World AIDS Vaccine Day 2024: ಸೋಂಕಿತರೇ ಏಡ್ಸ್ ಬಗ್ಗೆ ಆತಂಕ ಬೇಡ, ಆತ್ಮಸ್ಥೈರ್ಯ ಇರಲಿ

| Updated By: ಅಕ್ಷಯ್​ ಪಲ್ಲಮಜಲು​​

Updated on: May 17, 2024 | 6:18 PM

ಮಾರಕ ರೋಗಗಳ ಸಾಲಿಗೆ ಸೇರಿರುವ ಏಡ್ಸ್ ಹೆಸರು ಕೇಳಿದ ಕೂಡಲೇ ಎಲ್ಲರು ನಡುಗುತ್ತಾರೆ. ಈ ರೋಗಕ್ಕೆ 1988ರಲ್ಲಿ ಮೊದಲ ಬಾರಿ ಲಸಿಕೆಯನ್ನು ಕಂಡುಹಿಡಿಯಲಾಗಿತ್ತು. ಅಂದಿನಿಂದ ಪ್ರತಿವರ್ಷ ಪ್ರಪಂಚದಾದ್ಯಂತ ಮೇ 18ರಂದು ವಿಶ್ವ ಏಡ್ಸ್‌ ಲಸಿಕಾ ದಿನವನ್ನಾಗಿ ಆಚರಿಸಲಾಗುತ್ತದೆ. ಹಾಗಾದ್ರೆ ಈ ಏಡ್ಸ್ ಲಸಿಕೆ ದಿನ ಅಥವಾ ಎಚ್ಐವಿ ಲಸಿಕೆ ಜಾಗೃತಿ ದಿನದ ಉದ್ದೇಶ ಹಾಗೂ ಮಹತ್ವದ ಬಗೆಗಿನ ಮಾಹಿತಿಯು ಇಲ್ಲಿದೆ.

World AIDS Vaccine Day 2024: ಸೋಂಕಿತರೇ ಏಡ್ಸ್ ಬಗ್ಗೆ ಆತಂಕ ಬೇಡ, ಆತ್ಮಸ್ಥೈರ್ಯ ಇರಲಿ
Follow us on

ಏಡ್ಸ್ ಎನ್ನುವ ಮಹಾಮಾರಿಯು ಒಂದು ಸಮಯದಲ್ಲಿ ಇಡೀ ವಿಶ್ವವನ್ನೇ ನಲುಗಿಸಿತ್ತು. ಸೋಂಕಿತ ವ್ಯಕ್ತಿಯನ್ನು ಮುಟ್ಟಿದ ತಕ್ಷಣ ಈ ರೋಗ ಹರಡುತ್ತದೆ ಎನ್ನುವ ತಪ್ಪು ಕಲ್ಪನೆಯಿತ್ತು. ಆದರೆ ರಕ್ತ ಹಾಗೂ ದೈಹಿಕ ಸಂಪರ್ಕದಿಂದ ಏಡ್ಸ್ ಹರಡುತ್ತದೆ. ಆದರೆ ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಏಡ್ಸ್ ಲಸಿಕೆ ದಿನದ ಇತಿಹಾಸ

ಮೇ 18, 1988 ರಂದು, ಮೊದಲ ವಿಶ್ವ ಏಡ್ಸ್ ಲಸಿಕೆ ದಿನವನ್ನು ಆಚರಿಸಲಾಯಿತು. ವಿಶ್ವ ಏಡ್ಸ್ ಲಸಿಕೆ ದಿನದ ಪರಿಕಲ್ಪನೆಯನ್ನು 1987ರಲ್ಲಿ ಅಂದಿನ ಅಮೆರಿಕಾ ಅಧ್ಯಕ್ಷ ಬಿಲ್‌ ಕ್ಲಿಂಟನ್‌ ತಮ್ಮ ಭಾಷಣದಲ್ಲಿ ಪ್ರಸ್ತಾಪನೆ ಮಾಡಿದರು. ಮೋರ್ಗಾನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ಇವರ ಭಾಷಣದಿಂದ ಸ್ಫೂರ್ತಿಗೊಂಡು ಲಸಿಕೆ ಕಂಡು ಹಿಡಿಯುವ ಕೆಲಸಕ್ಕೆ ಕೈ ಹಾಕಿದರು. ಈ ಮಹಾ ಮಾರಿಯನ್ನು ತೊಡೆದು ಹಾಕಲು ಲಸಿಕೆಯನ್ನು ತಯಾರಿಸಲು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಬಳಸುವುದರ ಪ್ರಾಮುಖ್ಯತೆಯ ಕುರಿತು ಭಾಷಣದಲ್ಲಿ ವಿವರಿಸಿದ್ದರು.

ಇದನ್ನೂ ಓದಿ: ಗತಕಾಲದ ವಸ್ತುಗಳ ಪ್ರದರ್ಶನಗಳ ತಾಣವೇ ‘ಈ ವಸ್ತು ಸಂಗ್ರಹಾಲಯ’

ವಿಶ್ವ ಏಡ್ಸ್ ಲಸಿಕೆ ದಿನದ ಮಹತ್ವ ಹಾಗೂ ಆಚರಣೆಗೆ ಹೇಗೆ?

ಎಚ್‌ಐವಿ ಸೋಂಕನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಎಲ್ಲ ಜನರಲ್ಲಿ ಅರಿವು ಮೂಡಿಸುವುದು, ಏಡ್ಸ್ ನಿರ್ಮೂಲನೆಯ ಕುರಿತು ಜಾಗೃತಿ ಮೂಡಿಸುವ ಉದ್ದೇಶವನ್ನು ಹೊಂದಿದೆ. ಈ ದಿನದಂದು ಹೆಚ್ ಐವಿ / ಏಡ್ಸ್ ಲಸಿಕೆ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತದ ಹಲವಾರು ಎನ್ ಜಿ ಒಗಳು ಹಾಗೂ ಸರ್ಕಾರಗಳು ವಿಭಿನ್ನ ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ