Kannada News Health twenty seven stars in astrology will tell health issues of humans and how much time it will take to cure know details in kannada
ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಆಧಾರದ ಮೇಲೆ ಮನುಷ್ಯನನ್ನು ಕಾಡುವ ರೋಗ, ಅದರ ಕಾಲಾವಧಿ ಹೇಳಬಹುದು! ಅದು ಹೇಗೆ? ಇಲ್ಲಿದೆ ವಿವರ ಓದಿ
ಉತ್ತರ ಫಾಲ್ಗುಣಿ ನಕ್ಷತ್ರ (Uttara Phalguni: ಈ ನಕ್ಷತ್ರವನ್ನು ಸೂರ್ಯನು ಆಳುವನು. ಇವನು ಕರುಳಿನ ಮೇಲೆ ಹೆಚ್ಚು ಪ್ರಭಾವ ಬೀರುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಬಿ.ಪಿ, ದೌರ್ಬಲ್ಯ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಹೊಟ್ಟೆಯ ತೊಂದರೆ, ದೀರ್ಘಕಾಲದ ಕೆಮ್ಮು, ಕರುಳಿನಲ್ಲಿ ಗಡ್ಡೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳು ಬೇಕಾಗುತ್ತವೆ.
ಜ್ಯೋತಿಷ್ಯ ಶಾಸ್ತ್ರದ 27 ನಕ್ಷತ್ರಗಳ ಆಧಾರದ ಮೇಲೆ ಮನುಷ್ಯನನ್ನು ಕಾಡುವ ರೋಗ, ಅದರ ಕಾಲಾವಧಿ ಹೇಳಬಹುದು! ಅದು ಹೇಗೆ?
Follow us on
ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜನ್ಮ ಸಮಯ ಆಧಾರಿತವಾಗಿ ವಿಶೇಷ ನಕ್ಷತ್ರಗಳನ್ನು ಹಾಗೂ ರಾಶಿಯನ್ನು ಹೊಂದಿರುತ್ತಾರೆ. ನಕ್ಷತ್ರ ಫಲಗಳು ಹಾಗೂ ರಾಶಿ ಚಕ್ರಗಳ ಪ್ರಭಾವದಿಂದ ವ್ಯಕ್ತಿ ನಿತ್ಯ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ಹಾಗೂ ಅದೃಷ್ಟಗಳನ್ನು ಪಡೆದುಕೊಳ್ಳುವನು. ವೈದಿಕ ಜ್ಯೋತಿಷ್ಯ ಶಾಸ್ತ್ರಗಳ ಪ್ರಕಾರ 27 ನಕ್ಷತ್ರಗಳಿವೆ. ಪ್ರತಿಯೊಂದು ನಕ್ಷತ್ರವೂ (nakshatras) ವಿಭಿನ್ನ ಶಕ್ತಿ ಹಾಗೂ ಪ್ರಭಾವವನ್ನು ಬೀರುತ್ತವೆ. ಯಾರಿಗೇ ಆಗಲಿ ಅವರವರ ಜನ್ಮ ನಕ್ಷತ್ರಕ್ಕೆ ಅನುಗುಣವಾಗಿ ರೋಗಗಳು ಬರುತ್ತವೆ. ರೋಗದ ಅವಧಿಯು ಸಹ ನಕ್ಷತ್ರದ ಆಧಾರದ ಮೇಲೆಯೇ ನಿರ್ಧಾರವಾಗುವುದು ಎಂದು ಹೇಳಲಾಗುತ್ತದೆ. ಹಾಗಾದರೆ ನಿಮ್ಮ ಜನ್ಮ ನಕ್ಷತ್ರ ಯಾವುದು? ಯಾವೆಲ್ಲಾ ಆರೋಗ್ಯ ಸಮಸ್ಯೆಗಳು (health) ನಿಮ್ಮನ್ನು ಕಾಡುತ್ತವೆ? ರೋಗದ ಅವಧಿ ಎಷ್ಟಿರುತ್ತದೆ… ಎನ್ನುವುದನ್ನು ತಿಳಿಯುವ ಕುತೂಹಲ ಹೊಂದಿದ್ದರೆ ಈ ಲೇಖನದ ಮುಂದಿನ ಭಾಗವನ್ನು ಗಮನವಿಟ್ಟು ಓದಿ. ಇವೆಲ್ಲವೂ ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಅನುಭವಿಗಳು ಹೇಳಿದ್ದಾರೆ (27 Nakshatra in Astrology).
ಅಶ್ವಿನಿ ನಕ್ಷತ್ರ (Ashwini -Horse like woman): ಅಶ್ವಿನಿ ನಕ್ಷತ್ರವನ್ನು ಕೇತು ಆಳುವನು. ಕೇತು ಈ ನಕ್ಷತ್ರದವರ ತಲೆಯ ಭಾಗ ಮತ್ತು ಮೆದುಳಿನ ಆರೋಗ್ಯವನ್ನು ನಿಯಂತ್ರಿಸುತ್ತಾನೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರಿಗೆ ಸಾಮಾನ್ಯವಾಗಿ ತಲೆ ನೋವು, ಜ್ವರ, ಡೆಂಗ್ಯೂ, ಮೆದುಳಿನ ಗಾಯ, ಮೈಗ್ರೇನ್, ಸಿಡುಬುಗಳಂತಹ ರೋಗಗಳು ಕಾಣಿಸಿಕೊಳ್ಳುತ್ತವೆ. ಇವರಿಗೆ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳು ಸಾಮಾನ್ಯವಾಗಿ 1, 9 ಅಥವಾ 25 ದಿನಗಳ ಕಾಲ ಇರುತ್ತದೆ ಎಂದು ಹೇಳಲಾಗುವುದು.
ಭರಣಿ ನಕ್ಷತ್ರ (Bharani -The bearer): ಈ ನಕ್ಷತ್ರವನ್ನು ಶುಕ್ರನು ಆಳುವನು. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಮೆದುಳು, ಹಣೆ, ಕಣ್ಣು ಹಾಗೂ ಅಂಗಾಂಶಗಳ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಕಣ್ಣಿನ ಸೋಂಕು, ತಲೆಗೆ ಗಾಯ, ಸೆಳೆತ, ದೃಷ್ಟಿ ದೋಷ, ಶೀತ ಜ್ವರಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತವೆ. ಈ ಆರೋಗ್ಯ ಸಮಸ್ಯೆಗಳು ಒಮ್ಮೆ ಕಾಣಿಸಿಕೊಂಡರೆ 11, 21 ಅಥವಾ 30 ದಿನಗಳ ಕಾಲ ಇರುತ್ತದೆ ಎನ್ನಲಾಗುತ್ತದೆ.
ಕೃತ್ತಿಕಾ ನಕ್ಷತ್ರ (Krittika -The Cutter): ಈ ನಕ್ಷತ್ರವನ್ನು ಸೂರ್ಯನು ಆಳುವನು. ಕೃತ್ತಿಕಾ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಮುಖ, ತೋಳು, ಗಲಗ್ರಂಥಿಯ ಉರಿಯೂತ, ಕೆಳದವಡೆಯ ಸಮಸ್ಯೆ, ತಲೆ ಹಿಂಭಾಗಕ್ಕೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವು ಒಮ್ಮೆ ಬಂದರೆ ಸಾಮಾನ್ಯವಾಗಿ 10 ಅಥವಾ 21 ದಿನಗಳ ಕಾಲ ಮುಂದುವರಿಯುತ್ತವೆ ಎಂದು ತಿಳಿಸುತ್ತದೆ ಜ್ಯೋತಿಷ್ಯ ಶಾಸ್ತ್ರ.
ರೋಹಿಣಿ ನಕ್ಷತ್ರ (Rohini -Red faced One): ರೋಹಿಣಿ ನಕ್ಷತ್ರವನ್ನು ಸಾಮಾನ್ಯವಾಗಿ ಪ್ರಕಾಶಮಾನವಾದ ನಕ್ಷತ್ರ ಎಂದು ಕರೆಯುವರು. ಈ ನಕ್ಷತ್ರವನ್ನು ಚಂದ್ರನು ಆಳುವನು. ಇವನು ಕಶೇರುಖಂಡ, ನಾಲಿಗೆ, ಬೆನ್ನು, ಮೆದುಳು ಭಾಗವನ್ನು ಆಳುವನು. ಈ ನಕ್ಷತ್ರದವರು ಸಾಮಾನ್ಯವಾಗಿ ಗಂಟಲು ನೋವು, ಸ್ತನ ನೋವು, ಶೀತ, ಕೆಮ್ಮು, ಮುಟ್ಟಿನ ಸಮಸ್ಯೆಗಳು ಆಗಾಗ ಕಾಣಿಸಿಕೊಳ್ಳುತ್ತವೆ. ಇವರಿಗೆ ಕಾಡುವ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3, 7 ಅಥವಾ 10 ದಿನಗಳ ಕಾಲ ತೆಗೆದುಕೊಳ್ಳುವರು.
ಮೃಗಶಿರಾ ನಕ್ಷತ್ರ (Mrigashirsha -the deer’s head): ಈ ನಕ್ಷತ್ರವನ್ನು ಮಂಗಳನು ಆಳುವನು. ಮಂಗಳನು ವ್ಯಕ್ತಿಯ ಮೂಗು, ಕತ್ತು, ಗಂಟಲು, ಧ್ವನಿ ಪೆಟ್ಟಿಗೆ, ಭುಜ, ಎದೆ ಭಾಗವನ್ನು ನಿಯಂತ್ರಿಸುವನು. ಹಾಗಾಗಿ ಈ ನಕ್ಷತ್ರದವರು ಗಳಗಂಡ, ಗಾಯ, ಮುಖದಲ್ಲಿ ಮೊಡವೆ, ಅತಿಸಾರ, ಮಲಬದ್ಧತೆ, ಲೈಂಗಿಕ ಸಮಸ್ಯೆಗಳಂತಹ ಸಮಸ್ಯೆಗಳಿಗೆ ಒಳಗಾಗುತ್ತಾರೆ. ಇವರು ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು ಸಾಮಾನ್ಯವಾಗಿ 3, 5 ಅಥವಾ 9 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.
ಆರ್ದ್ರಾ ನಕ್ಷತ್ರ (Ardra -Moist One): ಈ ನಕ್ಷತ್ರವು ರಾಹುವಿನ ಆಳ್ವಿಕೆಗೆ ಒಳಗಾಗಿರುತ್ತದೆ. ರಾಹು ಗಂಟಲು, ಭುಜ ಮತ್ತು ಕತ್ತಿನ ಭಾಗವನ್ನು ಆಳುತ್ತಾನೆ. ಈ ನಕ್ಷತ್ರದ ಅಡಿ ಜನಿಸಿದವು ಸಾಮಾನ್ಯವಾಗಿ ದಡಾರ, ಅಲರ್ಜಿ, ಒಣ ಕೆಮ್ಮು, ಡಿಫ್ತೀರಿಯಾಕ್ಕೆ ಒಳಗಾಗುತ್ತಾರೆ. ಇವರು ಒಮ್ಮೆ ಅನಾರೋಗ್ಯಕ್ಕೆ ಒಳಗಾದರೆ ಚೇತರಿಸಿಕೊಳ್ಳಲು 10 ಅಥವಾ 27 ದಿನಗಳ ಕಾಲ ಬೇಕಾಗುವುದು.
ಪುನರ್ವಸು ನಕ್ಷತ್ರ (Punarvasu -Restoring goods): ಪುನರ್ವಸು ನಕ್ಷತ್ರವನ್ನು ಗುರು ಗ್ರಹದ ಆಳ್ವಿಕೆಯ ಅಡಿಯಲ್ಲಿ ಬರುವುದು. ಗುರುವು ಮೂಗು, ಗಂಟಲು, ಭುಜಗಳು, ಶ್ವಾಸಕೋಶ, ತಲೆ, ಹೊಟ್ಟೆ, ಮೇದೋಜೀರಕ ಗ್ರಂಥಿ ಹಾಗೂ ಯಕೃತನ್ನು ಆಳುವನು. ಹಾಗಾಗಿ ಈ ನಕ್ಷತ್ರದ ವ್ಯಕ್ತಿಗಳು ಸಾಮಾನ್ಯವಾಗಿ ಬ್ರಾಂಕೈಟಿಸ್, ನ್ಯುಮೋನಿಯಾ, ಎದೆ ಸಮಸ್ಯೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು, ರಕ್ತ ಸಮಸ್ಯೆ, ಬರ್ಬೆರಿಸ್ ಹಾಗೂ ಕ್ಷಯ ರೋಗಗಳು ಕಾಡುತ್ತವೆ. ಇವರಿಗೆ ಕಾಣಿಸಿಕೊಂಡ ಕಾಯಿಲೆಗಳಿಂದ ಗುಣಮುಖರಾಗಲು ಸಾಮಾನ್ಯವಾಗಿ 7 ದಿನಗಳು ಬೇಕಾಗುತ್ತವೆ.
ಪುಷ್ಯಾ ನಕ್ಷತ್ರ (Pushya -Nourishing): ಈ ನಕ್ಷತ್ರವನ್ನು ಶನಿ ಗ್ರಹವು ಆಳುತ್ತದೆ. ಶ್ವಾಸಕೋಶ, ಉಸಿರಾಟ ಕ್ರಿಯೆ ಮತ್ತು ವ್ಯವಸ್ಥೆಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 7 ದಿನಗಳ ಕಾಲ ಬೇಕಾಗುವುದು.
ಆಶ್ಲೇಷಾ ನಕ್ಷತ್ರ (Ashlesha -The embracer): ಈ ನಕ್ಷತ್ರವು ಬುಧ ಗ್ರಹದಿಂದ ಆಳಲ್ಪಡುವುದು. ಇದು ಶ್ವಾಸಕೋಶ, ಅನ್ನನಾಳ, ಮೇದೋಜೀರಕ ಗ್ರಂಥಿ, ಯಕೃತ್, ನರಗಳ ಮೇಲೆ ಹಿಡಿತವನ್ನು ಹೊಂದಿರುತ್ತದೆ. ಇವರಿಗೆ ಸಾಮಾನ್ಯವಾಗಿ ಶೀತ, ಹೊಟ್ಟೆ ಸಮಸ್ಯೆ, ಪೊಟಾಶಿಯಂ ಕೊರತೆ, ಮೊಣಕಾಲು ಸಮಸ್ಯೆ, ಅಜೀರ್ಣ, ಕಫ, ವಾಯು, ಉಸಿರಾಟದ ತೊಂದರೆ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳು ಕಾಡುವುದು. ಅನಾರೋಗ್ಯದಿಂದ ಚೇತರಿಸಿಕೊಳ್ಳಲು 9, 20 ಅಥವಾ 30 ದಿನಗಳು ಬೇಕಾಗುವುದು.
ಮಘಾ ನಕ್ಷತ್ರ (Magha -The wealthy one): ಈ ನಕ್ಷತ್ರವು ಕೇತುವಿನ ಆಳ್ವಿಕೆಗೆ ಒಳಗಾಗುತ್ತದೆ. ಕೇತು ಹೃದಯ, ಬೆನ್ನು, ಬೆನ್ನುಹುರಿ, ಯಕೃತ್ ಮತ್ತು ಅಪಧಮನಿಯ ಭಾಗವನ್ನು ನಿಯಂತ್ರಿಸುತ್ತದೆ. ಇವರಿಗೆ ಸಾಮಾನ್ಯವಾಗಿ ಬೆನ್ನು ನೋವು, ಕಾಲರಾ, ತಲೆ ಸುತ್ತು, ಬೆನ್ನು ನೋವಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು 20, 30 ಅಥವಾ 45 ದಿನಗಳ ಕಾಲ ಬೇಕಾಗುವುದು.
ಪೂರ್ವ ಫಾಲ್ಗುಣಿ ನಕ್ಷತ್ರ (Purva Phalguni -Earlier reddish one): ಈ ನಕ್ಷತ್ರವನ್ನು ಶುಕ್ರನು ಆಳುವನು. ಶುಕ್ರನು ಹೃದಯ, ಬೆನ್ನುಹುರಿಯ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾನೆ. ಹಾಗಾಗಿ ಈ ನಕ್ಷತ್ರದವರು ಹೆಚ್ಚಾಗಿ ಮೂಳೆ ಕಾಯಿಲೆ, ರಕ್ತ ಹೀನತೆ, ಕಾಲು ನೋವು ಪಾದಗಳ ಸೆಳೆತ, ಬಿಪಿಯಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಇವರಿಗೆ ಆರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳ ಕಾಲ ಬೇಕಾಗುವುದು.
ಉತ್ತರ ಫಾಲ್ಗುಣಿ ನಕ್ಷತ್ರ (Uttara Phalguni -Latter reddish one): ಈ ನಕ್ಷತ್ರವನ್ನು ಸೂರ್ಯನು ಆಳುವನು. ಇವನು ಕರುಳಿನ ಮೇಲೆ ಹೆಚ್ಚು ಪ್ರಭಾವ ಬೀರುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಬಿ.ಪಿ, ದೌರ್ಬಲ್ಯ, ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು, ಹೊಟ್ಟೆಯ ತೊಂದರೆ, ದೀರ್ಘಕಾಲದ ಕೆಮ್ಮು, ಕರುಳಿನಲ್ಲಿ ಗಡ್ಡೆ ಸಮಸ್ಯೆಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಇವುಗಳಿಂದ ಚೇತರಿಸಿಕೊಳ್ಳಲು 7, 15 ಅಥವಾ 27 ದಿನಗಳು ಬೇಕಾಗುತ್ತವೆ.
ಹಸ್ತಾ ನಕ್ಷತ್ರ (Hasta -The hand): ಈ ನಕ್ಷತ್ರವನ್ನು ಚಂದ್ರನು ಆಳುವನು. ಇವನು ಕರುಳು ಮತ್ತು ಗ್ರಂಥಿಗಳ ಮೇಲೆ ಹೆಚ್ಚಿನ ಹಿಡಿತವನ್ನು ಹೊಂದಿರುತ್ತಾನೆ. ಈ ನಕ್ಷತ್ರದಲ್ಲಿ ಜನಿಸಿದವರು ವಾಯು ಸಮಸ್ಯೆ, ಕರುಳು ಸಡಿಲವಾಗುವುದು, ಉನ್ಮಾದ, ಟೈಫಾಯ್ಡ್, ಅತಿಸಾರ, ಭೇದಿ, ಕಾಲರಾ ಮತ್ತು ಭುಜದ ಸಮಸ್ಯೆ ಕಾಣಿಸಿಕೊಳ್ಳುತ್ತವೆ. ಅನಾರೋಗ್ಯದಿಂದ ಚೇತರಿಸಿಕೊಳ್ಳಲು ಇವರಿಗೆ 9 ರಿಂದ 15 ದಿನಗಳ ಕಾಲ ಬೇಕಾಗುವುದು.
ಚಿತ್ರಾ ನಕ್ಷತ್ರ (Chitra -The bright one): ಈ ನಕ್ಷತ್ರವನ್ನು ಮಂಗಳನು ಆಳುವನು. ಇವನು ಮೂತ್ರಪಿಂಡ, ಹರ್ನಿಯಾ, ಸೊಂಟ ಮತ್ತು ಮೆದುಳಿನ ಭಾಗಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಜ್ವರ, ಕಲ್ಲಿನ ಸಮಸ್ಯೆ, ಮೂತ್ರ ಪಿಂಡಗಳ ಸಮಸ್ಯೆ, ರಕ್ತಸ್ರಾವ, ಹುಣ್ಣು ತೀವ್ರವಾದ ನೋವು, ಮೊಣಕಾಲು ಸಮಸ್ಯೆ ಮತ್ತು ತಲೆನೋವಿನಂತಹ ಅನಾರೋಗ್ಯಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಅವುಗಳಿಂದ ಚೇತರಿಸಿಕೊಳ್ಳಲು 8 ರಿಂದ 15 ದಿನಗಳು ಬೇಕಾಗುವುದು.
ಸ್ವಾತಿ ನಕ್ಷತ್ರ (Swati -Sword or Independence): ಈ ನಕ್ಷತ್ರವನ್ನು ರಾಹು ಆಳುವನು. ಇವನು ಮೂತ್ರಪಿಂಡ, ಕೌಶಲ್ಯ, ಮೂತ್ರನಾಳಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರಿಗೆ ಸಾಮಾನ್ಯವಾಗಿ ಚರ್ಮರೋಗ, ಮೂತ್ರದ ಸಮಸ್ಯೆ, ವಾಯು ಸಮಸ್ಯೆ ಆಗಾಗ ಕಾಣಿಸಿಕೊಳ್ಳುವುದು. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು 2 ಅಥವಾ 10 ದಿನಗಳು ಬೇಕಾಗುವುದು.
ವಿಶಾಖ ನಕ್ಷತ್ರ (Vishaka -Forked having branches): ಗುರು ಗ್ರಹವು ವಿಶಾಖ ನಕ್ಷತ್ರವನ್ನು ಆಳುವುದು. ಗುರುವು ಕೆಳಹೊಟ್ಟೆ, ಯೋನಿ, ಗುದನಾಳ, ಗಾಳಿಗುಳ್ಳೆ, ಮೂತ್ರಪಿಂಡ, ಮೇದೋಜೀರಕ ಗ್ರಂಥಿಗಳು, ಪ್ರಾಸ್ಟೇಟ್ ಗ್ರಂಥಿ ಮತ್ತು ಕೊಲೊನ್ ಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಈ ನಕ್ಷತ್ರದವರು ಗರ್ಭಕೋಶದ ತೊಂದರೆ, ಮೂತ್ರಪಿಂಡದ ಸಮಸ್ಯೆ, ಫೈಬ್ರಾಯ್ಡ್, ಅನಿಯಮಿತ ಮುಟ್ಟಿನ ಸ್ರಾವ, ಮೂತ್ರದ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಇವರು ಚೇತರಿಸಿಕೊಳ್ಳಲು ಸಾಮಾನ್ಯವಾಗಿ 20 ರಿಂದ 30 ದಿನಗಳ ಕಾಲ ಬೇಕಾಗುವುದು.
ಅನುರಾಧಾ ನಕ್ಷತ್ರ (Anuradha -Disciple of divine spark): ಈ ನಕ್ಷತ್ರವನ್ನು ಶನಿಯು ಆಳುವನು. ಗಾಳಿ ಗುಳ್ಳೆ, ಜನನಾಂಗ, ಗುದನಾಳ, ಮೂಗಿನ ಮೂಳೆಗಳನ್ನು ನಿಯಂತ್ರಿಸುವನು. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಮಲಬದ್ಧತೆ, ಸಂತಾನ ಹೀನತೆ, ಮೂಳೆ ಮುರಿತ, ಗಂಟಲಿನ ಸಮಸ್ಯೆಯನ್ನು ಅನುಭವಿಸಬೇಕಾಗುವುದು. ಸಮಸ್ಯೆಗಳಿಂದ ಚೇತರಿಕೆ ಕಾಣಲು 6, 10 ಅಥವಾ 28 ದಿನಗಳು ಬೇಕಾಗುವುದು.
ಜ್ಯೇಷ್ಠಾ ನಕ್ಷತ್ರ (Jyeshta -The eldest): ಈ ನಕ್ಷತ್ರವನ್ನು ಬುಧ ಗ್ರಹವು ಆಳುವುದು. ಇವನು ಅಂಡಾಶಯ, ಗರ್ಭ, ಕೊಲೊನ್, ಗುದದ್ವಾರ ಮತ್ತು ಜನನಾಂಗಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರು ಸಾಮಾನ್ಯವಾಗಿ ಗಡ್ಡೆ, ಫಿಸ್ತುಲಾ, ಭುಜದ ನೋವು, ಶಸ್ತ್ರಾಸ್ತ್ರ ಚಿಕಿತ್ಸೆಗಳನ್ನು ಹೊಂದಬೇಕಾಗುವುದು. ಇವರಿಗೆ ಬಂದ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಲು 15, 21 ಅಥವಾ 30 ದಿನಗಳು ಬೇಕಾಗುವುದು.
ಮೂಲಾ ನಕ್ಷತ್ರ (Moola -The root): ಈ ನಕ್ಷತ್ರವನ್ನು ಕೇತು ಆಳುವನು. ಅವನು ಸೊಂಟವನ್ನು ಆಳುವನು. ಈ ನಕ್ಷತ್ರದವರು ಸಾಮಾನ್ಯವಾಗಿ ಸಂಧಿವಾತ, ಸೊಂಟದ ಕಾಯಿಲೆ, ಶ್ವಾಸಕೋಶದ ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಇವರಿಗೆ ಬಂದ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 9,15 ಅಥವಾ 20 ದಿನಗಳು ಬೇಕಾಗುವುದು.
ಪೂರ್ವಾಷಾಢ (Purva Ashadha -Previous invincible one): ಈ ನಕ್ಷತ್ರವನ್ನು ಶುಕ್ರನು ಆಳುವನು. ಇವನು ರಕ್ತನಾಳ, ಮೆದುಳು, ಬೆನ್ನುಮೂಳೆಗಳ ಮೇಲೆ ಪ್ರಭಾವವನ್ನು ಬೀರುವನು. ಇವರು ಸಾಮಾನ್ಯವಾಗಿ ಅಸ್ತಮಾ, ಸಂಧಿವಾತ, ಸೊಂಟದ ನೋವು, ಸುರುಳಿ ಕಾಯಿಲೆ, ರಕ್ತ ಶುದ್ಧಿಯ ಸಮಸ್ಯೆ ಮತ್ತು ಶೀತದಂತಹ ಸಮಸ್ಯೆಗಳು ಕಾಡುತ್ತವೆ. ಈ ನಕ್ಷತ್ರದವರು ಅನಾರೋಗ್ಯ ಸಮಸ್ಯೆಗಳಿಂದ ಚೇತರಿಸಿಕೊಳ್ಳಲು ಎರಡು ತಿಂಗಳು ಅಥವಾ ಅದಕ್ಕೂ ಹೆಚ್ಚಿನ ಸಮಯ ಬೇಕಾಗುವುದು.
ಉತ್ತರಾಷಾಢ (Uttara Ashada -Latter invincible one): ಈ ನಕ್ಷತ್ರದವರನ್ನು ಸೂರ್ಯ ಆಳುವನು. ಸೂರ್ಯನು ತೊಡೆ, ಪಕ್ಕೆಲಬು, ಮೊಣಕಾಲು, ಮಂಡಿಚಿಪ್ಪುಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಈ ನಕ್ಷತ್ರದವರು ಎಸ್ಜಿಮಾ, ಚರ್ಮದ ಕಾಯಿಲೆ, ಜೀರ್ಣಾಂಗ ಅಸ್ವಸ್ಥತೆ, ಹೃದಯ ಸಮಸ್ಯೆ, ಹೊಟ್ಟೆ ಸಂಬಂಧಿ ಕಾಯಿಲೆಗಳು ಕಾಡುವುದು. ಈ ನಕ್ಷತ್ರದವರಿಗೆ ಚೇತರಿಕೆ ಕಾಣಲು 40 ರಿಂದ 45 ದಿನಗಳು ಬೇಕಾಗುವುದು.
ಶ್ರವಣ ನಕ್ಷತ್ರ (Shravana -The audible): ಈ ನಕ್ಷತ್ರವನ್ನು ಚಂದ್ರನು ಆಳುವನು. ಚರ್ಮ, ದುಗ್ಧರಸ, ಮೊಣಕಾಲುಗಳನ್ನು ಆಳುವನು. ಇವರು ಕ್ಷಯ, ಎಸ್ಜಿಮಾ, ಕುಷ್ಠರೋಗ, ಕೀವು ರಚನೆ, ಜೀರ್ಣಾಂಗ ಕ್ರಿಯೆಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು 5 ರಿಂದ 10 ದಿನಗಳು ಬೇಕಾಗುವುದು.
ಧನಿಷ್ಠ ನಕ್ಷತ್ರ (Dhanistha -The richest one): ಈ ನಕ್ಷತ್ರವನ್ನು ಮಂಗಳ ಗ್ರಹವು ಆಳುವುದು. ಅಪಘಾತ, ಹೊಲಿಗೆ ಚಿಕಿತ್ಸೆ, ಶಸ್ತ್ರಾಸ್ತ್ರ ಚಿಕಿತ್ಸೆಯ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾನೆ. ಧನಿಷ್ಠ ನಕ್ಷತ್ರದವರು ಸಾಮಾನ್ಯವಾಗಿ ಮೊಣಕಾಲು ಸಮಸ್ಯೆ, ಮೂಳೆ ಸಮಸ್ಯೆ, ಮಲೇರಿಯಾ, ಫಿಲೇರಿಯಾ, ಅಧಿಕ ಜ್ವರ, ಅತಿಸಾರ, ಎಲಿಫಾಂಟಿಯಾಸಿಸ್, ಒಣ ಕೆಮ್ಮು ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇಂತಹ ಅನಾರೋಗ್ಯದಿಂದ ಚೇತರಿಕೆ ಕಾಣಲು 13 ರಿಂದ 15 ದಿನಗಳ ಕಾಲ ಬೇಕಾಗುವುದು.
ಶತಭಿಷ ನಕ್ಷತ್ರ (Shatabhisaa -Hundred healers): ಈ ನಕ್ಷತ್ರವನ್ನು ರಾಹು ಆಳುವನು. ರಾಹುವು ಸ್ನಾಯು, ಮೊಣಕಾಲು ಮತ್ತು ಪಾದಗಳನ್ನು ನಿಯಂತ್ರಿಸುವನು. ಈ ನಕ್ಷತ್ರದಲ್ಲಿ ಜನಿಸಿದವರು ಸಾಮಾನ್ಯವಾಗಿ ಸಂಧಿವಾತ, ಹೃದಯಘಾತ, ಬಿ.ಪಿ, ನಿದ್ರಾಹೀನತೆ ಆರೋಗ್ಯ ಸಮಸ್ಯೆಗಳನ್ನು ಆಗಾಗ ಅನುಭವಿಸುವರು. ಇವರಿಗೆ ಅನಾರೋಗ್ಯದಿಂದ ಚೇತರಿಸಿಕೊಳ್ಳಲು 3, 10 ಅಥವಾ 40 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುವುದು.
ಪೂರ್ವಾಭಾದ್ರಾ ನಕ್ಷತ್ರ (Purva Bhadrapada -Former blessed feet): ಈ ನಕ್ಷತ್ರವನ್ನು ಗುರು ಗ್ರಹವು ಆಳುವುದು. ಇವನು ಪಾದ, ಕಾಲ್ಬೆರಳು ಮತ್ತು ಕಾಳುಗಳ ಮೇಲೆ ನಿಯಂತ್ರಣವನ್ನು ಹೊಂದಿರುತ್ತದೆ. ಈ ನಕ್ಷತ್ರದ ಅಡಿಯಲ್ಲಿ ಜನಿಸಿದವರು ಯಕೃತ್, ಕಾಮಾಲೆ, ಹೊಟ್ಟೆ ಗಡ್ಡೆ, ಕರುಳು ಕಾಯಿಲೆಗಳಿಗೆ ತುತ್ತಾಗುವುದು. ಈ ರೋಗಗಳಿಂದ ಚೇತರಿಕೆ ಕಾಣಲು ಈ ನಕ್ಷತ್ರದವರಿಗೆ 2, 10 ಅಥವಾ 3 ತಿಂಗಳುಗಳ ಕಾಲ ತೆಗೆದುಕೊಳ್ಳುವ ಸಾಧ್ಯತೆಗಳಿರುತ್ತವೆ.
ಉತ್ತರಾಭಾದ್ರಾ ನಕ್ಷತ್ರ (Uttara Bhadrapada -Latter blessed feet): ಈ ನಕ್ಷತ್ರವನ್ನು ಶನಿ ಗ್ರಹವು ಆಳುವುದು. ಶನಿಯು ಕಾಲುಗಳ ಮೇಲೆ ಹೆಚ್ಚಿನ ನಿಯಂತ್ರಣ ಹೊಂದಿರುತ್ತಾನೆ. ಈ ನಕ್ಷತ್ರದವರು ಅಂಡವಾಯು, ತಣ್ಣನೆಯ ಪಾದ, ಕಾಲು ಮುರಿತ, ಮಲಬದ್ಧತೆ, ಡ್ರಾಪ್ಸಿ ಮತ್ತು ಅಜೀರ್ಣ ಸಮಸ್ಯೆಯು ಆಗಾಗ ಕಾಣಿಸಿಕೊಳ್ಳುವುದು. ಇವರಿಗೆ ಅನಾರೋಗ್ಯದಿಂದ ಚೇತರಿಕೆ ಕಾಣಲು ಸಾಮಾನ್ಯವಾಗಿ 7, 10 ಅಥವಾ 45 ದಿನಗಳು ಬೇಕಾಗುವುದು.
ರೇವತಿ ನಕ್ಷತ್ರ (Revati -The wealthy): ಈ ನಕ್ಷತ್ರವನ್ನು ಬುಧನು ಆಳುವನು. ಬುಧನು ಕಾಲು ಮತ್ತು ಕಾಲ್ಬೆರಳಿನ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಇವರಿಗೆ ಸಾಮಾನ್ಯವಾಗಿ ಮಲಬದ್ಧತೆ, ಅಂಡವಾಯು, ಕ್ಷಯ ರೋಗ ಕಾಣಿಸಿಕೊಳ್ಳುವುದು. ಇವುಗಳಿಂದ ಚೇತರಿಕೆ ಕಾಣಲು 10, 28 ಅಥವಾ 45 ದಿನಗಳು ಬೇಕಾಗುವುದು ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ. (ವಾಟ್ಸಪ್ ಸಂದೇಶ)