ಈ ಹಣ್ಣು ಆರೋಗ್ಯಕ್ಕೆ ಬಹಳ ಒಳ್ಳೆಯದು ಆದ್ರೆ ಈ ಸಮಸ್ಯೆ ಇರುವವರು ಎಷ್ಟು ದೂರ ಇರುತ್ತಾರೋ ಅಷ್ಟು ಒಳ್ಳೆಯದು!
ಸೀತಾಫಲ ಚಳಿಗಾಲದ ವರೆಗೆ ಮಾತ್ರ ಸೇವನೆ ಮಾಡಲು ಸಿಗುತ್ತದೆ. ಇದೊಂದು ಋತುಮಾನದ ಹಣ್ಣಾಗಿದ್ದು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಆದರೆ ಈ ಹಣ್ಣು ಆರೋಗ್ಯಕ್ಕೆ ಎಷ್ಟೇ ಒಳ್ಳೆಯದಾಗಿದ್ದರೂ ಕೂಡ ಇದನ್ನು ಕೆಲವರು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು, ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ, ಇದರ ಬೀಜಗಳು ಬಹಳ ವಿಷಕಾರಿಯಾಗಿದ್ದು, ಆದಷ್ಟು ಎಚ್ಚರಿಕೆಯಿಂದ ಸೇವಿಸುವುದು ಅವಶ್ಯಕ. ಹಾಗಾದರೆ ಈ ಹಣ್ಣನ್ನು ಯಾರು ಸೇವನೆ ಮಾಡಬಾರದು, ಇದರಿಂದ ಉಂಟಾಗುವ ದುಷ್ಪರಿಣಾಮಗಳೇನು? ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸೀತಾಫಲ (Custard Apple) ಪೋಷಕಾಂಶಗಳಿಂದ ತುಂಬಿರುವ ಉಗ್ರಾಣದಂತೆ. ಹಲವಾರು ಆರೋಗ್ಯ ಪ್ರಯೋಜನಗಳನ್ನು ತನ್ನಲ್ಲಿ ಹುದುಗಿಸಿಟ್ಟುಕೊಂಡಿದೆ. ಮಾತ್ರವಲ್ಲ ಈ ಹಣ್ಣಿನ ರುಚಿ ಒಂದು ರೀತಿ ವಿಶಿಷ್ಟವಾಗಿದ್ದು ಎಲ್ಲರೂ ತಿನ್ನಲು ಇಷ್ಟಪಡುತ್ತಾರೆ. ಅದಕ್ಕಾಗಿಯೇ ಸೀತಾಫಲವನ್ನು ಬಡವರ ಸೇಬು ಎಂದು ಕರೆಯಲಾಗುತ್ತದೆ. ಜೊತೆಗೆ ಇದು ಹಲವಾರು ಔಷಧೀಯ ಗುಣಗಳನ್ನು ಕೂಡ ಹೊಂದಿದೆ. ಆಯುರ್ವೇದದಲ್ಲಿ, ಸೀತಾಫಲದ ಎಲೆ, ತೊಗಟೆ, ಬೀಜ ಮತ್ತು ತಿರುಳು ಸೇರಿದಂತೆ ಪ್ರತಿಯೊಂದು ಭಾಗವನ್ನು ಅನೇಕ ರೋಗಗಳನ್ನು ತಡೆಗಟ್ಟಲು ಬಳಸಿಕೊಳ್ಳುತ್ತಾರೆ. ಆದರೆ ಇಷ್ಟೆಲ್ಲಾ ಆರೋಗ್ಯ ಪ್ರಯೋಜನಗಳಿರುವ ಈ ಹಣ್ಣನ್ನು ಕೂಡ ಅತಿಯಾಗಿ ಸೇವನೆ ಮಾಡಬಾರದು. ಹೌದು, ಇದು ಕೆಲವು ಆರೋಗ್ಯ ಸಮಸ್ಯೆಗಳಿರುವವರಿಗೆ ಒಳ್ಳೆಯದಲ್ಲ. ಇದನ್ನು ಸೇವಿಸುವುದರಿಂದ ಜೀರ್ಣಕಾರಿ ಸಮಸ್ಯೆಗಳು, ವಾಂತಿ ಮತ್ತು ಇತರ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿಯೂ, ಇದರ ಬೀಜಗಳು ಬಹಳ ವಿಷಕಾರಿಯಾಗಿದ್ದು, ಆದಷ್ಟು ಎಚ್ಚರಿಕೆಯಿಂದ ಸೇವಿಸುವುದು ಅವಶ್ಯಕ. ಹಾಗಾದರೆ ಈ ಹಣ್ಣನ್ನು ಯಾರು ತಿನ್ನಬಾರದು, ಇದರಿಂದ ಯಾವ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸೀತಾಫಲ ಹಣ್ಣಿನ ಆರೋಗ್ಯ ಪ್ರಯೋಜನ:
ಸಾಮಾನ್ಯವಾಗಿ ಈ ಹಣ್ಣು ಕೆಲವೇ ಕೆಲವು ಮಾಸಗಳಲ್ಲಿ ಲಭ್ಯವಿದ್ದು, ಇದರ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಇದರಲ್ಲಿ ಪೋಷಕಾಂಶಗಳು ಲಭ್ಯವಾಗಿದ್ದು ವಿಟಮಿನ್ ಸಿ, ಪ್ರೋಟೀನ್‌ಗಳು, ಕಾರ್ಬೋಹೈಡ್ರೇಟ್‌ಗಳು, ಫೈಬರ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಇದರಲ್ಲಿರುವ ವಿಟಮಿನ್ ಸಿ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಜೊತೆಗೆ ಸ್ವತಂತ್ರ ರಾಡಿಕಲ್‌ಗಳನ್ನು ತೆಗೆದು ಹಾಕುವ ಮೂಲಕ ದೇಹವನ್ನು ರಕ್ಷಿಸುತ್ತದೆ. ಮಾತ್ರವಲ್ಲ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಒಟ್ಟಾರೆ ನಮ್ಮ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸೀತಾಫಲವು ಆರೋಗ್ಯಕರ ಹಣ್ಣಾಗಿದ್ದರೂ, ಅದನ್ನು ಮಿತವಾಗಿ ಸೇವಿಸುವುದು ಬಹಳ ಮುಖ್ಯವಾಗುತ್ತದೆ.
ಇದನ್ನೂ ಓದಿ: ಹಣ್ಣು vs ಹಣ್ಣಿನ ಜ್ಯೂಸ್; ಇವೆರಡರಲ್ಲಿ ಯಾವುದರ ಸೇವನೆ ಬೆಸ್ಟ್
ಈ ಆರೋಗ್ಯ ಸಮಸ್ಯೆಗಳಿದ್ದರೆ ಸೀತಾಫಲ ಸೇವನೆ ಮಾಡಬೇಡಿ;
ಅಲರ್ಜಿ ಇರುವವರು: ಕೆಲವರಿಗೆ ಸೀತಾಫಲ ತಿಂದ ನಂತರ ವಾಕರಿಕೆ, ವಾಂತಿ, ಕಿರಿಕಿರಿ ಅಥವಾ ಇತರ ಅಲರ್ಜಿಯ ಲಕ್ಷಣಗಳು ಕಂಡುಬರುತ್ತದೆ. ಅಂತವರು ಸೀತಾಫಲ ತಿನ್ನುವುದಕ್ಕಿಂತ ಸೇವನೆ ಮಾಡದಿರುವುದೇ ಉತ್ತಮ.
ಜೀರ್ಣಕ್ರಿಯೆ ಸಮಸ್ಯೆ ಇದ್ದವರು: ಸೀತಾಫಲ ಹಣ್ಣಿನಲ್ಲಿ ಫೈಬರ್ ಅಂಶ ಅಧಿಕವಾಗಿದೆ. ಆದ್ದರಿಂದ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ತಿನ್ನುವುದರಿಂದ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು, ಅತಿಸಾರ ಅಥವಾ ಹೊಟ್ಟೆ ತುಂಬಿದ ಭಾವನೆಯಂತಹ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು.
ಸೀತಾಫಲ ಬೀಜಗಳಿಂದ ಅಪಾಯ: ಸೀತಾಫಲದಲ್ಲಿರುವ ಬಿಳಿ ತಿರುಳು ಆರೋಗ್ಯಕರವಾಗಿದ್ದರೂ, ಅದರ ಬೀಜಗಳು ವಿಷಕಾರಿಯಾಗಿರುತ್ತವೆ. ಆದ್ದರಿಂದ, ಹಣ್ಣನ್ನು ತಿನ್ನುವಾಗ, ಬೀಜಗಳನ್ನು ತೆಗೆದುಹಾಕಲು ಮತ್ತು ಅವು ನುಂಗಿ ಹೋಗದಂತೆ ನೋಡಿಕೊಳ್ಳುವುದು ಮುಖ್ಯ. ಹಾಗಾಗಿ ಈ ಹಣ್ಣನ್ನು ಸೇವನೆ ಮಾಡುವಾಗ ಬಹಳ ಜಾಗರೂಕರಾಗಿರಿ.
ಅತಿಯಾಗಿ ಸೇವಿಸುವವರಿಗೆ ಒಳ್ಳೆಯದಲ್ಲ: ಸೀತಾಫಲ ಹಣ್ಣಿನಲ್ಲಿ ಕಬ್ಬಿಣ ಅಂಶ ಉತ್ತಮವಾಗಿದೆ. ಆದರೆ ಇದನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಕಬ್ಬಿಣದ ಮಟ್ಟ ಹೆಚ್ಚಾಗುತ್ತದೆ. ಇದು ಹೊಟ್ಟೆ ನೋವು, ಅಜೀರ್ಣ, ಮಲಬದ್ಧತೆ, ಉಬ್ಬುವುದು ಮತ್ತು ನಾಲಿಗೆಯ ಮೇಲೆ ಲೇಪದಂತಹ ಸಮಸ್ಯೆಗಳನ್ನು ಉಂಟುಮಾಡಬಹುದು. ಹಾಗಾಗಿ ಈ ಹಣ್ಣನ್ನು ಸೇವನೆ ಮಾಡುವಾಗ ಬಹಳ ಜಾಗರೂಕರಾಗಿರಬೇಕಾಗುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








