Women Health: ಗರ್ಭಿಣಿಯರಿಗೆ ಬಾಯಿಯಲ್ಲಿ ಕಹಿ ಅನುಭವಕ್ಕೆ ಕಾರಣ ಮತ್ತು ಪರಿಹಾರ ಕ್ರಮಗಳು

| Updated By: shruti hegde

Updated on: Aug 19, 2021 | 8:52 AM

ಗರ್ಭಾವಸ್ಥೆಯಲ್ಲಿ ಡಿಸ್ಜೂಸಿಯಾ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಡಿಸ್ಜೂಸಿಯಾ ಎಂದರೆ ಬಾಯಿಯಲ್ಲಿ ಕಹಿ ರುಚಿಯ ಅನುಭವವಾಗುತ್ತದೆ.

Women Health: ಗರ್ಭಿಣಿಯರಿಗೆ ಬಾಯಿಯಲ್ಲಿ ಕಹಿ ಅನುಭವಕ್ಕೆ ಕಾರಣ ಮತ್ತು ಪರಿಹಾರ ಕ್ರಮಗಳು
ಸಾಂದರ್ಭಿಕ ಚಿತ್ರ
Follow us on

ಪ್ರತಿ ಮಹಿಳೆಗೆ ಗರ್ಭಾವಸ್ಥೆಯ ಸಮಯ ಬಹಳ ವಿಶೇಷವಾಗಿದೆ. ಸಂತೋಷದಿಂದಿರುವ ಇಂತಹ ಸಮಯದಲ್ಲಿ ಮಹಿಳೆ ಎಲ್ಲಾ ತೊಂದರೆಗಳನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾಳೆ. ಗರ್ಭಧಾರಣೆಯ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಿಲ್ಲ. ಆದರೆ ಕೆಲವು ಮನೆಮದ್ದುಗಳನ್ನು ಬಳಸುವ ಮೂಲಕ ಕೆಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ.

ಗರ್ಭಾವಸ್ಥೆಯಲ್ಲಿ ಡಿಸ್ಜೂಸಿಯಾ ಸಮಸ್ಯೆ ಸಾಮಾನ್ಯವಾಗಿ ಕಾಡುತ್ತದೆ. ಡಿಸ್ಜೂಸಿಯಾ ಎಂದರೆ ಬಾಯಿಯಲ್ಲಿ ಕಹಿ ರುಚಿಯ ಅನುಭವವಾಗುತ್ತದೆ. ಆಹಾರ ರುಚಿಯೇ ಇಲ್ಲ ಕಹಿ ಎನಿಸುತ್ತದೆ. ಈ ಸಮಸ್ಯೆ ಸಾಮಾನ್ಯವಾಗಿ ಗರ್ಭಿಣಿಯಾದ ಮೂರು ತಿಂಗಳಲ್ಲಿ ಕಾಣಿಸಿಕೊಳ್ಳುತ್ತದೆ. ಸಮಯ ಕಳೆಯುತ್ತಿದ್ದಂತೆಯೇ ತಾನಾಗಿಯೇ ಈ ಸಮಸ್ಯೆ ಗುಣಮುಖವಾಗುತ್ತದೆ. ಈ ಸಮಸ್ಯೆಯ ಕುರಿತಾಗಿ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಆದರೆ ಡಿಸ್ಜೂಸಿಯಾ ಸಮಸ್ಯೆಗೆ ಕಾರಣಗಳು ಮತ್ತು ಪರಿಹಾರ ಕ್ರಮಗಳ ಬಗ್ಗೆ ತಿಳಿಯೋಣ.

ಕಾರಣ
ಈ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಹಾರ್ಮೋನುಗಳ ಬದಲಾವಣೆ. ವಿಶೇಷವಾಗಿ ಈಸ್ಟ್ರೋಜೆನ್ ಹಾರ್ಮೋನು. ಗರ್ಭಾವಸ್ಥೆಯಲ್ಲಿ ಈಸ್ಟ್ರೋಜೆನ್ ಮಟ್ಟದಲ್ಲಿನ ಬದಲಾವಣೆಗಳು ಸಮಸ್ಯೆಗೆ ಕಾರಣವಾಗಬಹುದು. ಇದರಿಂದ ಬಾಯಿಯಲ್ಲಿ ಕಹಿ ಅನುಭವವಾಗುತ್ತದೆ. ಕಡಿಮೆ ನೀರು ಕುಡಿಯುವುದರಿಂದ ಹಾಗೂ ಔಷಧಿಗಳನ್ನು ಸೇವಿಸುವುದರಿಂದ ಬಾಯಿಯ ರುಚಿ ಕೂಡ ಹದಗೆಡುತ್ತದೆ.

ಪರಿಹಾರ ಕ್ರಮಗಳು
ಬಾಯಿಯ ರುಚಿಯನ್ನು ಸುಧಾರಿಸಲು ದ್ರವ ಪದಾರ್ಥಗಳಾದ ಜ್ಯೂಸ್, ತೆಂಗಿನ ನೀರು, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸಿ. ಇದು ರುಚಿಯನ್ನು ಸುಧಾರಿಸುತ್ತದೆ ಮತ್ತು ದೇಹವು ಶಕ್ತಿಯನ್ನು ಪಡೆಯುತ್ತದೆ.

ಬಾಯಿ ಕಹಿ ಅನಿಸಿದರೆ ಮಾವು, ನಿಂಬೆ ರಸ, ಕಿತ್ತಳೆ, ಹುಳಿ ಪದಾರ್ಥಗಳನ್ನು ತೆಗೆದುಕೊಳ್ಳಬಹುದು. ನಿಂಬೆ ಉಪ್ಪಿನಕಾಯಿಯನ್ನು ಸಹ ಸ್ವಲ್ಪ ಸೇವಿಸಬಹುದು. ಇದು ಬಾಯಿಯ ರುಚಿಯನ್ನು ಸುಧಾರಿಸುತ್ತದೆ.

ಬಾಯಿಯನ್ನು ಆದಷ್ಟು ಸ್ವಚ್ಛವಾಗಿಟ್ಟುಕೊಳ್ಳಿ. ಆಹಾರವನ್ನು ತಿಂದ ಬಳಿಕವೇ ಬಾಯಿ ಮುಕ್ಕಳಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ.

ಏಲಕ್ಕಿ ಪುಡಿಯನ್ನು ಜೇನುತುಪ್ಪದಲ್ಲಿ ಬೆರೆಸಿ ಸೇವಿಸುವ ಮೂಲಕ ಬಾಯಿಯ ರುಚಿಯನ್ನು ಸುಧಾರಿಸಿಕೊಳ್ಳಬಹುದಾಗಿದೆ.

ಇದನ್ನೂ ಓದಿ:

Women Health: ತುಂಬಾ ತೆಳ್ಳಗಿದ್ದೇನೆ ಎಂಬ ಚಿಂತೆಯೇ? ದಪ್ಪಗಾಗಲು ಯುವತಿಯರಿಗಾಗಿ ಒಂದಿಷ್ಟು ಟಿಪ್ಸ್​

Women Health: ಯಾವುದೇ ಡಯಟ್​ ಇಲ್ಲದೇ ತೂಕ ಇಳಿಸಿಕೊಳ್ಳುವುದು ಹೇಗೆ? ಮಹಿಳೆಯರಿಗಾಗಿ ಇಲ್ಲಿದೆ ಸಲಹೆಗಳು

(Women Health know about remedies for dysgeusia problem bitter taste in mouth)