ನಾಲಿಗೆಯಲ್ಲೂ ಅಡಗಿದೆ ವಿಜ್ಞಾನ, ನಾಲಿಗೆ ನೋಡಿ ವೈದ್ಯರು ನಿಮಗೆ ಯಾವ ಸಮಸ್ಯೆ ಇದೆ ಎಂದು ಹೇಳ್ತಾರೆ ಅದು ಹೇಗೆ ತಿಳಿಯಿರಿ

ನಮ್ಮ ದೇಹದಲ್ಲಿನ ರೋಗದ ಆರಂಭಿಕ ಲಕ್ಷಣಗಳು ಅನೇಕ ಅಂಗಗಳಲ್ಲಿ ಗೋಚರಿಸುತ್ತವೆ. ನೀವು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ನೀವು ವೈದ್ಯರ ಬಳಿ ಹೋದಾಗ ಅವರು ಮೊದಲು ಹೇಳುವುದೇ ನಾಲಿಗೆ ತೋರಿಸಿ ಎಂದು.

ನಾಲಿಗೆಯಲ್ಲೂ ಅಡಗಿದೆ ವಿಜ್ಞಾನ, ನಾಲಿಗೆ ನೋಡಿ ವೈದ್ಯರು ನಿಮಗೆ ಯಾವ ಸಮಸ್ಯೆ ಇದೆ ಎಂದು ಹೇಳ್ತಾರೆ ಅದು ಹೇಗೆ ತಿಳಿಯಿರಿ
ವೈದ್ಯರು
Image Credit source: Kauveri Hospital

Updated on: Jun 14, 2023 | 9:00 AM

ನಮ್ಮ ದೇಹದಲ್ಲಿನ ರೋಗದ ಆರಂಭಿಕ ಲಕ್ಷಣಗಳು ಅನೇಕ ಅಂಗಗಳಲ್ಲಿ ಗೋಚರಿಸುತ್ತವೆ. ನೀವು ಅನಾರೋಗ್ಯಕ್ಕೆ ಒಳಗಾದಾಗ ಮತ್ತು ನೀವು ವೈದ್ಯರ ಬಳಿ ಹೋದಾಗ ಅವರು ಮೊದಲು ಹೇಳುವುದೇ ನಾಲಿಗೆ ತೋರಿಸಿ ಎಂದು. ಮೊದಲು ನಿಮ್ಮ ನಾಲಿಗೆ ಬಳಿಕ ನಿಮ್ಮ ಕಣ್ಣನ್ನು ಪರೀಕ್ಷಿಸುತ್ತಾರೆ. ನಿಮ್ಮ ನಾಲಿಗೆಯಲ್ಲೂ ಕೂಡ ವಿಜ್ಞಾನ ಅಡಗಿದೆ ಎಂಬುದು ನಿಮಗೆ ತಿಳಿದಿದೆಯೇ? ವಾಸ್ತವವಾಗಿ, ವೈದ್ಯರು ನಾಲಿಗೆಯಿಂದ ನಿಮಗೆ ಯಾವ ಕಾಯಿಲೆ ಇದೆ ಎಂದು ಕಂಡುಹಿಡಿಯುತ್ತಾರೆ. ನಾಲಿಗೆಯಲ್ಲಿ ಕಂಡುಬರುವ ಬದಲಾವಣೆಗಳು ಯಾವ ರೋಗದ ಲಕ್ಷಣಗಳಾಗಿರುತ್ತವೆ ತಿಳಿಯಿರಿ. ನಾಲಿಗೆಯಿಂದ ರೋಗವನ್ನು ಹೇಗೆ ಗುರುತಿಸಲಾಗುತ್ತದೆ?

1. ನಾಲಿಗೆ ಬಿಳಿಯಾಗುವುದು
ನಾಲಿಗೆಯ ಬಣ್ಣವು ಬಿಳಿಯಾಗಿದ್ದರೆ ಅಥವಾ ಅದರ ಮೇಲೆ ಬಿಳಿ ಕಲೆಗಳು ಕಂಡುಬಂದರೆ, ಇವುಗಳು ಈಸ್ಟ್ ಸೋಂಕಿನ ಚಿಹ್ನೆಗಳಾಗಿರಬಹುದು ಎಂದು ಅರ್ಥಮಾಡಿಕೊಳ್ಳಬೇಕು. ತಂಬಾಕು ಸೇವಿಸುವವರ ನಾಲಿಗೆ ಹೆಚ್ಚಾಗಿ ಬೆಳ್ಳಗಾಗುತ್ತದೆ. ತಿಳಿ ಬಿಳಿ ನಾಲಿಗೆ ರಕ್ತಹೀನತೆಯ ಲಕ್ಷಣವಾಗಿರಬಹುದು.

ಮತ್ತಷ್ಟು ಓದಿ: World Blood Donor Day 2023: ರಕ್ತದಾನದಿಂದಾಗುವ ಅಚ್ಚರಿಯ ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

2. ನಾಲಿಗೆಯ ಮೇಲೆ ಕಪ್ಪು ಕಲೆಗಳು
ನಾಲಿಗೆಯ ಮೇಲೆ ಕಪ್ಪು ಚುಕ್ಕೆ ಇದ್ದರೆ, ಅದು ಬ್ಯಾಕ್ಟೀರಿಯಾ ಅಥವಾ ಶಿಲೀಂಧ್ರಗಳ ಸೋಂಕಿಗೆ ಕಾರಣವಾಗಬಹುದು. ಕಬ್ಬಿಣದ ಮಾತ್ರೆಗಳನ್ನು ಅತಿಯಾಗಿ ಸೇವಿಸಿದರೂ ನಾಲಿಗೆಯ ಬಣ್ಣ ಕಪ್ಪಾಗುತ್ತದೆ. ಅದರ ಸಂಕೇತಗಳು ನಾಲಿಗೆಯ ಮೂಲಕ ಕಂಡುಬರುತ್ತವೆ.

3. ಕೆಂಪು ನಾಲಿಗೆ
ನಾಲಿಗೆಯ ಕೆಂಪು ಬಣ್ಣವು ದೇಹದಲ್ಲಿ ವಿಟಮಿನ್ ಬಿ 12 ಕೊರತೆಯ ಸಂಕೇತವಾಗಿದೆ. ಕೆಲವೊಮ್ಮೆ ನಾಲಿಗೆಯ ಕೆಂಪು ಬಣ್ಣವು ಸೋಂಕು ಮತ್ತು ಜ್ವರದ ಲಕ್ಷಣವಾಗಿರಬಹುದು. ಇದು ಸಂಭವಿಸಿದಲ್ಲಿ, ವೈದ್ಯರನ್ನು ಭೇಟಿ ಮಾಡಬೇಕು.

4. ಕೂದಲಿನಂತೆ ಅಂಟಿಕೊಳ್ಳುವುದು
ಕೆಲವೊಮ್ಮೆ ನಾಲಿಗೆಯ ಮೇಲೆ ಕೂದಲಿನಂತೆ ಏನಾದರೂ ಅಂಟಿಕೊಂಡಿದೆ ಎಂದು ತೋರುತ್ತದೆ. ಇದು ಬಿಳಿ, ಕಪ್ಪು ಅಥವಾ ಕಂದು ಬಣ್ಣದ್ದಾಗಿರಬಹುದು. ಇದರಲ್ಲಿ ಬ್ಯಾಕ್ಟೀರಿಯಾಗಳು ಸಿಲುಕಿ ಆರೋಗ್ಯಕ್ಕೆ ಹಾನಿಯಾಗುವ ಅಪಾಯವಿದೆ.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Nayana Rajeev

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Follow Us