Vascular diseases rising: ಪ್ರತಿ ವರ್ಷ ರಕ್ತನಾಳದ ಕಾಯಿಲೆ ಶೇ.10ರಷ್ಟು ಏರಿಕೆ, ಇಲ್ಲಿದೆ ವೈದ್ಯರ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 08, 2023 | 6:47 PM

ಮಧುಮೇಹವು ರಕ್ತನಾಳದ ಕಾಯಿಲೆಗಳಿಗೆ ನೇರವಾಗಿ ಸಂಬಂಧಿಸಿದೆ. ಅದಲ್ಲದೆ ಮುಂಬರುವ ವರ್ಷಗಳಲ್ಲಿ ಈ ಪ್ರಕರಣಗಳು ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಹಾಗಾಗಿ ಈ ಬಗ್ಗೆ ತಜ್ಞರು ಕೆಲವು ಆರೋಗ್ಯ ಸಲಹೆಗಳನ್ನು ನೀಡಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಕೆಲವು ಮಾಹಿತಿ ನೀಡಿದ್ದಾರೆ.

Vascular diseases rising: ಪ್ರತಿ ವರ್ಷ ರಕ್ತನಾಳದ ಕಾಯಿಲೆ ಶೇ.10ರಷ್ಟು ಏರಿಕೆ, ಇಲ್ಲಿದೆ ವೈದ್ಯರ ಸಲಹೆ
ಸಾಂದರ್ಭಿಕ ಚಿತ್ರ
Image Credit source: freeimages
Follow us on

ಪ್ರಸ್ತುತ ಭಾರತದ ಜನಸಂಖ್ಯೆಯ ಐದು ಪ್ರತಿಶತದಷ್ಟು ಜನರು ರಕ್ತನಾಳದ ಕಾಯಿಲೆಗಳಿಂದ ಬಳಲುತ್ತಿದ್ದು, ಇದರ ಜೊತೆ ಜೊತೆಗೆ ಮಧುಮೇಹದ ಸಮಾನಾಂತರ ಏರಿಕೆ ಪ್ರತಿವರ್ಷ ಶೇಕಡಾ 10 ರಷ್ಟು ಹೆಚ್ಚುತ್ತಿವೆ ಎಂದು ವಾಸ್ಕ್ಯುಲರ್ (chief vascular surgeon) ಸೊಸೈಟಿ ಆಫ್ ಇಂಡಿಯಾದ ಮುಖ್ಯ ಶಸ್ತ್ರಚಿಕಿತ್ಸಕ ಡಾ. ರವಿಕುಮಾರ್ ಬಿ.ಎಲ್ ಹೇಳಿದರು. ಮಧುಮೇಹವು ರಕ್ತನಾಳದ ಕಾಯಿಲೆಗಳಿಗೆ ನೇರವಾಗಿ ಸಂಬಂಧಿಸಿದೆ. ಜೊತೆಗೆ ಭಾರತವನ್ನು ವಿಶ್ವದ ಮಧುಮೇಹ ರಾಜಧಾನಿ ಎಂದು ಕರೆಯಲಾಗುತ್ತಿರುವುದರಿಂದ, ಮುಂಬರುವ ವರ್ಷಗಳಲ್ಲಿ ಈ ಪ್ರಕರಣಗಳು ವೇಗವಾಗಿ ಹೆಚ್ಚಾಗುವ ಸಾಧ್ಯತೆಯಿದೆ. ಮಧುಮೇಹ, ಆನುವಂಶಿಕ ಕಾರಣ, ಅಧಿಕ ರಕ್ತದೊತ್ತಡ ಮತ್ತು ಧೂಮಪಾನವು ರಕ್ತನಾಳದ ಕಾಯಿಲೆಗಳಿಗೆ ಕಾರಣವಾಗುವ ಅಪಾಯಕಾರಿ ಅಂಶಗಳಾಗಿದೆ. ಧೂಮಪಾನ ಮಾಡದವರಿಗೆ ಹೋಲಿಸಿದರೆ ಧೂಮಪಾನಿಗಳು ಹೆಚ್ಚಿನ ಅಪಾಯದಲ್ಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಪ್ಲೇಕ್ ಎಂಬ ಕೊಬ್ಬಿನ ವಸ್ತುವಿನ ಶೇಖರಣೆಯಿಂದಾಗಿ ಅಪಧಮನಿಗಳು ಗಟ್ಟಿಯಾಗಲು ಅಥವಾ ಕಿರಿದಾಗಲು ಕಾರಣವಾಗುವ ಸ್ಥಿತಿಯೇ ಮಧುಮೇಹ ಎಂದು ಫೌಂಡೇಶನ್ ಟು ವ್ಯಾಸ್ಕುಲರ್ ಕ್ಯೂರ್ಸ್ ವಿವರಿಸಿದೆ. ಮಧುಮೇಹ ಹೊಂದಿರುವ ಜನರು ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರಬಹುದು. ಎರಡೂ ವೈದ್ಯಕೀಯ ಪರಿಸ್ಥಿತಿಗಳ ಸಂಯೋಜನೆಯು ಅಪಧಮನಿಗಳಲ್ಲಿ ಪ್ಲೇಕ್ ವೇಗವಾಗಿ ಸಂಗ್ರಹವಾಗಲು ಕಾರಣವಾಗಬಹುದು. ಆದ್ದರಿಂದ, ಕಾಲಾನಂತರದಲ್ಲಿ ಅಧಿಕ ರಕ್ತದ ಸಕ್ಕರೆ ಮಟ್ಟವು ಕಣ್ಣು, ಮೂತ್ರಪಿಂಡ, ಹೃದಯ ಮತ್ತು ಕೈಕಾಲುಗಳ ಮೇಲೆ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: ಮಧುಮೇಹ ಮತ್ತು ಹೃದಯದ ಆರೋಗ್ಯದ ನಡುವಿನ ಸಂಬಂಧವನ್ನು ತಿಳಿದುಕೊಳ್ಳಿ

ಮಾನವ ದೇಹದ ಮೇಲೆ ರಕ್ತನಾಳದ ಕಾಯಿಲೆಗಳ ಪರಿಣಾಮದ ಬಗ್ಗೆ ವಿವರಿಸುವಾಗ, ತಜ್ಞರು ವ್ಯಕ್ತಿಯ ಕಾಲುಗಳು ಮತ್ತು ಪಾದಗಳಲ್ಲಿ ಹೆಚ್ಚು ಪರಿಣಾಮ ಬೀರುತ್ತವೆ, ಇದರಿಂದಾಗಿ ನಡೆಯಲು ಮತ್ತು ಕೆಳ ಕೈಕಾಲುಗಳ ಅಂಗಚ್ಛೇದನಕ್ಕೆ ಅಂದರೆ ಕೈಕಾಲುಗಳನ್ನು ಕತ್ತರಿಸಬೇಕಾಗಬಹುದು ಎಂದು ಹೇಳಿದರು. ಈ ಸ್ಥಿತಿಯನ್ನು ಬಾಹ್ಯ ಅಪಧಮನಿ ಕಾಯಿಲೆ (ಪಿಎಡಿ) ಎಂದು ಕರೆಯಲಾಗುತ್ತದೆ. ಭಾರತದಲ್ಲಿ, ರಕ್ತನಾಳದ ಕಾಯಿಲೆಯ ಪ್ರಕರಣಗಳ ತೀವ್ರತೆಗೆ ಹೋಗಿದೆ. ಜೊತೆಗೆ ಅಂಕಿಅಂಶಗಳು ಜಾಗತಿಕವಾಗಿ ತುಂಬಾ ಹೆಚ್ಚಾಗಿದೆ, ಪ್ರತಿ ಆರು ಸೆಕೆಂಡುಗಳಿಗೆ ಒಂದು ಅಂಗಚ್ಛೇದನವನ್ನು ಮಾಡಲಾಗುತ್ತದೆ ಎಂದು ಡಾ. ರವಿಕುಮಾರ್ ಹೇಳಿದರು.

60 ವರ್ಷಕ್ಕಿಂತ ಮೇಲ್ಪಟ್ಟ ಜನರು ಇಂತಹ ಕಾಯಿಲೆಗಳಿಗೆ ಹೆಚ್ಚು ಒಳಗಾಗುತ್ತಾರೆ ಮತ್ತು ಕಾಲು ನೋವು, ಸೆಳೆತ, ಕಾಲ್ಬೆರಳುಗಳಲ್ಲಿ ಬಣ್ಣ ಬದಲಾವಣೆಯಾಗುವುದು, ನೋವು ಅಥವಾ ಪಾದಗಳಲ್ಲಿ ಹುಣ್ಣುಗಳು ಕಾಣುವುದು, ಮುಂತಾದ ರೋಗಲಕ್ಷಣಗಳನ್ನು ಗಮನಿಸಬೇಕು ಮತ್ತು ಆದಷ್ಟು ಬೇಗ ವೈದ್ಯಕೀಯ ಸಹಾಯವನ್ನು ಪಡೆಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ತಂತ್ರಜ್ಞಾನದ ಪ್ರಗತಿಯು ಈ ರೋಗಗಳಿಗೆ ಉತ್ತಮ ಚಿಕಿತ್ಸಾ ಸೌಲಭ್ಯಗಳನ್ನು ಒದಗಿಸಿದೆ. ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಸರಿಯಾದ ಆಹಾರ ಸೇವನೆ ಈ ರೋಗಗಳು ಸಂಭವಿಸುವುದನ್ನು ನಿಯಂತ್ರಿಸಲು ಸುಲಭ ಮಾರ್ಗವಾಗಿದೆ ಎಂದು ವೈದ್ಯರು ಹೇಳಿದರು.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: