PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ಯಾ? ಈ ಕ್ರಮಗಳನ್ನು ಅನುಸರಿಸಿ ದೇಹದ ತೂಕ ಇಳಿಸಿಕೊಳ್ಳಿ

| Updated By: Pavitra Bhat Jigalemane

Updated on: Feb 27, 2022 | 11:35 AM

ದೇಹದ ತೂಕ ಹೆಚ್ಚಾಗುತ್ತಿದೆ ಎಂದು ಆಹಾರ ತ್ಯಜಿಸಿದರೆ ಪಿಸಿಒಎಸ್​ ಸಮಸ್ಯೆ ಅಧಿಕಗೊಂಡು ಮುಟ್ಟಿನ ದಿನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.

PCOS ಸಮಸ್ಯೆಯಿಂದ ದೇಹದ ತೂಕ ಹೆಚ್ಚಾಗಿದ್ಯಾ? ಈ ಕ್ರಮಗಳನ್ನು ಅನುಸರಿಸಿ ದೇಹದ ತೂಕ ಇಳಿಸಿಕೊಳ್ಳಿ
ಪ್ರಾತಿನಿಧಿಕ ಚಿತ್ರ
Image Credit source: Tv9 Hindi
Follow us on

ಹದಿಹರೆಯದವರಲ್ಲಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ  ಹಾರ್ಮೋನ್​ ವ್ಯತ್ಯಾಸದ ಸಮಸ್ಯೆ ಪಾಲಿಸ್ಟಿಕ್​ ಓವೆರಿಯನ್​ ಸಿಂಡ್ರೋಮ್ (Polycystic ovarian syndrome)​ ಅಥವಾ ಪಿಸಿಒಎಸ್​ (PCOS)ಸಮಸ್ಯೆ. ಇದು ಅನೇಕ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಪಿಸಿಒಎಸ್​ ಸಮಸ್ಯೆಯಿಂದ ದೇಹದ ತೂಕ ಹೆಚ್ಚುವುದು,  ಮೊಡವೆಗಳು ಕಾಣಿಸಿಕೊಳ್ಳುವುದು, ದೇಹ ಮತ್ತು ಮುಖದ ಮೇಲಿನ ಕೂದಲು ಬೆಳೆಯುವುದು ನೆತ್ತಿಯ ಮೇಲಿನ ಕೂದಲು ತೆಳ್ಳಗಾಗುವುದು, ಸೇರಿದಂತೆ ಮಹಿಳೆಯರಲ್ಲಿ ಮಾನಸಿಕ ಖಿನ್ನತೆಗೂ ಇದು ಕಾರಣವಾಗುತ್ತದೆ. ಹೀಗಾಗಿ ಇದು ಸಾಮಾನ್ಯ ಸಮಸ್ಯೆಯಾಗಿದ್ದರೂ ಅಪಾಯಕಾರಿಯಾಗಿದೆ.

ಸ್ಥೂಲಕಾಯ ಮತ್ತು ದೇಹದ ತೂಕ ಕಡಿಮೆ ಇರುವ ಮಹಿಳೆಯರಲ್ಲಿ ಪಿಸಿಒಎಸ್​ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಒಮ್ಮೆ ಪಿಸಿಒಎಸ್​ ಸಮಸ್ಯೆ ಎದುರಾದರೆ ದೇಹದ ತೂಕ ಅದರಲ್ಲೂ ಹೊಟ್ಟೆಯ ಕೆಳಭಾಗದಲ್ಲಿ ಅನಗತ್ಯ ಬೊಜ್ಜು ಬೆಳೆಯುತ್ತದೆ. ಹೊಟ್ಟೆಯ ಸುತ್ತ ಕೊಬ್ಬು ತುಂಬಿಕೊಳ್ಳುತ್ತದೆ. ಹೀಗಾಗಿ ಜೀವನಶೈಲಿಯನ್ನು ಉತ್ತಮವಾಗಿಸಿಕೊಳ್ಳುವುದು ಅತೀ ಅಗತ್ಯವಾಗಿದೆ.  ಬೆಳಗ್ಗಿನ ಉಪಹಾರ ದೇಹದ ಎಲ್ಲಾ ಕ್ರಿಯೆಗಳನ್ನು ಸಮತೋಲನದಲ್ಲಿಡಲು ಸಹಾಯಕವಾಗಿದೆ. ಆದ್ದರಿಂದ ಬೆಳಗ್ಗಿನ ತಿಂಡಿ ಸರಿಯಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಸೇವಿಸಬೇಕು.  ದೇಹದ ತೂಕ ಹೆಚ್ಚಾಗುತ್ತಿದೆ ಎಂದು ಆಹಾರ ತ್ಯಜಿಸಿದರೆ ಪಿಸಿಒಎಸ್​ ಸಮಸ್ಯೆ ಅಧಿಕಗೊಂಡು ಮುಟ್ಟಿನ ದಿನಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಹೀಗಾಗಿ ಡಾ. ಅರುಣ್​ ಮುರಳೀಧರ್ ಎನ್ನುವವರು ಪಿಸಿಒಎಸ್​ ಸಮಸ್ಯೆ ಇರುವವರೂ ಕೂಡ ದೇಹದ ತೂಕ ಇಳಿಕೆ ಮಾಡಿಕೊಳ್ಳುವ ವಿಧಾನವನ್ನು ತಿಳಿಸಿಕೊಂಡಿದ್ದಾರೆ. ಈ ಕುರಿತು ಇಂಡಿಯಾ ಡಾಟ್​ ಕಾಂ ವರದಿ ಮಾಡಿದೆ. ಇಲ್ಲಿದೆ ನೋಡಿ ಮಾಹಿತಿ.

  1. ಪಿಸಿಒಎಸ್​ ಸಮಸ್ಯೆ ಇದ್ದವರು ದೇಹದ ತೂಕ ಇಳಿಸಿಕೊಳ್ಳಲು 40-50 ಪ್ರತಿಶತದಷ್ಟು ತರಕಾರಿಗಳು, 25-30 ಪ್ರತಿಶತದಷ್ಟು ಕಾರ್ಬೋಹೈಡ್ರೇಟ್ಗಳು ಮತ್ತು ಶೇ, 20-30 ಪ್ರೊಟೀನ್​ಯುಕ್ತ ಆಹಾರಗಳನ್ನು ಪ್ರತಿದಿನ ಸೇವಿಸಬೇಕು. ಹೆಚ್ಚು ಪ್ರೋಬಯಾಟಿಕ್‌ಗಳಿರುವ ಆಹಾರ ಸೇವಿಸಿ. ಇದು ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ ಅದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಮೊಸರು, ಮೊಸರು, ಇಡ್ಲಿ, ದೋಸೆ, ಧೋಕ್ಲಾ ಇವು ಸಮೃದ್ಧವಾದ ಪ್ರೋಬಯಾಟಿಕ್‌ಗಳನ್ನು ಹೊಂದಿರುತ್ತವೆ.
  2. ಜಂಕ್ಸಂಸ್ಕರಿಸಿದ ಆಹಾರಗಳಾದ ಚಿಪ್ಸ್, ಕೇಕ್, ಚಾಕೊಲೇಟ್ ಇತ್ಯಾದಿಗಳನ್ನು ಕಡಿಮೆ ಮಾಡಿ. ಬದಲು ಹಸಿರು ತರಕಾರಿ, ದ್ವಿದಳ ಧಾನ್ಯಗಳು, ಪ್ರೋಟೀನ್​ಯುಕ್ತ ಪದಾರ್ಥಗಳನ್ನು ಸೇವಿಸಿ.
  3. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಸರಿಯಾದ ಸಮಸಯದಲ್ಲಿ ಆಹಾರ ಸೇವಿಸಿ. ಹೆಚ್ಚು ನಿದ್ದೆ ಮಾಡಿ. ಆಹಾರವನ್ನು ಸರಿಯಾಗಿ ಸೇವಿಸದಿದ್ದರೆ ಜೀರ್ಣಕ್ರಿಯೆಯಲ್ಲಿ ತೊಂದರೆಯಾಗಬಹುದು. ಇದರಿಂದ ದೇಹಕ್ಕೆ ಬೇಕಾದ ಪೋಷಕಾಂಶಗಳು ದೊರೆಯದೆ ಪಿಸಿಒಎಸ್​ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ
  4. ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಿ. ಇದು ನಿಮ್ಮ ದೇಹಕ್ಕೆ ಹೊಸ ಹುರುಪು ನೀಡುತ್ತದೆ. ಜತೆಗೆ ಅನಗತ್ಯ ಕೊಬ್ಬನ್ನು ಕರಗಿಸುತ್ತದೆ. ನೆನಪಿಡಿ ಹೊಟ್ಟೆಯ ಕೊಬ್ಬು ಚಯಾಪಚಯ ಕ್ರಮವನ್ನು ತಡೆಯುತ್ತದೆಹೆಚ್ಚಿನ ಒತ್ತಡದ ಹಾರ್ಮೋನುಗಳು, ಇನ್ಸುಲಿನ್ ಪ್ರತಿರೋಧವನ್ನು ಹೆಚ್ಚಿಸುತ್ತದೆ. ಹೀಗಾಗಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಪ್ರಕೃತಿ ಯೋಗ ಮತ್ತು ಧ್ಯಾನವನ್ನು ಅಭ್ಯಸಿಸಿಕೊಳ್ಳಿ.
  5. ನಿದ್ದೆಯ ಕೊರೆತೆ ಸ್ಥೂಲಕಾಯತೆಗೆ ಕಾರಣವಾಗುತ್ತದೆ. 6 ಗಂಟೆಗಳಿಗಿಂತ ಹೆಚ್ಚು ನಿದ್ರೆ ಮಾಡುವವರಿಗೆ ಬೊಜ್ಜು ಬರುವ ಸಾಧ್ಯತೆ ಕಡಿಮೆ. ನಿದ್ರೆಯ ಕೊರತೆ ಹೆಚ್ಚಾದಷ್ಟೂ ಹಸಿವು ಹೆಚ್ಚಾಗುತ್ತದೆ. ಹೀಗಾಗಿ ಸರಿಯಾಗಿ ನಿದ್ದೆ ಮಾಡಿ. ಮುಖ್ಯವಾದ ಸಂಗತಿಯೆಂದರೆ ಪಿಸಿಒಎಸ್​ ಸಮಸ್ಯೆ ನಿಯಂತ್ರಣಕ್ಕೆ ಬರಲು ಹಲವು ತಿಂಗಳುಗಳೇ ಬೇಕಾಗಬಹುದು. ಆದ್ದರಿಂದ ಡಯೆಟ್​ ಪ್ರಕ್ರಿಯೆ ಸದಾ ಕಾಲ ರೂಢಿಯಲ್ಲಿದ್ದರೆ ಒಳಿತು ಎನ್ನುತ್ತಾರೆ ವೈದ್ಯರು