ವೇಟ್ ಲಿಫ್ಟಿಂಗ್‌ ಸಂಪೂರ್ಣ ದೇಹಕ್ಕೆ ಪರಿಪೂರ್ಣ ವ್ಯಾಯಾಮ;ಡಾ.ಸುಧೀರ್ ಕುಮಾರ್

|

Updated on: Nov 24, 2024 | 5:14 PM

ಡಾ. ಸುಧೀರ್ ಕುಮಾರ್ ಅವರು ಭಾರ ಎತ್ತುವಿಕೆಯ ಅನೇಕ ಪ್ರಯೋಜನಗಳನ್ನು ವಿವರಿಸುತ್ತಾರೆ. ಇದು ತೂಕ ಹೆಚ್ಚಿಸಲು, ಸ್ನಾಯು ಬಲಪಡಿಸಲು, ಚಯಾಪಚಯವನ್ನು ಹೆಚ್ಚಿಸಲು ಮತ್ತು ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆನ್ನು ನೋವು ಮತ್ತು ಇತರ ಸಂಧಿವಾತ ಸಂಬಂಧಿತ ನೋವುಗಳನ್ನು ಕಡಿಮೆ ಮಾಡಲು ಸಹ ಇದು ಪರಿಣಾಮಕಾರಿಯಾಗಿದೆ. ಮಕ್ಕಳು ಮತ್ತು ಮಹಿಳೆಯರಿಗೂ ಇದು ಸುರಕ್ಷಿತ ಮತ್ತು ಪ್ರಯೋಜನಕಾರಿಯಾಗಿದೆ ಎಂದು ಅವರು ಹೇಳುತ್ತಾರೆ.

ವೇಟ್ ಲಿಫ್ಟಿಂಗ್‌  ಸಂಪೂರ್ಣ ದೇಹಕ್ಕೆ ಪರಿಪೂರ್ಣ ವ್ಯಾಯಾಮ;ಡಾ.ಸುಧೀರ್ ಕುಮಾರ್
Weightlifting
Follow us on

ಭಾರ ಎತ್ತುವಿಕೆ, ವೇಟ್ ಲಿಫ್ಟಿಂಗ್‌ ಅಥವಾ ಸ್ಟ್ರೆನ್ತ್‌ ಟ್ರೈನಿಂಗ್​ನಿಂದ ನೀವು ಸಂಪೂರ್ಣ ದೇಹಕ್ಕೆ ಪರಿಪೂರ್ಣ ವ್ಯಾಯಾಮ ಪಡೆಯಬಹುದು ಎಂದು ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞರಾದ ಡಾ.ಸುಧೀರ್ ಕುಮಾರ್ ಹೇಳುತ್ತಾರೆ. ಸಾಮಾನ್ಯವಾಗಿ ಮನೆಯ ಪೀಠೋಪಕರಣ ಅಥವಾ ಸ್ವಲ್ಪ ಭಾರದ ವಸ್ತುವನ್ನು ಎತ್ತಲು ಮಹಿಳೆಯರು ಪುರುಷರ ಮೇಲೆ ಅವಲಂಬಿತವಾಗಿರುತ್ತಾರೆ. ಆದರೆ ಭಾರ ಎತ್ತುವುದರಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ಡಾ. ಸುಧೀರ್​​ ಹೇಳುತ್ತಾರೆ.

ವೇಟ್ ಲಿಫ್ಟಿಂಗ್‌ನ ಪ್ರಯೋಜನಗಳು ಇಲ್ಲಿವೆ:

  • ತೆಳ್ಳಗಿರುವವರು ಆರೋಗ್ಯಕರ ತೂಕ ಪಡೆಯುವಲ್ಲಿ, ದೇಹದ ತೂಕ ಹೆಚ್ಚಿಸುವಲ್ಲಿ ವೇಟ್ ಲಿಫ್ಟಿಂಗ್‌ ಸಹಾಯಕವಾಗಿದೆ.
  • ವೇಟ್ ಲಿಫ್ಟಿಂಗ್‌ ಸ್ನಾಯುಗಳನ್ನು ಬಲಪಡಿಸಲು ಕೊಬ್ಬು ಕರಗಿಸುವಲ್ಲಿ ಸಹಾಯಕವಾಗಿದೆ.
  • ವೇಟ್ ಲಿಫ್ಟಿಂಗ್‌ ಚಯಾಪಚಯ ದರದಲ್ಲಿ ಹೆಚ್ಚಳ ಮತ್ತು ಮಧುಮೇಹದ ಅಪಾಯವನ್ನು ಕಡಿಮೆಮಾಡುತ್ತದೆ.
  • ಭಾರ ಎತ್ತುವಿಕೆ ಬೆನ್ನು ನೋವು ಮತ್ತು ಸಂಧಿವಾತ ಮತ್ತು ಫೈಬ್ರೊಮ್ಯಾಲ್ಗಿಯಕ್ಕೆ ಸಂಬಂಧಿಸಿದ ನೋವುಗಳನ್ನು ನಿವಾರಿಸುತ್ತದೆ.
  • ವೇಟ್ ಲಿಫ್ಟಿಂಗ್‌ ಟೆಸ್ಟೋಸ್ಟೆರಾನ್ ಮಟ್ಟದಲ್ಲಿ ಹೆಚ್ಚಳ ಮತ್ತು ನಿಮಿರುವಿಕೆಯ ಕಾರ್ಯದಲ್ಲಿ ಸುಧಾರಣೆಯನ್ನುಂಟು ಮಾಡುತ್ತದೆ.

ಮಕ್ಕಳು ಭಾರ ಎತ್ತುವುದು ಸುರಕ್ಷಿತವೇ?

ಹೌದು, 7-8 ವರ್ಷ ವಯಸ್ಸಿನಿಂದ ಮಕ್ಕಳು ವೇಟ್ ಲಿಫ್ಟಿಂಗ್‌ ಪ್ರಾರಂಭಿಸಬಹುದು ಎಂದು ಡಾ.ಸುಧೀರ್ ಕುಮಾರ್ ಹೇಳುತ್ತಾರೆ.

ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಈ ಸಸ್ಯವಿದ್ದರೆ ಸಕ್ಕರೆ ಕಾಯಿಲೆ, ಕೀಲು ನೋವು ಹತ್ತಿರವೂ ಸುಳಿಯುವುದಿಲ್ಲ

ಮಹಿಳೆಯರಿಗೆ ವೇಟ್ ಲಿಫ್ಟಿಂಗ್‌ ಸುರಕ್ಷಿತವೇ?

ಹೌದು, ಮಹಿಳೆಯರು ಭಾರ ಎತ್ತುವುದರಿಂದ ಹಲವಾರು ಆರೋಗ್ಯ-ಸಂಬಂಧಿತ ಪ್ರಯೋಜನಗಳನ್ನು ಪಡೆಯುತ್ತಾರೆ.
ಸಾಮಾನ್ಯವಾಗಿ ಮನೆಯ ಪೀಠೋಪಕರಣ ಅಥವಾ ಸ್ವಲ್ಪ ಭಾರದ ವಸ್ತುವನ್ನು ಎತ್ತಲು ಮಹಿಳೆಯರು ಪುರುಷರ ಮೇಲೆ ಅವಲಂಬಿತವಾಗಿರುತ್ತಾರೆ. ಆದರೆ ಭಾರ ಎತ್ತುವುದರಿಂದ ಮಹಿಳೆಯರಿಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ಡಾ. ಸುಧೀರ್​​ ಹೇಳುತ್ತಾರೆ.

ಭಾರ ಎತ್ತಲು ಅತ್ಯುತ್ತಮ ಅವಧಿ ಯಾವುದು?

ವಾರಕ್ಕೆ ಸುಮಾರು 2-3 ಬಾರಿ ವಾರಕ್ಕೆ 60-90 ನಿಮಿಷಗಳು ಆಭ್ಯಾಸಿಸುವುದು ಒಳ್ಳೆಯದು ಎಂದು ಡಾ.ಸುಧೀರ್ ಕುಮಾರ್ ಹೇಳುತ್ತಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 5:09 pm, Sun, 24 November 24