ಬಾಯಾರಿಕೆ ಇಲ್ಲದಿದ್ದರೂ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ತಪ್ಪದೆ ಈ ವಿಷಯ ತಿಳಿದುಕೊಳ್ಳಿ
ದೇಹ ಆರೋಗ್ಯವಾಗಿರಲು, ಆಂತರಿಕವಾಗಿ ಶುದ್ಧವಾಗಿರಲು ನಿರ್ಜಲೀಕರಣದಿಂದ ಮುಕ್ತವಾಗಿರಲು ನೀರು ಅತ್ಯಗತ್ಯ. ಮನುಷ್ಯನ ದೇಹಕ್ಕೆ ನೀರಿನ ಅವಶ್ಯಕತೆ ತುಂಬಾ ಇದೆ. ಆದರೆ ಅಗತ್ಯಕ್ಕಿಂತ ಹೆಚ್ಚು ನೀರನ್ನು ಕುಡಿಯುವುದು ಕೂಡ ದೇಹಕ್ಕೆ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿದೆಯೇ? ಹೌದು. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾದರೆ, ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಲೀ. ನೀರನ್ನು ಕುಡಿಯಬೇಕು? ಬಾಯಾರಿಕೆ ಆಗದಿದ್ದಾಗಲೂ ನೀರು ಕುಡಿಯುವುದು ಒಳ್ಳೆಯ ಅಭ್ಯಾಸವೇ? ಹೀಗೆ ಅನೇಕರಿಗೆ ಈ ರೀತಿ ಪ್ರಶ್ನೆ ಮೂಡುವುದು ಸಹಜ. ಇದಕ್ಕೆಲ್ಲಾ ಉತ್ತರ ಈ ಸ್ಟೋರಿಯಲ್ಲಿದೆ.

ನಮ್ಮ ದೇಹ ಆರೋಗ್ಯವಾಗಿರಲು ಅಗತ್ಯವಿರುವಷ್ಟು ನೀರಿನ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ವೈದ್ಯರು ದಿನವಿಡೀ ಸಾಧ್ಯವಾದಷ್ಟು ನೀರು ಕುಡಿಯಿರಿ ಎಂದು ಸಲಹೆ ನೀಡುತ್ತಾರೆ. ಆದರೆ, ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ದೇಹಕ್ಕೆ ಹಾನಿಕಾರಕ. ಕೆಲವೊಮ್ಮೆ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗಬಾರದು ಎನ್ನುವ ಕಾರಣಕ್ಕೆ ಅಗತ್ಯಕ್ಕಿಂತ ಜಾಸ್ತಿಯೇ ನೀರನ್ನು ಕುಡಿಯುತ್ತೇವೆ. ಈ ಅಭ್ಯಾಸ ನಮಗೆ ತಿಳಿಯದಂತೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ, ಒಬ್ಬ ವ್ಯಕ್ತಿಯು ದಿನಕ್ಕೆ ಎಷ್ಟು ಲೀ. ನೀರನ್ನು ಕುಡಿಯಬೇಕು? ಬಾಯಾರಿಕೆ ಆಗದಿದ್ದಾಗಲೂ ನೀರು (Water) ಕುಡಿಯುವುದು ಒಳ್ಳೆಯ ಅಭ್ಯಾಸವೇ? ಹೀಗೆ ಅನೇಕರಿಗೆ ಈ ರೀತಿ ಪ್ರಶ್ನೆ ಮೂಡುವುದು ಸಹಜ. ಹಾಗಾಗಿಯೇ ಈ ಸ್ಟೋರಿ ಮೂಲಕ ಇವುಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡಲಾಗಿದೆ.
ಸಾಮಾನ್ಯವಾಗಿ ದೇಹಕ್ಕೆ ನೀರು ಅತ್ಯಗತ್ಯ ಎಂದು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದರಿಂದ ದೇಹದ ಎಲೆಕ್ಟ್ರೋಲೈಟ್ ಸಮತೋಲನ ಹಾಳಾಗಿ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿಸುತ್ತಾರೆ. ಏಕೆಂದರೆ ಅರಿತೋ ಅರಿಯದೆಯೋ ಅತಿಯಾಗಿ ನೀರಿನ ಸೇವನೆ ಮಾಡುವುದರಿಂದ ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಹೆಚ್ಚಿಸುತ್ತದೆ. ಏಕೆಂದರೆ ಮೂತ್ರಪಿಂಡಗಳು ನಿರಂತರವಾಗಿ ನೀರನ್ನು ಫಿಲ್ಟರ್ ಮಾಡಲು ಹೆಚ್ಚಿನ ಒತ್ತಡವನ್ನು ಸಹಿಸಿಕೊಳ್ಳಬೇಕಾಗುತ್ತದೆ. ಇದು ಮೆದುಳಿನ ಮೇಲೂ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ಮೆದುಳಿನ ಕೋಶಗಳು ಊದಿಕೊಳ್ಳುತ್ತವೆ.
ದಿನಕ್ಕೆ ಎಷ್ಟು ಲೀಟರ್ ನೀರು ಕುಡಿಯಬೇಕು?
ಹೆಚ್ಚು ನೀರು ಕುಡಿಯುವುದರಿಂದ ಕೆಲವರಿಗೆ ತಲೆನೋವು ಮತ್ತು ನಿರಂತರ ತಲೆತಿರುಗುವಿಕೆ ಉಂಟಾಗುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅತಿಯಾಗಿ ನೀರು ಕುಡಿಯುವುದರಿಂದ ಎಲೆಕ್ಟ್ರೋಲೈಟ್ ಅಸಮತೋಲನದಿಂದಾಗಿ ರಕ್ತದೊತ್ತಡದ ಏರಿಳಿತಗಳು ಉಂಟಾಗಬಹುದು. ಸಾಮಾನ್ಯವಾಗಿ, ಪ್ರತಿಯೊಬ್ಬ ವ್ಯಕ್ತಿಯು ದಿನಕ್ಕೆ 2.5 ರಿಂದ 3 ಲೀಟರ್ ನೀರು ಕುಡಿಯುವುದು ಒಳ್ಳೆಯದು. ಆದರೆ, ನಿಮ್ಮ ದೇಹ ಹೆಚ್ಚು ಬೆವರುತ್ತಿದ್ದರೆ, ನೀವು ಇದಕ್ಕಿಂತ ಸ್ವಲ್ಪ ಹೆಚ್ಚು ನೀರು ಕುಡಿಯುವುದು ಒಳ್ಳೆಯದು.
ಇದನ್ನೂ ಓದಿ: ಹವಾಮಾನಕ್ಕೆ ಅನುಗುಣವಾಗಿ ಯಾವ ಪಾತ್ರೆಯಲ್ಲಿ ನೀರು ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು
ಬಾಯಾರಿಕೆ ಆಗದಿದ್ದರೂ ನೀರು ಕುಡಿಯಬಹುದೇ?
ಬಾಯಾರಿಕೆಯು ದೇಹವು ದ್ರವದ ಕೊರತೆಯನ್ನು ಸೂಚಿಸುವ ಸಂಕೇತವಾಗಿದ್ದರೂ, ಈ ಸಂಕೇತ ಬರುವ ಮೊದಲೇ ನೀರು ಕುಡಿಯುವುದರಿಂದ ದೇಹವು ಹೈಡ್ರೇಟೆಡ್ ಆಗಿರಲು ಸಹಾಯ ಮಾಡುತ್ತದೆ. ಬಿಸಿ ವಾತಾವರಣ ಇರುವ ಸಂದರ್ಭಗಳಲ್ಲಿ ಅಥವಾ ಹೆಚ್ಚು ವ್ಯಾಯಾಮ ಮಾಡಿದ ಸಂದರ್ಭಗಳಲ್ಲಿ ನೀರನ್ನು ಹೆಚ್ಚು ಹೆಚ್ಚು ಕುಡಿಯುವುದು ಒಳ್ಳೆಯದು. ನಿಮ್ಮ ದೇಹ ಹೈಡ್ರೇಟೆಡ್ ಆಗಿದೆಯೋ? ಇಲ್ಲವೋ ಎಂಬುದನ್ನು ತಿಳಿಯಲು ಮೂತ್ರದ ಬಣ್ಣವನ್ನು ಗಮನಿಸಿ. ಅದು ತಿಳಿ ಬಣ್ಣದಲ್ಲಿದ್ದರೆ, ನೀವು ಚೆನ್ನಾಗಿ ಹೈಡ್ರೇಟೆಡ್ ಆಗಿದ್ದೀರಿ ಎಂದರ್ಥ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




