Women Health: ಇವು ಮಹಿಳೆಯರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಾಗಿವೆ: ಆದರೆ ನಿರ್ಲಕ್ಷ್ಯ ಬೇಡ

| Updated By: Pavitra Bhat Jigalemane

Updated on: Mar 11, 2022 | 2:54 PM

ಮಹಿಳೆಯರ ಕೆಲವು ಆರೋಗ್ಯ ಸಮಸ್ಯೆಗಳನ್ನು ಸರಿಪಡಿಸುವುದು ಅತ್ಯಗತ್ಯ. ಮಹಿಳೆಯರು ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. 

Women Health: ಇವು ಮಹಿಳೆಯರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಗಳಾಗಿವೆ: ಆದರೆ ನಿರ್ಲಕ್ಷ್ಯ  ಬೇಡ
ಪ್ರಾತಿನಿಧಿಕ ಚಿತ್ರ
Follow us on

ಕೆಲವು ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗಳು  ಮಹಿಳೆಯರನ್ನು ಸದಾ ಕಾಲ ಕಾಡುತ್ತಿರುತ್ತವೆ.  ಮಹಿಳೆಯರ ಕೆಲವು ಆರೋಗ್ಯ ಸಮಸ್ಯೆಗಳಿಗೆ ಮಾತ್ರೆಗಳು ಪರಿಹಾರ ನೀಡುವುದಿಲ್ಲ. ಈ ರೀತಿ ಇದ್ದಾಗ ಕೆಲವು ಮನೆಮದ್ದುಗಳು. ಆಯುರ್ವೇದ ಔಷಧಗಳು ಸಹಾಯಕವಾಗುತ್ತದೆ. ಮಹಿಳೆಯರಲ್ಲಿ ಕಾಡುವ ಕೆಲವು ಸಾಮಾನ್ಯ ಸಮಸ್ಯೆಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. ಆಗ ಮಾತ್ರ ಅದಕ್ಕೆ ಸುಲಭವಾಗಿ ಪರಿಹಾರ ಹುಡುಕಲು ಸಾಧ್ಯ.  ಅಲ್ಲದೆ ಕೆಲವು ಸಮಸ್ಯೆಗಳನ್ನು ಸರಿಪಡಿಸುವುದು ಅತ್ಯಗತ್ಯ. ಮಹಿಳೆಯರು ನಿಯಮಿತ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು.

ಈ ಕೆಳಗಿನ ಸಮಸ್ಯೆಗಳು ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ ಎಂದು ಹಿಂದೂಸ್ತಾನ್​ ಟೈಮ್ಸ್​ ಜೊತೆ  ಹಿರಿಯ ಸ್ತ್ರೀರೋಗ ತಜ್ಞೆ ಅರ್ಚನಾ ದಿನೇಶ್​ ಮಾಹಿತಿ ನೀಡಿದ್ದಾರೆ.

  1. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ ಎಂದರೆ ಅದು ಋತುಚಕ್ರದ ಸಮಸ್ಯೆ. ಹೊಟ್ಟೆನೋವು, ಅತಿಯಾದ ರಕ್ತಸ್ರಾವ, ಸೋಂಕು ಇತ್ಯಾದಿ. ಸಾಮಾನ್ಯವಾಗಿ ಆರೋಗ್ಯಯುತ ಮಹಿಳೆ 24 ರಿಂದ 38 ದಿನಗಳ ಒಳಗೆ ಮಾಸಿಕ ದಿನಗಳನ್ನು ಪಡೆಯುತ್ತಾಳೆ. ಅದರಲ್ಲಿ ದೀರ್ಘಕಾಲದ ವರೆಗೆ ವ್ಯತ್ಯಾಸವಾದರೆ ವೈದ್ಯರನ್ನು ಸಂಪರ್ಕಿಸುವುದು ಒಳಿತು. ಇಲ್ಲವಾದರೆ ಮುಖದ ಕಲೆ ಕಪ್ಪು ಕಲೆಗಳು, ಕೂದಲಿನ ಬೆಳವಣಿಗೆಯಂತಹ ಇತರ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  2. ಮಹಿಳೆಯರಲ್ಲಿ ಕಾಡುವ ಇನ್ನೊಂದು ಸಾಮಾನ್ಯ ಸಮಸ್ಯೆ ಎಂದರೆ ಅದು ಬಿಳಿ ಮುಟ್ಟು. ಸ್ವಚ್ಛತೆಯ ಕೊರತೆಯಿಂದ ಉಂಟಾಗುವ ಈ ರೀತಿಯ ಸಮಸ್ಯೆಗಳು ವಿವಿಧ ರೀತಿಯ ಸಮಸ್ಯೆಗಳನ್ನು ತಂದೊಟ್ಟುತ್ತವೆ. ನಿರಂತರ ಬಿಳಿ ಮುಟ್ಟಿನ ಸಮಸ್ಯೆಯಿಂದ ಯೋನಿಯಲ್ಲಿ ತುರಿಕೆ, ನೋವು, ಅಧಿಕ ರಕ್ತಸ್ರಾವ, ದೇಹದ ತೂಕ ಇಳಿಕೆ, ಸುಸ್ತು ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ.
  3. ಇನ್ನು ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರು ಎದುರಿಸುವ ಸಮಸ್ಯೆ ಎಂದರೆ ಶೌಚಾಲಯದ ಕೊರತೆ. ಇನ್ನು ಕೆಲವು ವೇಳೆ ಮೂತ್ರವನ್ನು ಇಡೀ ದಿನ ಹಿಡಿದಿಟ್ಟುಕೊಳ್ಳುವ ಸಂದರ್ಭ ಎದುರಾಗುತ್ತದೆ. ಅಂತಹ ಸಂದರ್ಭದಲ್ಲಿ ಮೂತ್ರಕೋಶದ ಸಮಸ್ಯೆಗಳು ಕಾಡಲಾರಂಭಿಸುತ್ತವೆ. ಕಿಡ್ನಿ ಸ್ಟೋನ್​, ಮೂತ್ರಕೋಶದ ಸೋಂಕು ಈ ರೀತಿಯ ಸಮಸ್ಯೆಗಳು ಎದುರಾಗುತ್ತವೆ.
  4. ಕೆಲವು ಮಹಿಳೆಯರಲ್ಲಿ ಲೈಂಗಿಕ ಸಮಸ್ಯೆಗಳು ಎದುರಾಗುತ್ತವೆ. ಇದೇ ಕಾರಣಕ್ಕೆ ಲೈಂಗಿಕವಾಗಿ ಸಕ್ರಿಯವಾಗಿರುವ ಮಹಿಳೆಯರು ಪ್ರತಿ 3 ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಪ್ಯಾಪ್ ಸ್ಮೀಯರ್ ಮತ್ತು HPV ಪರೀಕ್ಷೆಯನ್ನು ಮಾಡಿಸಬೇಕು.
  5. ಮುಟ್ಟಿನ ಸಮಯದಲ್ಲಿ ಹಿಂಸೆ ನೀಡುವ ಯೋನಿಯ ನೋವು ಮಹಿಳೆಯರಲ್ಲಿ ಕಾಡುವ ಇನ್ನೊಂದು ಪ್ರಮುಖ ಸಮಸ್ಯೆಯಾಗಿದೆ. ಒಂದು ವರದಿಯ ಪ್ರಕಾರ ಮಹಿಳೆ ಪ್ರತೀ ಮಾಸಿಕ ದಿನಗಳಲ್ಲಿ ಒಂದು ಬಾರಿ ಹೃದಾಯಾಘಾತವಾದಾಗ ಅನುಭವಿಸುವಷ್ಟು ನೋವನ್ನು ಅನುಭವಿಸುತ್ತಾಳೆ. ಇದಕ್ಕೆ ಪರಿಹಾರವೆಂದರೆ ಬಿಸಿನೀರಿನ ಪ್ಯಾಕ್, ಕೊತ್ತಂಬರಿ ಚಹಾ  ಸೇವಿಸಬಹುದು. ಇನ್ನೂ ಕೆಲವೊಮ್ಮೆ ನೋವು  ಅಸಹನೀಯವಾಗಿದ್ದರೆ ವಾಂತಿ, ತಲೆತಿರುಗುವಿಕೆ, ತಲೆನೋವು ಕಾಡುತ್ತದೆ. ಹೀಗಿದ್ದಾಗ ವೈದ್ಯರನ್ನು ಸಂಪರ್ಕಿಸಿ.
  6. ಮಹಿಳೆಯರಲ್ಲಿ ಹೆಚ್ಚಾಗಿ ಆತಂಕ, ಒತ್ತಡ, ಖಿನ್ನತೆ ಕಾಡುತ್ತದೆ. ಅದರಲ್ಲೂ ಹೆರಿಗೆಯ ಬಳಿಕ ಬಹುತೇಕ ಮಹಿಳೆಯರು ಖಿನ್ನತೆಯನ್ನು ಅನುಭವಿಸುತ್ತಾರೆ.

ಇದನ್ನೂ ಓದಿ:

ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ‘ABC’ ಜ್ಯೂಸ್​ ಸೇವಿಸಿ

Published On - 2:54 pm, Fri, 11 March 22