
ಮಹಿಳೆಗೆ ಋತುಚಕ್ರ ಎನ್ನುವಂತದ್ದು ಸಾಮಾನ್ಯ. ಒಂದು ವಯಸ್ಸು ಮೀರುವ ವರೆಗೆ ಪ್ರತಿ ತಿಂಗಳು ಕೂಡ ಈ ಪ್ರಕ್ರಿಯೆ ನಡೆಯುತ್ತದೆ. ಋತುಚಕ್ರದ ನಂತರ ಮಹಿಳೆಯರಲ್ಲಿ ರಕ್ತಸ್ರಾವ ನಿಲ್ಲುತ್ತದೆ, ಆದರೆ ಯೋನಿಯಿಂದ ಬಿಳಿ ವಿಸರ್ಜನೆ (ಲ್ಯುಕೋರಿಯಾ) ಬರುತ್ತದೆ. ಇದು ಎಲ್ಲರಲ್ಲಿಯೂ ಕಂಡುಬರುವ ಸಹಜ ಪ್ರಕ್ರಿಯೆ. ಏಕೆಂದರೆ ಇದು ಯೋನಿಯನ್ನು ಸ್ವಚ್ಛಗೊಳಿಸಲು ಮತ್ತು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಆದರೆ ಕೆಲವರಲ್ಲಿ ಇದು ಅತಿಯಾಗಿ ಹೋಗುತ್ತದೆ. ಇನ್ನು ಕೆಲವರಲ್ಲಿ ಬಿಳಿ ಸ್ರಾವದಿಂದ ದುರ್ವಾಸನೆ ಕಂಡುಬರುತ್ತದೆ. ಈ ರೀತಿ ಲಕ್ಷಣ ಕಂಡುಬಂದಾಗ ನಿರ್ಲಕ್ಷ್ಯ ಮಾಡಬಾರದು. ಇವು ಒಂದು ರೀತಿಯ ಅಸಹಜ ಲಕ್ಷಣಗಳಾಗಿವೆ. ಮಾತ್ರವಲ್ಲ ಕಳವಳಕಾರಿ ವಿಷಯವೂ ಹೌದು. ಹಾಗಾದರೆ ಮುಟ್ಟಿನ ನಂತರ ಬಿಳಿ ಸ್ರಾವ (White Discharge) ಅತಿಯಾಗಿ ಕಾಣಿಸಿಕೊಂಡರೆ ಮಹಿಳೆಯರು ಏನು ಮಾಡಬೇಕು, ಈ ರೀತಿಯಾಗಲು ಕಾರಣವೇನು, ಇದನ್ನು ತಡೆಯುವುದು ಹೇಗೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸ್ತ್ರೀರೋಗ ತಜ್ಞರು ಹೇಳುವ ಪ್ರಕಾರ, ಮುಟ್ಟಿನ ನಂತರ ಕಂಡುಬರುವ ಬಿಳಿ ಸ್ರಾವವು ಒಂದು ರೀತಿಯ ಸೋಂಕಿನ ಸಂಕೇತವಾಗಿರಬಹುದು. ಇದನ್ನು ತಡೆಗಟ್ಟಲು, ಮಹಿಳೆಯರು ಯಾವಾಗಲೂ ಸ್ವಚ್ಛವಾದ ಒಳ ಉಡುಪು ಧರಿಸುವುದು ಮತ್ತು ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳುವಂತಹ ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು. ಇದೆಲ್ಲದರ ಜೊತೆಗೆ ಕೆಲವು ಮನೆಮದ್ದುಗಳನ್ನು ಸಹ ಪ್ರಯತ್ನಿಸಬಹುದು.
ಸಾಮಾನ್ಯವಾಗಿ ಋತುಚಕ್ರದ ನಂತರ, ಈಸ್ಟ್ರೊಜೆನ್ ಮಟ್ಟಗಳು ಹೆಚ್ಚಾಗುತ್ತವೆ. ಇದು ಗರ್ಭಕಂಠವು ಹೆಚ್ಚು ಲೋಳೆಯನ್ನು ಉತ್ಪಾದಿಸುವಂತೆ ಮಾಡುತ್ತದೆ, ಇದು ಬಿಳಿ ಸ್ರಾವದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಂಡೋತ್ಪತ್ತಿ ಸಮೀಪಿಸಿದಾಗ, ಸ್ರಾವವು ಮತ್ತಷ್ಟು ಹೆಚ್ಚಬಹುದು, ಅದು ಬಿಳಿ ಮತ್ತು ಕೆನೆ ಬಣ್ಣದಲ್ಲಿರಬಹುದು. ಋತುಚಕ್ರದ ನಂತರ, ಮೊಟ್ಟೆಯು ಪಕ್ವವಾಗಲು ಪ್ರಾರಂಭಿಸಿದಾಗ, ಕೆಲವು ದಿನಗಳ ವರೆಗೆ ಬಿಳಿ ಅಥವಾ ಸಾಮಾನ್ಯ ಸ್ರಾವ ಇರಬಹುದು. ಆದರೆ ಮಹಿಳೆಯರ ಮನಸ್ಸಿನಲ್ಲಿ ಒಂದು ಪ್ರಶ್ನೆ ಇರಬಹುದು, ಋತುಚಕ್ರದ ನಂತರ ಬಿಳಿ ಸ್ರಾವವಾಗುವುದು ಸಹಜವೇ ಅಥವಾ ಇಲ್ಲವೇ? ಮುಟ್ಟಿನ ಆರಂಭಕ್ಕೂ ಮೊದಲೇ ಅಂಡೋತ್ಪತ್ತಿ ಸಮಯದಲ್ಲಿ ಮಹಿಳೆಯರಲ್ಲಿ ಬಿಳಿ ಸ್ರಾವ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಈ ಸ್ಥಿತಿಯನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ತುರಿಕೆ ಅಥವಾ ದುರ್ವಾಸನೆ ಇದ್ದಾಗ ಮಾತ್ರ ಬಿಳಿ ಸ್ರಾವವಾಗುವುದನ್ನು ನಿರ್ಲಕ್ಷ್ಯ ಮಾಡಬಾರದು.
ಇದನ್ನೂ ಓದಿ: ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವ ಅಭ್ಯಾಸ ಈ ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ
ಖಾಸಗಿ ಭಾಗಗಳ ಸ್ವಚ್ಛತೆಗೆ ವಿಶೇಷ ಗಮನ ಕೊಡಿ. ಒಳ ಉಡುಪು ಹತ್ತಿಯಿಂದ ಮಾಡಿದ್ದಾಗಿರಲಿ ಅಥವಾ ಮೆತ್ತನೆಯ ಬಟ್ಟೆಗಳನ್ನೇ ಧರಿಸಿ. ಇನ್ನು ಅಂಜೂರದಲ್ಲಿ ನಾರಿನಂಶ ಹೆಚ್ಚಾಗಿರುತ್ತದೆ. ಹೊಟ್ಟೆ ನೋವಿನ ಜೊತೆಗೆ ಬಿಳಿ ವಿಸರ್ಜನೆ ಸಮಸ್ಯೆಗಳನ್ನು ನಿಯಂತ್ರಿಸಲು ಅವು ಸಹಾಯ ಮಾಡುತ್ತವೆ. ಹಾಗಾಗಿ ಪ್ರತಿ ತಿಂಗಳು ತಪ್ಪದೆ ಅಂಜೂರವನ್ನು ಸೇವನೆ ಮಾಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ