ನಿಮ್ಮ ದೇಹದಲ್ಲಿ ಈ ರೀತಿ ಸಮಸ್ಯೆಗಳು ಕಂಡುಬರುವುದಕ್ಕೆ ನಿಂತು ನೀರು ಕುಡಿಯುವ ಅಭ್ಯಾಸವೇ ಕಾರಣ

ನೀರು ಆರೋಗ್ಯಕ್ಕೆ ಬಹಳ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ನೀರು ಕುಡಿಯುವ ಸರಿಯಾದ ವಿಧಾನದ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಲೇ ಇದೆ. ಅದರಲ್ಲಿಯೂ ನಿಂತಿರುವಾಗ ನೀರು ಕುಡಿಯಬಾರದು ಎನ್ನುವುದನ್ನು ಕೇಳಿರಬಹುದು. ನೀವು ಕೂಡ ನಿಂತುಕೊಂಡು ನೀರು ಕುಡಿಯುತ್ತಿದ್ದೀರಾ..? ಹಾಗಿದ್ದರೆ, ಜಾಗರೂಕರಾಗಿರಿ. ಆಯುರ್ವೇದದಲ್ಲಿ ಹೇಳುವ ಪ್ರಕಾರ, ಇದು ಜೀರ್ಣಕ್ರಿಯೆ, ಮೂತ್ರಪಿಂಡಗಳು ಮತ್ತು ಮೂಳೆಗಳ ಮೇಲೆ ಪರಿಣಾಮ ಬೀರುತ್ತದೆ. ಪ್ರಸಿದ್ಧ ಆಹಾರ ತಜ್ಞೆ ಜೂಹಿ ಅರೋರಾ ಅವರು ತಮ್ಮ ಇನ್ಸ್ಟಾಖಾತೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದು, ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ನಿಮ್ಮ ದೇಹದಲ್ಲಿ ಈ ರೀತಿ ಸಮಸ್ಯೆಗಳು ಕಂಡುಬರುವುದಕ್ಕೆ ನಿಂತು ನೀರು ಕುಡಿಯುವ ಅಭ್ಯಾಸವೇ ಕಾರಣ
ನಿಂತು ನೀರು ಕುಡಿಯುವ ಅಭ್ಯಾಸ

Updated on: Oct 14, 2025 | 7:30 PM

ದೇಹಕ್ಕೆ ನೀರು (Water) ಎಷ್ಟು ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇದು ನಮ್ಮ ದೇಹವನ್ನು ಹೈಡ್ರೇಟ್ ಆಗಿಡುವುದಲ್ಲದೆ, ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ. ಆದರೆ ನೀರು ಕುಡಿಯುವ ಸರಿಯಾದ ವಿಧಾನದ ಬಗ್ಗೆ ಬಹಳ ಹಿಂದಿನಿಂದಲೂ ಚರ್ಚೆಗಳು ನಡೆಯುತ್ತಲೇ ಇದೆ. ಅದರಲ್ಲಿಯೂ ನಿಂತಿರುವಾಗ ನೀರು ಕುಡಿಯಬಾರದು ಎನ್ನುವುದನ್ನು ನೀವು ಕೇಳಿರಬಹುದು. ಇದಕ್ಕೆ ಕಾರಣವೇನು ಎಂಬುದು ಎಲ್ಲರಿಗೂ ತಿಳಿಯದಿದ್ದರೂ ಕೂಡ ಹಲವರು ಈ ನಿಯಮವನ್ನು ಪಾಲನೆ ಮಾಡುತ್ತಾರೆ. ಹಾಗಾದರೆ ನಿಂತಿರುವಾಗ ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲವೇ, ಇದರಿಂದ ಮೊಣಕಾಲಿನ ಮೇಲೆ ನೇರ ಪರಿಣಾಮ ಬರುತ್ತದೆ ಎಂಬುದು ಸತ್ಯವೇ, ನಿಂತು ನೀರು ಕುಡಿಯುವುದರಿಂದ ದೇಹಕ್ಕೆ ಯಾವ ರೀತಿಯಲ್ಲಿ ಹಾನಿಯುಂಟಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ಪ್ರಸಿದ್ಧ ಆಹಾರ ತಜ್ಞೆ ಜೂಹಿ ಅರೋರಾ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿಚಾರಗಳನ್ನು ಹೆಂಚಿಕೊಂಡಿದ್ದು, ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಮೊಣಕಾಲುಗಳ ಮೇಲೆ ಯಾವ ರೀತಿಯ ಪರಿಣಾಮ ಉಂಟಾಗುತ್ತದೆ?

ಆಹಾರ ತಜ್ಞೆ ಜೂಹಿ ಅರೋರಾ ಅವರು ಹೇಳುವ ಪ್ರಕಾರ, ನಿಂತು ನೀರು ಕುಡಿಯುವುದರಿಂದ ಮೊಣಕಾಲುಗಳ ಮೇಲೆ ಹಾನಿಯುಂಟಾಗುತ್ತದೆ ಮಾತ್ರವಲ್ಲ ಇತರ ಕೀಲುಗಳ ಮೇಲೂ ಪರಿಣಾಮ ಬೀರುತ್ತದೆ ಎಂಬ ಮಾತು ಶುದ್ಧ ಸುಳ್ಳು. ನಿಂತುಕೊಂಡು, ನೀರು ಕುಡಿದಾಗ ಇದು ಅನ್ನನಾಳದ ಮೂಲಕ ನೇರವಾಗಿ ಹೊಟ್ಟೆಗೆ ಬೇಗನೆ ಹೋಗುತ್ತದೆ. ಇದು ಅಜೀರ್ಣ ಅಥವಾ ಅಸ್ವಸ್ಥತೆಗೆ ಕಾರಣವಾಗಬಹುದು ಹಾಗಾಗಿ ಕುಳಿತು ನಿಧಾನವಾಗಿ ನೀರು ಕುಡಿಯುವುದು ಒಳ್ಳೆಯದು. ಅದರ ಹೊರತು ಇದು ಮೊಣಕಾಲುಗಳಿಗೆ ನೇರ ಸಂಬಂಧ ಹೊಂದಿಲ್ಲ ಎಂದು ಹೇಳಿದ್ದಾರೆ.

ನಿಂತು ನೀರು ಕುಡಿಯುವುದರಿಂದ ಆಗುವ ಸಮಸ್ಯೆಗಳು?

ಸಾಮಾನ್ಯವಾಗಿ ನಿಂತುಕೊಂಡು ನೀರು ಕುಡಿಯುವುದು ಒಳ್ಳೆಯದಲ್ಲ. ಇದು ಮೊಣಕಾಲುಗಳಿಗೆ ನೇರವಾಗಿ ಹಾನಿಯಾಗದಿದ್ದರೂ, ಆಯುರ್ವೇದ ಮತ್ತು ಆರೋಗ್ಯ ತಜ್ಞರು ಹೇಳುವಂತೆ ಇದು ಜೀರ್ಣಾಂಗ ವ್ಯವಸ್ಥೆ ಮತ್ತು ಮೂತ್ರಪಿಂಡಗಳ ಮೇಲೆ ಖಂಡಿತವಾಗಿಯೂ ಪರಿಣಾಮ ಬೀರುತ್ತದೆ.

ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ: ನಿಂತುಕೊಂಡು ನೀರು ಕುಡಿದಾಗ, ಅದು ಅನ್ನನಾಳದ ಮೂಲಕ ಬೇಗನೆ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಈ ತ್ವರಿತ ಸೇವನೆಯು ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಪಡಿಸಿ ಅಜೀರ್ಣ ಅಥವಾ ಅನಿಲ ಸಮಸ್ಯೆಗಳಿಗೆ ಕಾರಣವಾಗಬಹುದು.

ಮೂತ್ರಪಿಂಡದ ನೋವಿಗೆ ಕಾರಣವಾಗುತ್ತೆ: ನಿಂತುಕೊಂಡು ನೀರು ಕುಡಿಯುವುದರಿಂದ ಮೂತ್ರಪಿಂಡಗಳ ಮೇಲೆ ಒತ್ತಡ ಉಂಟಾಗುತ್ತದೆ. ಕಾಲಾನಂತರದಲ್ಲಿ, ಇದು ಮೂತ್ರಪಿಂಡಗಳಲ್ಲಿ ದ್ರವದ ಶೇಖರಣೆಯಾಗಿ ಮುಂದೊಂದು ದಿನ ಮೂತ್ರಪಿಂಡದ ನೋವಿಗೂ ಕಾರಣವಾಗಬಹುದು.

ಮೂತ್ರಪಿಂಡಗಳ ಮೇಲೆ ಪರಿಣಾಮ: ನಿಂತು ನೀರನ್ನು ಕುಡಿಯುವುದರಿಂದ ಅದು ಫಿಲ್ಟರ್ ಆಗದೆ ಬೇಗನೆ ಹೊಟ್ಟೆಯನ್ನು ಪ್ರವೇಶಿಸುತ್ತದೆ. ಇದು ಮೂತ್ರನಾಳದಲ್ಲಿ ನೀರಿನಲ್ಲಿರುವ ಕಲ್ಮಶಗಳು ಸಂಗ್ರಹವಾಗಲು ಕಾರಣವಾಗುತ್ತದೆ. ಮಾತ್ರವಲ್ಲ ಮೂತ್ರಪಿಂಡದ ಕಾರ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಮೂತ್ರನಾಳಕ್ಕೆ ಸಂಬಂಧಿಸಿದ ಸೋಂಕಿನ ಅಪಾಯವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ತಪ್ಪದೆ ಈ ವಿಷಯ ತಿಳಿದುಕೊಳ್ಳಿ

ಪೋಷಕಾಂಶಗಳ ಹೀರಿಕೊಳ್ಳುವಿಕೆಯ ಕೊರತೆ: ನಿಂತು ನೀರನ್ನು ಕುಡಿದಾಗ ಅಗತ್ಯ ಪೋಷಕಾಂಶಗಳು ಮತ್ತು ಜೀವಸತ್ವಗಳು ಯಕೃತ್ತು ಮತ್ತು ಜೀರ್ಣಾಂಗ ವ್ಯವಸ್ಥೆಯ ಮೂಲಕ ಸರಿಯಾಗಿ ಹೀರಲ್ಪಡುವುದಿಲ್ಲ.

ನರಗಳ ಕಿರಿಕಿರಿ: ನಿಂತು ನೀರನ್ನು ಕುಡಿಯುವುದರಿಂದ ದೇಹದ ದ್ರವ ಸಮತೋಲನಕ್ಕೆ ಅಡ್ಡಿಯಾಗುತ್ತದೆ. ಮಾತ್ರವಲ್ಲ ನರಗಳಲ್ಲಿ ಕಿರಿಕಿರಿಯನ್ನು ಉಂಟುಮಾಡುತ್ತದೆ ಎಂದು ಹೇಳಲಾಗುತ್ತದೆ.

ಆಯುರ್ವೇದದಲ್ಲಿ ಹೇಳಿರುವ ಪ್ರಕಾರ, ನೀರನ್ನು ಯಾವಾಗಲೂ ಕುಳಿತುಕೊಂಡು, ಶಾಂತವಾಗಿ, ಸಣ್ಣ ಗುಟುಕುಗಳಲ್ಲಿ ನಿಧಾನವಾಗಿ ಕುಡಿಯಬೇಕು. ನಿಂತಾಗ ಅಥವಾ ಆತುರದಿಂದ ನಡೆದುಕೊಂಡು ಹೋಗುತ್ತಿರುವ ಸಮಯದಲ್ಲಿ ನೀರನ್ನು ಕುಡಿಯಬಾರದು. ಜೊತೆಗೆ ದಿನಕ್ಕೆ ಕನಿಷ್ಠ 2 ರಿಂದ 3 ಲೀಟರ್ ನೀರು ಕುಡಿಯುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ