ಗರ್ಭಾವಸ್ಥೆಯಲ್ಲಿ ಕಂಡುಬರುವ ಯೋನಿ ಸೋಂಕನ್ನು ನಿವಾರಿಸಲು ಏನು ಮಾಡಬೇಕು?

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕುಗಳು ಬಹಳಷ್ಟು ನಿರೀಕ್ಷಿತ, ಆದರೆ ಇದು ತಾಯಂದಿರಿಗೆ ಕಳವಳದ ಮೂಲವಾಗಬಹುದು. ಹಾಗಾಗಿ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ನೀವು ಈ ಬಗ್ಗೆ ಚಿಂತೆ ಮಾಡುವುದನ್ನು ನಿಲ್ಲಿಸಿ ಮತ್ತು ಗರ್ಭಾವಸ್ಥೆಯಲ್ಲಿ ಯೋನಿ ಸೋಂಕುಗಳು ಕಂಡು ಬರದಂತೆ ಹೇಗೆ ತಡೆಯುವುದು? ಯೋನಿ ಸೋಂಕು ಎಂದರೇನು? ಎಂಬುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಿ.

ಗರ್ಭಾವಸ್ಥೆಯಲ್ಲಿ ಕಂಡುಬರುವ ಯೋನಿ ಸೋಂಕನ್ನು ನಿವಾರಿಸಲು ಏನು ಮಾಡಬೇಕು?
ಸಾಂದರ್ಭಿಕ ಚಿತ್ರ
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷಯ್​ ಪಲ್ಲಮಜಲು​​

Updated on:Nov 03, 2023 | 5:57 PM

ಗರ್ಭಾವಸ್ಥೆ ಎನ್ನುವುದು ಮಹಿಳೆಯ ಜೀವನದ ಒಂದು ದೊಡ್ಡ ಘಟ್ಟ. ಈ ಸಂದರ್ಭದಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲುವುದಿಲ್ಲ. ಈ ಪ್ರಯಾಣ ಪ್ರಾರಂಭವಾದ ನಂತರ, ಮಹಿಳೆಯರು ತಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ. ಜೊತೆಗೆ ಹುಟ್ಟಲಿರುವ ಮಗು ಆರೋಗ್ಯವಾಗಿರಲು ಹಲವು ರೀತಿಯಲ್ಲಿ ಮುಂಜಾಗ್ರತೆ ವಹಿಸಬೇಕಾಗುತ್ತದೆ. ಆದರೆ ಗರ್ಭಾವಸ್ಥೆಯ ಪ್ರಯಾಣ ಯಾವಾಗಲೂ ಸುಗಮವಾಗಿರುವುದಿಲ್ಲ. ಕೆಲವು ಮಹಿಳೆಯರು ಯೋನಿ ಸೋಂಕುಗಳನ್ನು ಎದುರಿಸಬಹುದು. ಯುಎಸ್ ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಲ್ಲಿ ಪ್ರಕಟವಾದ 2009 ರ ಅಧ್ಯಯನದ ಪ್ರಕಾರ, ಯೋನಿ ಯೀಸ್ಟ್ ಸೋಂಕು ಸಾಮಾನ್ಯ ಕಾಯಿಲೆಯಾಗಿದ್ದು, ಇದು ನಾಲ್ಕು ಮಹಿಳೆಯರಲ್ಲಿ ಮೂವರನ್ನು ಅವರ ಜೀವನದ ವಿವಿಧ ಹಂತಗಳಲ್ಲಿ ಬಾಧಿಸುತ್ತದೆ. ಅಂದರೆ ಗರ್ಭಾವಸ್ಥೆಯಲ್ಲಿ ಯೋನಿ ಸೋಂಕು ಸಹ ಕಂಡು ಬರಬಹುದು. ಈ ಬಗ್ಗೆ ತಜ್ಞರು ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಯೋನಿ ಸೋಂಕು ಎಂದರೇನು?

ಯೋನಿ ಸೋಂಕು ಶಿಲೀಂಧ್ರಗಳ ಸೋಂಕಾಗಿದ್ದು, ಇದು ಯೋನಿ ಪ್ರದೇಶಗಳಲ್ಲಿ ಕಿರಿಕಿರಿ, ವಿಸರ್ಜನೆ ಮಾಡುವ ಸಮಯದಲ್ಲಿ ತೀವ್ರ ತುರಿಕೆಗೆ ಕಾರಣವಾಗುತ್ತದೆ ಎಂದು ಬೆಂಗಳೂರಿನ ಎಚ್ಆರ್ ಬಿಆರ್ ಲೇಔಟ್ನ, ಮದರ್ ಹುಡ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಶ್ವೇತಾ ಎಂ.ಪಿ. ಅವರು ಅನೇಕ ಮಹಿಳೆಯರ ಮೇಲೆ ಈ ಸೋಂಕು ಪರಿಣಾಮ ಬೀರುತ್ತವೆ, ಕೆಲವರು ಪುನರಾವರ್ತಿತವಾಗಿ ಇದನ್ನು ಎದುರಿಸುತ್ತಾರೆ ಎಂದಿದ್ದಾರೆ.

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕು ಕಂಡು ಬರಲು ಕಾರಣಗಳೇನು?

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕುಗಳು ವಿವಿಧ ಅಂಶಗಳಿಂದ ಉಂಟಾಗಬಹುದು, ಆದ್ದರಿಂದ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಈ ನಿರ್ಣಾಯಕ ಅವಧಿಯಲ್ಲಿ ತಾಯಿ ಮತ್ತು ಭ್ರೂಣದ ಆರೋಗ್ಯವನ್ನು ರಕ್ಷಿಸುವ ಮೊದಲ ಹೆಜ್ಜೆಯಾಗಿದೆ.

1. ಹಾರ್ಮೋನುಗಳ ಬದಲಾವಣೆ

ಗರ್ಭಧಾರಣೆಯು ಹಾರ್ಮೋನುಗಳ ಬದಲಾವಣೆಯನ್ನು ಪ್ರಚೋದಿಸುತ್ತದೆ, ಮತ್ತು ಅವು ಯೋನಿ ಪ್ರದೇಶದ ಪಿಹೆಚ್‍ನಲ್ಲಿನ ಬದಲಾವಣೆಗಳಿಗೆ ಕಾರಣವಾಗಬಹುದು. ಇದು ಯೋನಿ ಬ್ಯಾಕ್ಟೀರಿಯಾವನ್ನು ಮೂತ್ರನಾಳಕ್ಕೆ ಪ್ರವೇಶಿಸಲು ಪ್ರೋತ್ಸಾಹಿಸುತ್ತದೆ. ಇದರ ನಂತರ, ಸೋಂಕುಗಳು ಬರುವ ಸಾಧ್ಯತೆಗಳು ಹೆಚ್ಚಾಗುತ್ತವೆ.

2. ದುರ್ಬಲ ರೋಗನಿರೋಧಕ ಶಕ್ತಿ

ನೀವು ದುರ್ಬಲ ರೋಗನಿರೋಧಕ ಶಕ್ತಿಯನ್ನು ಹೊಂದಿದ್ದರೆ ಸುಲಭವಾಗಿ ಅನಾರೋಗ್ಯಕ್ಕೆ ಒಳಗಾಗುತ್ತೀರಿ. ತಾಯಂದಿರ ವಿಷಯದಲ್ಲಿ, ಗರ್ಭಧಾರಣೆಗೆ ಸಂಬಂಧಿಸಿದ ಪ್ರತಿರಕ್ಷಣಾ ಬದಲಾವಣೆಗಳು ಸೋಂಕುಗಳನ್ನು ಎದುರಿಸುವ ದೇಹದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂದು ಡಾ. ಶ್ವೇತಾ ಹೇಳುತ್ತಾರೆ.

3. ಬ್ಯಾಕ್ಟೀರಿಯಾದ ಯೋನಿನೋಸಿಸ್

ಸಾಮಾನ್ಯವಾಗಿ ಯೋನಿಯಲ್ಲಿ ವಾಸಿಸುವ ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆಯಿಂದ ಇದು ಸಂಭವಿಸುತ್ತದೆ. ಗರ್ಭಿಣಿಯರು ಅವಧಿ ಪೂರ್ವ ಜನನದ ತೊಡಕುಗಳಿಗೆ ಸಂಬಂಧಿಸಿದ ಬ್ಯಾಕ್ಟೀರಿಯಾದ ಯೋನಿನೋಸಿಸ್ ಅಪಾಯವನ್ನು ಎದುರಿಸುತ್ತಾರೆ.

4. ಕಳಪೆ ನೈರ್ಮಲ್ಯ

ಗರ್ಭಿಣಿಯಾಗಿರಲಿ ಅಥವಾ ಇಲ್ಲದಿರಲಿ, ನೀವು ಸರಿಯಾದ ನೈರ್ಮಲ್ಯ ಅಭ್ಯಾಸಗಳನ್ನು ಅನುಸರಿಸದಿದ್ದರೆ, ಸೋಂಕಿನ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ, ಸೋಂಕುಗಳನ್ನು ದೂರವಿರಿಸಲು ಸರಿಯಾದ ನೈರ್ಮಲ್ಯ ಕಾಪಾಡಿಕೊಳ್ಳುವುದು ನಿರ್ಣಾಯಕವಾಗಿದೆ.

ಇದನ್ನೂ ಓದಿ:ಗರ್ಭಾವಸ್ಥೆಯಲ್ಲಿನ ಯೋನಿ ಸೋಂಕಿಗೆ ಸೂಕ್ತವಾದ ಚಿಕಿತ್ಸೆ ಏನು?

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕುಗಳನ್ನು ಎದುರಿಸಲು ಸಲಹೆಗಳು ಇಲ್ಲಿವೆ;

ಈ ಸೋಂಕಿಗೆ ಅತ್ಯಂತ ನಿರ್ಣಾಯಕ ಹಂತವೆಂದರೆ ಸ್ತ್ರೀ ರೋಗ ತಜ್ಞರನ್ನು ಸಂಪರ್ಕಿಸುವುದು, ಏಕೆಂದರೆ ಅವರು ಸೋಂಕಿನ ಪ್ರಕಾರವನ್ನು ನಿಖರವಾಗಿ ಪತ್ತೆ ಹಚ್ಚಬಹುದು ಮತ್ತು ನಿಮಗೆ ಅತ್ಯಂತ ಸೂಕ್ತವಾದ ಚಿಕಿತ್ಸೆಯನ್ನು ನಿರ್ಧರಿಸಬಹುದು. ಇದರ ಜೊತೆಗೆ ನೀವು ಈ ಕೆಳಗಿನವುಗಳನ್ನು ಸಹ ಮಾಡಬಹುದು ಅಥವಾ ಪ್ರಯತ್ನಿಸಬಹುದು.

1. ಔಷಧಿ

ರೋಗ ನಿರ್ಣಯವನ್ನು ಅವಲಂಬಿಸಿ, ವೈದ್ಯರು ಯೀಸ್ಟ್ ಸೋಂಕುಗಳಿಗೆ ಆಂಟಿಫಂಗಲ್ ಕ್ರೀಮ್ಗಳು ಅಥವಾ ಬ್ಯಾಕ್ಟೀರಿಯಾದ ಸೋಂಕುಗಳಿಗೆ ಕೆಲವು ಔಷಧಿಗಳನ್ನು ಸೂಚಿಸಬಹುದು. ನಿಮ್ಮ ವೈದ್ಯರ ನಿರ್ದೇಶನದಂತೆ ಸೂಚಿಸಿದ ಚಿಕಿತ್ಸಾ ಕ್ರಮವನ್ನು ಅನುಸರಿಸುವುದು ಬಹಳ ಮುಖ್ಯ.

2. ಸರಿಯಾದ ಯೋನಿ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ

ಸರಿಯಾದ ಯೋನಿ ನೈರ್ಮಲ್ಯ ಅತ್ಯಗತ್ಯ, ಆದ್ದರಿಂದ ಸೌಮ್ಯ, ಪರಿಮಳ ರಹಿತ ಸಾಬೂನು ಮತ್ತು ನೀರಿನಿಂದ ಮೃದುವಾದ ಶುದ್ಧೀಕರಣದತ್ತ ಗಮನ ಹರಿಸಿ. ಯೋನಿ ಡೌಚಿಂಗ್ ಅನ್ನು ತಪ್ಪಿಸಿ, ಏಕೆಂದರೆ ಡೌಚಿಂಗ್ ಹಾನಿಕಾರಕ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಆಹ್ವಾನಿಸುತ್ತದೆ ಮತ್ತು ಯೋನಿ ಸೋಂಕಿಗೆ ಕಾರಣವಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಇದು ನೈಸರ್ಗಿಕ ಯೋನಿ ಸಮತೋಲನವನ್ನು ಅಡ್ಡಿಪಡಿಸುತ್ತದೆ. ಜೊತೆಗೆ ಹತ್ತಿಯ ಒಳ ಉಡುಪುಗಳನ್ನು ಧರಿಸಿ ಮತ್ತು ಬಿಗಿಯಾಗಿ ಹೊಂದಿಕೊಳ್ಳುವ, ಚರ್ಮಕ್ಕೆ ಅಂಟಿಕೊಳ್ಳುವ ಬಟ್ಟೆಗಳನ್ನು ತಪ್ಪಿಸಿ. ಮುಖ್ಯವಾಗಿ ಯೋನಿಯನ್ನು ತೊಳೆಯುವಾಗ ಸಹ ಜಾಗರೂಕರಾಗಿರಬೇಕು. ಯೋನಿಯನ್ನು ಮುಂಭಾಗದಿಂದ ಹಿಂದಕ್ಕೆ ಸ್ವಚ್ಛಗೊಳಿಸಬೇಕೇ ಹೊರತು ಬೇರೆ ಮಾರ್ಗ ಹುಡುಕಬಾರದು.

3. ಹೈಡ್ರೇಟ್ ಆಗಿರಿ

ಚೆನ್ನಾಗಿ ಹೈಡ್ರೇಟ್ ಆಗಿರುವುದು ನಿಮ್ಮ ದೇಹದಲ್ಲಿರುವ ವಿಷವನ್ನು ಹೊರ ಹಾಕುವ ಮೂಲಕ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯನ್ನು ಬೆಂಬಲಿಸುವ ಮೂಲಕ ಯೋನಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಕಷ್ಟು ನೀರಿನ ಸೇವನೆಯು ಮೂತ್ರನಾಳದ ಸೋಂಕುಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.

4. ಸರಿಯಾದ ಆಹಾರ ಕ್ರಮವನ್ನು ಅನುಸರಿಸಿ

ಸಮತೋಲಿತ ಆಹಾರವು ಒಟ್ಟಾರೆ ಆರೋಗ್ಯಕ್ಕೆ ಕೊಡುಗೆ ನೀಡುತ್ತದೆ, ಇದು ದೇಹವು ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಅತಿಯಾದ ಸಕ್ಕರೆ ಸೇವನೆಯನ್ನು ಕಡಿಮೆ ಮಾಡುವುದು ಮುಖ್ಯವಾಗಿದೆ ಏಕೆಂದರೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದರಿಂದ ಯೀಸ್ಟ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ ಎಂದು ತಜ್ಞರು ಹೇಳುತ್ತಾರೆ.

5. ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ

ಲೈಂಗಿಕವಾಗಿ ಹರಡುವ ಸೋಂಕುಗಳು ಕಳವಳಕಾರಿಯಾಗಿದ್ದು, ಸುರಕ್ಷಿತ ಲೈಂಗಿಕ ಕ್ರಿಯೆ ನಡೆಸಿ. ಎಸ್ ಟಿಐಗಳ ಅಪಾಯವನ್ನು ಕಡಿಮೆ ಮಾಡಲು ಕಾಂಡೋಮ್ ಗಳನ್ನು ಬಳಸಬಹುದು.

ಗರ್ಭಾವಸ್ಥೆಯಲ್ಲಿ ಯೋನಿ ಸೋಂಕುಗಳು ನಿಮ್ಮ ಮಗುವಿನ ಮೇಲೆ ಪರಿಣಾಮ ಬೀರಬಹುದು, ಇದು ಅವಧಿ ಪೂರ್ವ ಜನನ ಮತ್ತು ಕಡಿಮೆ ಜನನ ತೂಕ ಮತ್ತು ನವಜಾತ ಶಿಶುಗಳಿಗೆ ತಗಲುವ ಸಂಬಂಧಿತ ಸೋಂಕುಗಳ ಅಪಾಯಗಳಿಗೆ ಕಾರಣವಾಗಬಹುದು ಎಂದು ತಜ್ಞರು ಹೇಳುತ್ತಾರೆ. ಹೆರಿಗೆಯ ಸಮಯದಲ್ಲಿ ಮಗು ನಿಮ್ಮ ಯೋನಿ ಸೋಂಕಿಗೆ ಒಡ್ಡಿಕೊಳ್ಳಬಹುದು, ಇದು ನವಜಾತ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ತೀವ್ರ ಸೋಂಕಿರುವ ಸಂದರ್ಭಗಳಲ್ಲಿ, ನವಜಾತ ಸೆಪ್ಸಿಸ್, ಗಂಭೀರ ರಕ್ತಪ್ರವಾಹದ ಸೋಂಕು ಸಂಭವಿಸಬಹುದು. ಅದಕ್ಕಾಗಿಯೇ ಈ ಅಪಾಯಗಳನ್ನು ಕಡಿಮೆ ಮಾಡಲು ಮತ್ತು ನಿಮ್ಮ ಮಗುವಿನ ಯೋಗಕ್ಷೇಮವನ್ನು ಖಚಿತಪಡಿಸಿಕೊಳ್ಳಲು ಸಮಯೋಚಿತ ಪ್ರಸವ ಪೂರ್ವ ಆರೈಕೆ, ರೋಗಲಕ್ಷಣಗಳ ಬಗ್ಗೆ ವೈದ್ಯರೊಂದಿಗೆ ಸಂವಹನ ಮತ್ತು ಶಿಫಾರಸು ಮಾಡಿದ ಚಿಕಿತ್ಸೆಗಳನ್ನು ಅನುಸರಿಸುವುದು ಅತ್ಯಗತ್ಯ.

ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 5:52 pm, Fri, 3 November 23

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್