ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್​​ನಿಂದ ಹೆಚ್ಚಿನ ಪ್ರಯೋಜನವಿಲ್ಲ; ಸಂಶೋಧನೆ

|

Updated on: Feb 15, 2023 | 5:52 PM

ಪ್ರಪಂಚದಾದ್ಯಂತದ ವಿಶ್ವವಿದ್ಯಾನಿಲಯಗಳ 12 ಸಂಶೋಧಕರ ನೇತೃತ್ವದ ಸಂಶೋಧನೆಯು ಕೋವಿಡ್ -19 ಹರಡುವಿಕೆಯನ್ನು ತಡೆಯುವಲ್ಲಿ ಫೇಸ್​​ ಮಾಸ್ಕ್​​ಗಳು ದೊಡ್ಡ ಮಟ್ಟದ ಪರಿಣಾಮವನ್ನು ಬೀರಿಲ್ಲ ಎಂದು ತಿಳಿಸಿದೆ.

ವೈರಸ್ ಸೋಂಕು ಹರಡುವಿಕೆ ತಡೆಯುವಲ್ಲಿ ಮಾಸ್ಕ್​​ನಿಂದ ಹೆಚ್ಚಿನ ಪ್ರಯೋಜನವಿಲ್ಲ; ಸಂಶೋಧನೆ
ಸಾಂದರ್ಭಿಕ ಚಿತ್ರ
Follow us on

ಕೊರೋನಾ(Covid-19) ಸಾಂಕ್ರಾಮಿಕ ವಿಶ್ವದಾದ್ಯಂತ ಸಾಕಷ್ಟು ಸಾವು ನೋವಿಗೆ ಕಾರಣವಾಗಿದೆ. ಜೊತೆಗೆ ಆ ಸಮಯದಲ್ಲಿ ಮಾಸ್ಕ್(Face Masks) ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಈಗಾಲೂ ಕೂಡ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​​ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಆದರೆ ಇತ್ತೀಚಿನ ಸಂಶೋಧನೆಯೊಂದು ಸಾಂಕ್ರಾಮಿಕ ರೋಗ ಹರಡುವಲ್ಲಿ ಫೇಸ್​​ ಮಾಸ್ಕ್​​ಗಳು ದೊಡ್ಡ ಮಟ್ಟದ ಪ್ರಯೋಜನವನ್ನು ನೀಡಿಲ್ಲ ಎಂದು ಬಹಿರಂಗಪಡಿಸಿದೆ.

ಪ್ರಪಂಚದಾದ್ಯಂತದ ವಿಶ್ವವಿದ್ಯಾನಿಲಯಗಳ 12 ಸಂಶೋಧಕರ ನೇತೃತ್ವದ ಸಂಶೋಧನೆಯ  ಕೊಕ್ರೇನ್ ಲೈಬ್ರರಿ ಪ್ರಕಟಿಸಿದ ವಿಮರ್ಶೆಯು ಕೋವಿಡ್ -19 ಹರಡುವಿಕೆಯನ್ನು ತಡೆಯುವಲ್ಲಿ ಫೇಸ್​​ ಮಾಸ್ಕ್​​ಗಳು ರೋಗವನ್ನು ತಡೆಯುವಲ್ಲಿ ದೊಡ್ಡ ಮಟ್ಟದ ಪರಿಣಾಮವನ್ನು ಬೀರಿಲ್ಲ ಎಂದು ತಿಳಿಸಿದ್ದಾರೆ.  ಕೋವಿಡ್​​ 19 ಸಾವಿರಾರು ಸಾವು ನೋವುಗಳಿಗೆ ಕಾರಣವಾಗಿದೆ. ಆದರೆ ಫೇಸ್​ ಮಾಸ್ಕ್​​​ ಧರಿಸುವುದರಿಂದ ಉಸಿರಾಟದ ವೈರಸ್‌ಗಳ ಹರಡುವಿಕೆಯನ್ನು ತಡೆಯಬಹುದೇ ಎಂಬುದಕ್ಕೆ ಸಾಕಷ್ಟು ಪುರಾವೆಗಳಿಲ್ಲ. ಜೊತೆಗೆ ವೈದ್ಯಕೀಯ ಅಥವಾ ಶಸ್ತ್ರ ಚಿಕಿತ್ಸೆಯಲ್ಲಿ ಬಳಸುವ ಮಾಸ್ಕ್​​​ ಮತ್ತು N95 ನಡುವೆ ಯಾವುದೇ ಸ್ಪಷ್ಟ ವ್ಯತ್ಯಾಸವಿಲ್ಲ ಎಂದು ಅಧ್ಯಯನವು ಹೇಳಿಕೊಂಡಿದೆ.

ಇದನ್ನೂ ಓದಿ: ಕುಸಿಯುತ್ತಿರುವ ಜನಸಂಖ್ಯೆ, ಬಂಜೆತನಕ್ಕೆ ಉಚಿತ ಚಿಕಿತ್ಸೆ ನೀಡ್ತಿದೆ ಈ ದೇಶ

ಆದರೆ ಸೆಪ್ಟೆಂಬರ್​​ನಲ್ಲಿ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಶನ್ (CDC)ನ ನಿರ್ದೇಶಕ ಡಾ ರಾಬರ್ಟ್ ರೆಡ್‌ಫೀಲ್ಡ್ ಫೇಸ್ ಮಾಸ್ಕ್‌ಗಳು ನಮ್ಮಲ್ಲಿರುವ ಪ್ರಮುಖ ಶಕ್ತಿಶಾಲಿ ಆರೋಗ್ಯ ಸಾಧನವಾಗಿದೆ ಎಂದು ಹೇಳಿದ್ದರು. ಆದರೆ ಇದೀಗಾ ನಡೆಸಿದ ಕೊಕ್ರೇನ್ ಲೈಬ್ರರಿ ಪ್ರಕಟಿಸಿದ ವಿಮರ್ಶೆಯು ಯಾವುದೇ ಅಧಿಕ ಮಟ್ಟದ ಪ್ರಯೋಜನವನ್ನು ಹೊಂದಿಲ್ಲ ಎಂದು ತಿಳಿಸಿದೆ. ಈ ಸಂಶೋಧನೆಗೆ ಕೋವಿಡ್​​ 19 ಹೊರತು ಪಡಿಸಿ, 2009ರ H1N1 ಕಾಯಿಲೆ, ಹಾಗೂ 2016ವರೆಗಿನ ಸಮಯದಲ್ಲಿನ ಸಾಂಕ್ರಾಮಿಕ ರೋಗಗಳ ಡೇಟಾವನ್ನು ಸಂಗ್ರಹಿಸಿ, ಈ ಫಲಿತಾಂಶವನ್ನು ಪ್ರಕಟಿಸಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 5:52 pm, Wed, 15 February 23