ನಿಮಗೂ ನಿದ್ದೆ ಮಾಡುವಾಗ ಬೆನ್ನು ನೋವು ಬರುತ್ತಾ? ಹಾಗಿದ್ರೆ ಈ ಆಹಾರಗಳ ಸೇವನೆ ಮಾಡಬೇಡಿ
ಪ್ರಸ್ತುತ ನಮ್ಮ ಜೀವನಶೈಲಿಯಿಂದಾಗಿ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಕಂಡುಬರುತ್ತದೆ. ಆದರೆ ನಮ್ಮ ಆರೋಗ್ಯ ನಮ್ಮ ಕೈಯಲ್ಲಿಯೇ ಇರುತ್ತದೆ ಎಂಬುದನ್ನು ನಾವು ಮರೆಯಬಾರದು. ಸಾಧ್ಯವಾದಷ್ಟು ಆಹಾರದಲ್ಲಿ ಆರೋಗ್ಯಕರ ಆಹಾರಗಳನ್ನು ಸೇರಿಸಲು ಪ್ರಯತ್ನಿಸುವುದು ಬಹಳ ಒಳ್ಳೆಯದು. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಬೆನ್ನುಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದರಲ್ಲಿಯೂ ನಿದ್ರೆಯ ಸಮಯದಲ್ಲಿ ಬೆನ್ನು ನೋವಿನಿಂದ ಬಳಲುತ್ತಿರುವವರು ಕೆಲವು ಆಹಾರಗಳ ಸೇವನೆ ಮಾಡದಿರುವುದು ಬಹಳ ಒಳಿತು. ಹಾಗಾದರೆ ಯಾವ ಆಹಾರ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಪ್ರಸ್ತುತ ನಾವು ಅನುಸರಿಸುತ್ತಿರುವ ಜೀವನಶೈಲಿಯಿಂದಾಗಿ ನಮಗರಿವಿಲ್ಲದಂತೆ ನಮ್ಮ ಬೆನ್ನುಮೂಳೆ ದುರ್ಬಲಗೊಳ್ಳುತ್ತಿದೆ. ಈ ಪರಿಸ್ಥಿತಿಯಲ್ಲಿ, ನಾವು ತಿನ್ನುವ ಆಹಾರ ಮತ್ತು ತೆಗೆದುಕೊಳ್ಳುವ ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುವುದು ಬಹಳ ಅವಶ್ಯಕ. ಸಾಧ್ಯವಾದಷ್ಟು ಆಹಾರದಲ್ಲಿ ಆರೋಗ್ಯಕರ ಆಹಾರಗಳನ್ನು ಸೇರಿಸಲು ಪ್ರಯತ್ನಿಸುವುದು ಒಳ್ಳೆಯದು. ಇದು ನಿಮ್ಮ ಬೆನ್ನುಮೂಳೆಯನ್ನು ಬಲಪಡಿಸುತ್ತದೆ. ಇಲ್ಲವಾದಲ್ಲಿ ದಿನದಿಂದ ದಿನಕ್ಕೆ ಸಮಸ್ಯೆ ಮತ್ತಷ್ಟು ಹೆಚ್ಚಾಗುತ್ತದೆ. ಹಾಗಾಗಿ ನಮ್ಮ ಬೆನ್ನುಮೂಳೆಯನ್ನು ಬಲವಾಗಿಟ್ಟುಕೊಳ್ಳಲು, ಕೆಲವು ಆಹಾರಗಳ ಸೇವನೆ ಮಾಡುವುದನ್ನು ತಪ್ಪಿಸಬೇಕು. ಅದರಲ್ಲಿಯೂ ನಿದ್ರೆಯ ಸಮಯದಲ್ಲಿ ಬೆನ್ನು ನೋವಿನಿಂದ (Back Pain) ಬಳಲುತ್ತಿರುವವರು ಕೆಲವು ಆಹಾರಗಳ ಸೇವನೆ ಮಾಡದಿರುವುದು ಬಹಳ ಒಳಿತು. ಹಾಗಾದರೆ ಯಾವ ಆಹಾರ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಹೆಚ್ಚು ಪ್ರೋಟೀನ್ ಇರುವ ಆಹಾರಗಳು:
ಸಾಮಾನ್ಯವಾಗಿ ಪ್ರತಿನಿತ್ಯ ಹೆಚ್ಚಿನ ಪ್ರೋಟೀನ್ ಇರುವ ಆಹಾರಗಳನ್ನು ಸೇವನೆ ಮಾಡುವುದರಿಂದ ದೇಹದಲ್ಲಿ ಆಮ್ಲೀಯತೆ ಹೆಚ್ಚಾಗುತ್ತದೆ. ಪರಿಣಾಮವಾಗಿ, ದೇಹದಲ್ಲಿರುವ ಒಟ್ಟು ಕ್ಯಾಲ್ಸಿಯಂ ದೇಹದಿಂದ ಹೊರಹೋಗುತ್ತದೆ. ಇದು ಬೆನ್ನು ನೋವಿಗೆ ಕಾರಣವಾಗುತ್ತದೆ. ಆದ್ದರಿಂದ, ಮಿತವಾಗಿ ಪ್ರೋಟೀನ್ ಸೇವಿಸುವುದು ಸೂಕ್ತ. ಅತಿಯಾದ ಪ್ರೋಟೀನ್ ಮೂಳೆಗಳಿಗೂ ಹಾನಿ ಮಾಡುತ್ತದೆ.
ಕಾರ್ಬೊನೇಟೆಡ್ ಪಾನೀಯಗಳು:
ಮೂಳೆಗಳು ಆರೋಗ್ಯಕರವಾಗಿ ಮತ್ತು ಗಟ್ಟಿಯಾಗಿರಬೇಕು ಎಂದರೆ ಸಾಧ್ಯವಾದಷ್ಟು ತಂಪು ಪಾನೀಯಗಳು ಮತ್ತು ಷಾಂಪೇನ್‌ನಂತಹ ಕಾರ್ಬೊನೇಟೆಡ್ ಪಾನೀಯಗಳನ್ನು ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು. ಈ ಪಾನೀಯಗಳಲ್ಲಿರುವ ಹೆಚ್ಚಿನ ಫಾಸ್ಫೇಟ್ ಅಂಶವು ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಕಡಿಮೆ ಮಾಡುತ್ತದೆ. ಪರಿಣಾಮವಾಗಿ, ಮೂಳೆಗಳು ದುರ್ಬಲವಾಗುತ್ತವೆ, ಇದು ಬೆನ್ನುನೋವಿಗೂ ಕಾರಣವಾಗಬಹುದು.
ಕೆಲವು ಔಷಧಿಗಳು:
ಆಮ್ಲೀಯತೆಗೆ ಹೆಚ್ಚು ಔಷಧಿಗಳನ್ನು ಬಳಸುವುದರಿಂದ ಬೆನ್ನು ನೋವು ಉಂಟಾಗುತ್ತದೆ. ಹೀಗೆ ಮಾಡುವುದರಿಂದ ದೇಹವು ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸತುವುಗಳಂತಹ ಖನಿಜಗಳನ್ನು ಹೀರಿಕೊಳ್ಳಲು ಕಷ್ಟವಾಗುತ್ತದೆ. ಪರಿಣಾಮವಾಗಿ, ಮೂಳೆಗಳು ದುರ್ಬಲಗೊಳ್ಳುತ್ತವೆ.
ಕೆಫೀನ್ ಸೇವನೆ:
ಪ್ರತಿನಿತ್ಯ ಕೆಫೀನ್ ಸೇವನೆ ಮಾಡುವುದನ್ನು ಸೀಮಿತಗೊಳಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಹೆಚ್ಚು ಕಾಫಿ ಅಥವಾ ಚಹಾ ಕುಡಿಯುವುದರಿಂದ ಅದರಲ್ಲಿರುವ ಕೆಫೀನ್ ಮೂಳೆಗಳನ್ನು ದುರ್ಬಲಗೊಳಿಸುತ್ತದೆ.
ವಿಟಮಿನ್ ಡಿ ಕೊರತೆ:
ದೇಹದಲ್ಲಿ ಕ್ಯಾಲ್ಸಿಯಂ ಮತ್ತು ವಿಟಮಿನ್ ಡಿ ಮೂಳೆಗಳನ್ನು ಬಲವಾಗಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದರ ಕೊರತೆ ಬೆನ್ನು ನೋವು ಸೇರಿದಂತೆ ನಾನಾ ರೀತಿಯ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಈ ರೀತಿಯ ಸಮಸ್ಯೆಯಿಂದ ಪರಿಹಾರ ಪಡೆಯಲು ವಿಟಮಿನ್ ಡಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ಬಹಳ ಒಳ್ಳೆಯದು.
ಇದನ್ನೂ ಓದಿ: ಮುಖದಲ್ಲಿ ಈ ರೀತಿಯ ಲಕ್ಷಣ ಕಂಡುಬಂದಾಗ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ… ಜೀವಕ್ಕೆ ಅಪಾಯ ತರಬಹುದು!
ಪೌಷ್ಟಿಕಾಂಶದ ಕೊರತೆ:
ಮೂಳೆಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಈಸ್ಟ್ರೊಜೆನ್, ಪ್ರೊಜೆಸ್ಟರಾನ್ ಮತ್ತು ಟೆಸ್ಟೋಸ್ಟೆರಾನ್ ನಂತಹ ಪೋಷಕಾಂಶಗಳು ಅತ್ಯಗತ್ಯ. ಅದೇ ರೀತಿ ವಯಸ್ಸಾದಂತೆ, ದೇಹಕ್ಕೆ ಅಗತ್ಯವಿರುವ ಹಾರ್ಮೋನುಗಳು ಮತ್ತು ಪೋಷಕಾಂಶಗಳ ಬಗ್ಗೆ ಗಮನ ಕೊಡಬೇಕಾಗುತ್ತದೆ. ಇಲ್ಲದಿದ್ದರೆ, ದೇಹದಲ್ಲಿ ನೋವು ಹೆಚ್ಚಾಗಬಹುದು ಎಂಬುದು ನೆನಪಿರಲಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








