AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಮನೆಯಲ್ಲಿ ಈ ಸಸ್ಯವಿದ್ದರೆ ಸಕ್ಕರೆ ಕಾಯಿಲೆ, ಕೀಲು ನೋವು ಹತ್ತಿರವೂ ಸುಳಿಯುವುದಿಲ್ಲ

ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರು ಮಡಕೆ, ಚಿಕ್ಕ ಚಿಕ್ಕ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇನ್ನು ಹಲವರು ತಮ್ಮ ಮನೆಯ ಸುತ್ತ ಮುತ್ತ ಇರುವ ಜಾಗದಲ್ಲಿ ಹೂ ಮತ್ತು ಹಣ್ಣುಗಳು ಮತ್ತು ಇತರ ಆಕರ್ಷಕ ಸಸ್ಯಗಳನ್ನು ಬೆಳೆಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈ ರೀತಿಯ ಮನೆಯ ಬಾಲ್ಕನಿಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿಯೂ ಎಲ್ಲರ ಮನೆಯಲ್ಲಿಯೂ ಇರಲೇಬೇಕಾದ ಸಸ್ಯಗಳಲ್ಲಿ ಪಾರಿಜಾತವೂ ಒಂದು. ಇದನ್ನು ಕೆಲವರು ರಾತ್ರಿ ಮಲ್ಲಿಗೆ ಎಂದು ಕರೆಯುತ್ತಾರೆ. ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಯಾಕಾಗಿ ಮನೆಗಳಲ್ಲಿ ಬೆಳೆಸಬೇಕು? ಇಲ್ಲಿದೆ ಮಾಹಿತಿ.

ನಿಮ್ಮ ಮನೆಯಲ್ಲಿ ಈ ಸಸ್ಯವಿದ್ದರೆ ಸಕ್ಕರೆ ಕಾಯಿಲೆ, ಕೀಲು ನೋವು ಹತ್ತಿರವೂ ಸುಳಿಯುವುದಿಲ್ಲ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 23, 2024 | 4:40 PM

Share

ಇಂದು ಅನೇಕ ನಗರವಾಸಿಗಳ ಮನೆಗಳಲ್ಲಿ ನಾನಾ ರೀತಿಯ ಸಸ್ಯಗಳನ್ನು ನೋಡಬಹುದು. ಕೇವಲ ಹಳ್ಳಿಗಳಲ್ಲಿ ಮಾತ್ರವಲ್ಲ. ಇತ್ತೀಚಿನ ವರ್ಷಗಳಲ್ಲಿ ಪೇಟೆಯಲ್ಲಿ ವಾಸಮಾಡುವವರು ಸಹ ಮನೆಯಲ್ಲಿ ಚಿಕ್ಕ ಉದ್ಯಾನವನ ಮಾಡಿಕೊಳ್ಳುವ ಆಸಕ್ತಿ ತೋರಿಸುತ್ತಿದ್ದಾರೆ. ಸಣ್ಣ ಜಾಗವಿದ್ದರೂ ಅದನ್ನು ಕಾಲಿ ಬಿಡದೆಯೇ, ಅಲ್ಲಿ ಚಿಕ್ಕ -ಪುಟ್ಟ ಗಿಡಗಳನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಅಪಾರ್ಟ್ ಮೆಂಟ್ ಗಳಲ್ಲಿ ವಾಸಿಸುವವರು ಮಡಕೆ, ಚಿಕ್ಕ ಚಿಕ್ಕ ಪಾಟ್ ಗಳಲ್ಲಿ ಗಿಡಗಳನ್ನು ಬೆಳೆಸುತ್ತಿದ್ದಾರೆ. ಇನ್ನು ಹಲವರು ತಮ್ಮ ಮನೆಯ ಸುತ್ತ ಮುತ್ತ ಇರುವ ಜಾಗದಲ್ಲಿ ಹೂ ಮತ್ತು ಹಣ್ಣುಗಳು ಮತ್ತು ಇತರ ಆಕರ್ಷಕ ಸಸ್ಯಗಳನ್ನು ಬೆಳೆಸಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದಾರೆ. ಈ ರೀತಿಯ ಮನೆಯ ಬಾಲ್ಕನಿಯಲ್ಲಿ ಕೆಲವು ರೀತಿಯ ಸಸ್ಯಗಳನ್ನು ಬೆಳೆಸುವುದರಿಂದ ದೈಹಿಕ, ಮಾನಸಿಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು. ಅದರಲ್ಲಿಯೂ ಎಲ್ಲರ ಮನೆಯಲ್ಲಿಯೂ ಇರಲೇಬೇಕಾದ ಸಸ್ಯಗಳಲ್ಲಿ ಪಾರಿಜಾತವೂ ಒಂದು. ಇದನ್ನು ಕೆಲವರು ರಾತ್ರಿ ಮಲ್ಲಿಗೆ ಎಂದು ಕರೆಯುತ್ತಾರೆ. ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು? ಯಾಕಾಗಿ ಮನೆಗಳಲ್ಲಿ ಬೆಳೆಸಬೇಕು? ಇಲ್ಲಿದೆ ಮಾಹಿತಿ.

ಮಧುಮೇಹಿಗಳಿಗೆ ಪ್ರಯೋಜನಕಾರಿ

ಪಾರಿಜಾತ ಸಸ್ಯದ ಹೂವುಗಳು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ. ಟೈಪ್ 2 ಮಧುಮೇಹದ ಚಿಕಿತ್ಸೆಯಲ್ಲಿ ಅವುಗಳನ್ನು ಬಳಸಲಾಗುತ್ತದೆ ಎಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಈ ಹೂವುಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತವೆ. ರಾತ್ರಿ ಸಮಯದಲ್ಲಿ ಪಾರಿಜಾತ ಹೂವುಗಳನ್ನು ನೀರಿನಲ್ಲಿ ಹಾಕಿ ಚೆನ್ನಾಗಿ ಕುದಿಸಿ. ಆ ನೀರನ್ನು ಸೋಸಿ ಮರುದಿನ ಮಧ್ಯಾಹ್ನ ಮತ್ತು ಸಂಜೆ ಹೊತ್ತಿನಲ್ಲಿ ಕುಡಿಯಿರಿ. ಈ ರೀತಿ ಮಾಡಿ ಕುಡಿದರೆ, ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

ಕೀಲು ನೋವಿಗೆ ರಾಮಬಾಣ

ಪಾರಿಜಾತ ಮರದ ಕೊಂಬೆಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಒಣಗಿಸಿ ಮೃದುವಾಗಿ ಪುಡಿ ಮಾಡಿಕೊಂಡು ಇದನ್ನು ಗಾಳಿಯಾಡದ ಪಾತ್ರೆಯಲ್ಲಿ ಹಾಕಿ ಮುಚ್ಚಳ ಮುಚ್ಚಿ ಸಂಗ್ರಹಿಸಿಟ್ಟುಕೊಳ್ಳಿ. ತಜ್ಞರ ಪ್ರಕಾರ, ಈ ಪುಡಿಯನ್ನು ಅರ್ಧ ಟೀ ಸ್ಪೂನ್ ತೆಗೆದುಕೊಂಡು ಒಂದು ಲೋಟ ನೀರಿಗೆ ಬೆರೆಸಿ ಕುಡಿಯುವುದರಿಂದ ಮಲೇರಿಯಾ ಮತ್ತು ಕೀಲು ನೋವು ಕಡಿಮೆಯಾಗುತ್ತದೆ.

ಇದನ್ನೂ ಓದಿ: ಚಮಚವಿಲ್ಲದೆ ಕೈಗಳಿಂದ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೋ, ಕೆಟ್ಟದ್ದೋ ತಿಳಿದುಕೊಳ್ಳಿ

ಶೀತಕ್ಕೆ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸುತ್ತದೆ

ಚಳಿಗಾಲದಲ್ಲಿ, ಹೆಚ್ಚಿನ ಜನರು ಶೀತ, ಕೆಮ್ಮು, ಗಂಟಲು ನೋವು ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ಅದರಲ್ಲಿಯೂ ಕೆಲವು ಜನರಿಗೆ ಅಸ್ತಮಾದಂತಹ ಸಮಸ್ಯೆ ಇರುತ್ತದೆ. ಅಂತಹ ಉಸಿರಾಟದ ಸಮಸ್ಯೆ ಇರುವವರು, ಪಾರಿಜಾತ ಎಲೆ ಮತ್ತು ಹೂವುಗಳಿಂದ ಚಹಾವನ್ನು ತಯಾರಿಸಿ ಪ್ರತಿದಿನ ಜೇನುತುಪ್ಪದೊಂದಿಗೆ ಕುಡಿಯುವುದು ಪ್ರಯೋಜನಕಾರಿಯಾಗಿದೆ. ಇದು ಶ್ವಾಸಕೋಶದಲ್ಲಿ ಸಂಗ್ರಹವಾದ ಕಫವನ್ನು ಕಡಿಮೆ ಮಾಡುತ್ತದೆ. ಶೀತಕ್ಕೆ ಸಂಬಂಧಿತ ಎಲ್ಲಾ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ.

ಸೂಚನೆ: ಈ ಲೇಖನವು ಸಾಮಾನ್ಯ ಮಾಹಿತಿಗಾಗಿ ಮಾತ್ರ. ಯಾವುದೇ ರೀತಿಯ ಮಾಹಿತಿಯನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು