Yoga: ಮಳೆಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಆಸನಗಳು

| Updated By: ನಯನಾ ರಾಜೀವ್

Updated on: Jul 06, 2022 | 2:25 PM

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು, ಹೇಗೆ ಜಾಗ್ರತೆವಹಿಸಿದರೂ ಶೀತ, ಜ್ವರ, ಕಫದಂತಹ ಸಮಸ್ಯೆಗಳು ಕಾಡುತ್ತವೆ. ಮಳೆಗಾಲದಾದ್ಯಂತ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಕಷ್ಟ, ಆದರೆ ನಿತ್ಯ ಕೆಲವು ಆಸನಗಳನ್ನು ನೀವು ಮಾಡುವುದರಿಂದ ಈ ಸಮಸ್ಯೆಗಳು ದೂರವಾಗುತ್ತವೆ

Yoga: ಮಳೆಗಾಲದಲ್ಲಿ ನಿಮ್ಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಆಸನಗಳು
Yogasana
Follow us on

ಮಳೆಗಾಲದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು, ಹೇಗೆ ಜಾಗ್ರತೆವಹಿಸಿದರೂ ಶೀತ, ಜ್ವರ, ಕಫದಂತಹ ಸಮಸ್ಯೆಗಳು ಕಾಡುತ್ತವೆ.
ಮಳೆಗಾಲದಾದ್ಯಂತ ರೋಗ ನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳುವುದು ಕಷ್ಟ, ಆದರೆ ನಿತ್ಯ ಕೆಲವು ಆಸನಗಳನ್ನು ನೀವು ಮಾಡುವುದರಿಂದ ಈ ಸಮಸ್ಯೆಗಳು ದೂರವಾಗುತ್ತವೆ. ಉತ್ತಮ ಆಹಾರ, ವ್ಯಾಯಾಮ, ಯೋಗ, ಧ್ಯಾನ ಹಾಗೂ ಸರಿಯಾದ ಸಮಯಕ್ಕೆ ವಿಶ್ರಾಂತಿ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ.

ಮಳೆಗಾಲದಲ್ಲಿ ಸಾಮಾನ್ಯ ಶೀತ, ಜ್ವರದ ಜತೆಗೆ ಕಾಲೆರಾ, ಡೆಂಗ್ಯೂ ಸೇರಿದಂತೆ ಹಲವು ಕಾಯಿಲೆಗಳು ನಿಮ್ಮನ್ನು ಕಾಡಬಹುದು. ನಿತ್ಯ 60 ನಿಮಿಷಗಳ ಕಾಲ ವ್ಯಾಯಾಮಕ್ಕೆ ನಿಮ್ಮನ್ನು ಮೀಸಲಿಡುವುದರಿಂದ ಹಲವು ಪ್ರಯೋಜನಗಳನ್ನು ನೀವು ಪಡೆಯಬಹುದು.

ಹಸ್ತ ಪಾದಂಗುಷ್ಠಾಸನ
ಉತ್ಥಿತಹಸ್ತ ಪಾದಾಂಗುಷ್ಠಾಸನಕ್ಕೆ ಹಸ್ತಪಾದಾಂಗುಷ್ಠಾಸನ ಮತ್ತು ಉತ್ಥಿತ ಪಾದಾಂಗುಷ್ಠಾಸನ ಎಂಬ ಹೆಸರುಗಳೂ ಇವೆ. ಆದರೆ ಉತ್ಥಿತ ಹಸ್ತಪಾದಾಂಗುಷ್ಠಾಸನ ಎಂಬ ಹೆಸರೇ ಈ ಆಸನಕ್ಕೆ ಹೆಚ್ಚು ಸೂಕ್ತವಾದುದು.

ಮಾಡುವ ಕ್ರಮ
-ಯೋಗಾಭ್ಯಾಸಿಯು ಪ್ರಾರಂಭದಲ್ಲಿ ಎರಡೂ ಪಾದಗಳನ್ನು ಜೋಡಿಸಿ, ಭೂಮಿಗೆ ಲಂಬವಾಗಿ, ಕೈಗಳನ್ನು ತೊಡೆಗೆ ತಗಲುವಂತೆ ನೀಳವಾಗಿ ಚಾಚಿ, ಎದೆ ಎತ್ತಿ ನಿಲ್ಲಬೇಕು.
-ಅನಂತರ ಉಸಿರನ್ನು ಹೊರಕ್ಕೆ ದೂಡಿ ಯಾವುದಾದರೂ ಒಂದು ಕಾಲನ್ನು ಉದಾಹರಣೆಗೆ ಚಿತ್ರದಲ್ಲಿರುವಂತೆ ಎಡಗಾಲನ್ನು ನೆಲದಿಂದ ಮೇಲಕ್ಕೆ ಎತ್ತಿ ಶರೀರದ ಮುಂದೆ ಬರುವಂತೆ ಮಾಡಬೇಕು. (ಅಂದರೆ ಈ ಸ್ಥಿತಿಯಲ್ಲಿ ಕಾಲು ಭೂಮಿಗೆ ಸಮಾನಾಂತರವಾಗಿರಬೇಕು)

-ಅನಂತರ ಬಲಗೈಯಿಂದ ಎಡಗಾಲಿನ ಹೆಬ್ಬೆರಳನ್ನು ಭದ್ರವಾಗಿ ಹಿಡಿದುಕೊಂಡು ಸಮತೋಲನವನ್ನು ಪಡೆಯಬೇಕು.

-ಎಡಕಿವಿಗೆ ಸ್ಪರ್ಶಿಸುವಂತೆ ಎಡಗೈಯನ್ನು ಮೇಲಕ್ಕೆ ಚಾಚಬೇಕು. ಬಲಗಾಲಿನ ಮೇಲೆ ಇಡೀ ಶರೀರದ ಭಾರವನ್ನು 1 ರಿಂದ 3 ನಿಮಿಷಗಳ ವರೆಗೆ ಹೊರಿಸಿ ಅನಂತರ ಕಾಲುಗಳನ್ನು ನಿಧಾನವಾಗಿ ಬದಲಿಸಬಹುದು.

ತ್ರಿಕೋನಾಸನ
-ಕಾಲುಗಳು, ಮಂಡಿಗಳು, ಪಾದದ ಕೋನಗಳು, ತೋಳುಗಳು ಮತ್ತು ಎದೆ ಇವುಗಳಿಗೆ ಶಕ್ತಿ ದೊರಕುವುದು.
-ಹಿಂಭಾಗ, ತೊಡೆ ಸಂದುಗಳು, ಮಂಡಿಯ ಹಿಂಭಾಗದ ಸ್ನಾಯುಗಳು ಮತ್ತು ಮೀನು ಖಂಡಗಳು: ಭುಜಗಳು, ಎದೆ ಮತ್ತು ಬೆನ್ನು ಮೂಳೆ ಇವುಗಳ ವಿಸ್ತರಣೆಯಾಗಿ ತೆರೆದುಕೊಳ್ಳುವುದು.
-ಮನಸ್ಸು ಮತ್ತು ಶಾರೀರಿಕತೆಯಲ್ಲಿ ಸಮಾನತೆ ಹೊಂದುವುದು.
-ತಿಂದ ಆಹಾರ ಅರಗುವಲ್ಲಿ ಸಹಾಯಕವಾಗುವುದು.
-ಆತಂಕ, ಒತ್ತಡ, ಬೆನ್ನು ನೋವು ಮತ್ತು ಸೊಂಟ ನೋವು ಕಡಿಮೆಯಾಗುವುದು.

ಉತ್ಕಟಾಸನ
ಮಾಡುವಕ್ರಮ
-ಮೊದಲು ಭೂಮಿಗೆ ನೇರವಾಗಿ ಎರಡು ಪಾದಗಳನ್ನು ಜೋಡಿಸಿ ನಿಂತುಕೊಳ್ಳಬೇಕು.
-ಬಳಿಕ ಕೈಗಳನ್ನು ಸೊಂಟದ ಮೇಲಿಟ್ಟು ಅಥವಾ ಮೇಲಕ್ಕೆ ನೇರವಾಗಿ ಎತ್ತಿ, ಉಸಿರನ್ನು ನಿಧಾನವಾಗಿ ಹೊರಗೆ ದೂಡಿ, ಮಂಡಿಯ ಮೇಲ್ಭಾಗದ ಶರೀರವನ್ನು ಮಾತ್ರ ಕೆಳಕ್ಕೆ ತರಲು ಪ್ರಯತ್ನಿಸಬೇಕು. ಈ ರೀತಿ ಮಾಡುವಾಗ ಮಂಡಿಯ ಕೆಳಗಿನ ಭಾಗಗಳೂ ಸ್ವಲ್ಪ ಓರೆಯಾಗುವವು. ಸೊಂಟದ ಮೇಲ್ಭಾಗದ ಎದೆ, ತಲೆ, ಕತ್ತು ಮತ್ತು ಕಾಲಿನ ಮಂಡಿಯ ಕೆಳಭಾಗಗಳು ಭೂಮಿಗೆ ಲಂಬವಾಗಿರಬೇಕು ಹಾಗೂ ತೊಡೆಗಳನ್ನು ಭೂಮಿಗೆ ಸಮಾನಾಂತರವಾಗಿರಿಸುತ್ತ ಹೆಚ್ಚು ಗಮನ ವಹಿಸಬೇಕು. ಪ್ರಾರಂಭದಲ್ಲಿ ಉತ್ಕಟಾಸನವನ್ನು ಗೋಡೆಯ ಬಳಿ ಅಭ್ಯಾಸ ಮಾಡಬಹುದು. ಜಾಗರೂಕತೆಯಿಂದ ಈ ಆಸನವನ್ನು ಅಭ್ಯಾಸ ಮಾಡುವುದು ಉತ್ತಮ.

ಭುಜಂಗಾಸನ
ಮಾಡುವ ಕ್ರಮ:
-ಎರಡೂ ಪಾದಗಳನ್ನು ಒಟ್ಟಿಗೇ ಜೋಡಿಸಿ, ಎದೆ ಎತ್ತಿ, ನಮಸ್ಕಾರ ಮುದ್ರೆಯಲ್ಲಿ ನಿಲ್ಲಬೇಕು.
-ಕಾಲುಗಳನ್ನು ಸ್ವಲ್ಪವೂ ಬದಲಿಸದೆ ಉಸಿರನ್ನು ಒಳಕ್ಕೆ ತೆಗೆದುಕೊಳ‍ಳ್ಳುತ್ತಾ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿ ನೇರವಾಗಿಡಬೇಕು.
-ಉಸಿರನ್ನು ಹೊರಕ್ಕೆ ಬಿಡುತ್ತಾ ಕಾಲುಗಳನ್ನು ಬಗ್ಗಿಸದೇ ಮುಂದಕ್ಕೆ ಬಗ್ಗಿ ಕೈಗಳನ್ನು ನೆಲದ ಮೇಲೆ ಇಡಬೇಕು.
-ಬಳಿಕ ಯಾವುದಾದರೂ ಒಂದು ಕಾಲನ್ನು ಉದಾ: ಬಲಗಾಲನ್ನು ಹಿಂದೆ ಚಾಚಿ, ಇನ್ನೊಂದು ಕಾಲನ್ನು ಎರಡು ಕೈಗಳ ಮಧ್ಯೆ ಇಟ್ಟು, ಆದಷ್ಟೂ ಸೊಂಟವನ್ನು ಕೆಳಕ್ಕೆ ಒತ್ತಿ, ಬೆನ್ನನ್ನು ಹಿಂದಕ್ಕೆ ಬಗ್ಗಿಸಿ, ತಲೆ ಎತ್ತಿ ಆಕಾಶವನ್ನು ನೋಡಬೇಕು.
-ಅನಂತರ ಎಡಗಾಲನ್ನು ಬಲಗಾಲಿಗೆ ಸೇರಿಸಿ ಇದೇ ದೇಹವನ್ನು ನೇರವಾಗಿ ಇಡಬೇಕು.

ವೃಕ್ಷಾಸನ
ಯೋಗ (Yoga) ವಿಜ್ಞಾನದಲ್ಲಿ ಭಾರತದ ಮಹಾನ್ ಯೋಗಿಗಳು ಮತ್ತು ಋಷಿಗಳು ರಚಿಸಿದ ಎಲ್ಲಾ ಆಸನಗಳಿಗೆ ಪ್ರಕೃತಿಯು ಸ್ಫೂರ್ತಿಯ ಮೂಲವಾಗಿದೆ. ಮಾನವ, ಪ್ರಾಣಿ, ಪಕ್ಷಿ ಕುಲಗಳಿಗೆ ಪ್ರಕೃತಿಯೇ ಆಧಾರ ಎಂದು ನಂಬಲಾಗಿದೆ. ಬಹುಶಃ ಯೋಗ ವಿಜ್ಞಾನದ ಪ್ರತಿಯೊಂದು ಭಂಗಿಯು ಯಾವುದೇ ಪ್ರಾಣಿ, ಪಕ್ಷಿಗಳನ್ನು ಹೋಲುತ್ತದೆ.

ಯೋಗ ವಿಜ್ಞಾನದ ಅಂತಹ ಒಂದು ಆಸನವೆಂದರೆ ವೃಕ್ಷಾಸನ. ವೃಕ್ಷಾಸನವನ್ನು ಟ್ರೀ ಪೋಸ್ ಎಂದೂ ಕರೆಯಲಾಗುತ್ತದೆ, ವೃಕ್ಷಾಸನವು ಯೋಗದ ಭಂಗಿಯಾಗಿದ್ದು ಅದು ನಿಮ್ಮ ದೇಹಕ್ಕೆ ಸ್ಥಿರತೆ, ಸಮತೋಲನ ಮತ್ತು ತ್ರಾಣವನ್ನು ತರಲು ಸಹಾಯ ಮಾಡುತ್ತದೆ.