AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ

ಕಡಿಮೆ ನಿದ್ರೆ ಮಾಡುವವರು ರಕ್ತದೊತ್ತಡ ಸಮಸ್ಯೆಯನ್ನು ಅವರೇ ಆಹ್ವಾನಿಸಿದಂತೆ. ಜೊತೆಗೆ ಕಾಲಾನಂತರದಲ್ಲಿ ಹೃದ್ರೋಗಗಳು ಬರುತ್ತವೆ. ನಿಮಗೆ ತಿಳಿದಿರಬಹುದು, ನಮ್ಮ ದೇಶದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ. ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಬೇಗನೆ ಏಳುತ್ತಾರೆ. ಈ ರೀತಿ ಮಾಡುವುದು ಮಹಿಳೆಯರ ಆರೋಗ್ಯದ ಮೇಲೆ ಅದರಲ್ಲಿಯೂ ಹೃದಯಕ್ಕೆ ಹಾನಿಕಾರಕವಾಗಿದೆ. ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಅಧಿಕ ರಕ್ತದೊತ್ತಡ ಅಪಾಯವನ್ನು ಶೇಕಡಾ 7 ರಷ್ಟು ಹೆಚ್ಚು ಮಾಡುತ್ತದೆ. ಅದೇ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಶೇಕಡಾ 11 ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Nov 02, 2024 | 5:22 PM

Share

ಪ್ರತಿಯೊಬ್ಬ ಮನುಷ್ಯನು ಆರೋಗ್ಯವಾಗಿರಲು ನಿದ್ರೆ ಬಹಳ ಮುಖ್ಯವಾಗುತ್ತದೆ. ರಾತ್ರಿ ನಿದ್ರೆ ಚೆನ್ನಾಗಿ ಆದಾಗ ದಿನ ಪೂರ್ತಿ ಉಲ್ಲಾಸದಿಂದ ಕೂಡಿರುತ್ತದೆ. ಉತ್ತಮ ನಿದ್ರೆ ಅದರಲ್ಲಿಯೂ ವಿಶೇಷವಾಗಿ ರಾತ್ರಿಯ ನಿದ್ದೆ ನಮ್ಮ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಹೃದಯರಕ್ತನಾಳದ ಕಾಯಿಲೆಗಳ ಅಪಾಯವನ್ನು ಸಹ ಕಡಿಮೆ ಮಾಡುತ್ತದೆ. ಇತ್ತೀಚಿನ ಸಂಶೋಧನೆಯ ಪ್ರಕಾರ, ಕಡಿಮೆ ಮಲಗುವುದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಹೆಚ್ಚಿಸುತ್ತದೆ ಎಂದು ತೋರಿಸಿಕೊಟ್ಟಿದೆ. ಇದು ಕ್ರಮೇಣ ಹೃದಯದ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. ಈ ಅಧ್ಯಯನದ ಪ್ರಕಾರ, ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಆರೋಗ್ಯವನ್ನು ಹಾಳು ಮಾಡಲು ಮೂಲ ಕಾರಣವಾಗುತ್ತದೆ.

ನಿಮ್ಮ ಹೃದಯದ ಆರೋಗ್ಯ ನಿಮ್ಮ ಕೈಯಲ್ಲಿದೆ. ರಾತ್ರಿ ಚೆನ್ನಾಗಿ ನಿದ್ರೆ ಮಾಡಿದರೆ ನಿಮ್ಮ ಜೀವಿತಾವಧಿ ಹೆಚ್ಚಾಗುತ್ತದೆ ಹೃದ್ರೋಗಗಳು ಬರುವುದಿಲ್ಲ ಎಂಬುದು ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಕಡಿಮೆ ನಿದ್ರೆ ಮಾಡುವವರು ರಕ್ತದೊತ್ತಡ ಸಮಸ್ಯೆಯನ್ನು ಅವರೇ ಆಹ್ವಾನಿಸಿದಂತೆ. ಜೊತೆಗೆ ಕಾಲಾನಂತರದಲ್ಲಿ ಹೃದ್ರೋಗಗಳು ಬರುತ್ತವೆ. ನಿಮಗೆ ತಿಳಿದಿರಬಹುದು, ನಮ್ಮ ದೇಶದಲ್ಲಿ ಮಹಿಳೆಯರು ಪುರುಷರಿಗಿಂತ ಕಡಿಮೆ ನಿದ್ರೆ ಮಾಡುತ್ತಾರೆ. ರಾತ್ರಿ ತಡವಾಗಿ ಮಲಗಿ ಬೆಳಿಗ್ಗೆ ಬೇಗನೆ ಏಳುತ್ತಾರೆ. ಈ ರೀತಿ ಮಾಡುವುದು ಮಹಿಳೆಯರ ಆರೋಗ್ಯದ ಮೇಲೆ ಅದರಲ್ಲಿಯೂ ಹೃದಯಕ್ಕೆ ಹಾನಿಕಾರಕವಾಗಿದೆ. ಏಳು ಗಂಟೆಗಳಿಗಿಂತ ಕಡಿಮೆ ನಿದ್ರೆ ಅಧಿಕ ರಕ್ತದೊತ್ತಡ ಅಪಾಯವನ್ನು ಶೇಕಡಾ 7 ರಷ್ಟು ಹೆಚ್ಚು ಮಾಡುತ್ತದೆ. ಅದೇ ಐದು ಗಂಟೆಗಳಿಗಿಂತ ಕಡಿಮೆ ನಿದ್ರೆ ಶೇಕಡಾ 11 ರಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.

ಆರೋಗ್ಯಕರ ಹೃದಯಕ್ಕೆ ಏಳರಿಂದ ಎಂಟು ಗಂಟೆಗಳ ನಿದ್ರೆ ಉತ್ತಮ ಎಂದು ವಿಜ್ಞಾನಿಗಳು ಹೇಳುತ್ತಾರೆ. ಆದರೆ ನಿದ್ರೆಯಲ್ಲಿ ಆಗಾಗ ಎಚ್ಚರಗೊಳ್ಳುವುದು, ಕಳಪೆ ನಿದ್ರೆಯು ಅಧಿಕ ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸುತ್ತದೆ. ಇದು 16 ಅಧ್ಯಯನಗಳಲ್ಲಿ ಬಹಿರಂಗವಾಗಿದೆ. ಈ ಅಧ್ಯಯನವು ಕಳೆದ ಐದು ವರ್ಷಗಳಲ್ಲಿ ಆರು ದೇಶಗಳಿಂದ ಒಂದು ದಶಲಕ್ಷಕ್ಕೂ ಹೆಚ್ಚು ಜನರಿಂದ ಸಂಗ್ರಹಿಸಿದ ಡೇಟಾವನ್ನು ಪರಿಶೀಲಿಸಿದೆ. ಕಡಿಮೆ ನಿದ್ರೆ ಮಾಡುವವರು ಅಧಿಕ ರಕ್ತದೊತ್ತಡದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಕಂಡುಬಂದಿದೆ. ಅಲ್ಲದೆ ಈ ಅಧ್ಯಯನ ಹೇಳುವ ಪ್ರಕಾರ, ನೀವು ಕಡಿಮೆ ನಿದ್ರೆ ಮಾಡಿದರೆ, ಭವಿಷ್ಯದಲ್ಲಿ ಅಧಿಕ ರಕ್ತದೊತ್ತಡ ಉಂಟಾಗುವ ಸಾಧ್ಯತೆಗಳು ಹೆಚ್ಚಾಗುತ್ತವೆ. ಆದ್ದರಿಂದ, ಪ್ರತಿದಿನ ಏಳರಿಂದ ಎಂಟು ಗಂಟೆಗಳ ನಿದ್ರೆ ನಿಮ್ಮ ಹೃದಯದ ಆರೋಗ್ಯಕ್ಕೆ ಒಳ್ಳೆಯದು. ಅಂತೆಯೇ, ಮಧುಮೇಹ ಮತ್ತು ಧೂಮಪಾನವು ಅಧಿಕ ರಕ್ತದೊತ್ತಡದ ಅಪಾಯವನ್ನು ಶೇಕಡಾ 20 ರಷ್ಟು ಹೆಚ್ಚಿಸುತ್ತದೆ.

ಜನರ ನಿದ್ರೆ ಏಕೆ ಕಡಿಮೆಯಾಗುತ್ತದೆ?

*ಕಳಪೆ ಜೀವನಶೈಲಿ, ತಡರಾತ್ರಿಯವರೆಗೆ ಎಚ್ಚರವಾಗಿರುವುದು

*ರಾತ್ರಿಯಿಡೀ ಮೊಬೈಲ್ ಮತ್ತು ಟಿವಿ ನೋಡುವ ಅಭ್ಯಾಸವು ನಿಮ್ಮ ನಿದ್ರೆಗೆ ಭಂಗ ತರಬಹುದು.

*ಧೂಮಪಾನ ಮತ್ತು ಮದ್ಯಪಾನವು ನಿದ್ರೆಯ ಸಮಸ್ಯೆಗಳನ್ನು ಉಂಟುಮಾಡಬಹುದು.

*ಆತಂಕ, ಖಿನ್ನತೆ ಮತ್ತು ಸ್ಲೀಪ್ ಅಪ್ನಿಯಾ ಸಮಸ್ಯೆಗಳು ನಿದ್ರೆಯಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತವೆ.

*ರಾತ್ರಿ ಪಾಳಿಯಲ್ಲಿ ಅತಿಯಾಗಿ ತಿನ್ನುವುದು ಉತ್ತಮ ನಿದ್ರೆಗೆ ಅಡ್ಡಿಯಾಗುತ್ತದೆ.

ಇದನ್ನೂ ಓದಿ: ದಿನನಿತ್ಯ ಪೂಜೆಗೆ ಬಳಸುವ ಕರ್ಪೂರ ಅಸಲಿಯೇ? ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಟಿಪ್ಸ್

ನಿಮ್ಮ ನಿದ್ರೆಯನ್ನು ಸುಧಾರಿಸುವುದು ಹೇಗೆ?

*ರಾತ್ರಿ ಸಮಯದಲ್ಲಿ ಲಘು ಆಹಾರವನ್ನು ತೆಗೆದುಕೊಳ್ಳಬೇಕು

*ರಾತ್ರಿಯಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡಬೇಡಿ

*ತಡರಾತ್ರಿಯ ವರೆಗೆ ಮೊಬೈಲ್ ಅಥವಾ ಟಿವಿ ನೋಡಬೇಡಿ

*ಒತ್ತಡ ಕಡಿಮೆ ಮಾಡಿಕೊಳ್ಳಿ

*ರಾತ್ರಿ ಬೇಗನೆ ಮಲಗುವ ಅಭ್ಯಾಸವನ್ನು ರೂಢಿಸಿಕೊಳ್ಳಿ

*ಮಲಗುವಾಗ ದೀಪಗಳನ್ನು ಮಸುಕಾಗಿಸುವುದು, ಲಘು ಸಂಗೀತವನ್ನು ನುಡಿಸುವುದು, ಉತ್ತಮ ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಬುದ್ಧಿ ಕಲಿಯುತ್ತಿಲ್ಲ ಗಿಲ್ಲಿ, ಕಾವ್ಯಾಗಾಗಿ ಸ್ಪಂದನಾಗೆ ಅನ್ಯಾಯ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಖಾಸಗಿ ಬಸ್​​ಗಳ ನಡುವೆ ರೇಸ್​​: ಕೂದಲೆಳೆ ಅಂತರದಲ್ಲಿ ತಪ್ಪಿದ ದೊಡ್ಡ ಅನಾಹುತ
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ಕೇರಳ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟ ಡಿಸಿಎಂ ಡಿಕೆ ಶಿವಕುಮಾರ್
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ವಿದ್ಯಾರ್ಥಿಗಳ ಕೈಯಲ್ಲಿ ಕಾರು ತೊಳೆಸಿದ ಶಿಕ್ಷಕ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ತೆಲಂಗಾಣದ ಹಾಸ್ಟೆಲ್​ನಲ್ಲಿ ವಿದ್ಯಾರ್ಥಿನಿಯ ಮೇಲೆ ವಾರ್ಡನ್ ದರ್ಪ
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಮಾಳು, ಸೂರಜ್ ಎಲಿಮಿನೇಷನ್ ಬಗ್ಗೆ ರಕ್ಷಿತಾಗೆ ಮೊದಲೇ ಗೊತ್ತಿತ್ತು?
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಹೊಸ ವರ್ಷಕ್ಕೆ ಶುಭಸುದ್ದಿ: ಫಲಾನುಭವಿಗಳ ಖಾತೆಗೆ ಬಂದ ಗೃಹಲಕ್ಷ್ಮಿ
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಡಿಕಾಕ್ ಸಿಡಿಲಬ್ಬರ... ಸನ್​ರೈಸರ್ಸ್ ತಂಡಕ್ಕೆ ಬೋನಸ್ ಪಾಯಿಂಟ್
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಹೊಸ ವರ್ಷ ಸ್ವಾಗತಕ್ಕೆ ಬೆಂಗಳೂರು ಸಜ್ಜು: ಪಬ್​ಗಳಲ್ಲಿ ಹೇಗಿದೆ ಸುರಕ್ಷತೆ?
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ
ಮಂತ್ರಾಲಯದ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ