ಮೆಟ್ಟಿಲು ಹತ್ತಿ ಇಳಿಯುವುದರಿಂದ ಎಷ್ಟು ಉಪಯೋಗ ಇದೆ ಅಂತ ತಿಳಿದ್ರೆ ನೀವು ಲಿಫ್ಟ್ ಬಳಸುವುದೇ ಇಲ್ಲ…

ಇತ್ತೀಚಿನ ದಿನಗಳಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಾಗಿ ಪರಿಣಮಿಸಿದೆ. ಹೆಸರೇ ಕೇಳಿರದ ಕಾಯಿಲೆಗಳು ಜನರನ್ನು ಕಾಡುತ್ತಿದೆ. ಆದರೆ ಇದರಿಂದ ಮುಕ್ತಿ ಪಡೆಯಲು ವೈದ್ಯರ ಬಳಿ ಅಥವಾ ಜಿಮ್‌ಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಪ್ರತಿನಿತ್ಯ ವಾಕಿಂಗ್ ಅಥವಾ ಜಾಗಿಂಗ್ ಮಾಡಬೇಕಾಗಿಯೂ ಇಲ್ಲ. ಕೇವಲ ನಿಮ್ಮ ಮನೆಯ ಮೆಟ್ಟಿಲುಗಳನ್ನು 6 ನಿಮಿಷ ಹತ್ತಿ ಇಳಿದರೆ ಸಾಕು ನಿಮ್ಮ ಎಲ್ಲಾ ಆರೋಗ್ಯ ಸಮಸ್ಯೆಗೂ ಬಾಯ್ ಬಾಯ್ ಹೇಳಬಹುದು. ಹೌದು, ಕೇವಲ ಮೆಟ್ಟಿಲು ಹತ್ತಿ ಆರೋಗ್ಯ ಕಾಪಾಡಿಕೊಳ್ಳಬಹುದು. ಈ ಬಗ್ಗೆ ಮತ್ತಷ್ಟು ಮಾಹಿತಿ ಸ್ಟೋರಿಯಲ್ಲಿದೆ.

ಮೆಟ್ಟಿಲು ಹತ್ತಿ ಇಳಿಯುವುದರಿಂದ ಎಷ್ಟು ಉಪಯೋಗ ಇದೆ ಅಂತ ತಿಳಿದ್ರೆ ನೀವು ಲಿಫ್ಟ್ ಬಳಸುವುದೇ ಇಲ್ಲ...
Stair Workout

Updated on: Dec 17, 2025 | 6:20 PM

ಇಂದಿನ ವೇಗದ ಜೀವನದಲ್ಲಿ, ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಒಂದು ಸವಾಲಾಗಿದೆ. ಜನರು ವಿವಿಧ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಮಧುಮೇಹ (diabetes), ತೂಕ ಹೆಚ್ಚಾಗುವುದು ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚುತ್ತಿದೆ. ಅದರಲ್ಲಿಯೂ ಬೊಜ್ಜು (obesity) ಅನೇಕರಲ್ಲಿ ಕಾಡುತ್ತಿರುವ ಸಮಸ್ಯೆಯಾಗಿದೆ. ಹಾಗಾಗಿ ಅನೇಕರು ಜಿಮ್‌ಗಳಿಗೆ ಸೇರುತ್ತಿದ್ದಾರೆ, ಇದು ಆರೋಗ್ಯವಾಗಿರಲು ಸಹಾಯ ಮಾಡುತ್ತದೆಯಾದರೂ ಸಾಕಷ್ಟು ಹಣ ಖರ್ಚಾಗುತ್ತದೆ. ಅದರ ಜೊತೆಗೆ ವಿವಿಧ ರೀತಿಯ ಆಹಾರ ಪದ್ಧತಿಗಳನ್ನು ಅನುಸರಿಸಬೇಕಾಗುತ್ತದೆ. ಆದರೆ ನಿಮ್ಮ ಮನೆಯಲ್ಲಿರುವ ಮೆಟ್ಟಿಲು ಹತ್ತುವುದರಿಂದ (Climbing Stairs) ಒಂದು ರೂಪಾಯಿಯ ಖರ್ಚಿಲ್ಲದೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರೆ ನಂಬುತ್ತೀರಾ… ಹೌದು, ಮನೆಯಲ್ಲಿರುವ ಮೆಟ್ಟಿಲುಗಳು ಆರೋಗ್ಯ ಕಾಪಾಡಲು ಸಹಾಯ ಮಾಡುತ್ತದೆ. ಹಾಗಾದರೆ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ ಸ್ಟೋರಿ ಮೂಲಕ ತಿಳಿದುಕೊಳ್ಳಿ.

6 ನಿಮಿಷ ಮೆಟ್ಟಿಲು ಹತ್ತುವುದರಿಂದ ಸಿಗುವ ಪ್ರಯೋಜನ:

ಮೆಟ್ಟಿಲು ಹತ್ತುವುದರಿಂದ ದೇಹಕ್ಕೆ ಅದ್ಭುತವಾದ ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ದೇಹದ ಶಕ್ತಿಯನ್ನು ಹೆಚ್ಚಿಸುವುದು, ಕೊಬ್ಬನ್ನು ಕಡಿಮೆ ಮಾಡುವುದು ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುವಂತಹ ಹಲವಾರು ಉಪಯೋಗಗಳು ಈ ಒಂದು ಚಟುವಟಿಕೆಯಿಂದ ಸಿಗುತ್ತದೆ. ನಿಯಮಿತ ವಾಕಿಂಗ್ ಅಥವಾ ಜಾಗಿಂಗ್ ಗಿಂತ ಮೆಟ್ಟಿಲುಗಳನ್ನು ಹತ್ತುವುದು ದೇಹಕ್ಕೆ ಹೆಚ್ಚು ಪ್ರಯೋಜನಕಾರಿ ಎಂದು ಸಂಶೋಧನೆಯೂ ಸೂಚಿಸುತ್ತದೆ. 6 ನಿಮಿಷಗಳ ಕಾಲ ನಿರಂತರವಾಗಿ ಮೆಟ್ಟಿಲುಗಳನ್ನು ಹತ್ತುವುದರಿಂದ ದೇಹದ ಒಟ್ಟು ಕೊಬ್ಬಿನ ಶೇಕಡಾ 15 ರಷ್ಟು ಕಡಿಮೆಯಾಗುತ್ತದೆ. ವಿಶೇಷ ವ್ಯಾಯಾಮದ ಅಗತ್ಯವಿಲ್ಲದೆಯೇ ಮೆಟ್ಟಿಲುಗಳನ್ನು ಹತ್ತುವುದರ ಮೂಲಕ ನೀವು ಸುಲಭವಾಗಿ ಕೊಬ್ಬನ್ನು ಕರಗಿಸಬಹುದು. ಇದು ಕಡಿಮೆ ಸಮಯದಲ್ಲಿ ಬಹಳಷ್ಟು ಕ್ಯಾಲೊರಿಗಳನ್ನು ಬರ್ನ್ ಮಾಡುವ ಮೂಲಕ ತೂಕವನ್ನು ತ್ವರಿತವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಹೊಟ್ಟೆ ಬೊಜ್ಜು ಏನ್ ಮಾಡಿದ್ರೂ ಕಡಿಮೆ ಆಗಲ್ಲ ಅಂದ್ರೆ ಈ ಬೀಜಗಳಿಂದ ಚಹಾ ಮಾಡಿ ಕುಡಿಯಿರಿ

30 ನಿಮಿಷಗಳ ಕಾಲ ಮೆಟ್ಟಿಲುಗಳನ್ನು ಹತ್ತುವುದರಿಂದ 250- 300 ಕ್ಯಾಲೊರಿಗಳು ಬರ್ನ್ ಆಗುತ್ತದೆ. ಈ ಅಭ್ಯಾಸವನ್ನು ಪ್ರತಿನಿತ್ಯ ರೂಢಿಸಿಕೊಳ್ಳುವುದರಿಂದ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕಾಲು, ಸೊಂಟ, ಕ್ವಾಡ್ರೆಸ್ ಮತ್ತು ಕರು ಸ್ನಾಯುಗಳನ್ನು ಕೂಡ ಬಲಪಡಿಸುತ್ತದೆ. ಇಂದಿನ ಕಾರ್ಯನಿರತ ಜೀವನದಲ್ಲಿ, ಸರಿಯಾದ ದೈಹಿಕ ವ್ಯಾಯಾಮಕ್ಕಾಗಿ ಸಮಯವನ್ನು ಮೀಸಲಿಡಲು ಸಾಧ್ಯವಾಗದಿರುವವರು ದೈನಂದಿನ ಚಟುವಟಿಕೆಗಳಲ್ಲಿ ಮೆಟ್ಟಿಲುಗಳಿಗೆ ಆದ್ಯತೆ ನೀಡುವುದರಿಂದ ದೇಹಕ್ಕೆ ಉತ್ತಮ ಪ್ರಯೋಜನಗಳನ್ನು ಪಡೆಯಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ