ಕುಡಗೋಲು ಕಣ ರೋಗದ ಜಾಗೃತಿ ದಿನ (ವರ್ಲ್ಡ್ ಸಿಕಲ್ ಸೆಲ್ ಜಾಗೃತಿ ದಿನ) ವನ್ನು ಪ್ರತಿ ವರ್ಷ ಜೂನ್ 19 ರಂದು ಆಚರಿಸಲಾಗುತ್ತದೆ. ಕುಡಗೋಲು ಕಣ ಕಾಯಿಲೆ (SCD) ಮತ್ತು ವಿಶ್ವಾದ್ಯಂತ ವ್ಯಕ್ತಿಗಳು, ಅವರ ಕುಟುಂಬಗಳು ಮತ್ತು ಸಮುದಾಯಗಳ ಮೇಲೆ ಅದರ ಪ್ರಭಾವದ ಬಗ್ಗೆ ಮತ್ತು ಕುಡಗೋಲು ಕಣಗಳ ಅಸ್ವಸ್ಥತೆ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. ಸಿಕಲ್ ಸೆಲ್ ಕಾಯಿಲೆ ಒಂದು ಆನುವಂಶಿಕ ರೋಗವಾಗಿದ್ದು, ಸಿಕಲ್ ಸೆಲ್ ಕಾಯಿಲೆ / ರಕ್ತಹೀನತೆ ಹಿಮೋಗ್ಲೋಬಿನ್ ಬೆಟಾ ಜೀನ್ ನಲ್ಲಿನ ರೂಪಾಂತರದಿಂದ ಉಂಟಾಗುತ್ತದೆ. ಸಾಮಾನ್ಯ ಹಿಮೋಗ್ಲೋಬಿನ್ ( HbA ) ಹೊಂದಿರುವ ಕೆಂಪು ರಕ್ತ ಕಣಗಳು ನಯವಾದ ಮತ್ತು ದುಂಡಾಗಿರುತ್ತವೆ. ಕುಡಗೋಲು ಕೋಶ ರಕ್ತಹೀನತೆಯ ರೋಗಿಗಳಲ್ಲಿ ಅಸಹಜ ಹಿಮೋಗ್ಲೋಬಿನ್ ಅಣುಗಳನ್ನು ಹೊಂದಿರುತ್ತಾರೆ ( HbS ) ಇದು ಅವರ ಕೆಂಪು ರಕ್ತ ಕಣಗಳನ್ನು ಕುಡಗೋಲು ಆಕಾರ ಅಥವಾ ಅರ್ಧಚಂದ್ರಾಕಾರದ ಆಕಾರವಾಗಿಸುತ್ತದೆ. ಈ ಆಕಾರದ ಕೆಂಪು ರಕ್ತ ಕಣಗಳು ಅಕಾಲಿಕವಾಗಿ ಸಾಯುತ್ತವೆ, ಬಳಿಕ ಇದು ರಕ್ತಹೀನತೆಗೆ ಕಾರಣವಾಗಬಹುದು. ಇದರಿಂದ ಕೆಂಪು ರಕ್ತ ಕಣಗಳು ರಕ್ತ ಮತ್ತು ಆಮ್ಲಜನಕದ ಪ್ರಮಾಣವನ್ನು ನಿಧಾನಗೊಳಿಸುವ ಸಣ್ಣ ರಕ್ತನಾಳಗಳಲ್ಲಿ ಸಿಲುಕುತ್ತವೆ, ಇದು ತೀವ್ರ ನೋವು, ಕಾಮಾಲೆ, ರಕ್ತಹೀನತೆ ಮತ್ತು ಪುನರಾವರ್ತಿತ ಸೋಂಕುಗಳಿಗೆ ಕಾರಣವಾಗುತ್ತದೆ.
ಪ್ರಪಂಚದಾದ್ಯಂತ ಪ್ರತಿ ವರ್ಷ ಸುಮಾರು 2, 75,000 ಶಿಶುಗಳು ಕುಡಗೋಲು ಕೋಶ ರಕ್ತಹೀನತೆಯಿಂದ ಜನಿಸುತ್ತಾರೆ. ಇದು ಭಾರತದಲ್ಲಿ ಪ್ರಮುಖ ಆರೋಗ್ಯ ಸಮಸ್ಯೆಯಾಗಿದ್ದು, ಹೆಚ್ಚಾಗಿ ಬುಡಕಟ್ಟು ಜನಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಚತ್ತಿಸ್ ಗಢ, ಒಡಿಶಾ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ರಾಜ್ಯಗಳಲ್ಲಿ ಹೆಚ್ಚು ಪ್ರಚಲಿತವಾಗಿದೆ, ಆಂಧ್ರಪ್ರದೇಶ ಮತ್ತು ತಮಿಳುನಾಡು ಹಾಗೂ ಕೇರಳದ ಕೆಲವು ಭಾಗಗಳಲ್ಲಿಯೂ ಕಂಡು ಬಂದಿದೆ.
ಇತಿಹಾಸ:
ವಿಶ್ವ ಕುಡಗೋಲು ಕಣ ರೋಗದ ಜಾಗೃತಿ ದಿನವು ಡಿಸೆಂಬರ್ 22, 2008 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾಯಿತು. ಈ ನಿರ್ಣಯವು ಕುಡಗೋಲು ಕೋಶ ರೋಗವನ್ನು ಜಾಗತಿಕ ಆರೋಗ್ಯ ಕಾಳಜಿಯೆಂದು ಗುರುತಿಸಿತು ಮತ್ತು ವಿಶ್ವಾದ್ಯಂತ ರೋಗದ ಬಗ್ಗೆ ಜಾಗೃತಿ ಮೂಡಿಸಲು ಜೂನ್ 19 ರಂದು ಅಧಿಕೃತ ದಿನವೆಂದು ಘೋಷಿಸಿತು. ಜನರಲ್ಲಿ ಈ ರೋಗದ ಬಗೆಗಿನ ತಿಳುವಳಿಕೆಯ ಕೊರತೆ, ಆರೋಗ್ಯ ಸೇವೆಗೆ ಸೀಮಿತ ಪ್ರವೇಶ ಮತ್ತು ಕುಡಗೋಲು ಕೋಶ ಕಾಯಿಲೆಗೆ ಸಂಬಂಧಿಸಿದ ಸಾಮಾಜಿಕ ಕಳಂಕವನ್ನು ಪರಿಹರಿಸಲು ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು. ಜೊತೆಗೆ ರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಮತ್ತು ಕುಟುಂಬಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಗಮನ ಸೆಳೆಯುವ ಮತ್ತು ಸುಧಾರಿತ ಆರೋಗ್ಯ ಸೇವೆಗಳು, ಸಂಶೋಧನೆ ಮತ್ತು ಬೆಂಬಲ ವ್ಯವಸ್ಥೆಗಳಿಗಾಗಿ ಸಲಹೆ ನೀಡುವ ಗುರಿಯನ್ನು ಇದು ಹೊಂದಿದೆ.
ಮಹತ್ವ:
ಈ ಜಾಗೃತಿ ದಿನದ ಉದ್ದೇಶವು ಕುಡಗೋಲು ಕಣ ಕಾಯಿಲೆ ಇರುವ ವ್ಯಕ್ತಿಗಳು ಎದುರಿಸುತ್ತಿರುವ ಸವಾಲುಗಳ ಬಗ್ಗೆ ಸಾರ್ವಜನಿಕರಿಗೆ ತಿಳಿಸುವುದು ಮತ್ತು ಸುಧಾರಿತ ಆರೋಗ್ಯ ಸೇವೆಗಳಿಗಾಗಿ ಸಲಹೆ ನೀಡುವುದು, ಆರಂಭಿಕ ರೋಗನಿರ್ಣಯ ಮತ್ತು ಪರಿಣಾಮಕಾರಿ ಚಿಕಿತ್ಸಾ ಆಯ್ಕೆಗಳು. ರೋಗದ ಮೇಲಿರುವ ಕಳಂಕ ಮತ್ತು ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡುವುದು, ಪೀಡಿತರಿಗೆ ಸಹಾನುಭೂತಿ, ಬೆಂಬಲ ಮತ್ತು ಧೈರ್ಯ ನೀಡುವುದು ಈ ದಿನದ ಉದ್ದೇಶವಾಗಿದೆ. ಕುಡಗೋಲು ಕೋಶ ರೋಗದ ಬಗ್ಗೆ ಜಾಗೃತಿ ಮತ್ತು ತಿಳುವಳಿಕೆಯನ್ನು ಹೆಚ್ಚಿಸುವ ಮೂಲಕ, ವಿಶ್ವ ಸಿಕಲ್ ಸೆಲ್ ಜಾಗೃತಿ ದಿನವು ಹೆಚ್ಚು ಅಂತರ್ಗತ ಸಮಾಜವನ್ನು ಬೆಳೆಸಲು ಶ್ರಮಿಸುತ್ತದೆ. ಕುಡಗೋಲು ಕೋಶ ಕಾಯಿಲೆ ಇರುವ ವ್ಯಕ್ತಿಗಳು ಜೀವನವನ್ನು ಸುಖಕರವಾಗಿ ಮುನ್ನಡೆಸಲು ಅಗತ್ಯವಾದ ಆರೈಕೆ ಮತ್ತು ಬೆಂಬಲ ನೀಡುವುದು. ಈ ಬಗ್ಗೆ ನಡೆಯುವ ಸಂಶೋಧನೆ ಮತ್ತು ಚಿಕಿತ್ಸೆಗಳನ್ನು ಪ್ರೋತ್ಸಾಹಿಸುವುದು.
ಇದನ್ನೂ ಓದಿ: World Brain Tumor Day 2023: ಬ್ರೈನ್ ಟ್ಯೂಮರ್ಗೆ ಕಾರಣವೇನು? ಇದರ ಲಕ್ಷಣಗಳು? ಇಲ್ಲಿದೆ ಮಾಹಿತಿ
ಆಚರಣೆ:
ವಿಶ್ವ ಸಿಕಲ್ ಸೆಲ್ ಜಾಗೃತಿ ದಿನದಂದು, ತಿಳುವಳಿಕೆ ಮತ್ತು ಒಗ್ಗಟ್ಟನ್ನು ಉತ್ತೇಜಿಸಲು ವಿವಿಧ ಚಟುವಟಿಕೆಗಳು ನಡೆಯುತ್ತವೆ. ಇವುಗಳಲ್ಲಿ ಶೈಕ್ಷಣಿಕ ಅಭಿಯಾನಗಳು, ಸಮುದಾಯ ಘಟನೆಗಳು, ನಿಧಿಸಂಗ್ರಹಣೆ ಮತ್ತು ರಕ್ತ ಡ್ರೈವ್ ಗಳು ಸೇರಿವೆ.
ಸಿಕಲ್ ಸೆಲ್ ಕಾಯಿಲೆ ಒಂದು ಆನುವಂಶಿಕ ರಕ್ತ ಅಸ್ವಸ್ಥತೆಯಾಗಿದ್ದು, ನೋವು, ಆಯಾಸ, ರಿಟಾರ್ಡ್ ಬೆಳವಣಿಗೆ, ದೇಹದ ನೋವು, ಎದೆ ನೋವು ಇವೆಲ್ಲವೂ ಈ ರೋಗದ ಲಕ್ಷಣಗಳಾಗಿವೆ. ಹಾಗಾದರೆ ಈ ರೋಗ ನಿರ್ಣಯ ಮಾಡುವುದು ಹೇಗೆ? ಆಸ್ಪತ್ರೆಗಳಲ್ಲಿ ಎಚ್ ಬಿ ಎಲೆಕ್ಟ್ರೋಫೋರೆಸಿಸ್, ಡಿಎನ್ ಎ ಪರೀಕ್ಷೆ ನಡೆಸುವುದು. ಜೊತೆಗೆ ಕ್ಯಾರಿಯರ್ ಸ್ಕ್ರೀನಿಂಗ್, ಹೊಸ ಜನನ ಸ್ಕ್ರೀನಿಂಗ್, ಪಿಎನ್ ಡಿ / ಪಿಜಿಡಿ ಮಾಡುವ ಮೂಲಕ ಈ ಖಾಯಿಲೆಯನ್ನು ತಡೆಗಟ್ಟಬಹುದಾಗಿದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ