ಹಣ್ಣುಗಳನ್ನು ಯಾವಾಗ ತಿನ್ನಬೇಕು, ತಿನ್ನಬಾರದು ಎಂಬುದನ್ನು ತಿಳಿಯಿರಿ, ಇಲ್ಲದಿದ್ದರೆ ಲಾಭಕ್ಕಿಂತ ಹಾನಿಯೇ ಹೆಚ್ಚು
ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದ ವಿಚಾರ. ಇವುಗಳನ್ನು ನಿಯಮಿತವಾಗಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವಾರು ರೀತಿಯ ಪ್ರಯೋಜನಗಳು ಸಿಗುತ್ತದೆ. ಆದರೆ ಇದರ ಜೊತೆಗೆ ನೀವು ತಿಳಿದುಕೊಳ್ಳಬೇಕಾದ ಮುಖ್ಯ ಅಂಶವೆಂದರೆ, ಹಣ್ಣುಗಳನ್ನು ತಿನ್ನುವುದು ಎಷ್ಟು ಮುಖ್ಯವೋ, ಅವುಗಳನ್ನು ಸೇವನೆ ಮಾಡುವ ಸಮಯವೂ ಅಷ್ಟೇ ಮುಖ್ಯವಾಗುತ್ತದೆ. ಪೌಷ್ಟಿಕ ತಜ್ಞ ಸುಮನ್ ಅಗರ್ವಾಲ್ ಅವರು ಹೇಳುವ ಪ್ರಕಾರ, ಹಣ್ಣುಗಳನ್ನು ಸೇವಿಸುವ ಸಮಯವು ಅವುಗಳ ಪ್ರಯೋಜನಗಳನ್ನು ನಿರ್ಧರಿಸುತ್ತದೆ. ಹಾಗಾದರೆ, ನಾವು ಹಣ್ಣುಗಳನ್ನು ಯಾವಾಗ ತಿನ್ನಬೇಕು ಮತ್ತು ಯಾವಾಗ ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯಕರ ಆಹಾರದ ಬಗ್ಗೆ ಯೋಚಿಸಿದಾಗೆಲ್ಲಾ, ಮೊದಲು ನೆನಪಿಗೆ ಬರುವುದು ಹಣ್ಣುಗಳು. ಪ್ರತಿನಿತ್ಯ ಇವುಗಳನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ (Health) ಪ್ರಯೋಜನಗಳು ಪಡೆದುಕೊಳ್ಳಬಹುದು ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅವುಗಳಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ನಮಗೆ ಹಲವು ವಿಧಗಳಲ್ಲಿ ಉಪಯುಕ್ತವಾಗಿವೆ. ಆದರೆ, ಹಣ್ಣುಗಳನ್ನು (Fruit) ಸೇವನೆ ಮಾಡುವುದು ಎಷ್ಟು ಮುಖ್ಯವೋ, ಅವುಗಳನ್ನು ತಿನ್ನುವ ಸಮಯವೂ ಅಷ್ಟೇ ಮುಖ್ಯವಾಗಿರುತ್ತದೆ ಎಂಬುದು ನಿಮಗೆ ತಿಳಿದಿದೆಯೇ! ಹೌದು. ಹಣ್ಣುಗಳನ್ನು ಸೇವಿಸುವ ಸಮಯವು ಅವುಗಳ ಪ್ರಯೋಜನಗಳನ್ನು ನಿರ್ಧರಿಸುತ್ತದೆ ಎಂದು ಪೌಷ್ಟಿಕ ತಜ್ಞ ಸುಮನ್ ಅಗರ್ವಾಲ್ ಹೇಳುತ್ತಾರೆ. ಹಾಗಾದರೆ, ನಾವು ಹಣ್ಣುಗಳನ್ನು ಯಾವಾಗ ತಿನ್ನಬೇಕು ಮತ್ತು ಯಾವಾಗ ಸೇವನೆ ಮಾಡುವುದನ್ನು ತಪ್ಪಿಸಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹಣ್ಣುಗಳನ್ನು ತಿನ್ನಲು ಉತ್ತಮ ಸಮಯ ಯಾವುದು?
ಊಟದ ಸಮಯದಲ್ಲಿ ಹಣ್ಣುಗಳನ್ನು ಸೇವನೆ ಮಾಡಬಹುದು. ಈ ರೀತಿ ಅವುಗಳನ್ನು ತಿನ್ನುವುದರಿಂದ ಅವುಗಳ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಊಟದ ಜೊತೆಗೆ ಅವುಗಳನ್ನು ಸೇವಿಸುವುದರಿಂದ ಮತ್ತಷ್ಟು ಶಕ್ತಿ ಸಿಗುತ್ತದೆ. ಮಾತ್ರವಲ್ಲ ಈ ಸಮಯದಲ್ಲಿ ಹಣ್ಣನ್ನು ಸೇವನೆ ಮಾಡಿದಾಗ ದೀರ್ಘಕಾಲದ ವರೆಗೆ ಹೊಟ್ಟೆ ತುಂಬಿರುವಂತೆ ಭಾಸವಾಗುತ್ತದೆ. ಇದರಿಂದ, ಪದೇ ಪದೇ ಅನಗತ್ಯವಾಗಿ ಸೇವನೆ ಮಾಡುವುದಕ್ಕೆ ಕಡಿವಾಣ ಹಾಕಿದಂತಾಗುತ್ತದೆ.
ವ್ಯಾಯಾಮಕ್ಕೂ ಮುನ್ನ:
ನಿಮಗೆ ಜಿಮ್‌ಗೆ ಹೋಗುವ ಅಭ್ಯಾಸವಿರಲಿ ಅಥವಾ ನೀವು ಮನೆಯಲ್ಲಿಯೇ ವ್ಯಾಯಾಮ ಮಾಡುವವರಾಗಿರಲಿ, ವ್ಯಾಯಾಮಕ್ಕೂ 30 ರಿಂದ 40 ನಿಮಿಷಗಳ ಮೊದಲು ಹಣ್ಣುಗಳನ್ನು ಸೇವಿಸಿ. ಇದು ನಿಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ.
ಊಟದ ನಂತರ (ಸಿಹಿತಿಂಡಿಯಾಗಿ):
ಹಣ್ಣುಗಳನ್ನು ಊಟದ ನಂತರ ಸಿಹಿತಿಂಡಿಯಾಗಿಯೂ ಸೇವಿಸಬಹುದು. ಅದಕ್ಕಾಗಿಯೇ ಅನೇಕ ಕಾರ್ಯಕ್ರಮಗಳಲ್ಲಿ ಮತ್ತು ಪಾರ್ಟಿಗಳಲ್ಲಿ ಊಟದ ನಂತರ ಹಣ್ಣುಗಳನ್ನು ಸಿಹಿತಿಂಡಿಗಳ ಬದಲಾಗಿ ನೀಡಲಾಗುತ್ತದೆ. ಹಣ್ಣುಗಳು ಊಟಕ್ಕೆ ಹಗುರವಾದ, ನೈಸರ್ಗಿಕ ಸಿಹಿಯಂತೆ ಕಾರ್ಯನಿರ್ವಹಿಸುತ್ತವೆ. ಅವು ನಿಮಗೆ ಪೋಷಕಾಂಶಗಳನ್ನು ಒದಗಿಸುವುದಲ್ಲದೆ, ಸಿಹಿತಿಂಡಿ ತಿನ್ನಬೇಕೆಂಬ ಬಯಕೆಯನ್ನು ಆರೋಗ್ಯಕರ ರೀತಿಯಲ್ಲಿ ತೃಪ್ತಿಪಡಿಸುತ್ತವೆ.
ಇದನ್ನೂ ಓದಿ: ಪ್ರತಿದಿನ ರಾತ್ರಿ ಒಂದು ಹನಿ ಈ ಎಣ್ಣೆಯನ್ನು ಹೊಕ್ಕುಳಿಗೆ ಹಚ್ಚುವುದರಿಂದ ಎಷ್ಟೆಲ್ಲಾ ಲಾಭವಿದೆ ನೋಡಿ
ಹಣ್ಣುಗಳನ್ನು ಯಾವ ಸಮಯದಲ್ಲಿ ಸೇವನೆ ಮಾಡಬಾರದು?
ಅನೇಕರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಹಣ್ಣುಗಳ ಸೇವನೆ ಮಾಡುತ್ತಾರೆ. ಆದರೆ ಆರೋಗ್ಯ ತಜ್ಞರು ಇದು ತುಂಬಾ ಕೆಟ್ಟ ಅಭ್ಯಾಸ ಎಂದು ಹೇಳುತ್ತಾರೆ. ಏಕೆಂದರೆ ಹಣ್ಣುಗಳು ನಿಮ್ಮ ರಕ್ತದಲ್ಲಿನ ಸಕ್ಕರೆ ಮತ್ತು ಇನ್ಸುಲಿನ್ ಮಟ್ಟವನ್ನು ತ್ವರಿತವಾಗಿ ಹೆಚ್ಚಿಸುತ್ತವೆ. ಆದ್ದರಿಂದ, ಅವುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ನಿಮ್ಮ ಕರುಳಿನ ಆರೋಗ್ಯಕ್ಕೆ ಹಾನಿಯಾಗುತ್ತದೆ. ಕಾಲಾನಂತರದಲ್ಲಿ, ಈ ಅಭ್ಯಾಸವು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಹಣ್ಣುಗಳು ಅದ್ಭುತವಾದ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆಯಾದರೂ ನೀವು ಅವುಗಳನ್ನು ತಿನ್ನುವ ಸಮಯ ಬಹಳ ಮುಖ್ಯವಾಗುತ್ತದೆ. ಹಣ್ಣುಗಳನ್ನು ಉಪಹಾರದ ಭಾಗವಾಗಿ, ವ್ಯಾಯಾಮದ ಮೊದಲು ತೆಗೆದುಕೊಳ್ಳುವ ಬೂಸ್ಟರ್ ಆಗಿ ಅಥವಾ ಊಟದ ನಂತರ ಸೇವಿಸಬಹುದು. ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಅವುಗಳನ್ನು ತಿನ್ನುವುದನ್ನು ತಪ್ಪಿಸಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








