ಊಟವಾದ ಮೇಲೆ ಹೊಟ್ಟೆ ಉರಿಯುತ್ತಾ?; ಕಾರಣ ಇಲ್ಲಿದೆ

|

Updated on: Sep 04, 2023 | 7:33 PM

ಮಸಾಲೆಯುಕ್ತ ಆಹಾರಗಳು, ಮೆಣಸಿನ ಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಪದಾರ್ಥಗಳು ಹೊಟ್ಟೆಯಲ್ಲಿ ಕಿರಿಕಿರಿ ಉಂಟುಮಾಡಬಹುದು. ಈ ಆಹಾರಗಳು ಹೊಟ್ಟೆಯನ್ನು ಕೆರಳಿಸಬಹುದು.

ಊಟವಾದ ಮೇಲೆ ಹೊಟ್ಟೆ ಉರಿಯುತ್ತಾ?; ಕಾರಣ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us on

ಕೆಲವರಿಗೆ ಊಟವಾದ ನಂತರ ಹೊಟ್ಟೆ ಉರಿ ಕಾಣಿಸಿಕೊಳ್ಳುತ್ತದೆ. ಈ ಬರ್ನಿಂಗ್ (Stomach Burning) ಅನುಭವ ಸದಾ ಇರುವುದಿಲ್ಲ. ನೀರು ಅಥವಾ ತಣ್ಣಗಿನ ಪಾನೀಯ ಕುಡಿದಾಗ ಸ್ವಲ್ಪ ಕಡಿಮೆಯಾದಂತಾಗುವ ಈ ನೋವು ಮತ್ತು ಉರಿ ಮತ್ತೆ ಸ್ವಲ್ಪ ಹೊತ್ತಿನಲ್ಲೇ ಮರುಕಳಿಸುತ್ತದೆ. ಕೆಲವೊಮ್ಮೆ ಅಸಾಧ್ಯ ಹಿಂಸೆ ನೀಡುವ ಈ ಸಮಸ್ಯೆಗೆ ಕಾರಣವೇನೆಂಬುದರ ಮಾಹಿತಿ ಇಲ್ಲಿದೆ.

ಆ್ಯಸಿಡ್ ರಿಫ್ಲಕ್ಸ್:
ಊಟದ ನಂತರದ ಹೊಟ್ಟೆಯಲ್ಲಿ ಉರಿ ಉಂಟಾಗುವುದರ ಮುಖ್ಯ ಕಾರಣ ಆಸಿಡ್ ರಿಫ್ಲಕ್ಸ್. ಇದನ್ನು ಗ್ಯಾಸ್ಟ್ರೋಸೊಫೇಜಿಲ್ ರಿಫ್ಲಕ್ಸ್ ಕಾಯಿಲೆ (GERD) ಎಂದೂ ಕರೆಯುತ್ತಾರೆ. ಕೆಳ ಅನ್ನನಾಳದ ಸ್ಪಿಂಕ್ಟರ್ (LES) ದುರ್ಬಲಗೊಂಡಾಗ ಹೊಟ್ಟೆಯ ಆ್ಯಸಿಡ್ ಅನ್ನನಾಳಕ್ಕೆ ಹಿಂತಿರುಗಬಹುದು. ಇದರಿಂದ ಸಾಮಾನ್ಯವಾಗಿ ಎದೆಯುರಿ ಮತ್ತು ಹೊಟ್ಟೆ ಉರಿ ಕಂಡುಬರುತ್ತದೆ. ವಿಶೇಷವಾಗಿ ನೀವು ಆಮ್ಲೀಯ ಅಥವಾ ಮಸಾಲೆಯುಕ್ತ ಆಹಾರಗಳು, ಕೆಫೀನ್ ಅಥವಾ ಆಲ್ಕೋಹಾಲ್ ಅನ್ನು ಸೇವಿಸಿದಾಗ ಈ ಬರ್ನಿಂಗ್ ಅನುಭವ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: ದೀರ್ಘಕಾಲದ ಗ್ಯಾಸ್ಟ್ರಿಕ್ ಸಮಸ್ಯೆ ಅನ್ನನಾಳವನ್ನು ಹಾನಿಗೊಳಿಸಬಹುದೇ? ತಜ್ಞರು ಹೇಳುವುದೇನು?

ಅತಿಯಾಗಿ ತಿನ್ನುವುದು:
ಒಂದೇ ಸಮಯದಲ್ಲಿ ಹೆಚ್ಚು ತಿನ್ನುವುದು ನಿಮ್ಮ ಹೊಟ್ಟೆಯ ಮೇಲೆ ಅತಿಯಾದ ಒತ್ತಡವನ್ನು ಉಂಟುಮಾಡಬಹುದು. ಇದು ಹೊಟ್ಟೆಯ ಅಸ್ವಸ್ಥತೆ ಮತ್ತು ಸುಡುವಿಕೆಗೆ ಕಾರಣವಾಗುತ್ತದೆ. ಅತಿಯಾಗಿ ತಿನ್ನುವುದು ನಿಮ್ಮ ಹೊಟ್ಟೆಯನ್ನು ಹಿಗ್ಗಿಸಲು ಕಾರಣವಾಗಬಹುದು. ಊಟ ಮಾಡುವಾಗ ಒಂದೇ ಬಾರಿಗೆ ತಟ್ಟೆ ತುಂಬ ತಿನ್ನದೆ ಆಗಾಗ ಸ್ವಲ್ಪ ಸ್ವಲ್ಪ ತಿನ್ನುವುದರಿಂದ ಜೀರ್ಣಕ್ರಿಯೆ ಸುಲಭವಾಗುತ್ತದೆ.

ಮಸಾಲೆಯುಕ್ತ ಆಹಾರಗಳು:
ಮಸಾಲೆಯುಕ್ತ ಆಹಾರಗಳು, ಮೆಣಸಿನ ಕಾಯಿ, ಬೆಳ್ಳುಳ್ಳಿ ಮತ್ತು ಈರುಳ್ಳಿಯಂತಹ ಪದಾರ್ಥಗಳು ಹೊಟ್ಟೆಯಲ್ಲಿ ಕಿರಿಕಿರಿ ಉಂಟುಮಾಡಬಹುದು. ಈ ಆಹಾರಗಳು ಹೊಟ್ಟೆಯನ್ನು ಕೆರಳಿಸಬಹುದು. ಹಾಗೇ ಇದು ಆಸಿಡ್ ರಿಫ್ಲಕ್ಸ್ ಅನ್ನು ಉಲ್ಬಣಗೊಳಿಸಬಹುದು. ನಿಮಗೆ ಊಟದ ನಂತರ ಹೊಟ್ಟೆ ಉರಿಯುವ ಸಾಧ್ಯತೆಯಿದ್ದರೆ, ಮಸಾಲೆಯುಕ್ತ ಮತ್ತು ಕಿರಿಕಿರಿಯುಂಟುಮಾಡುವ ಆಹಾರಗಳ ಸೇವನೆಯನ್ನು ಕಡಿಮೆ ಮಾಡುವುದು ಉತ್ತಮ.

ಇದನ್ನೂ ಓದಿ: Acidity: ನಿಮಗೂ ಗ್ಯಾಸ್ಟ್ರಿಕ್ ಸಮಸ್ಯೆಯೇ? ಈ ಮನೆಮದ್ದುಗಳನ್ನು ಬಳಸಿ, ಸಮಸ್ಯೆಯನ್ನು ನಿವಾರಿಸಿ

ಆಹಾರ ಅಲರ್ಜಿಗಳು:
ಕೆಲವು ವ್ಯಕ್ತಿಗಳಿಗೆ ಕೆಲವು ಆಹಾರಗಳೆಂದರೆ ಅಲರ್ಜಿ ಇರುತ್ತದೆ. ಸಾಮಾನ್ಯವಾಗಿ ಡೈರಿ ಉತ್ಪನ್ನಗಳು, ಖಾರದ ಪದಾರ್ಥಗಳು ನಿಮ್ಮ ರೋಗಲಕ್ಷಣಗಳನ್ನು ಹೆಚ್ಚಿಸುತ್ತದೆ. ಹೀಗಾಗಿ, ಯಾವ ರೀತಿಯ ಆಹಾರ ಸೇವಿಸಬಾರದು ಎಂಬ ಬಗ್ಗೆ ವೈದ್ಯರ ಸಲಹೆ ಪಡೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ