Women Health: ಮಹಿಳೆಯರಲ್ಲಿ ಈ ಸಮಸ್ಯೆಗಳಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ

| Updated By: preethi shettigar

Updated on: Aug 08, 2021 | 7:08 AM

Infertility: ಎರಡು ವರ್ಷಗಳ ಸಾಮಾನ್ಯ ಲೈಂಗಿಕ ಜೀವನದ ನಂತರ ನೀವು ಗರ್ಭಿಣಿಯಾಗದಿದ್ದರೆ, ಇದನ್ನು ಪ್ರಾಥಮಿಕ ಬಂಜೆತನ ಎಂದು ಕರೆಯಲಾಗುತ್ತದೆ.

Women Health: ಮಹಿಳೆಯರಲ್ಲಿ ಈ ಸಮಸ್ಯೆಗಳಿದ್ದರೆ ಮಕ್ಕಳಾಗುವ ಸಾಧ್ಯತೆ ಕಡಿಮೆ
ಸಾಂಕೇತಿಕ ಚಿತ್ರ
Follow us on

ಬಂಜೆತನದ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿದೆ. ಮಕ್ಕಳಾಗದೆ ಅನೇಕ ಮಹಿಳೆಯರು ಆಸ್ಪತ್ರೆ, ದೇವಸ್ಥಾನಕ್ಕೆ ಸುತ್ತಾಡಿ ಒತ್ತಡ ಮತ್ತು ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಹಲವು ಕಾರಣಗಳಿವೆ.  ತಜ್ಞರು ಹೇಳುವಂತೆ ಬಂಜೆತನಕ್ಕೆ(Infertility) ಆರೋಗ್ಯದಲ್ಲಿನ ಸಮಸ್ಯೆಗಳು ಕಾರಣವಾಗುತ್ತವೆ.  ಮಹಿಳೆಯರಲ್ಲಿನ (Women) ಸ್ಥೂಲಕಾಯ, ಪಿಟ್ಯುಟರಿ, ಥೈರಾಯ್ಡ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನುಗಳ ಏರಿಳಿತಗಳು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಬಂಜೆತನಕ್ಕೆ ಕಾರಣವಾಗಬಹುದು. ಅದಾಗ್ಯೂ, ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಮುಖ್ಯ.  ಎರಡು ವರ್ಷಗಳ ಸಾಮಾನ್ಯ ಲೈಂಗಿಕ ಜೀವನದ ನಂತರ ನೀವು ಗರ್ಭಿಣಿಯಾಗದಿದ್ದರೆ, ಇದನ್ನು ಪ್ರಾಥಮಿಕ ಬಂಜೆತನ ಎಂದು ಕರೆಯಲಾಗುತ್ತದೆ. ದ್ವಿತೀಯ ಹಂತದ ಬಂಜೆತನ ಎಂದರೆ ಮಹಿಳೆ ಸಾಮಾನ್ಯ ಲೈಂಗಿಕ ಜೀವನವನ್ನು ಹೊಂದಿದ ನಂತರ, ಗರ್ಭಿಣಿಯಾಗಿ ಗರ್ಭ ನಿಲ್ಲದೇ ಇರುವುದು.

ಮಹಿಳೆಯರಲ್ಲಿನ ಬಂಜೆತನದ ಕಾರಣಗಳು
ಸ್ತ್ರೀ ಸಂತಾನೋತ್ಪತ್ತಿ ವ್ಯವಸ್ಥೆಯಲ್ಲಿನ ದೋಷಗಳು, ಸಣ್ಣ ಗರ್ಭಕೋಶ, ಗರ್ಭಕೋಶದ ಕೊರತೆ, ಎರಡು ಕೋಣೆಗಳ ಗರ್ಭಕೋಶ, ಕೊಳವೆಗಳ ಮುಚ್ಚುವಿಕೆ, ಅಂಡಾಶಯದಲ್ಲಿ ಸರಿಯಾದ ಬೆಳವಣಿಗೆಯ ಕೊರತೆ, ಶಕ್ತಿ ಕಡಿಮೆಯಾಗುವುದು, ಅಡಚಣೆ, ಹಾರ್ಮೋನುಗಳ ಸಮಸ್ಯೆಗಳು ಉಂಟಾಗಬಹುದು. ಹಾಗೆಯೇ ಮುಟ್ಟಿನ ಕ್ರಮಗಳು ಬಂಜೆತನಕ್ಕೆ ಕಾರಣವಾಗಬಹುದು. ಗರ್ಭಾಶಯದಲ್ಲಿ ಗಡ್ಡೆಗಳು ರೂಪುಗೊಂಡು ಫಾಲೋಪಿಯನ್ ಟ್ಯೂಬ್‌ಗಳನ್ನು ನಿರ್ಬಂಧಿಸಿ, ಫಲವತ್ತಾದ ಭ್ರೂಣವು ಗರ್ಭಾಶಯದಲ್ಲಿ ನೆಲೆಗೊಳ್ಳದಂತೆ ತಡೆಯುತ್ತದೆ. ಇದು ಬಂಜೆತನಕ್ಕೆ ಕಾರಣವಾಗುತ್ತದೆ. ಇಡಿಯೋಪಥಿಕ್ ಬಂಜೆತನವು ಆರೋಗ್ಯಕರ ಜನರಲ್ಲಿ ಬಂಜೆತನದ ಮುನ್ಸೂಚನೆಯಾಗಿದೆ.

ಮುನ್ನೆಚ್ಚರಿಕೆ ವಹಿಸುವುದು ಅಗತ್ಯ
ಸ್ಥೂಲಕಾಯದಿಂದ ಬಳಲುತ್ತಿರುವವರು  ತೂಕ ಇಳಿಸಿಕೊಳ್ಳಲು ಪ್ರಯತ್ನಿಸಬೇಕು. ನಿಯಮಿತವಾಗಿ ವ್ಯಾಯಾಮ ಮಾಡುವುದು ಮತ್ತು ನಿಮ್ಮ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡುವುದು ಮುಖ್ಯ. ಪ್ರತಿದಿನ ವ್ಯಾಯಾಮ ಮತ್ತು ಧ್ಯಾನ ಮಾಡುವುದರಿಂದ ಒತ್ತಡವನ್ನು ಕಡಿಮೆ ಮಾಡಬಹುದು. ಇದು ಗರ್ಭಕೋಶದಲ್ಲಿ ಮೊಟ್ಟೆಯ ಉತ್ಪಾದನೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಅದಾಗ್ಯೂ,  35 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದರೆ, ಆರು ತಿಂಗಳ ಕಾಲ ಸರಿಯಾದ ಪೌಷ್ಠಿಕಾಂಶವನ್ನು ಪಡೆಯುವುದು, ಪ್ರತಿದಿನ ವ್ಯಾಯಾಮ ಮಾಡುವುದು ಮತ್ತು ಸರಿಯಾದ ನಿದ್ರೆ ಪಡೆಯುವುದರ ಮೂಲಕ  ಈ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಪುರುಷರಲ್ಲಿ ಬಂಜೆತನಕ್ಕೆ ಕಾರಣಗಳು
ವೀರ್ಯದ ಕೊರತೆ ಅಥವಾ ವೀರ್ಯ ಉತ್ಪಾದನೆಯ ಕೊರತೆ, ವೀರ್ಯ ಉತ್ಪತ್ತಿಯಾದಾಗ ಅವುಗಳ ಸಾಮಾನ್ಯ ಚಲನೆಯ ಕೊರತೆ, ವೀರ್ಯದ ರಚನೆಯಲ್ಲಿನ ವ್ಯತ್ಯಾಸದಿಂದಾಗಿ ಮಕ್ಕಳನ್ನು ಪಡೆಯುವ ಸಾಧ್ಯತೆಗಳು ಬಹಳ ಕಡಿಮೆ. ಪಿಟ್ಯುಟರಿ, ಥೈರಾಯ್ಡ್ ಮತ್ತು ಟೆಸ್ಟೋಸ್ಟೆರಾನ್ ಹಾರ್ಮೋನುಗಳಲ್ಲಿನ ಏರಿಳಿತಗಳು ವೀರ್ಯ ಉತ್ಪಾದನೆಯ ಮೇಲೆ ಪರಿಣಾಮ ಬೀರಬಹುದು ಮತ್ತು ಬಂಜೆತನಕ್ಕೆ ಕಾರಣವಾಗಬಹುದು. ಬೊಜ್ಜು ಮತ್ತು ಮಧುಮೇಹ ಕೂಡ ಬಂಜೆತನಕ್ಕೆ ಕಾರಣವಾಗಬಹುದು.

ಇದನ್ನೂ ಓದಿ:
Women Health: ಪಿಸಿಓಎಸ್ ಎಂದರೇನು? ಇದು ಮಹಿಳೆಯರಲ್ಲಿ ಬಂಜೆತನದ ಸಮಸ್ಯೆಗೆ ಹೇಗೆ ಕಾರಣ ಎಂಬುದನ್ನು ತಿಳಿಯಿರಿ

Noni Fruit: ನೋಣಿ ಹಣ್ಣಿನ ಬಗ್ಗೆ ನಿಮಗೆ ತಿಳಿದಿದೆಯೇ? ಇದರ ಬೇರು, ಹಣ್ಣು ಮತ್ತು ಎಲೆ ಅನೇಕ ಆರೋಗ್ಯಕರ ಗುಣಗಳಿಂದ ಕೂಡಿದೆ