ಕೇಸರಿ ಹಾಲು
ಕೇಸರಿ ಹಾಲು (Saffron milk) ನೋಡುವುದಕ್ಕೆ ಎಷ್ಟು ಆಕರ್ಷಕವಾಗಿ ಕಾಣುತ್ತದೆಯೋ ಅಷ್ಟೇ ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದನ್ನು ಕುಡಿಯುವುದರಿಂದ ಆರೋಗ್ಯ (Health) ಸುಧಾರಿಸುತ್ತದೆ. ಇದು ಅನೇಕ ಸಂಶೋಧನೆಗಳಿಂದಲೂ ಬಹಿರಂಗಗೊಂಡಿದೆ. ಕೇಸರಿ ಹಾಲು ನೈಸರ್ಗಿಕವಾಗಿಯೇ ಚರ್ಮದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇದೆಲ್ಲಾ ಕಾರಣಕ್ಕಾಗಿಯೇ ಆರೋಗ್ಯ ತಜ್ಞರು ಪ್ರತಿದಿನ ಕೇಸರಿ ಹಾಲನ್ನು ಕುಡಿಯಲು ಶಿಫಾರಸು ಮಾಡುತ್ತಾರೆ. ಕೆಲವರು ಇದನ್ನು ಚರ್ಮದ ಕಾಂತಿ ಹೆಚ್ಚಿಸಿಕೊಳ್ಳಲು ಮಾತ್ರ ಕುಡಿಯುತ್ತಾರೆ. ಆದರೆ ಇದಕ್ಕಿಂತ ಮಿಗಿಲಾದ ಕಾರಣವಿದೆ. ಹಾಗಾದರೆ ಇದರ ಸೇವನೆಯಿಂದ ಯಾವ ರೀತಿಯ ಪ್ರಯೋಜನಗಳು ಸಿಗುತ್ತದೆ. ಯಾಕಾಗಿ ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
- ಕೇಸರಿಯು ಹೇರಳವಾಗಿರುವ ಉತ್ಕರ್ಷಣ ನಿರೋಧಕಗಳಿದ್ದು ಪ್ರತಿನಿತ್ಯ ಈ ಹಾಲನ್ನು ಕುಡಿಯುವುದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ.
- ಇದು ಮನಸ್ಥಿತಿಯನ್ನು ಸುಧಾರಿಸಲು, ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
- ಮಲಗುವ ಮೊದಲು ಕೇಸರಿ ಹಾಲನ್ನು ಕುಡಿಯುವುದರಿಂದ ವಿಶ್ರಾಂತಿ ಸಿಗುತ್ತದೆ ಮತ್ತು ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ.
- ಕೇಸರಿ ಹಾಲಿನ ಸೇವನೆಯಿಂದ ದೇಹಕ್ಕೆ ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ರಂಜಕದಂತಹ ಅಗತ್ಯ ಪೋಷಕಾಂಶಗಳು ಸಿಗುತ್ತದೆ.
- ಕೇಸರಿ ಹಾಲನ್ನು ಪ್ರತಿನಿತ್ಯ ಕುಡಿಯುವುದರಿಂದ ಕಣ್ಣಿನ ಆರೋಗ್ಯವನ್ನು ರಕ್ಷಿಸುತ್ತದೆ. ಇದು ಸ್ಮರಣಶಕ್ತಿಯನ್ನು ಸುಧಾರಿಸುತ್ತದೆ.
- ಕೇಸರಿ ಹಾಲಿನಲ್ಲಿರುವ ವಿಟಮಿನ್ ಎ ದೃಷ್ಟಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಕಾಂತಿಯನ್ನೂ ಹೆಚ್ಚಿಸುತ್ತದೆ.
- ಕೇಸರಿ ಹಾಲಿನಲ್ಲಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು, ಪೋಷಕಾಂಶಗಳು ಸಮೃದ್ಧವಾಗಿದ್ದು ರೋಗನಿರೋಧಕ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತವೆ.
- ಪ್ರತಿನಿತ್ಯ ಕೇಸರಿ ಹಾಲನ್ನು ಸೇವನೆ ಮಾಡುವುದರಿಂದ ಮೂಳೆಗಳು, ಸ್ನಾಯುಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಏಕೆಂದರೆ ಇದರಲ್ಲಿ ವಿಟಮಿನ್ ಡಿ ಅಂಶವಿದ್ದು ಇದು ಮೂಳೆಗಳನ್ನು ಬಲಗೊಳಿಸಲು ಸಹಾಯ ಮಾಡುತ್ತದೆ.
- ಕೇಸರಿ ಹಾಲಿನಲ್ಲಿ ವಿಟಮಿನ್ ಬಿ12 ಹೇರಳವಾಗಿದೆ. ಇದು ದೇಹದಲ್ಲಿ ಕೆಂಪು ರಕ್ತ ಕಣಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ.
- ಕೇಸರಿ ಹಾಲಿನಲ್ಲಿ ವಿಟಮಿನ್ ಬಿ6 ಇದೆ. ಇದು ಮೆದುಳಿನ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಾತ್ರವಲ್ಲ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ.
- ಕೇಸರಿ ಹಾಲು ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಕಾರಿಯಾಗಿದ್ದು, ತಿಂದ ಆಹಾರ ಸರಿಯಾಗಿ ಜೀರ್ಣವಾಗದೇ ನಾನಾ ರೀತಿಯ ಸಮಸ್ಯೆ ಎದುರಿಸುತ್ತಿರುವವರು ಈ ಹಾಲನ್ನು ಪ್ರತಿನಿತ್ಯ ಸೇವನೆ ಮಾಡಬಹುದು.
- ನಿಯಮಿತವಾಗಿ ಸೇವಿಸಿದರೆ, ಗರ್ಭಿಣಿಯರಿಗೂ ಇದು ಪ್ರಯೋಜನಕಾರಿ ಆಗಿದೆ, ಆದರೆ ಇದನ್ನು ಸೇವನೆ ಮಾಡುವ ಮೊದಲು ವೈದ್ಯರ ಸಲಹೆ ಪಡೆಯುವುದು ಬಹಳ ಮುಖ್ಯ.
ಕೇಸರಿ ಹಾಲನ್ನು ತಯಾರಿಸುವ ವಿಧಾನ:
- ಬಾದಾಮಿ ಪುಡಿ ಮಾಡಿ ಇಟ್ಟುಕೊಳ್ಳಿ.
- ಹಾಲನ್ನು ಬಾಣಲೆಯಲ್ಲಿ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.
- ಪುಡಿ ಮಾಡಿಟ್ಟುಕೊಂಡ ಬಾದಾಮಿ, ಕೇಸರಿ, ಏಲಕ್ಕಿ ಮತ್ತು ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಿ.
- ಹಾಲು ತಳಕ್ಕೆ ಅಂಟದಂತೆ ನೋಡಿಕೊಳ್ಳಿ.
- ಮಿಶ್ರಣ ಕುದಿಯಲು ಪ್ರಾರಂಭಿಸಿದಾಗ, ಉರಿಯನ್ನು ಕಡಿಮೆ ಮಾಡಿ.
- 5 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿದರೆ ಕೇಸರಿ ಹಾಲು ಬಿಸಿ ಬಿಸಿಯಾಗಿ ಕುಡಿಯಲು ಸಿದ್ದವಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ