ಒಂದು ಕಾಲಿನ ಮೇಲೆ ಎಷ್ಟು ಸಮಯ ನಿಲ್ಲಬಹುದು?

| Updated By: ಅಕ್ಷಯ್​ ಪಲ್ಲಮಜಲು​​

Updated on: Nov 04, 2024 | 2:10 PM

ವಯಸ್ಸಾದಂತೆ ದೇಹದ ಬಲ ಕಡಿಮೆಯಾಗುತ್ತದೆ. ಒಂದೊಂದೇ ಕಾಯಿಲೆ ಆವರಿಸಿಕೊಳ್ಳಲು ಆರಂಭಿಸುತ್ತದೆ. ಹಾಗಾಗಿ ನಾವು ಆರೋಗ್ಯವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಹಾರದಲ್ಲಿ ಪಥ್ಯ ಮಾಡುವುದರ ಜೊತೆಗೆ ಕೆಲವು ಪರೀಕ್ಷೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ನೀವು ಆಸ್ಪತ್ರೆಗೆ ಹೋಗಿ ಮಾಡಬೇಕಾಗಿಲ್ಲ ಬದಲಾಗಿ ಮನೆಯಲ್ಲಿ ಅದರಲ್ಲಿಯೂ ನಿಮ್ಮ ಬಿಡುವಿನ ವೇಳೆಯಲ್ಲಿ ನಿಮ್ಮ ದೇಹದ ಸಾಮರ್ಥ್ಯವನ್ನು ನೋಡಬಹುದು. ಅದು ಹೇಗೆ? ಯಾವ ರೀತಿ ಮಾಡಬೇಕು? ಇದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಒಂದು ಕಾಲಿನ ಮೇಲೆ ಎಷ್ಟು ಸಮಯ ನಿಲ್ಲಬಹುದು?
Follow us on

ಸಾಮಾನ್ಯವಾಗಿ ನಾವು ಆರೋಗ್ಯವಾಗಿರಲು ಹಲವಾರು ರೀತಿಯಲ್ಲಿ ಪ್ರಯತ್ನಿಸುತ್ತೇವೆ. ಇತ್ತೀಚಿನ ದಿನಗಳಲ್ಲಿ ರೋಗ ಮುಕ್ತವಾಗಿ ಬದುಕುವುದು ಕೂಡ ಒಂದು ಸಾಧನೆಯಾಗಿದೆ. ಹಾಗಾಗಿ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದು ಅನಿವಾರ್ಯವಾಗಿದೆ. ವಯಸ್ಸಾದಂತೆ ದೇಹದ ಬಲ ಕಡಿಮೆಯಾಗುತ್ತದೆ. ಒಂದೊಂದೇ ಕಾಯಿಲೆ ಆವರಿಸಿಕೊಳ್ಳಲು ಆರಂಭಿಸುತ್ತದೆ. ಹಾಗಾಗಿ ನಾವು ಆರೋಗ್ಯವಾಗಿ ಇರುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಆಹಾರದಲ್ಲಿ ಪಥ್ಯ ಮಾಡುವುದರ ಜೊತೆಗೆ ಕೆಲವು ಪರೀಕ್ಷೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಇದನ್ನು ನೀವು ಆಸ್ಪತ್ರೆಗೆ ಹೋಗಿ ಮಾಡಬೇಕಾಗಿಲ್ಲ ಬದಲಾಗಿ ಮನೆಯಲ್ಲಿ ಅದರಲ್ಲಿಯೂ ನಿಮ್ಮ ಬಿಡುವಿನ ವೇಳೆಯಲ್ಲಿ ನಿಮ್ಮ ದೇಹದ ಸಾಮರ್ಥ್ಯವನ್ನು ನೋಡಬಹುದು. ಅದು ಹೇಗೆ? ಯಾವ ರೀತಿ ಮಾಡಬೇಕು? ಇದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.

ಹೈದರಾಬಾದ್ ಅಪೋಲೋ ಆಸ್ಪತ್ರೆಯ ನರರೋಗ ತಜ್ಞ ಡಾ. ಸುಧೀರ್ ಕುಮಾರ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಈ ವಿಷಯವಾಗಿ ಕೆಲವು ಮಾಹಿತಿ ಹಂಚಿಕೊಂಡಿದ್ದು ಈ ಬಗ್ಗೆ ಪ್ರತಿಯೊಬ್ಬರೂ ಕೂಡ ತಿಳಿದುಕೊಳ್ಳಬೇಕಾಗಿದೆ. ಅವರು ಹೇಳುವ ಪ್ರಕಾರ, ವಯಸ್ಸಾದಂತೆ ದೇಹದ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದರೆ ಸ್ನಾಯುವಿನ ಶಕ್ತಿಯನ್ನು ತಿಳಿಯಲು ಚಿಕ್ಕ ಪರೀಕ್ಷೆ ಮಾಡಬಹುದು. ವೈದ್ಯರು ನಿಮ್ಮ ಕೈ ಹಿಡಿದು ನಾಡಿ ನೋಡಿ ನಿಮ್ಮ ಆರೋಗ್ಯ ಹೇಳುವಂತೆ ಇದು ಕೂಡ ಸರಳವಾಗಿದೆ.+

ಏನು ಮಾಡಬೇಕು?

ನಿಮ್ಮ ಕಣ್ಣುಗಳನ್ನು ತೆರೆದಿಟ್ಟುಕೊಂಡು, ಒಂದು ಕಾಲಿನ ಮೇಲೆ ನಿಂತುಕೊಳ್ಳಬೇಕು. ನೀವು ಈ ರೀತಿ ಎಷ್ಟು ಸಮಯ ಅಂದರೆ ನಿಮ್ಮ ಬಳಿ ಎಷ್ಟು ನಿಮಿಷ ಅಥವಾ ಸೆಕೆಂಡುಗಳ ಕಾಲ ನಿಲ್ಲಲು ಸಾಧ್ಯವಿದೆ ಎಂಬುದನ್ನು ಪರೀಕ್ಷಿಸಬೇಕು. ಇದು ನಿಮಗೆ ಅತ್ಯಂತ ಸರಳ ಎನಿಸುವುದರ ಜೊತೆಗೆ, ಇದರಲ್ಲಿ ಏನಿದೆ? ಎಂದು ಅನಿಸಬಹುದು ಆದರೆ ಒಂದು ಕಾಲಿನ ಮೇಲೆ ನಿಲ್ಲುವ ಸಾಮರ್ಥ್ಯವು ಸ್ನಾಯುವಿನ ಶಕ್ತಿ, ಸಮತೋಲನ, ದೃಷ್ಟಿ ಮತ್ತು ಶ್ರವಣ ಶಕ್ತಿಯನ್ನು ಅವಲಂಬಿಸಿರುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಇದು ಸ್ನಾಯು ಶಕ್ತಿಯನ್ನು ಪರೀಕ್ಷಿಸುವುದಕ್ಕೆ ನಿಖರವಾದ ಪರೀಕ್ಷೆಯಾಗಿದೆ ಎಂದು ಡಾ. ಸುಧೀರ್ ಕುಮಾರ್ ಹೇಳುತ್ತಾರೆ.

ಇದನ್ನೂ ಓದಿ: ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ

ಸಾಮಾನ್ಯವಾಗಿ 30 ವರ್ಷದ ವ್ಯಕ್ತಿಯು 45 ಸೆಕೆಂಡುಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ನಿಲ್ಲಲು ಸಾಧ್ಯವಾಗುತ್ತದೆ. ಈ ಸಾಮರ್ಥ್ಯವು ವಯಸ್ಸು ಕಡಿಮೆಯಾದಂತೆ ಇಳಿಕೆಯಾಗುತ್ತದೆ. ನಿಮ್ಮ 50 ರ ವಯಸ್ಸಿನಲ್ಲಿ 40 ಸೆಕೆಂಡುಗಳು ಅಥವಾ ಅದಕ್ಕಿಂತ ಹೆಚ್ಚು. ಇನ್ನು 70 ವರ್ಷಗಳಲ್ಲಿ 20 ಸೆಕೆಂಡುಗಳು ಅಥವಾ ಅದಕ್ಕಿಂತ ಹೆಚ್ಚು ಹೊತ್ತು ನಿಂತರೆ ನಿಮ್ಮ ಸ್ನಾಯುವಿನ ಶಕ್ತಿ, ಸಮತೋಲನ ಸರಿಯಾಗಿದೆ ಎಂದರ್ಥ. ಹಾಗಾಗಿ ಇದನ್ನು ನೀವು ಪ್ರಯತ್ನಿಸಿ ನೋಡಬಹುದಾಗಿದೆ.

ಸೂಚನೆ: ಯಾವುದಾದರೂ ಆರೋಗ್ಯ ಸಮಸ್ಯೆ ಇರುವವರು ಇದನ್ನು ಮಾಡಿ ನೋಡುವ ಮೊದಲು ವೈದ್ಯರ ಸಲಹೆಯನ್ನು ಪಡೆದುಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ