ಬದಲಾದ ಜೀವನಶೈಲಿ, ಕೆಲಸದ ಒತ್ತಡ, ಆಹಾರ ಸೇವನೆ ಸರಿಯಾಗಿ ಆಗದೇ ಇರುವುದಿಂದ ಹೊಟ್ಟೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲೂ ಮುಖ್ಯವಾಗಿ ಕರುಳಿನ ಸೋಂಕು (Gut Issue) ಹೆಚ್ಚು ಹಿಂಸೆ ನೀಡುತ್ತದೆ. ಹೀಗಾಗಿಯೇ ದಿನದಿಂದ ದಿನಕ್ಕೆ ಐಬಿಎಸ್ (IBS) ಸಮಸ್ಯೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಪ್ರಪಂಚದಲ್ಲಿ 7 ರಿಂದ 10 ಪ್ರತಿಶತದಷ್ಟು ಜನರು ಈ ಕರುಳಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಲ್ಲಿ ಮಹಿಳೆಯರೇ ಹೆಚ್ಚು ಎನ್ನುತ್ತದೆ ಅಧ್ಯಯನ. ಐಬಿಎಸ್ ಎಂದರೆ ಕರುಳಿನಲ್ಲಿ ಉಂಟಾಗುವ ಸೋಂಕು ಇದನ್ನು ಇಂಗ್ಲೀಷಿನಲ್ಲಿ Irritable Bowel Syndrome ಎಂದು ಕರೆಯುತ್ತಾರೆ. ಒಂದು ಬಾರಿ ಕರುಳಿನ ಸಮಸ್ಯೆಗಳು ಆರಂಭವಾದರೆ ಅದರಿಂದ ಇನ್ನೂ ಹಲವು ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಅದನ್ನು ಗುಣಪಡಿಸಿಕೊಳ್ಳುವುದು ಅಗತ್ಯವಾಗಿದೆ. ಆಯುರ್ವೇದದಲ್ಲಿ ಈ ರೀತಿಯ ಕರುಳಿನ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ರೀತಿ ಕರುಳಿನ ಸಮಸ್ಯೆಗಳ ಲಕ್ಷಣಗಳನ್ನು ಮೊದಲು ತಿಳಿದುಕೊಳ್ಳಿ.
ಕರುಳಿನ ಸಮಸ್ಯೆಯ ಲಕ್ಷಣಗಳು:
ಈ ರೀತಿಯ ಕರುಳಿನ ಸಮಸ್ಯೆಗಳಿಗೆ ಆಯುರ್ವೀದ ತಜ್ಞೆ ಡಾ ದೀಕ್ಷಾ ಭಾವಸರ್ ಒಂದಷ್ಟು ಸಲಹೆಗಳನ್ನು ನೀಡಿದ್ದಾರೆ ಇಲ್ಲಿದೆ ಮಾಹಿತಿ
ಪುದೀನಾ ನೀರು:
ಪುದೀನವು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕರುಳಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಪ್ರತಿದಿನ ಪುದೀನಾ ನೀರನ್ನು ಸೇವಿಸಿ ಕರುಳಿನ ಕಿರಿಕಿರಿಯನ್ನು ನಿವಾರಿಸಿಕೊಳ್ಳಿ
ಮಜ್ಜಿಗೆ:
ಕರುಳಿನ ಸಮಸ್ಯೆ ಇರುವವರಿಗೆ ಮಜ್ಜಿಗೆ ಉತ್ತಮ ಆಹಾರವಾಗಿದೆ. ಕರುಳಿನ ಸಮಸ್ಯೆಯಿಂದ ಮೂಲವ್ಯಾದಿಯಂತಹ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇದಕ್ಕಾಗಿ ಮಜ್ಜಿಗೆ ಕರುಳನ್ನು ತಂಪುಗೊಳಿಸಿ ಸಮಸ್ಯೆಯನ್ನು ನಿವಾರಿಸುತ್ತದೆ.
ಬಿಲ್ವ ಪತ್ರೆ ಕಾಯಿ /ಹಣ್ಣು:
ಕರುಳಿನ ಸಮಸ್ಯೆಗೆ ಬಿಲ್ವಪತ್ರೆ ಉತ್ತಮ ಪರಿಹಾರವಾಗಿದೆ. IBS, ಅಲ್ಸರೇಟಿವ್ ಕೊಲೈಟಿಸ್ ಮತ್ತು ಕರುಳಿನ ಆರೋಗ್ಯ ಸಮಸ್ಯೆಗಳಿಗೆ ಬಿಲ್ವ ಅತ್ಯುತ್ತಮ ಆಹಾರವಾಗಿದೆ.
ಗ್ಲುಟನ್, ಹಾಲು, ಡೀಪ್ ಫ್ರೈಡ್ ಆಹಾರಗಳನ್ನು ಸೇವಿಸದಿರಿ:
ಹಾಲು, ಡೀಪ್ ಫ್ರೈಡ್ ಆಹಾರಗಳು ಜೀರ್ಣಿಸಿಕೊಳ್ಳಲು ಕಷ್ಟ ಮತ್ತು ಕರುಳಿನಲ್ಲಿ ಉರಿಯೂತವನ್ನು ಹೆಚ್ಚಿಸುತ್ತದೆ. ಆದ್ದರಿಂದ ಚಯಾಪಚಯವು ಉತ್ತಮಗೊಳ್ಳುವವರೆಗೆ ಈ ರೀತಿಯ ಆಹಾರಗಳನ್ನು ತಪ್ಪಿಸುವುದು ಉತ್ತಮ.
ಪ್ರತಿದಿನ ಪ್ರಾಣಾಯಾಮ ಮತ್ತು ಧ್ಯಾನವನ್ನು ಅಭ್ಯಾಸ ಮಾಡಿ:
ಎಲ್ಲಾ ಕರುಳಿನ ಅಸ್ವಸ್ಥತೆಗಳಲ್ಲಿ, ವಿಶೇಷವಾಗಿ IBS ನಲ್ಲಿ ಒತ್ತಡವು ಪ್ರಮುಖ ಪಾತ್ರವನ್ನು ವಹಿಸುತ್ತದೆ. ಪ್ರಾಣಾಯಾಮ, ಧ್ಯಾನ, ಸೂರ್ಯನ ಬೆಳಕು, ಉತ್ತಮ ಸಂಗೀತವನ್ನು ಆಲಿಸುವುದು, ನಿಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು, ಓದುವುದು, ಬೆಳಿಗ್ಗೆ ಮತ್ತು ಮಲಗುವ ಸಮಯದಲ್ಲಿ ಗ್ಯಾಜೆಟ್‌ಗಳಿಂದ ದೂರವಿರುವುದು ಇತ್ಯಾದಿಗಳು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಕರುಳಿನ ಸಮಸ್ಯೆಯನ್ನೂ ಕೂಡ ನಿವಾರಿಸಬಹುದು.
ಇದನ್ನೂ ಓದಿ:
ಗರ್ಭಾವಸ್ಥೆಯಲ್ಲಿ ಸ್ಟ್ರೆಚ್ ಮಾರ್ಕ್ ಏಕೆ ಉಂಟಾಗುತ್ತದೆ? ವೈದ್ಯರ ಸಲಹೆ ಇಲ್ಲಿದೆ ಗಮನಿಸಿ
Published On - 11:14 am, Sat, 12 March 22