ಮುಖದಲ್ಲಿ ಈ ರೀತಿಯ ಲಕ್ಷಣ ಕಂಡುಬಂದಾಗ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ… ಜೀವಕ್ಕೆ ಅಪಾಯ ತರಬಹುದು!
ಆರೋಗ್ಯವೇ ಎಲ್ಲಕ್ಕಿಂತ ಮುಖ್ಯ ಎಂಬುದು ಎಲ್ಲರಿಗೂ ತಿಳಿದಿರುತ್ತದೆ. ಆದರೆ ಈಗಿನ ಜೀವನಶೈಲಿ ಮತ್ತು ಆಹಾರ ಪದ್ಧತಿಯಿಂದಾಗಿ, ಅನೇಕರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಆದರೆ ನಮ್ಮ ದೇಹ ಆರೋಗ್ಯ ಹಾಳಾದಾಗ ಕೆಲವು ಸೂಚನೆಗಳನ್ನು ನೀಡುತ್ತದೆ ಅದನ್ನು ಕಡೆಗಣಿಸಬಾರದು ಅದರಲ್ಲಿಯೂ ಮುಖದ ಮೇಲೆ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ಎಂದಿಗೂ ನಿರ್ಲಕ್ಷ್ಯ ಮಾಡಬಾರದು. ಹಾಗಾದರೆ ಮುಖದಲ್ಲಿ ಯಾವ ರೀತಿಯ ಲಕ್ಷಣ ಕಂಡುಬರುತ್ತದೆ, ಇದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯವೇ ಅತ್ಯಂತ ದೊಡ್ಡ ಸಂಪತ್ತು. ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಈ ರೀತಿಯ ಮಾತನ್ನು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. ಹೌದು ಈ ಮಾತು ಸತ್ಯ. ಹಾಗಾಗಿಯೇ ಆರೋಗ್ಯದ ವಿಷಯದಲ್ಲಿ ಎಷ್ಟು ಕಾಳಜಿ ಮಾಡಿದರೂ ಸಾಲುವುದಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ ಆರೋಗ್ಯ (Health) ಕಾಪಾಡಿಕೊಳ್ಳುವುದು ಒಂದು ರೀತಿಯ ಸವಾಲಾಗಿ ಪರಿಣಮಿಸಿದೆ. ಅದಕ್ಕಾಗಿಯೇ ಆದಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು. ಈಗಿನ ಜೀವನಶೈಲಿ (Lifestyle) ಮತ್ತು ಆಹಾರ ಪದ್ಧತಿಯಿಂದಾಗಿ, ಅನೇಕರು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಆದರೆ ಆರೋಗ್ಯ ಹಾಳಾದಾಗ ನಿಮ್ಮ ದೇಹ ನೀಡುವ ಕೆಲವು ಸೂಚನೆಗಳನ್ನು ಎಂದಿಗೂ ಕಡೆಗಣಿಸಬಾರದು. ಅದರಲ್ಲಿಯೂ ಮುಖದ ಮೇಲೆ ಕಾಣಿಸಿಕೊಳ್ಳುವ ಕೆಲವು ಲಕ್ಷಣಗಳನ್ನು ಎಂದಿಗೂ ಅಲ್ಲಗಳೆಯಬಾರದು. ಏಕೆಂದರೆ ಅದು ಜೀವಕ್ಕೆ ಅಪಾಯಕಾರಿಯಾಗಿರಬಹುದು. ಹಾಗಾಗಿ ಕೆಲವು ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡಬಾರದು. ಹಾಗಾದರೆ ಮುಖದಲ್ಲಿ (Signs on Your Face) ಯಾವ ರೀತಿಯ ಲಕ್ಷಣ ಕಂಡುಬರುತ್ತದೆ, ಇದಕ್ಕೆ ನಿಜವಾದ ಕಾರಣವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ ಅನೇಕರು ನಾನಾ ರೀತಿಯ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರು ಸೇವನೆ ಮಾಡುವ ಆಹಾರ ಮತ್ತು ಅನುಸರಿಸುವ ಜೀವನಶೈಲಿಯಿಂದಾಗಿ ವಿವಿಧ ರೀತಿಯ ಸಮಸ್ಯೆಗಳು ಉದ್ಭವಿಸುತ್ತವೆ. ಮಾತ್ರವಲ್ಲ ಮುಖದಲ್ಲಿ ಕಾಣಿಸಿಕೊಳ್ಳುವ ಕೆಲವು ಚಿಹ್ನೆಗಳು ಹೃದಯಾಘಾತದ ಸಮಸ್ಯೆಗಳನ್ನು ಮುಂಚಿತವಾಗಿ ಸೂಚಿಸಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅದಕ್ಕಾಗಿಯೇ ಯಾವುದೇ ಕಾರಣಕ್ಕೂ ಅವುಗಳನ್ನು ನಿರ್ಲಕ್ಷಿಸಬಾರದು ಎನ್ನಲಾಗುತ್ತದೆ. ಜೊತೆಗೆ ಹೃದಯಾಘಾತಕ್ಕೆ ಮೊದಲು ಮುಖದಲ್ಲಿ ಕಂಡುಬರುವ ಚಿಹ್ನೆಗಳ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು.
ಹಲ್ಲುನೋವು
ಸಾಮಾನ್ಯವಾಗಿ ಹಲ್ಲುನೋವು ಎಲ್ಲರಲ್ಲಿಯೂ ಒಂದಿಲ್ಲೊಂದು ಸಮಯದಲ್ಲಿ ಕಂಡುಬರುತ್ತದೆ. ಅದಕ್ಕಾಗಿಯೇ ಎಲ್ಲರೂ ಇದನ್ನು ಹೆಚ್ಚಾಗಿ ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ಹಲ್ಲುನೋವು ಹೃದಯಾಘಾತದ ಎಚ್ಚರಿಕೆಯ ಸಂಕೇತವೂ ಆಗಿರಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು ಆರೋಗ್ಯ ತಜ್ಞರು ಹೇಳುವ ಪ್ರಕಾರ, ಆಗಾಗ ದವಡೆ ನೋವು ಅಥವಾ ಹಲ್ಲುನೋವು ಕಂಡುಬರುತ್ತಿರುತ್ತದೆ, ಸಾಮಾನ್ಯವಾಗಿ ಜನ ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ ದವಡೆ ನೋವು ಪದೇ ಪದೇ ಬಂದರೆ ಅದು ಹೃದಯಾಘಾತದ ಲಕ್ಷಣವಾಗಿರಬಹುದು. ಹಾಗಾಗಿ ಆದಷ್ಟು ಬೇಗ ವೈದ್ಯರನ್ನು ಸಂಪರ್ಕಿಸಬೇಕು. ಇಲ್ಲವಾದಲ್ಲಿ ಇದು ಹಲವಾರು ತೊಡಕುಗಳಿಗೆ ಕಾರಣವಾಗಬಹುದು ಮಾತ್ರವಲ್ಲ, ಅದು ಜೀವಕ್ಕೆ ಅಪಾಯವನ್ನುಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಕರ್ನಾಟಕದ 41,000 ಮಕ್ಕಳಲ್ಲಿ ಜನ್ಮಜಾತ ಹೃದಯ ಕಾಯಿಲೆ: ಸಮೀಕ್ಷೆಯಲ್ಲಿ ಬಯಲಾಯ್ತು ಆಘಾತಕಾರಿ ಅಂಶ
ಒಸಡುಗಳಿಂದ ರಕ್ತಸ್ರಾವ
ಅದೇ ರೀತಿ ಕೆಲವರಿಗೆ ಒಸಡುಗಳಿಂದ ಅತಿಯಾದ ರಕ್ತಸ್ರಾವವಾಗುತ್ತದೆ. ಈ ರೀತಿ ಒಸಡುಗಳಿಂದ ರಕ್ತ ಬರುವುದನ್ನು ಎಂದಿಗೂ ನಿರ್ಲಕ್ಷಿಸಬಾರದು ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ. ಮಾತ್ರವಲ್ಲ ಇದು ವಿವಿಧ ರೀತಿಯ ತೊಡಕುಗಳಿಗೆ ಕಾರಣವಾಗಬಹುದು ಆದ್ದರಿಂದ, ಒಸಡುಗಳಲ್ಲಿ ಆಗಾಗ ರಕ್ತಸ್ರಾವ ಆಗುತ್ತಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








