ರಕ್ತದಾನ ಮಾಡುವ ಅಭ್ಯಾಸ ಇದೆಯೇ? ಇದರ ಹಿಂದಿನ ಆರೋಗ್ಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ

| Updated By: preethi shettigar

Updated on: Jan 15, 2022 | 3:57 PM

1818 ರಲ್ಲಿ ಬ್ರಿಟಿಷ್ ಪ್ರಸೂತಿ ತಜ್ಞ ಜೇಮ್ಸ್ ಬ್ಲಂಡೆಲ್ ಪ್ರಸವಾನಂತರದ ರಕ್ತಸ್ರಾವದ ಚಿಕಿತ್ಸೆಗಾಗಿ ರೋಗಿಗೆ ರಕ್ತವನ್ನು ವರ್ಗಾವಣೆ ಮಾಡಿ ಮಾನವನ ಮೊದಲ ಯಶಸ್ವಿ ರಕ್ತ ವರ್ಗಾವಣೆಗೆ ಮುನ್ನುಡಿ ಬರೆದರು.

ರಕ್ತದಾನ ಮಾಡುವ ಅಭ್ಯಾಸ ಇದೆಯೇ? ಇದರ ಹಿಂದಿನ ಆರೋಗ್ಯ ಪ್ರಯೋಜನಗಳ ಕುರಿತು ಇಲ್ಲಿದೆ ಮಾಹಿತಿ
ಪ್ರಾತಿನಿಧಿಕ ಚಿತ್ರ
Follow us on

ಮಾನವನ ಜೀವನದಲ್ಲಿ ಸಾಕಷ್ಟು ಆವಿಷ್ಕಾರಗಳಾಗಿವೆ. ಅದರಲ್ಲಿ ರಕ್ತದಾನ ಕೂಡ ಒಂದು. ಒಬ್ಬರು ತಮ್ಮ ರಕ್ತವನ್ನು ನೀಡಿ ಇನ್ನೊಬ್ಬರ ಜೀವ ಉಳಿಸುವ ಪ್ರಕ್ರಿಯೆ ಇದಾಗಿದೆ. ಮಾನವ ದೇಹದಲ್ಲಿ ರಕ್ತವು ಒಂದು ನಿರ್ದಿಷ್ಟ ರೀತಿಯಲ್ಲಿ ಪರಿಚಲನೆಯಾಗುತ್ತದೆ. 3 ಪ್ರಾಥಮಿಕ ರಕ್ತ ಗುಂಪುಗಳಿದ್ದು, ಆರ್​ಹೆಚ್ ಅಂಶಗಳು ರಕ್ತದಾನಕ್ಕೆ (blood donation) ಹೊಂದಿಕೊಳ್ಳಲು 1665 ರಲ್ಲಿ ಇಂಗ್ಲೆಂಡ್‌ನಲ್ಲಿ ಮೊದಲ ಬಾರಿಗೆ ಯಶಸ್ವಿ ರಕ್ತ ವರ್ಗಾವಣೆ ಮಾಡಲಾಗಿದೆ. ವೈದ್ಯ ರಿಚರ್ಡ್ ಲೋವರ್ ಇತರ ನಾಯಿಗಳಿಂದ (Dog) ರಕ್ತವನ್ನು ತೆಗೆದು, ಅಗತ್ಯವಿರುವ ನಾಯಿಗೆ ವರ್ಗಾವಣೆ ಮಾಡುವ ಮೂಲಕ ನಾಯಿಯ ಜೀವವನ್ನು ಉಳಿಸುವಲ್ಲಿ ಯಶಸ್ವಿಯಾದರು. 1818 ರಲ್ಲಿ ಬ್ರಿಟಿಷ್ ಪ್ರಸೂತಿ ತಜ್ಞ ಜೇಮ್ಸ್ ಬ್ಲಂಡೆಲ್ ಪ್ರಸವಾನಂತರದ ರಕ್ತಸ್ರಾವದ ಚಿಕಿತ್ಸೆಗಾಗಿ (Treatment) ರೋಗಿಗೆ ರಕ್ತವನ್ನು ವರ್ಗಾವಣೆ ಮಾಡಿ ಮಾನವನ ಮೊದಲ ಯಶಸ್ವಿ ರಕ್ತ ವರ್ಗಾವಣೆಗೆ ಮುನ್ನುಡಿ ಬರೆದರು.

ಅಂದಿನಿಂದ ರಕ್ತದಾನ ಪ್ರಕ್ರಿಯೆ ಆರಂಭವಾಗಿದ್ದು, ಇದನ್ನು ರೆಡ್ ಕ್ರಾಸ್ ಸೊಸೈಟಿಯು ಮುಂದಕ್ಕೆ ಕೊಂಡೊಯ್ಯಿತು. ಪ್ರತಿ ವರ್ಷ ಲಕ್ಷಾಂತರ ಜನರು ರಕ್ತದಾನ ಮಾಡುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಜನರಿಗೆ ರಕ್ತ ವರ್ಗಾವಣೆಯ ಅಗತ್ಯವಿದೆ. ಆದರೆ ಇನ್ನು ಕೂಡ ರಕ್ತದಾನ ಮಾಡಲು ಅನೇಕರು ಹಿಂಜರಿಯುತ್ತಾರೆ. ಆದರೆ ನೆನಪಿಡಿ ರಕ್ತ ಸ್ವಿಕರಿಸಿದವರಿಗೆ ಮಾತ್ರ ಅಲ್ಲ. ರಕ್ತದಾನ ಮಾಡುವವರಿಗೂ ಇದರಿಂದ ಅನೇಕ ಆರೋಗ್ಯಕರ ಪ್ರಯೋಜನವಿದೆ.

ರಕ್ತದಾನ ಮಾಡುವುದು ಆರೋಗ್ಯಕರ ಅಭ್ಯಾಸ ಎಂದು ನಿಮಗೆ ತಿಳಿದಿದೆಯೇ?

ಉಚಿತ ಆರೋಗ್ಯ ತಪಾಸಣೆ
ನೀವು ರಕ್ತದಾನ ಮಾಡಲು ಬಯಸಿದಾಗ ಅಗತ್ಯವಿರುವ ರೋಗಿಗಳಿಗೆ ಜೀವರಕ್ಷಕವನ್ನು ಒದಗಿಸಲು ನೀವು ಸಹಾಯ ಮಾಡುತ್ತೀರಿ. ಆದರೆ ನೀವು ಉಚಿತ ಆರೋಗ್ಯ ಪರೀಕ್ಷೆಯ ಹೆಚ್ಚುವರಿ ಪ್ರಯೋಜನವನ್ನು ಸಹ ಪಡೆಯುತ್ತೀರಿ. ರಕ್ತದಾನದ ಮೊದಲು ನಿಮ್ಮ ರಕ್ತದೊತ್ತಡ, ಹಿಮೋಗ್ಲೋಬಿನ್ ಮತ್ತು ನಾಡಿಮಿಡಿತವನ್ನು ಪರಿಶೀಲಿಸಲಾಗುತ್ತದೆ. ಅಲ್ಲದೇ ರೆಡ್​ ಕ್ರಾಸ್​ ರಕ್ರದಾನ ಕೇಂದ್ರವು ನಿಮ್ಮ ಆರೋಗ್ಯದ ಬಗ್ಗೆ ಮಾಹಿತಿ ಸಂಗ್ರಹಿಸಿಡುತ್ತದೆ. ಆ ಮೂಲಕ ನೀವು ರಕ್ತದ ಗುಣಮಟ್ಟವನ್ನು ಸಾಂದರ್ಭಿಕವಾಗಿ ಪರಿಶೀಲಿಸಬಹುದು.

ಆನ್‌ಲೈನ್‌ನಲ್ಲಿ ಸಿಗಲಿದೆ ನಿಮ್ಮ ಆರೋಗ್ಯ ಮಾಹಿತಿ
ನೀವು ಈ ಹಿಂದೆ ರಕ್ತದಾನ ಮಾಡಿದ್ದರೆ ನಿಮ್ಮ ಎಲ್ಲಾ ಮಾಹಿತಿ ಅಂದರೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿಗಳು ಆನ್​ಲೈನ್​ನಲ್ಲಿ ಲಭ್ಯವಿರುತ್ತದೆ. ಅಲ್ಲದೇ ಮುಂದೆ ನಿಮ್ಮ ರಕ್ತದ ಅವಶ್ಯಕತೆ ಇದ್ದಾಗಲು ಇತರರಿಗೆ ಸುಲಭವಾಗಿ ರಕ್ತದ ಲಭ್ಯತೆ ಬಗ್ಗೆ ಮಾಹಿತಿ ಸಿಗುತ್ತದೆ.

ಇತರರ ಜೀವ ಉಳಿಸಲು ಸಹಾಯ
ನೀವು ರಕ್ತದಾನ ಮಾಡಿದ ನಂತರ, ನಿಮ್ಮ ರಕ್ತವನ್ನು ಸಂಸ್ಕರಿಸಲಾಗುತ್ತದೆ ಮತ್ತು ಅದನ್ನು ಕೆಲವು ಪ್ರಮುಖ ಘಟಕಗಳಾಗಿ ಬೇರ್ಪಡಿಸಲಾಗುತ್ತದೆ. ಅಂದರೆ ಕೆಂಪು ರಕ್ತ ಕಣಗಳು, ಪ್ಲೇಟ್‌ಲೆಟ್‌ಗಳು ಮತ್ತು ಪ್ಲಾಸ್ಮಾ. ಆಸ್ಪತ್ರೆಯಲ್ಲಿ ಅಪಘಾತ ಅಥವಾ ಇನ್ನಿತರ ಸಂದರ್ಭದಲ್ಲಿ ಯಾರಿಗೆ ರಕ್ತದ ಅವಶ್ಯಕತೆ ಇರುತ್ತದೆ ಅಂತವರಿಗೆ ಇದನ್ನು ನೀಡುತ್ತಾರೆ. ಆ ಮೂಲಕ ನಿಮ್ಮ ರಕ್ತವು ಇತರರ ಪ್ರಾಣ ಉಳಿಸುತ್ತದೆ.

ಕಬ್ಬಿಣಕ್ಕೆ ಸಂಬಂಧಿಸಿದ ಸಮಸ್ಯೆಗೆ ಪರಿಹಾರ
ರಕ್ತದಾನ ಮಾಡುವುದರಿಂದ ನಿಮ್ಮ ದೇಹದಲ್ಲಿನ ಕಬ್ಬಿಣಕ್ಕೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ. ಇದು ನಿಮ್ಮ ಹೃದಯ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ. ಕೆಲವು ಜನರು ಕಬ್ಬಿಣದ ಅಪಾಯಕಾರಿ ಸಂಗ್ರಹವನ್ನು ಹೊಂದಬಹುದು. ಏಕೆಂದರೆ ಅವರು ಕಬ್ಬಿಣಾಂಶಬರಿತ ಆಹಾರವನ್ನು ಹೆಚ್ಚು ಸೇವಿಸುತ್ತಾರೆ. ರಕ್ತವನ್ನು ನೀಡುವ ಮೂಲಕ ನಿಮ್ಮ ದೇಹದ ಕಬ್ಬಿಣದ ಮಟ್ಟವನ್ನು ನೀವು ಕಡಿಮೆಗೊಳಿಸುತ್ತೀರಿ ಮತ್ತು ಉತ್ತಮ ರಕ್ತಪರಿಚಲನೆಗೆ ಅವಕಾಶ ಮಾಡಿಕೊಡುತ್ತೀರಿ.

ಕ್ಯಾನ್ಸರ್ ಮತ್ತು ಹೃದ್ರೋಗದ ಅಪಾಯ ಕಡಿಮೆ ಮಾಡುತ್ತದೆ
ಇತ್ತೀಚಿನ ಸಂಶೋಧನೆಯ ಪ್ರಕಾರ ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡುವುದರಿಂದ ಆ ವ್ಯಕ್ತಿಯು ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಕಡಿಮೆ ಮಾಡಬಹುದು. ನಿಯಮಿತ ಕ್ರಮದಲ್ಲಿ ರಕ್ತದಾನ ಮಾಡುವುದರಿಂದ ಕಬ್ಬಿಣದ ಮಟ್ಟವನ್ನು ಕಡಿಮೆ ಮಾಡಬಹುದು. ಇನ್ನು ರಕ್ತದಾನದಿಂದ ಒತ್ತಡವನ್ನು ಕಡಿಮೆ ಮಾಡಬಹುದು ಮತ್ತು ಹೃದಯಾಘಾತದ ಅಪಾಯವು ಕಡಿಮೆಯಾಗುತ್ತದೆ.

ಯಕೃತ್ತಿನ ಆರೋಗ್ಯಕ್ಕೆ ಉತ್ತಮ
ಲಿವರ್ ಡಿಸೀಸ್ (NAFLD) ಕಡಿಮೆ ಮಾಡಲು ರಕ್ತದಾನ ಸಹಾಯಕವಾಗಿದೆ ಎಂದು ರಾಸ್‌ಮುಸ್ಸೆನ್ ವಿಶ್ವವಿದ್ಯಾಲಯದ ವರದಿಯು ಹೇಳುತ್ತದೆ. ಅಂದರೆ ರಕ್ತದಾನವು ಯಕೃತ್ತಿನ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ದೂರ ಇಡುತ್ತದೆ.

ರಕ್ತದ ಕೊರತೆ
ಪ್ರಪಂಚದಾದ್ಯಂತ ರಕ್ತದ ಕೊರತೆಯಿದೆ. ಅಮೇರಿಕನ್ ರೆಡ್‌ಕ್ರಾಸ್ ವೆಬ್‌ಸೈಟ್ ಪ್ರಕಾರ ಯುನೈಟೆಡ್ ಸ್ಟೇಟ್ಸ್ ಒಂದು ದಶಕದಲ್ಲಿ ರಕ್ತ ದಾನಿಗಳು ಇಲ್ಲದೇ ಅಥವಾ ರಕ್ತ ಅವಶ್ಯಕತೆ ಇದ್ದಾಗ ರಕ್ತ ಸಿಗದೆ ಸಾಕಷ್ಟು ತೊಂದರೆಯಾಗಿದೆ. ವಿಶೇಷವಾಗಿ ಮಾರ್ಚ್ 2020 ರಿಂದ ವುಹಾನ್ (ಚೀನಾ) ನಲ್ಲಿ ಪ್ರಾರಂಭವಾದ ಕೊವಿಡ್​ 19 ಸೋಂಕು ಪ್ರಪಂಚದಾದ್ಯಂತ ಉಲ್ಬಣಗೊಂಡಾಗ ನಮ್ಮಲ್ಲಿ ಯಾರು ರಕ್ತದಾನಕ್ಕೆ ಮುಂದಾಗಲಿಲ್ಲ.

ಇದನ್ನೂ ಓದಿ:
ಕೊವಿಡ್ 19 ರೋಗಿಗಳ ಚಿಕಿತ್ಸೆ ವಿಚಾರದಲ್ಲಿ ಮತ್ತೆ ಎಡವಬೇಡಿ; ಬ್ಲ್ಯಾಕ್ ಫಂಗಸ್​ ಭೀಕರತೆ ನೆನಪಿಸಿ, ಕೇಂದ್ರ ಸರ್ಕಾರಕ್ಕೆ ಪತ್ರ ಬರೆದ ಆರೋಗ್ಯ ತಜ್ಞರು

Winter Tips: ರಾತ್ರಿ ಮಲಗುವಾಗ ಸ್ವೆಟರ್​ ಧರಿಸುವ ಅಭ್ಯಾಸ ಇದೆಯೇ? ಆರೋಗ್ಯ ಸಮಸ್ಯೆಗಳ ಬಗ್ಗೆ ಗಮನಿಸಿ