Gut Health: ಕರುಳಿನ ಆರೋಗ್ಯ ಎಂದರೇನು? ಜೀರ್ಣಾಂಗ ವ್ಯವಸ್ಥೆಯನ್ನು ರಕ್ಷಿಸಲು ಇರುವ ಮಾರ್ಗ? ಇಲ್ಲಿದೆ ಕಮಲಾ ಭಾರಧ್ವಾಜ್ ಸಲಹೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 12, 2023 | 12:55 PM

ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಕರುಳಿನ ಕ್ರಿಯೆಯು ಉತ್ತಮವಾಗಿರಬೇಕು. ಜೀರ್ಣಕ್ರಿಯೆಯು ದೇಹದ ಪ್ರಮುಖ ಪ್ರಕ್ರಿಯೆಯಾಗಿದೆ ಈ ವ್ಯವಸ್ಥೆಯನ್ನು ರಕ್ಷಿಸಲು ಇರುವ ಮಾರ್ಗಗಗಳಾವುದು? ಈ ಬಗ್ಗೆ ಇಲ್ಲಿದೆ ಮಾಹಿತಿ.

Gut Health: ಕರುಳಿನ ಆರೋಗ್ಯ ಎಂದರೇನು? ಜೀರ್ಣಾಂಗ ವ್ಯವಸ್ಥೆಯನ್ನು ರಕ್ಷಿಸಲು ಇರುವ ಮಾರ್ಗ? ಇಲ್ಲಿದೆ ಕಮಲಾ ಭಾರಧ್ವಾಜ್ ಸಲಹೆ
ಕಮಲಾ ಭಾರಧ್ವಾಜ್
Follow us on

ದೇಹವು ಆರೋಗ್ಯವಾಗಿರಬೇಕಾದರೆ ಕರುಳಿನ ಕ್ರಿಯೆಯು ಉತ್ತಮವಾಗಿರಬೇಕು. ನಮ್ಮ ಒಟ್ಟಾರೆ ಯೋಗಕ್ಷೇಮಕ್ಕೆ ಇದು ಮಹತ್ವ ಪೂರ್ಣವಾಗಿದೆ. ಇಂದಿನ ದಿನಗಳಲ್ಲಿ ಕರುಳಿನ ಕ್ರಿಯೆಯು ಸರಾಗವಾಗಿ ಇರದೆ ಇರುವುದರಿಂದ ಮಲಬದ್ಧತೆಯ ಸಮಸ್ಯೆಯು ಅರ್ಧದಷ್ಟು ಜನರನ್ನು ಕಾಡುತ್ತಲಿದೆ. ಜೀರ್ಣಕ್ರಿಯೆಯು ದೇಹದ ಪ್ರಮುಖ ಪ್ರಕ್ರಿಯೆಯಾಗಿದೆ ಏಕೆಂದರೆ ಇದರ ಮೂಲಕ ದೇಹವು ಜೀವಸತ್ವಗಳು, ಪ್ರೋಟೀನ್‌ಗಳು ಮತ್ತು ಕಾರ್ಬೋಹೈಡ್ರೇಟ್‌ಗಳಂತಹ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಪೋಷಕಾಂಶಗಳನ್ನು ಹೀರಿಕೊಳ್ಳಲು ಸಣ್ಣ ಭಾಗಗಳಾಗಿ ವಿಭಜಿಸಲಾಗುತ್ತದೆ ಮತ್ತು ನಂತರ ಅವುಗಳನ್ನು ಜೀವಕೋಶದ ಶಕ್ತಿಯ ಮೂಲವಾಗಿ ವಿವಿಧ ಕಾರ್ಯಗಳಿಗೆ ಬಳಸಲಾಗುತ್ತದೆ. ನಮ್ಮ ದೇಹದಲ್ಲಿ ಟ್ರಿಲಿಯನ್ಗಟ್ಟಲೆ ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಶಿಲೀಂಧ್ರಗಳಿಂದ ತುಂಬಿದೆ. ಅವುಗಳನ್ನು ಒಟ್ಟಾಗಿ ಮೈಕ್ರೋಬಯೋಮ್ ಎಂದು ಕರೆಯಲಾಗುತ್ತದೆ. ಹಾಗಾಗಿ ದೇಹಕ್ಕೆ ಕರುಳಿನ ಆರೋಗ್ಯ ಅತೀ ಮುಖ್ಯವಾಗಿದೆ.

ಕರುಳಿನ ಆರೋಗ್ಯ ಎಂದರೇನು?

ನಂಬುತ್ತೀರೋ ಇಲ್ಲವೋ, ನಿಮ್ಮ ಕರುಳಿನ ಸೂಕ್ಷ್ಮಜೀವಿಗಳು ನಿಮ್ಮ ಆರೋಗ್ಯದ ಅಡಿಪಾಯವಾಗಿದೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿನ ಒಳ್ಳೆಯ (ಸಹಾಯಕ) ಮತ್ತು ಕೆಟ್ಟ (ಸಂಭಾವ್ಯ ಹಾನಿಕಾರಕ) ಬ್ಯಾಕ್ಟೀರಿಯಾ ಮತ್ತು ಯೀಸ್ಟ್ ನಡುವೆ ಸಮತೋಲನ ಕಾಯ್ದುಕೊಂಡಾಗ ಕರಳು ಆರೋಗ್ಯಕರವಾಗಿರುತ್ತದೆ. ವಾಸ್ತವವಾಗಿ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯ 80% ಕರುಳಿನಲ್ಲಿದೆ, ಮತ್ತು ನಿಮ್ಮ ದೇಹದ ಹೆಚ್ಚಿನ ಸಿರೊಟೋನಿನ್ ಸಹ ಇದರಲ್ಲಿಯೇ ಇರುವುದು. ಇದರರ್ಥ ನಿಮ್ಮ ಕರುಳು ಆರೋಗ್ಯಕರವಾಗಿಲ್ಲದಿದ್ದರೆ, ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆ ಮತ್ತು ಹಾರ್ಮೋನುಗಳು ಕಾರ್ಯನಿರ್ವಹಿಸುವುದಿಲ್ಲ ಆಗ ನೀವು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತೀರಿ. ಈ ಕುರಿತು ಯೋಗ ತಜ್ಞೆ ಕಮಲಾ ಭಾರಧ್ವಾಜ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:Garbhageete: ಮಗುವಿಗೆ ಶಿಕ್ಷಣ ನೀಡುವುದರ ಜತೆಗೆ ಪೋಷಕರು ಕೂಡ ಶಿಕ್ಷಿತರಾಗಬೇಕು: ಕಮಲಾ ಭಾರದ್ವಾಜ್

ಜೀರ್ಣಾಂಗ ವ್ಯವಸ್ಥೆಯ ಹೆಚ್ಚಿನ ಸಮಸ್ಯೆಗಳೆಂದರೆ ಎದೆಯುರಿ, ಹೊಟ್ಟೆಯುಬ್ಬರ, ಮಲಬದ್ಧತೆ. ನಮಗೆ ವಯಸ್ಸಾದಂತೆ, ನೈಸರ್ಗಿಕ ಚಕ್ರಗಳು ನಿಧಾನವಾಗುತ್ತವೆ. ಕರುಳಿನ ಆರೋಗ್ಯವು ಉತ್ತಮವಾಗಿದ್ದಾಗ, ಉರಿಯೂತ ಮತ್ತು ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವ ಸಾಧ್ಯತೆ ಕಡಿಮೆ. ಆದ್ದರಿಂದ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ರಕ್ಷಿಸಲು ಮಾರ್ಗಗಳಿವೆ. ಇದು ನಿಮಗೆ ಆಶ್ಚರ್ಯಕರವಾಗಿ ತೋರಬಹುದು ಏಕೆಂದರೆ ಇದು ನಿಮ್ಮ ಆಹಾರದ ಬಗ್ಗೆ ಮಾತ್ರವಲ್ಲ. ಎಲ್ಲವು ಒಟ್ಟು ಸೇರುತ್ತದೆ. ಅಂದರೆ ಇದಕ್ಕೆ ಮೂಲ ಕೇವಲ ನಿಮ್ಮ ಆಹಾರವಲ್ಲ. ಇದಕ್ಕೆ ಇನ್ನಿತರ ಕಾರಣಗಳಿವೆ. ಅವು ಯಾವುದೆಂದರೆ;

ಸರಿಯಾದ ಆಹಾರ ಸೇವನೆ: ಹೆಚ್ಚಿನ ಜನರು, ವಿಶೇಷವಾಗಿ ನಗರ ವ್ಯವಸ್ಥೆಯಲ್ಲಿ ಫೈಬರ್ ಸೇವನೆಯು ಇರಬೇಕಾದುದಕ್ಕಿಂತ ಅಂದರೆ ನಮ್ಮ ಅವಶ್ಯಕತೆಗಿಂತ 40 ರಿಂದ 50% ಕಡಿಮೆ ದೇಹಕ್ಕೆ ಹೋಗುತ್ತಿದೆ. ಹಣ್ಣುಗಳು ಮತ್ತು ತರಕಾರಿಗಳಿಂದ ಸಮೃದ್ಧವಾಗಿರುವ ಸಮತೋಲಿತ ಆಹಾರವು ಉತ್ತಮ ಬ್ಯಾಕ್ಟೀರಿಯಾ ಮತ್ತು ಕರುಳಿನ ಆರೋಗ್ಯವನ್ನು ನೀಡಲು ಫೈಬರ್​​ನ್ನು ಒದಗಿಸುತ್ತದೆ. ಅದಲ್ಲದೆ ಆರೋಗ್ಯಕರ ಜೀರ್ಣಾಂಗ ವ್ಯವಸ್ಥೆಗೆ ಇತರ ಆಹಾರಗಳಲ್ಲಿ ಹುದುಗಿಸಿದ ಹಾಲು(fermented milk) ಸೇರಿದೆ. ಮೊಸರಿಗೆ ಹೋಲುವ ( yogurt) ಮತ್ತು ಪ್ರೋಬಯಾಟಿಕ್ಗಳಿಂದ ಸಮೃದ್ಧವಾಗಿರುವ ಪಾನೀಯ ಸೇವಿಸಬಹುದು. ನೀವು ತೆಗೆದುಕೊಳ್ಳಬಹುದಾದ ಇತರ ಆಹಾರವೆಂದರೆ ಉಪ್ಪಿನಕಾಯಿ.

ಹೆಚ್ಚು ನಿದ್ರೆ ಮಾಡಿ: ಸಾಕಷ್ಟು ನಿದ್ರೆ ಮಾಡದೆಯೇ ಇದ್ದಲ್ಲಿ ದೇಹದಲ್ಲಿ ಬೊಜ್ಜಿನ ಸಮಸ್ಯೆ ಹೆಚ್ಚಾಗುತ್ತದೆ. ಇದು ನಿಮ್ಮನ್ನು ಜೀರ್ಣಾಂಗ ವ್ಯವಸ್ಥೆ ಮತ್ತು ಅಸ್ವಸ್ಥತೆಗೆ ಒಡ್ಡುತ್ತದೆ.

ಪ್ರತಿನಿತ್ಯ ವ್ಯಾಯಾಮ ಮಾಡಿ: ಜೀರ್ಣಾಂಗ ವ್ಯವಸ್ಥೆಯ ಸಮಸ್ಯೆಗಳನ್ನು ನಿವಾರಿಸಲು ತೂಕ ಇಳಿಸಿಕೊಳ್ಳಲು ಮತ್ತು ಆರೋಗ್ಯಕರ ದೇಹದ ತೂಕವನ್ನು ಕಾಪಾಡಿಕೊಳ್ಳಲು ವ್ಯಾಯಾಮವು ಉತ್ತಮ ಮಾರ್ಗವಾಗಿದೆ. ದೇಹದ ಎಲ್ಲಾ ಭಾಗಗಳಲ್ಲಿ ತೂಕ ಹೆಚ್ಚಾಗುವುದನ್ನು ನೀವು ನೋಡದಿರಬಹುದು, ಆದರೆ ಬೊಜ್ಜು ಮೊದಲು ಶೇಖರಣೆಯಾಗುವ ಸ್ಥಳವೆಂದರೆ ಸೊಂಟದ ಸುತ್ತಳತೆ. ಹಾಗಾಗಿ ದೇಹದ ತೂಕ ಹೆಚ್ಚಾಗದಂತೆ ನೋಡಿಕೊಳ್ಳುವುದು ನಿಮ್ಮ ಕೈಯಲ್ಲಿದೆ.

ಒತ್ತಡವನ್ನು ಸರಿಯಾಗಿ ನಿರ್ವಹಿಸುವುದು: ಎದೆಯುರಿಯನ್ನು ಕಡಿಮೆ ಮಾಡಲು ಒತ್ತಡವನ್ನು ಕಡಿಮೆ ಮಾಡುವುದು ಮೂಲಭೂತವಾಗಿದೆ. ಇಲ್ಲಿ ಯಾವುದೇ ಮ್ಯಾಜಿಕ್ ಡಯಟ್ ಕೆಲಸ ಮಾಡುವುದಿಲ್ಲ. ವಿಶ್ರಾಂತಿ ಚಿಕಿತ್ಸೆಗಳು, ಸಮಸ್ಯೆ ಅಥವಾ ಏನಾದರೂ ಗೊಂದಲವಿದ್ದಲ್ಲಿ ಅದನ್ನು ಬದಿಗಿರಿಸಿ ಬೇರೆ ಆಲೋಚನೆ ಮಾಡುವುದರಿಂದ ನಿಮ್ಮ ಒತ್ತಡದ ಮಟ್ಟವನ್ನು ಆರಾಮದಾಯಕವಾಗಿ ದೂರವಿಡಬಹುದು. ಅಂತಿಮವಾಗಿ, ಜೀರ್ಣಾಂಗ ವ್ಯವಸ್ಥೆಯ ಆರೋಗ್ಯಕ್ಕಿಂತ ಆತಂಕ ಮತ್ತು ಖಿನ್ನತೆಯಂತಹ ಸಮಸ್ಯೆಗಳಿಗೆ ಸಹಾಯ ಪಡೆಯಿರಿ, ವಿಶೇಷವಾಗಿ ಕಿರಿಕಿರಿಯ ಕರುಳಿನ ಸಿಂಡ್ರೋಮ್ನಂತಹ ಅಸ್ವಸ್ಥತೆಗಳು ಮೆದುಳು ಮತ್ತು ಕರುಳಿನ ಮೂಲಕ ನಿಕಟ ಸಂಬಂಧ ಹೊಂದಿವೆ.

ಕಮಲಾ ಭಾರಧ್ವಾಜ್ ಕುರಿತು ಮಾಹಿತಿ: ಕಮಲಾ ಭಾರಧ್ವಾಜ್ ಪ್ರಸಿದ್ಧ ಯೋಗ ತಜ್ಞರಾಗಿದ್ದು, “ಸತ್ಯ ಯೋಗ ಕೇಂದ್ರ” ವನ್ನು ಮುನ್ನಡೆಸುತ್ತಿದ್ದಾರೆ. ಯೋಗದಲ್ಲಿ ಎಂಎಸ್​ಸಿ ಮಾಡಿದ್ದು, ಹಾಗೆಯೇ ಯೋಗದಲ್ಲಿಯೇ ಪಿಜಿ ಡಿಪ್ಲೊಮಾ ಓದಿದ್ದಾರೆ. ಅವರು ಜೈನ್​ ಕಾಲೇಜಿನಲ್ಲಿ ಎಂಬಿಎ ಪೂರೈಸಿದ್ದಾರೆ.

ಅವರಿಗೆ 2015ರಲ್ಲಿ ಯೋಗದಲ್ಲಿನ ಸಾಧನೆಗಾಗಿ ಆರ್ಯಭಟ ಅಂತಾರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ. ಯೋಗ ಕಲಾಸಾಧಕಿ ಪ್ರಶಸ್ತಿಗೂ ಭಾಜನರಾಗಿದ್ದಾರೆ, ಜ್ಯೋತಿಷ ರತ್ನ ಸೇರಿದಂತೆ ಹಲವು ಕೋರ್ಸ್​ಗಳನ್ನು ಮಾಡಿದ್ದಾರೆ. ಗರ್ಭಾವಸ್ಥೆ ಕುರಿತು ಹೆಚ್ಚಿನ ಮಾಹಿತಿಗಾಗಿ ಮೊ.ನಂ.9663879672. www.astroyoga.co.in ಭೇಟಿ ನೀಡಿ.