AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಣ್ಣು vs ಹಣ್ಣಿನ ಜ್ಯೂಸ್‌; ಇವೆರಡರಲ್ಲಿ ಯಾವುದರ ಸೇವನೆ ಬೆಸ್ಟ್‌

ತಾಜಾ ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಪ್ರಯೋಜನಕಾರಿ. ಕೆಲವರು ತಾಜಾ ಹಣ್ಣುಗಳನ್ನು ತಿನ್ನಲು ಇಷ್ಟಪಟ್ಟರೆ, ಇನ್ನೂ ಕೆಲವರು ಹಣ್ಣನ್ನು ತಿನ್ನುವ ಬದಲು ಅದನ್ನು ಜ್ಯೂಸ್‌ ಮಾಡಿ ಸೇವನೆ ಮಾಡಲು ಇಷ್ಟಪಡುತ್ತಾರೆ. ಇವೆರಡರ ಸೇವನೆ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತು. ಆದರೆ ಇದರಲ್ಲಿ ಯಾವುದರ ಸೇವನೆ ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ ಗೊತ್ತಾ? ಈ ಕುರಿತ ಸಂಪೂರ್ಣ ಮಾಹಿತಿಯನ್ನು ನೀವು ತಿಳಿಯಲೇಬೇಕು.

ಹಣ್ಣು vs ಹಣ್ಣಿನ ಜ್ಯೂಸ್‌; ಇವೆರಡರಲ್ಲಿ ಯಾವುದರ ಸೇವನೆ ಬೆಸ್ಟ್‌
ಸಾಂದರ್ಭಿಕ ಚಿತ್ರ Image Credit source: Google
ಮಾಲಾಶ್ರೀ ಅಂಚನ್​
|

Updated on: Oct 05, 2025 | 6:49 PM

Share

ದೀರ್ಘಾವಧಿಯವರೆಗೆ ಆರೋಗ್ಯವಾಗಿರಲು ಆರೋಗ್ಯಕರ ಆಹಾರವನ್ನು ಸೇವಿಸುವುದು ಬಹಳ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳಲು ಹೆಚ್ಚಿನವರು ಹಣ್ಣುಗಳ ಸೇವನೆ ಮಾಡುತ್ತಾರೆ. ವೈದ್ಯರು ಕೂಡ ಆರೋಗ್ಯವನ್ನು ಕಾಪಾಡಿಕೊಳ್ಳಲು ಕಾಲೋಚಿತ ಹಣ್ಣುಗಳನ್ನು ಸೇವನೆ ಮಾಡಲು ಸಲಹೆ ನೀಡುತ್ತಾರೆ. ಹೀಗೆ ಕೆಲವರು ಹಣ್ಣುಗಳನ್ನು ತಿನ್ನಲು ಇಷ್ಟ ಪಟ್ಟರೆ, ಇನ್ನೂ ಕೆಲವರು ಹಣ್ಣಿನ ಬದಲು ಅದರ ಜ್ಯೂಸ್‌ ಸೇವನೆ ಮಾಡುತ್ತಾರೆ. ತಾಜಾ ಹಣ್ಣು ಹಾಗೂ ಜ್ಯೂಸ್‌ (Fruit vs fruit juice) ಇವೆರಡು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ರೆ ಈ ಎರಡರಲ್ಲಿ ನಮ್ಮ ಆರೋಗ್ಯಕ್ಕೆ ಹೆಚ್ಚು ಯಾವುದು ಪ್ರಯೋಜನಕಾರಿ, ಯಾವುದರ ಸೇವನೆ ಒಳ್ಳೆಯದು ಗೊತ್ತಾ? ಈ ಬಗ್ಗೆ ತಜ್ಞರು ಏನು ಹೇಳ್ತಾರೆ ಎಂಬುದನ್ನು ನೋಡಿ.

ತಾಜಾ ಹಣ್ಣು ಅಥವಾ ಜ್ಯೂಸ್‌ ಯಾವುದು ಆರೋಗ್ಯಕ್ಕೆ ಪ್ರಯೋಜನಕಾರಿ?

ತಾಜಾ ಹಣ್ಣುಗಳು ಮತ್ತು ಹಣ್ಣಿನ ರಸ ಎರಡನ್ನೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ನೀವು ಎರಡರ ನಡುವೆ ಆರೋಗ್ಯಕರ ಆಯ್ಕೆಯನ್ನು ಆರಿಸಲು ಬಯಸಿದರೆ, ತಜ್ಞರು ಹಣ್ಣಿನ ರಸದ ಬದಲಿಗೆ ಹಣ್ಣುಗಳನ್ನು ತಿನ್ನಲು ಶಿಫಾರಸು ಮಾಡುತ್ತಾರೆ. ಹಣ್ಣುಗಳನ್ನು ಜ್ಯೂಸ್‌ಗಳಿಗಿಂತ ಆರೋಗ್ಯಕರವೆಂದು ಏಕೆ ಪರಿಗಣಿಸಲಾಗುತ್ತದೆ ಅದು ಹೇಗೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಮುಳ್ಳು ಮುಳ್ಳಾಗಿರುವ ಈ ಒಂದು ಹಣ್ಣಿಗೆ ಕ್ಯಾನ್ಸರ್, ಹೃದಯಾಘಾತ ಬರದಂತೆ ತಡೆಯುವ ಶಕ್ತಿ ಇದೆ

  • ಹಣ್ಣುಗಳು ಬಹಳಷ್ಟು ನಾರಿನಂಶವನ್ನು ಒದಗಿಸುತ್ತವೆ. ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಹಣ್ಣುಗಳಲ್ಲಿರುವ ನಾರು ಅತ್ಯಗತ್ಯ. ಹಣ್ಣುಗಳಲ್ಲಿ ವಿವಿಧ ರೀತಿಯ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು ಮತ್ತು ಫೈಟೊಕೆಮಿಕಲ್‌ಗಳು ಸಹ ಇರುತ್ತವೆ. ಇವೆಲ್ಲವೂ ತಾಜಾ ಹಣ್ಣುಗಳನ್ನು ಸೇವನೆ ಮಾಡಿದರೆ ಮಾತ್ರ ನಮ್ಮ ದೇಹಕ್ಕೆ ಲಭಿಸುತ್ತದೆ. ಆದ್ರೆ ಜ್ಯೂಸ್‌ ಮಾಡಿದಾಗ ಈ ಎಲ್ಲಾ ಪೋಷಕಾಂಶಗಳು ಕಳೆದುಹೋಗುತ್ತವೆ.
  • ಜ್ಯೂಸ್ ಕುಡಿಯುವುದಕ್ಕೆ ಹೋಲಿಸಿದರೆ, ತಾಜಾ ಹಣ್ಣುಗಳು ದೇಹದಲ್ಲಿ ಆರೋಗ್ಯಕರ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ.
  • ತಾಜಾ ಹಣ್ಣುಗಳನ್ನು ತಿನ್ನುವುದರಿಂದ ಹೊಟ್ಟೆ ಹೆಚ್ಚು ಹೊತ್ತು ತುಂಬಿರುತ್ತದೆ. ಆದರೆ ಜ್ಯೂಸ್‌ ಕುಡಿಯುವುದರಿಂದ ಬೇಗನೆ ಹಸಿವಾಗುತ್ತದೆ ಮತ್ತು ಇದು ಹೆಚ್ಚಿನ ಕ್ಯಾಲೋರಿ ಸೇವನೆಗೆ ಕಾರಣವಾಗುತ್ತದೆ.
  • ತಾಜಾ ಹಣ್ಣುಗಳನ್ನು ಸೇವನೆ ಮಾಡುವುದರಿಂದ ತೂಕವನ್ನು ನಿಯಂತ್ರಿಸಬಹುದು. ಹೇಗೆಂದರೆ ಇದು ಕಡಿಮೆ ಕ್ಯಾಲೋರಿಗಳೊಂದಿಗೆ ಹೆಚ್ಚಿನ ತೃಪ್ತಿಯನ್ನು ನೀಡುತ್ತದೆ. ಜ್ಯೂಸ್‌ ಕುಡಿಯುವುದರಿಂದ ಹೆಚ್ಚಿನ ಸಕ್ಕರೆ ಮತ್ತು ಕ್ಯಾಲೋರಿ ಸೇವನೆ ಉಂಟಾಗುತ್ತದೆ. ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.
  • ನೀವು ಹಣ್ಣುಗಳನ್ನು ಜ್ಯೂಸ್ ಮಾಡಿದಾಗ, ಅದರ ಎಲ್ಲಾ ಪೋಷಕಾಂಶಗಳು ಮತ್ತು ನಾರಿನಂಶ ಕಳೆದುಹೋಗುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಮಲಬದ್ಧತೆಯನ್ನು ತಡೆಗಟ್ಟಲು ಇಡೀ ಹಣ್ಣುಗಳನ್ನು ತಿನ್ನುವುದೇ ಉತ್ತಮ ಎಂದು ತಜ್ಞರು ಹೇಳುತ್ತಾರೆ.
  • ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಜ್ಯೂಸ್ ಬದಲಿಗೆ ಹಣ್ಣುಗಳನ್ನು ಸೇವಿಸಬೇಕು. ಜೊತೆಗೆ ಪ್ಯಾಕ್ ಮಾಡಿದ ಜ್ಯೂಸ್‌ಗಳನ್ನು ತಪ್ಪಿಸಿ. ಸಂಪೂರ್ಣ ಹಣ್ಣುಗಳನ್ನು ತಿನ್ನುವುದರಿಂದ ಹೆಚ್ಚಿನ ಫೈಬರ್ ಸಿಗುತ್ತದೆ. ಫೈಬರ್ ಭರಿತ ಆಹಾರಗಳನ್ನು ಸೇವಿಸುವುದರಿಂದ ಮಲಬದ್ಧತೆ, ಗ್ಯಾಸ್ ಮತ್ತು ಅಜೀರ್ಣ ನಿವಾರಣೆಯಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ