Deepavali 2023: ಪಟಾಕಿಯಿಂದ ಹೊರಬರುವ ಹೊಗೆ ಗರ್ಭಿಣಿಯರಿಗೆ ಎಷ್ಟು ಅಪಾಯಕಾರಿ ಗೊತ್ತಾ?

ಆರೋಗ್ಯ ತಜ್ಞರ ಪ್ರಕಾರ, ಪಟಾಕಿಯಿಂದ ಹೊರಹೊಮ್ಮುವ ಹೊಗೆ ಸಾಕಷ್ಟು ಅಪಾಯಕಾರಿಯಾಗಿದೆ. ವಿಶೇಷವಾಗಿ ಗರ್ಭಿಣಿಯರಿಗೆ. ಪಟಾಕಿಯಿಂದ ಹೊರಸೂಸುವ ಹೊಗೆಯಲ್ಲಿ ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಪರ್ಟಿಕ್ಯುಲೇಟ್ ಮ್ಯಾಟರ್ ಸೇರಿದಂತೆ ಹಲವು ವಿಷಕಾರಿ ಅಂಶಗಳಿವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಈ ಮಾಲಿನ್ಯದೊಂದಿಗೆ ಸಂಪರ್ಕಕ್ಕೆ ಬಂದರೆ, ತಾಯಿಯ ಜೊತೆಗೆ ಭ್ರೂಣದ ಬೆಳವಣೆಗೆಯ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ.

Deepavali 2023: ಪಟಾಕಿಯಿಂದ ಹೊರಬರುವ ಹೊಗೆ ಗರ್ಭಿಣಿಯರಿಗೆ ಎಷ್ಟು ಅಪಾಯಕಾರಿ ಗೊತ್ತಾ?
ಸಾಂದರ್ಭಿಕ ಚಿತ್ರ
Image Credit source: Pinterest

Updated on: Nov 09, 2023 | 6:34 PM

ದೀಪಾವಳಿ ಹಬ್ಬ ಸಮೀಪಿಸುತ್ತಿದೆ. ಹಬ್ಬದ ಪೂಜೆ, ಸಿಹಿ ಖಾದ್ಯಗಳ ಜೊತೆ ಪಟಾಕಿ ಇಲ್ಲದಿದ್ದರಂತೂ ಹಬ್ಬವೇ ಅಪೂರ್ಣ ಎಂದೆನಿಸುವುದು ಸಹಜ. ಆದರೆ ದೀಪಾವಳಿಯಂದು ಪಟಾಕಿ ಸಿಡಿಸುವ ಮೊದಲು ನಿಮ್ಮ ಮನೆಯಲ್ಲಿ ಗರ್ಭಿಣಿಯರಿದ್​ದರೆ ಹೆಚ್​ಚಿನ ಜಾಗ್ರತೆ ವಹಿಸುವುದು ಅಗತ್ಯ. ಯಾಕೆಂದರೆ ಗರ್ಭಾವಸ್ಥೆಯಲ್ಲಿ ಪಟಾಕಿ ಸುಟ್ಟಾಗ ಅದರಿಂದ ಹೊರ ಬರುವ ಹೊಗೆ ಗರ್ಭಿಣಿಯರಿಗೆ ಹಾಗೂ ಅವರ ಹೊಟ್ಟೆಯಲ್ಲಿ ಬೆಳೆಯುವ ಭ್ರೂಣದ ಮೇಲೆ ದೊಡ್ಡ ಹಾನಿ ಉಂಟುಮಾಡಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಆರೋಗ್ಯ ತಜ್ಞರ ಪ್ರಕಾರ, ಪಟಾಕಿಯಿಂದ ಹೊರಹೊಮ್ಮುವ ಹೊಗೆ ಸಾಕಷ್ಟು ಅಪಾಯಕಾರಿಯಾಗಿದೆ. ವಿಶೇಷವಾಗಿ ಗರ್ಭಿಣಿಯರಿಗೆ. ಪಟಾಕಿಯಿಂದ ಹೊರಸೂಸುವ ಹೊಗೆಯಲ್ಲಿ ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಮತ್ತು ಪರ್ಟಿಕ್ಯುಲೇಟ್ ಮ್ಯಾಟರ್ ಸೇರಿದಂತೆ ಹಲವು ವಿಷಕಾರಿ ಅಂಶಗಳಿವೆ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಈ ಮಾಲಿನ್ಯದೊಂದಿಗೆ ಸಂಪರ್ಕಕ್ಕೆ ಬಂದರೆ, ಈ ಅಪಾಯಕಾರಿ ಅನಿಲಗಳು ಇದು ಆರೋಗ್ಯಕ್ಕೆ ಹಾನಿಯನ್ನುಂಟುಮಾಡುತ್ತದೆ.

ಚರ್ಮದ ಅಲರ್ಜಿ:

ಪಟಾಕಿಯಲ್ಲಿರುವ ರಾಸಾಯನಿಕಗಳು ಚರ್ಮದ ಮೂಲಕ ದೇಹವನ್ನು ತಲುಪುತ್ತವೆ. ಇದು ಚರ್ಮದಲ್ಲಿ ತುರಿಕೆ ಅಲರ್ಜಿಗೆ ಕಾರಣವಾಗುತ್ತದೆ. ಆದ್ದರಿಂದ ಗರ್ಭಾವಸ್ಥೆಯಲ್ಲಿ ಪಟಾಕಿಗಳಿಂದ ದೂರವಿರಬೇಕು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

ಇದನ್ನೂ ಓದಿ: ಗರ್ಭದಲ್ಲಿರುವ ಭ್ರೂಣದ ಮೇಲೂ ವಾಯು ಮಾಲಿನ್ಯ ಅಪಾಯಕಾರಿ ಪರಿಣಾಮವನ್ನು ಬೀರುತ್ತದೆ!

ಅಸ್ತಮಾದಿಂದ ಬಳಲುತ್ತಿರುವವರು:

ಪಟಾಕಿಯಿಂದ ಹೊರಹೊಮ್ಮುವ ಹೊಗೆ ಗರ್ಭಿಣಿಯರಲ್ಲಿ ಅಸ್ತಮಾ ಸಮಸ್ಯೆಗೆ ಕಾರಣವಾಗುತ್ತದೆ. ಈ ಕಾರಣದಿಂದಾಗಿ, ಗರ್ಭಿಣಿಯರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಇದು ಭ್ರೂಣದ ಬೆಳವಣೆಗೆಯ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ.

ಗರ್ಭಾವಸ್ಥೆಯಲ್ಲಿ, ಪಟಾಕಿಗಳಂತಹ ರಾಸಾಯನಿಕ ವಸ್ತುಗಳಿಂದ ದೂರವಿರಿ.ದೀಪಗಳು ಮತ್ತು ನೈಸರ್ಗಿಕ ಅಗರಬತ್ತಿಗಳನ್ನು ಬಳಸಿ ಯಾವುದೇ ಅಡ್ಡ ಪರಿಣಾಮಗಳಿಲ್ಲದೆ ದೀಪಾವಳಿಯನ್ನು ಆಚರಿಸಬಹುದು. ಮನೆ ಶುಚಿಗೊಳಿಸುವಿಕೆಯಿಂದ ಹೊರಬರುವ ಕೊಳಕು ಮತ್ತು ಧೂಳು, ಪಟಾಕಿ ಮತ್ತು ದೀಪಗಳ ಹೊಗೆ ಮಾಲಿನ್ಯಕ್ಕೆ ಮಾಸ್ಕ್​​ ಧರಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: