ಇತ್ತೀಚಿನ ದಿನಗಳಲ್ಲಿ ಮೂಳೆ ಮುರಿತ ಬಹಳ ಸಾಮಾನ್ಯವಾಗಿದೆ. ಅಲ್ಲದೆ ಯಾವುದೇ ವಯಸ್ಸಿನಲ್ಲಿಯೂ ಯಾರ ಮೇಲೂ ಪರಿಣಾಮ ಬೀರಬಹುದು. ಈ ಮುರಿತಗಳು ಸಾಮಾನ್ಯವಾಗಿ ಬೀಳುವುದು, ಕಾರು ಅಪಘಾತಗಳು ಅಥವಾ ಕ್ರೀಡಾ ಆಘಾತಗಳಿಂದ ಉಂಟಾಗುತ್ತವೆ. ಇನ್ನಿತರ ಕಾಲು ಜಾರುವಿಕೆ, ಓಡುವಾಗ, ಅಥವಾ ಹಾರುವಾಗ ಹೀಗೆ ಯಾವ ಸಂದರ್ಭದಲ್ಲಿಯೂ ಮೂಳೆ ಮುರಿಯಬಹುದು. ಅದರಲ್ಲಿಯೂ ಮೂಳೆಗಳು ಗಟ್ಟಿಯಾಗಿರದವರಲ್ಲಿ ಮುರಿತವಾಗುವುದು ಸಾಮಾನ್ಯ. ಅದನ್ನು ಸರಿಪಡಿಸಲು ನಿಮಗೆ ಶಸ್ತ್ರಚಿಕಿತ್ಸೆ ಅಗತ್ಯ. ಕೆಲವು ಜನರಿಗೆ ತಮ್ಮ ಮೂಳೆ ಗುಣವಾಗಲು ಸ್ಪ್ಲಿಂಟ್, ಕ್ಯಾಸ್ಟ್, ಬ್ರೇಸ್ ಅಥವಾ ಸ್ಲಿಂಗ್ ಮಾತ್ರ ಬೇಕಾಗುತ್ತದೆ. ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಯಾವ ಮೂಳೆ ಮುರಿದಿದೆ, ಮುರಿತ ಎಲ್ಲಾಗಿದೆ ಮತ್ತು ಅದಕ್ಕೆ ಕಾರಣವೇನು ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.