿತಪ್ಪಿಯೂ ವಾಕಿಂಗ್ ಹೋಗಬಾರದು!
ಐಸ್ ಕ್ರೀಮ್ ತಿನ್ನುವಾಗ ಅನುಸರಿಸಬೇಕಾದ ಸಲಹೆಗಳು:
- ವಾರಕ್ಕೆ ಒಂದು ಅಥವಾ ಎರಡು ಬಾರಿ ಐಸ್ ಕ್ರೀಮ್ ತಿನ್ನಬಹುದು. ಅದಕ್ಕಿಂತ ಹೆಚ್ಚು ಬಾರಿ ಸೇವನೆ ಆರೋಗ್ಯಕ್ಕೆ ಒಳ್ಳೆಯದಲ್ಲ.
- ಐಸ್ ಕ್ರೀಮ್ ಅನ್ನು ಒಮ್ಮೆಗೆ ನುಂಗುವ ಬದಲು, ನಿಧಾನವಾಗಿ ತಿನ್ನುವುದು ಒಳ್ಳೆಯದು.
- ಐಸ್ ಕ್ರೀಮ್ ತಿಂದ ನಂತರ, ಒಂದು ಲೋಟ ಉಗುರು ಬೆಚ್ಚಗಿನ ನೀರು ಅಥವಾ ಹಾಲು ಕುಡಿಯುವುದರಿಂದ ಗಂಟಲು ಸಾಮಾನ್ಯ ಸ್ಥಿತಿಗೆ ಮರಳುತ್ತದೆ.
- ನಿಮಗೆ ಸ್ವಲ್ಪ ಶೀತ ಇದ್ದರೂ, ಆ ಸಮಯದಲ್ಲಿ ಐಸ್ ಕ್ರೀಮ್ ನಿಂದ ದೂರವಿರುವುದು ಉತ್ತಮ.
ಒಟ್ಟಾರೆಯಾಗಿ, ಚಳಿಗಾಲದಲ್ಲಿ ಆರೋಗ್ಯವಂತರಿಗೆ, ಐಸ್ ಕ್ರೀಮ್ ತಿನ್ನುವುದು ಸುರಕ್ಷಿತ. ಆದರೆ ಆರೋಗ್ಯ ತಜ್ಞರು ಹೇಳುವ ಪ್ರಕಾರ ಇದನ್ನು ಮಿತವಾಗಿ ಸೇವಿಸಬೇಕು. ಏನಾದರೂ ಅತಿಯಾಗಿ ಸೇವಿಸಿದರೆ ಇದು ಆರೋಗ್ಯಕ್ಕೆ ಹಾನಿಕಾರಕವಾಗಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




