
ಮಹಿಳೆಯರಾಗಲಿ ಅಥವಾ ಪುರುಷರಾಗಲಿ, ಕೂದಲು ಉದುರುವ ಸಮಸ್ಯೆ (Hair Fall) ಕಂಡುಬರುವುದು ಸಾಮಾನ್ಯ. ಆದರೆ ಮಹಿಳೆಯರಿಗೆ 40 ವರ್ಷದ ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚಾಗುತ್ತದೆ. ಅನೇಕರಲ್ಲಿ ಈ ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂಬುವಷ್ಟರ ಮಟ್ಟಿಗೆ ಕೂದಲು ಉದುರುತ್ತದೆ. ನಿಮ್ಮ ಮನೆಯಲ್ಲಿಯೂ ಯಾರಿಗಾದರೂ ಈ ರೀತಿ ಸಮಸ್ಯೆ ಕಂಡು ಬಂದಿದ್ಯಾ, 40 ವರ್ಷದ ನಂತರ ಕೂದಲು ಉದುರುವ ಸಮಸ್ಯೆ ಹೆಚ್ಚಾಗಲು ಕಾರಣವೇನು ಎಂದು ಯೋಚಿಸಿದ್ದೀರಾ… ಅನಾರೋಗ್ಯದಿಂದ ಈ ರೀತಿಯಾಗುತ್ತದೆಯೇ ಇದನ್ನು ನಿಯಂತ್ರಿಸಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ. ಈ ವಿಷಯವಾಗಿ ತಜ್ಞರು ನೀಡಿರುವ ಸಲಹೆ ಸ್ಟೋರಿಯಲ್ಲಿದೆ.
ಮ್ಯಾಕ್ಸ್ ಆಸ್ಪತ್ರೆಯ ಚರ್ಮರೋಗ ವಿಭಾಗದ ಡಾ. ಸೌಮ್ಯ ಸಚ್‌ದೇವ ಅವರು ಹೇಳುವ ಪ್ರಕಾರ, 40 ವರ್ಷದ ನಂತರ ಕೂದಲು ಉದುರುವ ಸಮಸ್ಯೆ ಕಂಡುಬರುವುದಕ್ಕೆ ಹಲವು ಕಾರಣಗಳಿವೆ. ಕೆಲವು ಮಹಿಳೆಯರು ಈ ವಯಸ್ಸಿನಲ್ಲಿ ಋತುಬಂಧಕ್ಕೆ ಒಳಗಾಗುತ್ತಾರೆ ಇದು ಕೂಡ ಒಂದು ಕಾರಣವಾಗಿದೆ. ಅಷ್ಟೇಅಲ್ಲ, ಹಲವಾರು ಹಾರ್ಮೋನುಗಳ ಕೊರತೆ ಕೂಡ ಈ ರೀತಿಯಾಗುವುದಕ್ಕೆ ಕಾರಣವಾಗಿರಬಹುದು. ಜೊತೆಗೆ ಮಹಿಳೆಯರಲ್ಲಿ ಕಂಡುಬರುವ ಕಬ್ಬಿಣದ ಅಂಶ, ವಿಟಮಿನ್ ಡಿ ಮತ್ತು ಬಯೋಟಿನ್ ಕೊರತೆಯಿದ್ದರೆ, ಕೂದಲು ಉದುರುವ ಸಮಸ್ಯೆ ಕಂಡುಬರಬಹುದು.
ಮಹಿಳೆಯರಲ್ಲಿ ಕೂದಲು ಉದುರುವಿಕೆಗೆ ಮಾನಸಿಕ ಒತ್ತಡವೂ ಒಂದು ಪ್ರಮುಖ ಕಾರಣ ಎಂದು ಡಾ. ಸೌಮ್ಯಾ ಹೇಳುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ಮಾನಸಿಕ ಒತ್ತಡದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿದ್ದು ಇವು ಕೂದಲಿನ ಮೇಲೂ ಪರಿಣಾಮ ಬೀರುವ ಮೂಲಕ ಕೂದಲಿನ ಬೆಳವಣಿಗೆಗೆ ಅಡ್ಡಿಯಾಗುತ್ತದೆ, ಜೊತೆಗೆ ಉದುರುವಿಕೆಗೆ ಕಾರಣವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಆಟೋಇಮ್ಯೂನ್ ಕಾಯಿಲೆಗಳು ಸಹ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ಕಾಯಿಲೆಗಳಿಗೆ ಯಾವುದೇ ರೀತಿಯ ಚಿಕಿತ್ಸೆ ಇಲ್ಲ. ಕೆಲವು ಮಹಿಳೆಯರಲ್ಲಿ, ಕೂದಲು ಉದುರುವಿಕೆ ಥೈರಾಯ್ಡ್ ಅಥವಾ ಮಧುಮೇಹದಿಂದಲೂ ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ, ಥೈರಾಯ್ಡ್ ಮತ್ತು ಮಧುಮೇಹವನ್ನು ನಿಯಂತ್ರಿಸಿದರೆ, ಕೂದಲು ಉದುರುವಿಕೆಯನ್ನು ಕೂಡ ನಿಯಂತ್ರಿಸಬಹುದು.
ಇದನ್ನೂ ಓದಿ: ಈ ಆಹಾರಗಳ ಸೇವನೆ ಮಾಡುವುದನ್ನು ಬಿಟ್ಟರೆ ಕೂದಲು ಉದುರುವುದು ಕಡಿಮೆಯಾಗುತ್ತೆ!
ಮಹಿಳೆಗೆ ಸ್ವಯಂ ನಿರೋಧಕ ಕಾಯಿಲೆ ಅಥವಾ ಆನುವಂಶಿಕ ಕಾರಣಗಳಿಂದ ಕೂದಲು ಉದುರುವಿಕೆ ಇದ್ದರೆ, ಅದನ್ನು ಸಂಪೂರ್ಣವಾಗಿ ನಿಯಂತ್ರಿಸುವುದು ಕಷ್ಟ. ಇತರ ಸಂದರ್ಭಗಳಲ್ಲಿ, ಕೂದಲು ಉದುರುವಿಕೆಯನ್ನು ಈ ಸಲಹೆಗಳನ್ನು ಅನುಸರಿಸುವ ಮೂಲಕ ತಡೆಯಬಹುದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ