ದೀಪಾವಳಿ ವಿಶೇಷ ತಿಂಡಿ ತಿನಸುಗಳು ಕಂಡಾಕ್ಷಣ ಬಾಯಲ್ಲಿ ನೀರೂರುವುದಂತು ಖಂಡಿತ. ಆ ಸಮಯದಲ್ಲಿ ಎಷ್ಟು ತಿನ್ನಬೇಕು? ಯಾವುದನ್ನು ಯೋಚನೆ ಮಾಡುವುದಿಲ್ಲ ಬದಲಾಗಿ ವರ್ಷದಲ್ಲಿ ಒಮ್ಮೆ ತಾನೇ ದೀಪಾವಳಿ ಎಂದು ಸಿಕ್ಕಿದ ಎಲ್ಲವನ್ನು ತಿನ್ನುವುಂಟು. ಆದರೆ ಇದೇನು ತಪ್ಪಲ್ಲ. ಹಬ್ಬದ ನಂತರ ದೇಹವನ್ನು ಸರಿಯಾದ ತೂಕದೊಂದಿಗೆ ಕಾಪಾಡುವುದು ಅಗತ್ಯವಾಗಿದೆ.
ಹಬ್ಬಗಳು ಮುಗಿತೆಂದರೆ ಸಾಕು ಸಂಭ್ರಮ ಸಡಗರಗಳಲ್ಲಿ ತುಂಬಾ ದಣಿದಿರುತ್ತೀರಿ ಮತ್ತು ವಿಶ್ರಾಂತಿ ಪಡೆಯಲು ಬಯಸುತ್ತೀರಿ, ಆದರೂ ಕೂಡ ದೇಹದ ಆರೋಗ್ಯಕ್ಕಾಗಿ ಸ್ವಲ್ಪ ಸಮಯ ಯೋಗಾಸನಗಳಿಗೆ ಸಮಯ ಮೀಸಲಿಡಿ.
ಈ ಯೋಗಾಸನಗಳು ದೀಪಾವಳಿಯ ನಂತರ ನಿಮ್ಮ ದೇಹ ಮತ್ತು ಮನಸ್ಸನ್ನು ಸಮಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ:
ಭುಜಂಗಾಸನ
ನೆಲಕ್ಕೆ ಮುಖ ಮಾಡಿ ಮಲಗಿ, ನಿಮ್ಮ ಅಂಗೈಗಳ ಸಹಾಯದಿಂದ ದೇಹವನ್ನು ನಿಧಾನವಾಗಿ ಮೇಲಕ್ಕೆತ್ತಿ, ಈ ಹಂತದಲ್ಲಿ ನಿಮ್ಮ ಅಂಗೈಗಳು ಮಾತ್ರ ದೇಹವನ್ನು ನೆಲವನ್ನು ಸ್ಪರ್ಶಿಸಲಿ ಮತ್ತು 30 ಸೆಕೆಂಡುಗಳ ಕಾಲ ಹಿಡಿದುಕೊಳ್ಳಿ ಮತ್ತು ದಿನಕ್ಕೆ 3-4 ಬಾರಿ ಪುನರಾವರ್ತಿಸಿ.
ಬಾಲಾಸನ
ಈ ಹಂತದಲ್ಲಿ ನಿಮ್ಮ ಕಾಲುಗಳನ್ನು ಮಡಚಿ ನೇರವಾಗಿ ಕುಳಿತುಕೊಳ್ಳಿ, ಈಗ ನಿಮ್ಮ ಪಾದಗಳು ಮೇಲ್ಮುಖವಾಗಿರಬೇಕು, ನಿಧಾನವಾಗಿ ನಿಮ್ಮ ದೇಹವನ್ನು ನೆಲದ ಮೇಲೆ ಮುಂದಕ್ಕೆ ಬಾಗಿಸಿ, ಈ ಹಂತದಲ್ಲಿ, ನಿಮ್ಮ ತೋಳುಗಳನ್ನು ಮುಂದಕ್ಕೆ ಚಾಚಬೇಕು, ಸಾಧ್ಯವಾದಷ್ಟು ನಿಮ್ಮ ಮುಖವು ನೆಲಕ್ಕೆ ಎದುರಾಗಿರಬೇಕು. ನಿಮ್ಮ ಅಂಗೈಗಳಂತೆಯೇ ನಿಮ್ಮ ಹಣೆ ಮತ್ತು ಅಂಗೈಗಳು ನೆಲವನ್ನು ತಾಗಬೇಕು. ಇದು ನಿಮಗೆ ಆರಾಮ ಮತ್ತು ವಿಶ್ರಾಂತಿಯನ್ನು ನೀಡುತ್ತದೆ. ಪ್ರತಿದಿನ 4ರಿಂದ 5ಬಾರಿ 10ರಿಂದ 15 ಸೆಕೆಂಡುಗಳ ಈ ಆಸನವನ್ನು ಮಾಡಿ.
ಅಧೋ ಮುಖ ಶ್ವಾನಸನ
ನೆಲಕ್ಕೆ ಮಖಮಾಡಿ ಮಲಗಿ ನಿಧಾನವಾಗಿ ನಿಮ್ಮ ದೇಹವನ್ನು ಮೇಲಕ್ಕೆತ್ತಿ ಮತ್ತು ನಿಮ್ಮ ದೇಹದೊಂದಿಗೆ ಪರ್ವತದಂತಹ ರಚನೆಯನ್ನು ಮಾಡಿ. ನಿಮ್ಮ ಅಂಗೈಗಳು ಭುಜದಿಂದ ದೂರದಲ್ಲಿರಬೇಕು ಮತ್ತು ಎರಡು ಪಾದಗಳನ್ನು ಪಕ್ಕದಲ್ಲಿ ಇರಿಸಬೇಕಾಗುತ್ತದೆ. ಈ ಹಂತದಲ್ಲಿ, ನೆಲವನ್ನು ಸ್ಪರ್ಶಿಸುವ ಏಕೈಕ ದೇಹದ ಭಾಗಗಳು ನಿಮ್ಮ ಅಂಗೈ ಮತ್ತು ಪಾದಗಳಾಗಿರಬೇಕು. ನಿಮ್ಮ ಮುಖವು ಒಳಮುಖವಾಗಿ ಮತ್ತು ಕೆಳಮುಖವಾಗಿರಬೇಕು ಮತ್ತು ದೇಹವು ತ್ರಿಕೋನದ ರೂಪದಲ್ಲಿರಬೇಕು. ಈ ಆಸನವನ್ನು ದಿನಕ್ಕೆ ಕನಿಷ್ಠ 10 ಬಾರಿ ಕೆಲವು ಸೆಕೆಂಡುಗಳ ಕಾಲ ಪುನರಾವರ್ತಿಸಿ.
ಮಾರ್ಜರ್ಯಾಸನ
ನಿಮ್ಮ ಮೊಣಕಾಲು ಮತ್ತು ಕೈಗಳ ಮೇಲೆ ಕುಳಿತುಕೊಂಡು, ಬೆನ್ನನ್ನು ಮೇಲಕ್ಕೆ ಎತ್ತಿ, ಪರ್ವತದಂತಹ ರಚನೆಯನ್ನು ರೂಪಿಸಿ, ನೀವು ಹೀಗೆ ಮಾಡುವಾಗ ನಿಮ್ಮ ಮುಖ ಕೆಳಮುಖವಾಗಿರಲಿ ಮತ್ತು ನಿಮ್ಮ ಬೆನ್ನನ್ನು ಒಳಕ್ಕೆ ತಳ್ಳಿರಿ. ನಂತರ ದೇಹವನ್ನು ಯು ರಚನೆಯಂತೆ ಒಂದು ನಿಮಿಷಗಳ ಕಾಲ ಪುನರಾವರ್ತಿಸಿ.
ಗೋಮುಖಾಸನ
ಮೊದಲು ನಿಮ್ಮ ಎಡಗಾಲುನ್ನು ಹಿಂದಕ್ಕೆ ಮಡಚಿ ಮತ್ತು ನಿಮ್ಮ ಪಾದವನ್ನು ನಿಮ್ಮ ಎಡ ಸೊಂಟಕ್ಕೆ ಹತ್ತಿರ ಇರಿಸಿ ಮುಂದೆ, ನಿಮ್ಮ ಎಡ ಕಾಲಿನ ಮೇಲೆ ನಿಮ್ಮ ಬಲಗಾಲನ್ನು ಅಡ್ಡಲಾಗಿ ಇರಿಸಿ. ಈಗ ನಿಮ್ಮ ಎರಡೂ ಕೈಗಳನ್ನು ನಿಮ್ಮ ಬೆನ್ನಿನ ಹಿಂದೆ ಇರಿಸಿ. ನಂತರ ಎಡಗೈಯಿಂದ ಬಲಗೈಯನ್ನು ಹಿಡಿದುಕೊಳ್ಳಿ. ಪ್ರಾರಂಭದಲ್ಲಿ ಇದು ಕಷ್ಟವೆನಿಸುತ್ತದೆ. ಪ್ರತಿ ಬಾರಿ ನಿಮ್ಮ ಬೆನ್ನುಮೂಳೆಯನ್ನು ನೇರವಾಗಿ ಇರಿಸಿ. 30 ರಿಂದ 60 ಸೆಕೆಂಡುಗಳ ಕಾಲ, ಆ ಭಂಗಿಯನ್ನು ಕಾಪಾಡಿಕೊಳ್ಳಿ.
ಇದನ್ನು ಓದಿ: ಕಟ್ಟಿದ ಮೂಗು ಗಂಟಲು ಕೆರೆತದಿಂದ ಸಾಕಷ್ಟು ಕಿರಿಕಿರಿ ಅನುಭವಿಸುತ್ತಿದ್ದರೆ ಇಲ್ಲಿದೆ ಕೆಲವು ಮನೆ ಮದ್ದುಗಳು
ನೀವು ದೀಪಾವಳಿಯ ನಂತರ ದಿನಗಳಲ್ಲಿ ಸರಿಯಾದ ತೂಕವನ್ನು ಕಾಪಡಿಕೊಳ್ಳದಿದ್ದರೆ ಕಾಲಕ್ರಮೇಣ ಕರುಳಿನ ಸಮಸ್ಯೆಗೆ ಕಾರಣವಾಗುತ್ತದೆ. ಆದ್ದರಿಂದ ಈ ಯೋಗಾಸನಗಳನ್ನು ನಿಮ್ಮ ದಿನಚರಿಯಲ್ಲಿ ಸೇರಿಸಿಕೊಳ್ಳುವುದು ಉತ್ತಮ.
(ಈ ಮೇಲಿನ ಲೇಖನವು ಟಿವಿ9ನ ಅಧಿಕೃತ ಮಾಹಿತಿಯಾಗಿರುವುದಿಲ್ಲ, ಸಾಮಾನ್ಯ ಮಾಹಿತಿಯನ್ನು ಒಳಗೊಂಡಿರುತ್ತದೆ.)
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: