ಯುಗಾದಿ ಹಬ್ಬವನ್ನು (Ugadi) ಭಾರತದ ವಿವಿಧ ಭಾಗಗಳಲ್ಲಿ ಆಚರಿಸುತ್ತಾರೆ. ಈ ಹಬ್ಬ ವಸಂತಕಾಲದ (Spring) ಆರಂಭವನ್ನು ಸೂಚಿಸುತ್ತದೆ ಮತ್ತು ಇದನ್ನು ಅತ್ಯಂತ ಮಂಗಳಕರ (Auspicious) ಸಮಯವೆಂದು ಪರಿಗಣಿಸಲಾಗುತ್ತದೆ. ಕಾಶ್ಮೀರದಿಂದ ಕನ್ಯಾಕುಮಾರಿಯ ವರೆಗೂ ಯುಗಾದಿ ಹಬ್ಬವನ್ನು ಬೇರೆ ಬೇರೆ ಹೆಸರಿನಲ್ಲಿ ಕರೆಯುತ್ತಾರೆ, ಆಚರಿಸುವ ವಿಧಾನವು ವಿಭಿನ್ನ. ಹಿಂದೂ ಸಮುದಾಯದವರಿಗೆ ಯುಗಾದಿಯನ್ನು ಹೊಸ ವರ್ಷವೆಂದು ಪರಿಗಣಿಸುತ್ತಾರೆ. ಹೊಸ ವರ್ಷ, ಹೊಸ ಹುರುಪಿನೊಂದಿಗೆ ಜೀವನದ ಹಾದಿಯಲ್ಲಿ ಬರುವ ಸುಖ-ದುಃಖಗಳನ್ನು ಸಮನಾಗಿ ಸ್ವೀಕರಿಸಬೇಕು ಎಂಬ ಸಂಕೇತದಿಂದ ಬೇವು-ಬೆಲ್ಲ ಸೇವಿಸುವ ಪ್ರತೀತಿ ಇದೆ.
ಇದೊಂದು ಸಾಂಕೇತಿಕ ಪದ್ದತಿಯಾದರೂ ಬೇವು-ಬೆಲ್ಲ ಸೇವಿಸುವುದರಿಂದ ಸಾಕಷ್ಟು ಪ್ರಯೋಜನಗಳು ಇವೆ. ದೇಹದಲ್ಲಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ಹಲವಾರು ಕಾಯಿಲೆಗಳು ಹತ್ತಿರ ಸುಳಿಯದಂತೆ ದೇಹವನ್ನು ಆರೋಗ್ಯಕರವಾಗಿ ಇಡಲು ಸಹಾಯ ಮಾಡುತ್ತದೆ.
ವಿವಿಧ ಆರೋಗ್ಯ ಪ್ರಯೋಜನಗಳ ಹೊರತಾಗಿ, ಬೇವು ನಿಮ್ಮ ಚರ್ಮ ಮತ್ತು ಕೂದಲಿಗೆ ಅಪಾರ ಪ್ರಯೋಜನಗಳನ್ನು ಹೊಂದಿದೆ. ಮೊಡವೆಗಳು, ಕಿರಿಕಿರಿಯುಂಟುಮಾಡುವ ಕಪ್ಪು ಕಲೆಗಳು, ಸೂಕ್ಷ್ಮ ರೇಖೆಗಳು, ತಲೆಹೊಟ್ಟು, ಕೂದಲು ಉದುರುವಿಕೆ ಹೀಗೆ ಹಲವಾರು ಚರ್ಮದ ಆರೋಗ್ಯನ್ನು ಬೇವು ಕಾಪಾಡುತ್ತದೆ.
ಇದನ್ನೂ ಓದಿ: ಶೀತ ಮತ್ತು ಕೆಮ್ಮು ಇದೆಯೇ? ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು 5 ಆರೋಗ್ಯಕರ ಸೂಪ್‌ಗಳು
ಬಿಳಿ ಸಕ್ಕರೆಗೆ ಆರೋಗ್ಯಕರ ಪರ್ಯಾಯವಾದ ಬೆಲ್ಲವನ್ನು ಔಷಧೀಯ ಸಕ್ಕರೆ ಎಂದು ಕರೆಯಲಾಗುತ್ತದೆ ಏಕೆಂದರೆ ಇದು ಯಾವುದೇ ಸೇರ್ಪಡೆಗಳಿಲ್ಲದ ಸಂಸ್ಕರಿಸದ ಪದಾರ್ಥವಾಗಿದೆ. ಇದನ್ನು ಕಚ್ಚಾ, ಕೇಂದ್ರೀಕರಿಸಿದ ಕಬ್ಬಿನ ರಸದಿಂದ ಪಡೆಯಲಾಗುತ್ತದೆ, ಕಬ್ಬಿನಹಾಲನ್ನು ಕುದಿಸಿ ನಂತರ ಅದನ್ನು ಬ್ಲಾಕ್ ಆಗಿ ಮಾಡುತ್ತದೆ. ಬೆಲ್ಲವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಲಾಗಿದೆ.
Published On - 11:54 am, Wed, 22 March 23