AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು ‘ABC’ ಜ್ಯೂಸ್​ ಸೇವಿಸಿ

ದೇಹದಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ವಸ್ತುಗಳು ಎಲ್ಲವ್ನನೂ ಹೊರಹಾಕುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ ಕೆಲವು  ಆಹಾರಗಳು ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಜ್ಯೂಸ್​ಗಳು ಉತ್ತಮ ಡಿಟಾಫ್ಸಿಫಿಕೇಶನ್​ ಗಳಾಗಿ ಕೆಲಸ ಮಾಡುತ್ತವೆ

ದೇಹದಲ್ಲಿನ ವಿಷಕಾರಿ ಅಂಶಗಳನ್ನು ತೊಡೆದು ಹಾಕಲು 'ABC' ಜ್ಯೂಸ್​ ಸೇವಿಸಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on:Mar 11, 2022 | 2:12 PM

Share

ಪ್ರತೀ ದೇಹಕ್ಕೆ ಒಂದಷ್ಟು ಸ್ವಚ್ಛಗೊಳಿಸುವ ಕ್ರಿಯೆ ಅಗತ್ಯವಾಗಿರುತ್ತದೆ. ತಿಂದ ಆಹಾರ, ದೇಹದಲ್ಲಿ ಉತ್ಪತ್ತಿಯಾಗುವ ನಿರುಪಯುಕ್ತ ವಸ್ತುಗಳು ಎಲ್ಲವನ್ನೂ ಹೊರಹಾಕುವುದು ಅಗತ್ಯವಾಗಿರುತ್ತದೆ. ಇದಕ್ಕಾಗಿ ಕೆಲವು  ಆಹಾರಗಳು ಸಹಾಯ ಮಾಡುತ್ತದೆ. ಅವುಗಳಲ್ಲಿ ಕೆಲವು ಜ್ಯೂಸ್​ಗಳು ಉತ್ತಮ ಡಿಟಾಫ್ಸಿಫಿಕೇಶನ್​ ಗಳಾಗಿ ಕೆಲಸ ಮಾಡುತ್ತವೆ. ಎಬಿಸಿ ಜ್ಯೂಸ್​ಗಳು ಇದಕ್ಕೆ ಹೆಚ್ಚು ನೆರವಾಗುತ್ತದೆ, ಅರೇ ಏನಿದು ಎಬಿಸಿ ಜ್ಯೂಸ್​ ಅಂತೀರಾ ಇಲ್ಲಿದೆ ನೋಡಿ ಮಾಹಿತಿ

ಎ-ಎಂದರೆ ಆಪಲ್​ ಜ್ಯೂಸ್,​ ಬಿ ಎಂದರೆ ಬಿಟ್ರೂಟ್​ ಜ್ಯೂಸ್​ ಇನ್ನು ಸಿ ಎಂದರೆ ಕ್ಯಾರೇಟ್​ ಜ್ಯೂಸ್​. ಇವೇ ನೋಡಿ ಎಬಿಸಿ ಜ್ಯೂಸ್​ಗಳು. ಈ ಪದಾರ್ಥಗಳ ತಾಜಾ ಜ್ಯೂಸ್​ ತಯಾರಿಸಿ ಸೇವಿಸಿದರೆ ನಿಮ್ಮ ದೇಹದಲ್ಲಿರುವ ವಿಷಕಾರಿ ಅಂಶಗಳನ್ನು ಹೊರಹಾಕಬಹುದು.  ಅದರ ಜತೆಗೆ ಈ ಎಬಿಸಿ ಜ್ಯೂಸ್​ನಿಂದ ಆರೋಗ್ಯಕ್ಕೆ ಯಾವೆಲ್ಲಾ ಉಪಯೋಗಗಳಿವೆ ಎನ್ನುವುದನ್ನು ನೀವು ತಿಳಿದುಕೊಳ್ಳಲೇಬೇಕು.

ಆಪಲ್​ ಜ್ಯೂಸ್​: ಸೇಬುವಿನಲ್ಲಿ ಯಥೇಚ್ಛವಾದ ವಿಟಮಿನ್​ ಸಿ, ಫೈಬರ್​ ಸೇರಿದಂತೆ ಆ್ಯಂಟಿಆಕ್ಸಿಡೆಂಟ್​ ಅಂಶಗಳು ಅಡಕವಾಗಿದೆ. ಇವು ಜೀರ್ಣಕ್ರಿಯೆಯನ್ನು ಉತ್ತಮಪಡಿಸುತ್ತವೆ. ಇದರೊಂದಿಗೆ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನೂ ನಿಯಂತ್ರಿಸುತ್ತದೆ. ನಿಮ್ಮ ಡಯೆಟ್​ಗೂ ಈ ಆಪಲ್​ ಜ್ಯೂಸ್​ ಸಹಕಾರಿಯಾಗಿದೆ. ಆದ್ದರಿಂದ ನಿಮ್ಮ ದಿನನಿತ್ಯದ ಜೀವನದಲ್ಲಿ ಆಪಲ್​​ ಜ್ಯೂಸ್​ ಸೇವನೆ ಅಭ್ಯಾಸ ಮಾಡಿಕೊಳ್ಳಿ.

ಬಿಟ್ರೂಟ್​ ಜ್ಯೂಸ್​: ಹೆಚ್ಚು ಪೋಷಕಾಂಶಗಳಿರುವ ಗಡ್ಡೆಯ ಆಹಾರ ಬಿಟ್ರೂಟ್​. ದೇಹದಲ್ಲಿ ರಕ್ತದ ಉತ್ಪತ್ತಿಯನ್ನು ಹೆಚ್ಚಿಸಿ, ಆರೋಗ್ಯವನ್ನು ಕಾಪಾಡುವಲ್ಲಿ ಬಿಟ್ರೂಟ್​ ಸಹಕಾರಿಯಾಗಿದೆ, ಅಲ್ಲದೆ ಬಿಟ್ರೂಟ್​ ಜ್ಯೂಸ್​ ಸೇವನೆಯಿಂದ ಜೀರ್ಣವ್ಯವಸ್ಥೆಯೂ ಸರಿಯಾದ ಪ್ರಮಾಣದಲ್ಲಿ ಆಗುತ್ತದೆ. ಕ್ಯಾನ್ಸರ್​ನ ಅಪಾಯವನ್ನೂ ಕಡಿಮೆ ಮಾಡುತ್ತದೆ.

ಕ್ಯಾರೇಟ್​ ಜ್ಯೂಸ್​: ವಿಟಮಿನ್​ ಎ, ಫೈಬರ್​​, ವಿಟಮಿನ್​ ಕೆ ಅಂಶಗಳನ್ನು  ಹೇರಳವಾಗಿ ಹೊಂದಿರುವ ಕ್ಯಾರೆಟ್​ ದೇಹವನ್ನು ಆಂತರಿಕವಾಗಿ ಸ್ವಚ್ಛಗೊಳಿಸುತ್ತದೆ. ಚಯಾಪಚಯ ಕ್ರಿಯೆಯನ್ನು ಉತ್ತಮಗೊಳಿಸಿ ಜೀರ್ಣ ಶಕ್ತಿಯನ್ನು ಹೆಚ್ಚಿಸುತ್ತದೆ.  ಕಿಡ್ನಿಯ ಆರೋಗ್ಯ ಮತ್ತು ಕಣ್ಣಿನ ಆರೋಗ್ಯಕ್ಕೂ ಕ್ಯಾರೇಟ್​ ಒಳ್ಳೆಯದು.

ಇದನ್ನೂ ಓದಿ:

‘ಕೈಯಲ್ಲೇ ಊಟ ಮಾಡಬೇಕು, ಚಪ್ಪಲಿಯನ್ನು ಮನೆಯಿಂದ ಹೊರಗಿಡಬೇಕು’ ಈ ರೀತಿಯ ಆಚರಣೆಗೆ ವೈಜ್ಞಾನಿಕ ಕಾರಣಗಳೇನು? ಇಲ್ಲಿದೆ ಮಾಹಿತಿ

Published On - 1:11 pm, Fri, 11 March 22

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಬೆಂಗಳೂರಿನಲ್ಲಿ ‘ಜನ ನಾಯಗನ್’ ಸ್ವಾಗತಕ್ಕೆ ಹೀಗೆ ಮಾಡಿದ್ದರು ತಯಾರಿ
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ