Turmeric side effects: ಅತಿಯಾದ ಅರಿಶಿಣ ಸೇವನೆಯು ದೇಹಕ್ಕೆ ಹಾನಿಕಾರಕ

| Updated By: preethi shettigar

Updated on: Jan 11, 2022 | 7:36 AM

ಹಲವಾರು ಪ್ರಯೋಜನಗಳನ್ನು ಹೊಂದಿದ್ದರೂ ಸಹ, ಅರಿಶಿಣವು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅರಿಶಿಣವನ್ನು ಮಿತಿಗಿಂತ ಹೆಚ್ಚು ಸೇವಿಸುವವರು ಈ ಬಗ್ಗೆ ಗಮನಹರಿಸಿ. ಅತಿಯಾದರೆ ಅರಿಶಿಣ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.

Turmeric side effects: ಅತಿಯಾದ ಅರಿಶಿಣ ಸೇವನೆಯು ದೇಹಕ್ಕೆ ಹಾನಿಕಾರಕ
ಸಾಂದರ್ಭಿಕ ಚಿತ್ರ
Follow us on

ಅರಿಶಿಣವು ಮಸಾಲೆ ಪದಾರ್ಥಗಳಲ್ಲಿ ಒಂದಾಗಿದೆ. ಇದು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಇದರ ಜತೆಗೆ ಅನೇಕ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಆ ಮೂಲಕ ನಮ್ಮನ್ನು ಅನೇಕ ರೋಗಗಳಿಂದ ದೂರವಿಡುತ್ತವೆ. ಇದನ್ನು ಆಯುರ್ವೇದ ಔಷಧಿ ಎಂದೂ ಕರೆಯುತ್ತಾರೆ. ಆಂಟಿಸೆಪ್ಟಿಕ್ ಜೊತೆಗೆ ಅರಿಶಿಣವು (Turmeric) ಕ್ಯಾಲ್ಸಿಯಂ, ವಿಟಮಿನ್ ಇ, ವಿಟಮಿನ್ ಸಿ, ಕಬ್ಬಿಣ, ಪ್ರೋಟೀನ್ ಮತ್ತು ಫೈಬರ್‌ನಂತಹ ಅನೇಕ ಪ್ರಮುಖ ಗುಣಗಳನ್ನು ಹೊಂದಿದೆ. ಈ ಎಲ್ಲಾ ಗುಣಲಕ್ಷಣಗಳು ನಮ್ಮನ್ನು ಅನೇಕ ರೀತಿಯ ಸೋಂಕುಗಳಿಂದ ದೂರವಿಡುತ್ತವೆ ಮತ್ತು ದೀರ್ಘಕಾಲ ಆರೋಗ್ಯವಾಗಿರಲು ಸಹಕಾರಿಯಾಗಿದೆ. ಆದರೆ ಹಲವಾರು ಪ್ರಯೋಜನಗಳನ್ನು ಹೊಂದಿದ್ದರೂ ಸಹ ಅರಿಶಿಣವು ಅನೇಕ ವಿಧಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಅರಿಶಿಣವನ್ನು ಮಿತಿಗಿಂತ ಹೆಚ್ಚು ಸೇವಿಸುವವರು ಈ ಬಗ್ಗೆ ಗಮನಹರಿಸಿ. ಅತಿಯಾದರೆ ಅರಿಶಿಣ ಅನೇಕ ದುಷ್ಪರಿಣಾಮಗಳನ್ನು ಬೀರುತ್ತದೆ.

ಹೊಟ್ಟೆಯ ಸಮಸ್ಯೆ
ಅರಿಶಿಣವನ್ನು ಅತಿಯಾಗಿ ಸೇವಿಸಿದರೆ, ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉದ್ಭವಿಸಬಹುದು. ಇದರಿಂದ ಹೊಟ್ಟೆ ಉರಿಯುವುದಲ್ಲದೆ ಅತಿಸಾರವೂ ಆಗುತ್ತದೆ. ಜತೆಗೆ ಹೊಟ್ಟೆಯಲ್ಲಿ ಊತ ಅಥವಾ ಸೆಳೆತ ಕೂಡ ಉಂಟಾಗುತ್ತದೆ. ಆದ್ದರಿಂದ ಅರಿಶಿಣವನ್ನು ಯಾವಾಗಲೂ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ಸಲಹೆ ನೀಡಲಾಗುತ್ತದೆ. ಹಾಗೆಯೇ ಕಾಮಾಲೆಯಂತಹ ಗಂಭೀರ ಕಾಯಿಲೆಯಿಂದ ಬಳಲುತ್ತಿರುವವರು ಅರಿಶಿಣವನ್ನು ತಿನ್ನಬಾರದು. ತಜ್ಞರ ಪ್ರಕಾರ, ಹೀಗೆ ಮಾಡುವುದರಿಂದ ಜಾಂಡೀಸ್ ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚು.

ಚರ್ಮದ ಸಮಸ್ಯೆ
ನೀವು ಮಿತಿಗಿಂತ ಹೆಚ್ಚು ಅರಿಶಿಣವನ್ನು ಸೇವಿಸಿದರೆ, ಇದರಿಂದ ಚರ್ಮದ ಸಮಸ್ಯೆಗಳು ಸಹ ನಿಮ್ಮನ್ನು ಕಾಡಬಹುದು. ಅರಿಶಿಣದ ಅತಿಯಾದ ಸೇವನೆಯು ಚರ್ಮದ ದದ್ದುಗಳಿಗೆ ಕಾರಣವಾಗುತ್ತದೆ. ಅರಿಶಿಣವು ಚರ್ಮಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದ್ದರೂ, ಅದನ್ನು ಸೀಮಿತ ಪ್ರಮಾಣದಲ್ಲಿ ಬಳಸುವುದು ಉತ್ತಮ. ಅಲ್ಲದೆ, ಅಲರ್ಜಿ ಸಮಸ್ಯೆ ಇರುವವರು ಕಡಿಮೆ ಅರಿಶಿಣವನ್ನು ಸೇವಿಸಬೇಕು.

ಕಿಡ್ನಿ ಸ್ಟೋನ್
ಹೊಟ್ಟೆಯಲ್ಲಿ ಮತ್ತು ಕಿಡ್ನಿಯಲ್ಲಿ ಕಲ್ಲಾಗುವ ಸಮಸ್ಯೆ ಇರುವವರು ಅರಿಶಿಣವನ್ನು ಸೇವಿಸುವುದನ್ನು ಕಡಿಮೆ ಮಾಡಬೇಕು. ಅರಿಶಿಣದಲ್ಲಿ ಕಂಡುಬರುವ ಅಂಶಗಳು ಕಲ್ಲುಗಳ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸಬಹುದು. ಆದ್ದರಿಂದ, ಇಂತಹ ಸ್ಥಿತಿಯಲ್ಲಿ ವೈದ್ಯರನ್ನು ಸಂಪರ್ಕಿಸದೆ ಅರಿಶಿಣವನ್ನು ಸೇವಿಸುವುದನ್ನು ತಪ್ಪಿಸಿ.

ರಕ್ತಸ್ರಾವ
ಮೂಗಿನಲ್ಲಿ ರಕ್ತಸ್ರಾವವಾಗುವ ಸಮಸ್ಯೆ ಇರುವವರು ಅರಿಶಿಣವನ್ನು ಅತಿಯಾಗಿ ಸೇವಿಸಬಾರದು. ಅರಿಶಿಣದ ಪರಿಣಾಮವು ಉಷ್ಣಾಂಶದಿಂದ ಕೂಡಿರುತ್ತದೆ. ಇದು ಮೂಗಿನಿಂದ ರಕ್ತಸ್ರಾವವಾಗುವುದಕ್ಕೆ ಕಾರಣವಾಗಬಹುದು.

ಇದನ್ನೂ ಓದಿ:
ವರ್ಕೌಟ್ ಮಾಡಲು ಸಮಯ ಸಿಗುತ್ತಿಲ್ಲವೇ? ಚಿಂತೆ ಬಿಡಿ ಆರೋಗ್ಯವಾಗಿರಲು ಈ ವಿಧಾನ ಅನುಸರಿಸಿ

ಮಾನಸಿಕ ಆರೋಗ್ಯ ಕೆಟ್ಟರೆ ಏನು ಮಾಡಬೇಕು? ಅಭಿಮಾನಿಗಳಿಗೆ ವಿಶೇಷ ಟಿಪ್ಸ್​ ನೀಡಿದ ಸಮಂತಾ