AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು

ಬಟ್ಟೆಯ  ಮಾಸ್ಕ್​​ನಲ್ಲಿ ಒಂದೇ ಪದರವಿರುವ ಕಾರಣ  ಸೋಂಕು ಸುಲಭವಾಗಿ ಹರಡುತ್ತದೆ. ಅಲ್ಲದೆ ಒಂದು ಬಾರಿ ಬಳಸಿದ ಬಟ್ಟೆಯ ಮಾಸ್ಕ್​ಅನ್ನು ಬಿಸಿನೀರಿನಿಂದ ಶುದ್ಧಗೊಳಿಸಿದರೆ ಮಾತ್ರ ಉಪಯೋಗಕ್ಕೆ ಯೋಗ್ಯವಾಗಿರುತ್ತದೆ.

ಓಮಿಕ್ರಾನ್​ ಆತಂಕ: ಬಟ್ಟೆಯ ಮಾಸ್ಕ್​ಗಳ ಬಳಕೆ ಬೇಡ ಎಂದ ತಜ್ಞರು
ಕೊರೊನಾ ಲಸಿಕೆ ಪಡೆದ ನಂತರ ಕೆಲವಷ್ಟು ಮಂದಿ ಸಾಮಾನ್ಯ ಅಡ್ಡಪರಿಣಾಮಗಳನ್ನು ಎದುರಿಸಿರುತ್ತಾರೆ. ಜ್ವರ, ಚಳಿ, ಗಂಟು ನೋವು ಇತ್ಯಾದಿಗಳು ಲಸಿಕೆ ಪಡೆದ ನಂತರ ಕಂಡುಬರಬಹುದು. ಇದು ನೀವು ಪಡೆದ ಲಸಿಕೆಯು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೂಡ ಸೂಚಿಸಿದಂತೆ. ಆದರೆ, ಪ್ರಸ್ತುತ ಕೊರೊನಾ ಲಸಿಕೆಯ ಬೂಸ್ಟರ್ ಶಾಟ್ ನೀಡಲಾಗುತ್ತಿದೆ. ಮೂರನೇ ಡೋಸ್ ಲಸಿಕೆ ಪಡೆದ ಬಳಿಕ ಒಂದು ಹೊಸ ಅಡ್ಡಪರಿಣಾಮ ಕೆಲವರಲ್ಲಿ ಕಂಡುಬಂದಿದೆ. ಈ ಹೊಸ ಲಕ್ಷಣವು ಈ ಮೊದಲ ಎರಡು ಡೋಸ್​ಗಳ ಅವಧಿಯಲ್ಲಿ ಇರಲಿಲ್ಲ ಎಂದು ತಿಳಿಸಲಾಗಿದೆ.
TV9 Web
| Updated By: Pavitra Bhat Jigalemane|

Updated on:Jan 15, 2022 | 6:03 PM

Share

ಕಳೆದ ಎರಡು ವರ್ಷಗಳಿಂದ ಕೊರೋನಾ ಕಾರಣದಿಂದ ಮಾಸ್ಕ್​ನೊಂದಿಗೇ ಜೀವನ ನಡೆಸುವಂತಾಗಿದೆ. ಕಳೆದ ಕೆಲವು ದಿನಗಳಿಂದ ಕೊರೋನಾಗಿಂತ 10 ಪಟ್ಟು ವೇಗವಾಗಿ  ಹರಡುವ ಓಮಿಕ್ರಾನ್​ ಆತಂಕ ಹೆಚ್ಚಿಸಿದೆ. ಹೀಗಾಗಿ  ಮಾಸ್ಕ್​ಅನ್ನು ಸರಿಯಾದ ವಿಧಾನದಲ್ಲಿ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಸೇರಿದಂತೆ  ಕೈಗಳನ್ನು ಸ್ಯಾನಿಟೈಸ್​ ಮಾಡಿಕೊಳ್ಳುವ ಅಭ್ಯಾಸವನ್ನು ಮರೆಯುವಂತಿಲ್ಲ. ಕೊರೋನಾ ಆರಂಭವಾದಾಗಿನಿಂದ ತಜ್ಞರು ನೀಡಿರುವ ಸಲಹೆ ಮಾಸ್ಕ್​ ಧರಿಸಿವುದು. ಈ ಕಾರಣದಿಂದ ಅಂಗಡಿಗಳಲ್ಲಿ ಮಾಸ್ಕ್​ಗೆ ಬೇಡಿಕೆ ಹೆಚ್ಚಿತ್ತು. ದರವೂ ದುಬಾರಿಯಾಗಿತ್ತು. ಹೀಗಾಗಿ  ಮನೆಗಳಲ್ಲೇ ಬಟ್ಟೆಯ ಮಾಸ್ಕ್​​ಅನ್ನು ತಯಾರಿಸಿ ಉಪಯೋಗಿಸುವ ಕ್ರಮ ಜಾರಿಗೆ ಬಂದಿತು.  ಆದರೆ ಈಗ ಓಮಿಕ್ರಾನ್​ ಎಲ್ಲೆಡೆ ವೇಗವಾಗಿ ಹರಡುತ್ತಿದೆ. ಇದೀಗ ಅಧ್ಯಯನದಲ್ಲಿ ಬಟ್ಟೆಯ ಮಾಸ್ಕ್​ ಸುರಕ್ಷಿತವಲ್ಲ ಎನ್ನುವ ಅಂಶ ಬಯಲಾಗಿದೆ.

ಬಟ್ಟೆಯ ಮಾಸ್ಕ್​ ಯಾಕೆ ಬಳಸಬಾರದು?

ಕೊರೋನಾ ಅಥವಾ ಓಮಿಕ್ರಾನ್​ ಸೋಂಕು ಉಸಿರು ಮತ್ತು ಮೂಗಿನ ದ್ರವದಿಂದ ಬರುತ್ತಿದೆ, ಹೀಗಾಗಿ ಮೂಗು ಮತ್ತು ಬಾಯಿಯನ್ನು ಸರಿಯಾದ ಕ್ರಮದಲ್ಲಿ ಮುಚ್ಚಿಕೊಳ್ಳುವುದು ಅಗತ್ಯವಾಗಿದೆ. ಬಟ್ಟೆಯ  ಮಾಸ್ಕ್​​ನಲ್ಲಿ ಒಂದೇ ಪದರವಿರುವ ಕಾರಣ  ಸೋಂಕು ಸುಲಭವಾಗಿ ಹರಡುತ್ತದೆ. ಅಲ್ಲದೆ ಒಂದು ಬಾರಿ ಬಳಸಿದ ಬಟ್ಟೆಯ ಮಾಸ್ಕ್​ಅನ್ನು ಬಿಸಿನೀರಿನಿಂದ ಶುದ್ಧಗೊಳಿಸಿದರೆ ಮಾತ್ರ ಉಪಯೋಗಕ್ಕೆ ಯೋಗ್ಯವಾಗಿರುತ್ತದೆ. ಒಂದೇ ಪದರದ ಬಟ್ಟೆಯ ಮಾಸ್ಕ್​ ಹಾಕಿಕೊಂಡು ಸೀನಿದಾಗ ಅಥವಾ ಕೆಮ್ಮಿದಾಗ ಸುಲಭವಾಗಿ ಹನಿಗಳು ಎದುರಿಗುರುವವರಿಗೆ ತಗುಲುತ್ತದೆ. ಹೀಗಾಗಿ ಬಟ್ಟೆಯ ಮಾಸ್ಕ್​ಗಳನ್ನು ಬಳಸುವುದನ್ನು ನಿಲ್ಲಿಸಿ ಎನ್ನುತ್ತಾರೆ ತಜ್ಞರು.

ನಿಮ್ಮ ಮಾಸ್ಕ್​ಗಳ ಬಗ್ಗೆ ತಿಳಿದುಕೊಳ್ಳಿ ಬಟ್ಟೆಯ ಮಾಸ್ಕ್​ ಸುಲಭವಾಗಿ ಸ್ವಚ್ಛಗೊಳಿಸಿ, ಮರುಬಳಕೆ ಮಾಡಬಹುದಾದ ಮಾಸ್ಕ್​ ಎಂದರೆ ಅದು ಬಟ್ಟೆಯ ಮಾಸ್ಕ್​. ನೀವು ಒಂದು ಬಾರಿ ಬಳಸಿ ಸ್ವಚ್ಛಗೊಳಿಸಿ ಮತ್ತೆ ಬಳಸಬಹುದು, ನೀವು ಜನಜಂಗುಳಿಯೆಡೆಗೆ, ಧೂಳಿರುವ ಪ್ರದೇಶಗಳಿಗೆ ಹೋಗುವಾಗ ಪ್ರಾಥಮಿಕ ಹಂತದ ಮುನ್ನೆಚ್ಚರಿಕ ಕ್ರಮವಾಗಿ ಬಟ್ಟೆಯ ಮಾಸ್ಕ್​ಅನ್ನು ಧರಿಸಿ. ಆದರೆ ನೆನಪಿಡಿ ಸೋಂಕಿನ ಲಕ್ಷಣಗಳು ಕಂಡುಬಂದರೆ ಬಟ್ಟೆಯ ಮಾಸ್ಕ್​ ಅನ್ನು ನಿರ್ಬಂಧಿಸಿ.

ಸರ್ಜಿಕಲ್​ ಮಾಸ್ಕ್​ ಒಂದು ಬಾರಿ ಮಾತ್ರ ಬಳಸಲು ಯೋಗ್ಯವಾದ ಮಾಸ್ಕ್​ ಎಂದರೆ ಸರ್ಜಿಕಲ್ ​ ಮಾಸ್ಕ್​. ಸರ್ಜಿಕಲ್​ ಮಾಸ್ಕ್​ ಅನ್ನು ಒಂದು ಬಾರಿ ತೊಳೆದರೆ ಅದರ ದಾರಗಳು ಸಡಿಲಗೊಂಡು ಬಳಕೆಗೆ ಯೋಗ್ಯವಾಗದ ರೀತಿಯಾಗುತ್ತದೆ. ಅಲ್ಲದೆ  ಸರ್ಜಕಲ್​ ಮಾಸ್ಕ್​ಗಳನ್ನು ಒಂದು ಬಾರಿ ನೀರಿಗೆ ಹಾಕಿದ ಮೇಲೆ ಅದರ ಪದರಗಳು ತೆಳ್ಳಗಾಗುತ್ತವೆ. ಇದರಿಂದ ಸೋಂಕು ಹರಡುವ ಅಪಾಯ ಹೆಚ್ಚಿರುತ್ತದೆ.

ಬಟ್ಟೆ ಮತ್ತು ಸರ್ಜಿಕಲ್​ ಮಾಸ್ಕ್​ ಈ ಮಾಸ್ಕ್​ಗಳನ್ನು ಚೆನ್ನಾಗಿ ಶೋಧಿಸಿದ ವಸ್ತುಗಳಿಂದ ನಿರ್ಮಿಸಲಾಗುತ್ತದೆ. ಆದರೆ ಇವು ದುರ್ಬಲವಾಗಿರುತ್ತದೆ. ಹೀಗಾಗಿ ಮರುಬಳಕೆಗೆ ಯೋಗ್ಯವಲ್ಲ. ಆದರೆ ಇವುಗಳು ಮೊದಲ ಬಳಕೆಯಲ್ಲಿ ಉತ್ತಮವಾಗಿ ರಕ್ಷಣೆ ನೀಡುತ್ತವೆ. ಎರಡು ಪದರಗಳಿಂದ ಕೂಡಿದ ಮಾಸ್ಕ್​ ಶೇ.75ರಷ್ಟು ಸುರಕ್ಷತೆ ನೀಡುತ್ತದೆ ಎನ್ನಲಾಗಿದೆ.

N95 ಮಾಸ್ಕ್​ ಅಮೇರಿಕನ್ ಕಾನ್ಫರೆನ್ಸ್ ಆಫ್ ಗವರ್ನಮೆಂಟ್ ಇಂಡಸ್ಟ್ರಿಯಲ್ ಹೈಜೀನಿಸ್ಟ್ಸ್ ಪ್ರಕಾರ N95 ಮಾಸ್ಕ್​ ಬಳಕೆಗೆ ಯೋಗ್ಯವಾದ ಮಾಸ್ಕ್​ ಆಗಿದೆ. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸದಿದ್ದರೂ N95 ಮಾಸ್ಕ್​ ಧರಿಸಿದವರಿಗೆ ಸೋಂಕು ಹರಡಲು ಎರಡೂವರೆ ಗಂಟೆಗಳ ಅವಧಿ ಬೇಕು. ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸಿದ್ದರೆ. ಸೋಂಕು ಇತರರಿಗೆ ಹರಡಲು 25 ಗಂಟೆಗಳ ಕಾಲ ಸಮಯ ಬೇಕು ಎಂದು ಹೇಳಿದೆ.  ಹೀಗಾಗಿ ಕೊರೋನಾ ಇರಲಿ, ಓಮಿಕ್ರಾನ್ ಇರಲಿ N95 ಮಾಸ್ಕ್​ ಸುರಕ್ಷತೆ ದೃಷ್ಟಿಯಿಂದ ಬಳಕಗೆ ಯೋಗ್ಯ ಎನ್ನುತ್ತಾರೆ ತಜ್ಞರು. ಇದನ್ನೂ ಓದಿ:

T-cells: ಟಿ- ಜೀವಕೋಶಗಳು ಕೊರೋನಾ ಸೋಂಕು ಹರಡುವುದನ್ನು ತಡೆಯಬಲ್ಲದೇ? ಅಧ್ಯಯನ ಹೇಳುವುದೇನು?

Published On - 6:01 pm, Sat, 15 January 22

ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಬಿಜೆಪಿಯಲ್ಲಿ ಮೊದಲ ಹಂತದ ಶುದ್ಧೀಕರಣ ಕಾರ್ಯ ಮುಗಿದಿದೆ: ಸದಾನಂದಗೌಡ
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಜಿಮ್​ನಲ್ಲಿ ವರ್ಕೌಟ್​ ಮಾಡುತ್ತಿರುವಾಗಲೇ ಹೃದಯಾಘಾತದಿಂದ ವ್ಯಕ್ತಿ ಸಾವು
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಶಾಸಕರ ಆಹ್ವಾನ ಬೇಕಿಲ್ಲ, ಮಂಡ್ಯ ಜನ ಜವಾಬ್ದಾರಿ ನೀಡಿದ್ದಾರೆ: ಹೆಚ್​ಡಿಕೆ
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಡಿಕೆಶಿ ಪರವೋ, ಸಿದ್ದರಾಮಯ್ಯ ಪರವೋ? ಲಕ್ಷ್ಮೀ ಹೆಬ್ಬಾಳ್ಕರ್ ಏನಂದರು ನೋಡಿ!
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಪ್ರಯತ್ನಗಳಿಗಿಂತ ಪ್ರಾರ್ಥನೆ ಫಲ ನೀಡುತ್ತದೆ ಎಂದು ನಂಬಿದ್ದೇನೆ: ಶಿವಕುಮಾರ್
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು
ಹೊತ್ತಿ ಉರಿದ ಮೈಸೂರು-ಉದಯ್​ಪುರ ಪ್ಯಾಲೇಸ್ ಕ್ವೀನ್ ಎಕ್ಸ್​ಪ್ರೆಸ್​ ರೈಲು