ನಾವು ದಿನನಿತ್ಯ, ಆಹಾರ ಆಯ್ಕೆಗಳನ್ನು ಮಾಡುವಾಗ ಸಾಮಾನ್ಯವಾಗಿ ಅವುಗಳನ್ನು ಆರೋಗ್ಯಕರ ಮತ್ತು ಅನಾರೋಗ್ಯಕರ ಆಹಾರಗಳಾಗಿ ವರ್ಗೀಕರಿಸುತ್ತೇವೆ. ಆದರೆ ನೀವು ತಿನ್ನುವ ಆಹಾರ ಆರೋಗ್ಯಕರವಾಗಿದೆ ಮತ್ತು ನೀವು ತಿನ್ನದೇ ತಪ್ಪಿಸುತ್ತಿರುವ ಆಹಾರ ಅನಾರೋಗ್ಯಕರವಾಗಿವೆ ಎಂದು ನಿಮಗೆ ಖಚಿತವಾಗಿದೆಯೇ? ಏಕೆಂದರೆ ನಾವು ಬಹಳಷ್ಟು ಮಾಹಿತಿಗಳನ್ನು ಓದುವುದರಿಂದ ನಾವು ಆಗಾಗ ಗೊಂದಲಕ್ಕೊಳಗಾಗುತ್ತೇವೆ ಮತ್ತು ನಮ್ಮ ಆಹಾರ ಸೇವನೆಯಲ್ಲಿ ಕೆಲವು ತಪ್ಪುಗಳನ್ನು ಮಾಡುತ್ತೇವೆ. ಅದಲ್ಲದೆ ಆಹಾರಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ನಮ್ಮ ಮೊದಲ ತಪ್ಪು. ನೀವು ಊಟ ಮಾಡುವ ತಟ್ಟೆಯಲ್ಲಿ ಪ್ರತಿಯೊಂದು ರೀತಿಯ ಪೋಷಕಾಂಶ ಮತ್ತು ಸಂಯುಕ್ತದ ಸರಿಯಾದ ಸಮತೋಲನವಿದ್ದಾಗ ಆಹಾರವನ್ನು ಆರೋಗ್ಯಕರವೆಂದು ಪರಿಗಣಿಸಬಹುದು ಎಂದು ನೀವು ಅರಿತುಕೊಳ್ಳಬೇಕು. ಇಲ್ಲಿ ನಾವು ಕೆಲವು ಸಾಮಾನ್ಯ ಆಹಾರಗಳನ್ನು ಅಂದರೆ ನೀವು ‘ಅನಾರೋಗ್ಯಕರ’ ಎಂದು ಕರೆಯುವುದನ್ನು ತಪ್ಪಿಸಲು ಮತ್ತು ಆ ಮೂಲಕ ನೀವು ಭಾವಿಸುವಷ್ಟು ಕೆಟ್ಟದಲ್ಲ ಎಂದು ಅರಿವು ಮೂಡಿಸಲು ಕೆಲವು ಮಾಹಿತಿ ನೀಡಲಾಗಿದೆ.
1. ಆಲೂಗಡ್ಡೆ: ಪ್ರಪಂಚದಾದ್ಯಂತದ ಪ್ರತಿಯೊಂದು ಅಡುಗೆ ಮನೆಯಲ್ಲಿ ಲಭ್ಯವಿರುವ ಆಲೂಗಡ್ಡೆ ಬಹುಮುಖ ತರಕಾರಿಯಾಗಿದೆ. ದುರದೃಷ್ಟವಶಾತ್, ಆಲೂಗಡ್ಡೆ ಹೆಚ್ಚಾಗಿ ನಮ್ಮ ಆರೋಗ್ಯಕರ ಆಹಾರ ಕ್ರಮಗಳಲ್ಲಿ ಸ್ಥಾನವನ್ನು ಗಳಿಸಲು ವಿಫಲವಾಗುತ್ತದೆ. ಏಕೆಂದರೆ ಆಲೂಗಡ್ಡೆ ಕೊಬ್ಬು ಹೆಚ್ಚಿಸುತ್ತದೆ ಮತ್ತು ಅನಾರೋಗ್ಯಕರ ಎಂದು ಜನರು ಭಾವಿಸುವಂತೆ ಮಾಡುತ್ತದೆ ಇದಕ್ಕೆ ಅದರಲ್ಲಿರುವ ಪಿಷ್ಟದ ಅಂಶವೇ ಕಾರಣ. ಆದರೆ ಸತ್ಯ ಇದಕ್ಕೆ ತದ್ವಿರುದ್ಧವಾಗಿದೆ ಎಂದು ನಿಮಗೆ ತಿಳಿದಿದೆಯೇ? ಆಲೂಗಡ್ಡೆಯಲ್ಲಿ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಉತ್ತಮ ಪ್ರಮಾಣದ ಫೈಬರ್ ಇದೆ. ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ, ನೀವು ಉತ್ತಮ ರುಚಿಯೊಂದಿಗೆ ಈ ಎಲ್ಲಾ ಪ್ರಯೋಜನಗಳನ್ನು ಆನಂದಿಸಬಹುದು.
2. ಬಿಳಿ ಅಕ್ಕಿ: ಇಂದು, ಜನರು ಆರೋಗ್ಯಕರ ಜೀವನಶೈಲಿಯತ್ತ ತಿರುಗುತ್ತಿರುವುದರಿಂದ, ಬಿಳಿ ಅಕ್ಕಿಯನ್ನು ಕ್ರಮೇಣ ಕಂದು ಅಕ್ಕಿ, ಸಿರಿಧಾನ್ಯಗಳು ಮತ್ತು ಹೆಚ್ಚಿನವುಗಳೊಂದಿಗೆ ಬದಲಾಯಿಸಲಾಗುತ್ತಿದೆ. ಸಿರಿಧಾನ್ಯಗಳು ಮತ್ತು ಕಂದು ಅಕ್ಕಿಯ ಆರೋಗ್ಯ ಪ್ರಯೋಜನಗಳನ್ನು ನಾವು ಅಲ್ಲಗಳೆಯುವುದಿಲ್ಲ ಆದರೂ ಅದು ಬಿಳಿ ಅಕ್ಕಿಯ ಒಳ್ಳೆ ಗುಣಗಳನ್ನು ಕಡಿಮೆ ಮಾಡುವುದಿಲ್ಲ ಎಂಬುದು ಸತ್ಯ. ಬಿಳಿ ಅಕ್ಕಿ ಗ್ಲುಟೆನ್ ಮುಕ್ತವಾಗಿದೆ, ನಿಮಗೆ ಸಾಕಷ್ಟು ಶಕ್ತಿಯನ್ನು ಒದಗಿಸುತ್ತದೆ ಮತ್ತು ಸುಲಭವಾಗಿ ಜೀರ್ಣವಾಗುತ್ತದೆ. ಈ ಅಂಶಗಳು ನಿಮ್ಮ ಸಮತೋಲಿತ ಆಹಾರ ಪದ್ಧತಿಗೆ ಸೇರಿಸಲು ಪರಿಪೂರ್ಣ ಆಯ್ಕೆಯಾಗಿದೆ, ಇದನ್ನು ಸಹಜವಾಗಿ, ಮಿತವಾಗಿ, ನೀವು ಮನೆಯಲ್ಲಿ ರುಚಿಕರವಾದ ಅಕ್ಕಿಯಿಂದ ಪಾಕವಿಧಾನಗಳನ್ನು ಪ್ರಯತ್ನಿಸಬಹುದು.
3. ಚಾಕೊಲೇಟ್: ಚಾಕೊಲೇಟ್ಗಳು ಅನಾರೋಗ್ಯಕರವಲ್ಲ. ಆದರೆ ಅದರಲ್ಲಿರುವ ಕೆಲವು ಪ್ರಯೋಜನಗಳನ್ನು ಆನಂದಿಸಲು ನೀವು ಅವುಗಳನ್ನು ಬುದ್ಧಿವಂತಿಕೆಯಿಂದ ಆಯ್ಕೆ ಮಾಡಬೇಕು. ಚಾಕೊಲೇಟ್ಗಳು, ವಿಶೇಷವಾಗಿ ಕಪ್ಪು, ಉತ್ಕರ್ಷಣ ನಿರೋಧಕಗಳು, ಸತು, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಹಲವಾರು ಇತರ ಪೋಷಕಾಂಶಗಳನ್ನು ಹೊಂದಿರುತ್ತವೆ, ಇದು ಶಕ್ತಿಯನ್ನು ಹೆಚ್ಚಿಸುತ್ತದೆ, ಉತ್ತೇಜಕ ಮನಸ್ಥಿತಿ ಮತ್ತು ದಿನವಿಡೀ ಸುಸ್ಥಿರ ಶಕ್ತಿಗೆ ಒಳ್ಳೆಯದು. ಚಾಕೊಲೇಟ್ ಗಳ ಬಗ್ಗೆ ಗೊಂದಲವನ್ನು ಉಂಟುಮಾಡುವ ಕೆಲವು ಸಾಮಾನ್ಯ ಮಿಥ್ಯೆಗಳನ್ನು ಸಹ ನೀವು ತಳ್ಳಿಹಾಕಬಹುದು.
ಇದನ್ನೂ ಓದಿ: ನಿಮ್ಮನ್ನು ಆರೋಗ್ಯಕರವಾಗಿರಿಸಿಕೊಳ್ಳಲು ಈ ಸಿಂಪಲ್ ಟಿಪ್ಸ್ ಪಾಲಿಸಿ
4. ಮೊಟ್ಟೆಯ ಹಳದಿ ಲೋಳೆ: ಮೊಟ್ಟೆಗಳನ್ನು ತಿನ್ನುವಾಗ ನೀವು ಆ ಚಿನ್ನದ ಹಳದಿ ಲೋಳೆಯನ್ನು ಎಸೆಯುತ್ತೀರಾ? ಹೌದು ಎಂದಾದಲ್ಲಿ, ಈಗಲೇ ಅದನ್ನು ಮಾಡುವುದನ್ನು ನಿಲ್ಲಿಸಿ! ಮೊಟ್ಟೆಯ ಹಳದಿ ಲೋಳೆ ವಿಟಮಿನ್ ಗಳು, ಕಬ್ಬಿಣ, ಪೊಟ್ಯಾಸಿಯಮ್, ಮೆಗ್ನೀಸಿಯಮ್ ಮತ್ತು ಇತರ ಅಗತ್ಯ ಪೋಷಕಾಂಶಗಳಿಂದ ತುಂಬಿದೆ. ಮಿತವಾಗಿ ಸೇವಿಸಿದಾಗ, ಮೊಟ್ಟೆಯ ಹಳದಿ ಲೋಳೆಯನ್ನು ಬಿಳಿಭಾಗದೊಂದಿಗೆ ಬಳಸುವುದರಿಂದ ಆರೋಗ್ಯ ಮತ್ತು ರುಚಿ ಎರಡರ ದೃಷ್ಟಿಯಿಂದಲೂ ಒಳ್ಳೆಯ ಪೋಷಕಾಂಶಗಳನ್ನು ನೀಡುತ್ತದೆ. ನಿಮಗೆ ಬೇಕಾದಲ್ಲಿ ಸಂಪೂರ್ಣ ಮೊಟ್ಟೆ ಒಳಗೊಂಡಿರುವ ಕೆಲವು ಆರೋಗ್ಯಕರ ಆಹಾರಗಳನ್ನು ಮಾಡಿ ನೋಡಬಹುದು.
5. ಕಾಫಿ: ಅತಿಯಾದ ಕೆಫೀನ್ ಸೇವನೆಯು ನಿಮ್ಮ ಆರೋಗ್ಯಕ್ಕೆ ಕೆಟ್ಟದ್ದು ಎಂದು ಪರಿಗಣಿಸಲಾಗುತ್ತದೆ, ಅದಕ್ಕಾಗಿಯೇ ನಿಮ್ಮಲ್ಲಿ ಅನೇಕರು ಅದನ್ನು ಸಂಪೂರ್ಣವಾಗಿ ತಪ್ಪಿಸಲು ಪ್ರಯತ್ನಿಸುತ್ತೀರಿ. ಆದರೆ ಹಾರ್ವರ್ಡ್ ವಿಶ್ವವಿದ್ಯಾಲಯದ ವರದಿಯ ಪ್ರಕಾರ, “ಹೆಚ್ಚಿನ ಜನರಿಗೆ, ಮಧ್ಯಮ ಕಾಫಿ ಸೇವನೆಯು ಆರೋಗ್ಯಕರ ಪರಿಣಾಮ ನೀಡುತ್ತದೆ.” ಎಂದು ಹೇಳಲಾಗಿದೆ. ವರದಿಯ ಪ್ರಕಾರ, ದಿನಕ್ಕೆ ಸುಮಾರು ಎರಡು ಕಪ್ ಕಾಫಿ ಕುಡಿಯುವುದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಖಿನ್ನತೆ ಮತ್ತು ಪಿತ್ತಜನಕಾಂಗದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: