ಆಂಟಿಬಯೋಟಿಕ್ ಸೇವನೆಯಿಂದ ನಾಲಿಗೆಯಲ್ಲಿ ಕಪ್ಪು ರೋಮ ಪತ್ತೆ, ಇದು ಅಪರೂಪದ ರೋಗಲಕ್ಷಣ

ಮಿನೋಸೈಕ್ಲಿನ್ ಆಂಟಿಬಯೋಟಿಕ್ ಸೇವನೆಯಿಂದ ಮಹಿಳೆಯೊಬ್ಬರು ‘ಕಪ್ಪು ಕೂದಲುಳ್ಳ ನಾಗಿಗೆಯ’ (BHT) ಅಪರೂಪದ ರೋಗಲಕ್ಷಣಕ್ಕೆ ತುತ್ತಾಗಿರುವ ಘಟನೆಯು ಜಪಾನ್ ನಲ್ಲಿ ನಡೆದಿದೆ.

ಆಂಟಿಬಯೋಟಿಕ್ ಸೇವನೆಯಿಂದ ನಾಲಿಗೆಯಲ್ಲಿ ಕಪ್ಪು ರೋಮ ಪತ್ತೆ, ಇದು ಅಪರೂಪದ ರೋಗಲಕ್ಷಣ
ಆಂಟಿಬಯೋಟಿಕ್ ಸೇವನೆಯಿಂದ ನಾಲಿಯಲ್ಲಿ ಕಪ್ಪು ರೋಮ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 11, 2023 | 2:13 PM

ಆಂಟಿಬಯೋಟಿಕ್ ನ ಸೇವನೆಯ ನಂತರ ಮಹಿಳೆಯೊಬ್ಬರು ‘ಕಪ್ಪು ಕೂದಲುಳ್ಳ ನಾಗಿಗೆಯ’ (BHT) ಅಪರೂಪದ ರೋಗಲಕ್ಷಣಕ್ಕೆ ತುತ್ತಾಗಿದ್ದು, ಈ ಘಟನೆ ಜಪಾನ್ ನಲ್ಲಿ ನಡೆದಿದೆ. ಬ್ರಿಟೀಷ್ ಮೆಡಿಕಲ್ ಜರ್ನಲ್ ಕೇಸ್ ರಿಪೋರ್ಟ್ಸ್ ಪ್ರಕಾರ, ಮಹಿಳೆ ಗುದನಾಳದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಮತ್ತು ಅದಕ್ಕೆ ಜಪಾನ್​​​ನಲ್ಲಿ 14 ತಿಂಗಳ ಹಿಂದೆ ಚಿಕಿತ್ಸೆಯನ್ನು ಪ್ರಾರಂಭಿಸಿದರು. ಹಾಗೂ ಆಕೆ ಕೀಮೋಥೆರಪಿಗೆ ಒಳಗಾದರು. ಕೀಮೋಥೆರಪಿಯ ಪ್ರತಿಕೂಲ ಪರಿಣಾಮಗಳನ್ನು ಕಡಿಮೆ ಮಾಡಲು, 60ರ ಹರೆಯದ ಮಹಿಳೆ ಮೊಡವೆಗಳಿಂದ ನ್ಯುಮೋನಿಯದವರೆಗೆ ಚಿಕಿತ್ಸೆ ನೀಡಲು ಬಳಸಲಾಗುವ ಮಿನೋಸೈಕ್ಲಿನ್ ಎಂಬ ಆಂಟಿಬಯೋಟಿಕ್ ನ್ನು ತೆಗೆದುಕೊಳ್ಳುತ್ತಿದ್ದರು.

ಪಾನಿಟುಮುಮಾಬ್ ಪ್ರೇರಿತ ಚರ್ಮದ ಗಾಯಗಳನ್ನು ತಡೆಗಟ್ಟಲು ಮಹಿಳೆ ಮಿನೊಸೈಕ್ಲಿನ್ ನ್ನು 100 ಮಿಗ್ರಾಂ ಗಳಷ್ಟು ಪ್ರತಿದಿನ ತೆಗೆದುಕೊಳ್ಳುತ್ತಿದ್ದರು. ಈ ಆಂಟಿಬಯೋಟಿಕ್ ಸೇವನೆಯ ಪ್ರತಿಕೂಲತೆಯಿಂದ ಅವರ ನಾಲಿಗೆ ಕಪ್ಪು ಬಣ್ಣಕ್ಕೆ ತಿರುಗಿದೆ. ಈ ಕಪ್ಪು ಕೂದಲುಳ್ಳ ನಾಲಿಗೆ, ಇದು ಸಾಮಾನ್ಯವಾಗಿ ಕಳಪೆ ಮಟ್ಟದ ಬಾಯಿಯ ನೈರ್ಮಲ್ಯದಿಂದ ಹಾಗೂ ಧೂಮಪಾನ, ಮದ್ಯಪಾನದಿಂದ ಉಂಟಾಗುವ ನಿರುಪದ್ರವದ ಸ್ಥಿತಿಯಾಗಿದೆ. ಮತ್ತು ಬಾಯಿಯಲ್ಲಿ ಬ್ಯಾಕ್ಟೀರಿಯ ಮಟ್ಟವನ್ನು ಬದಲಾಯಿಸುವ ಆಂಟಿಬಯೋಟಿಕ್ ಗಳಿಂದಲೂ ಇದು ಸಂಭವಿಸಬಹುದು.

ಇದನ್ನೂ ಓದಿ:Health Tips: ಮೂಳೆ ಮುರಿತ ವೇಗವಾಗಿ ಗುಣಪಡಿಸಲು ಏನು ಮಾಡಬೇಕು? ಇಲ್ಲಿದೆ ಸಲಹೆ

ವರದಿಗಳ ಪ್ರಕಾರ ಮಹಿಳೆಯ ದೈಹಿಕ ಪರೀಕ್ಷೆಯಲ್ಲಿ ಆಕೆಯ ಮುಖದ ಮೇಲೆ ಬೂದು ಬಣ್ಣದ ಹೈಪರ್ಪಿಗ್ಮೆಂಟೇಶನ್​​​​ನ್ನು ಗಮನಿಸಲಾಯಿತು. ಅದನ್ನು ವೈದ್ಯರು ಈ ಹಿಂದೆ ಗಮನಿಸಿರಲಿಲ್ಲ. ನಂತರ ಆಕೆಯ ಬಾಯಿಯ ಕುಹರದ ಪರೀಕ್ಷೆಯಲ್ಲಿ, ಕಂದು ಕಪ್ಪು ಮಿಶ್ರಿತ ಬಣ್ಣದ ತೇಪೆಯು ಎದ್ದು ಕಾಣುವ ಕೂದಲಿನಂತಹ ಫಿಲಿಫಾರ್ಮ್ ನಾಲಿಗೆಯನ್ನು ಆವರಿಸಿರುವುದನ್ನು ವೈದ್ಯರು ಕಂಡುಕೊಂಡರು. ಈ ರೋಗಲಕ್ಷಣ ನೋವಿನಿಂದ ಕೂಡಿರುತ್ತದೆ. ಮತ್ತು ಇದರಿಂದಾಗಿ ವೈದ್ಯರು ಮಹಿಳೆಗೆ ಮಿನೊಸೈಕ್ಲಿನ್ ಬದಲಾಗಿ ಇತರ ಔಷಧಿಗಳನ್ನು ನೀಡಿದರು. ಔಷಧಿಯ ಬದಲಾಯಿಸಿ ಆರು ವಾರಗಳ ನಂತರ ಆಕೆಯ ಮುಖದ ವರ್ಣದ್ರವ್ಯ ಮತ್ತು ಗಮನಾರ್ಹವಾಗಿ ಸುಧಾರಿಸಿತು ಎಂದು ವೈದ್ಯರು ಹೇಳಿದರು.

ಈ ನಿದರ್ಶನದಲ್ಲಿ ‘ಕಪ್ಪು ಕೂದಲುಳ್ಳ ನಾಗಿಗೆಯ’ ರೋಗದ ಪ್ರಗತಿಯು ಮಿನಿಸೈಕ್ಲಿನ್ ನ ಅಡ್ಡ ಪರಿಣಾಮದಿಂದ ಉಂಟಾಗಿದ್ದು ಎಂದು ಕಂಡುಕೊಳ್ಳಲಾಗಿದೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ