World Jellyfish Day 2024: ಇಂದು ವಿಶ್ವ ಜೆಲ್ಲಿ ಫಿಶ್ ದಿನ; ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ

ಮೆದುಳು ಮತ್ತು ಹೃದಯವೇ ಇಲ್ಲದ ಜೆಲ್ಲಿ ಮೀನುಗಳು ಕೂಡಾ ಒಂದು ಬಗೆಯ ಸಮುದ್ರ ಜೀವಿ. ಇವುಗಳು ಸಾಗರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಇಂತಹ ಅದ್ಭುತ ಜೀವಿಗಳ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಲು ನವೆಂಬರ್ 03 ರಂದು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೆಲ್ಲಿ ಮೀನುಗಳಿಗೆ ಸಂಬಂಧಿಸಿದ ಕೆಲವು ಕೆಲವು ಕೂತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯಿರಿ.

World Jellyfish Day 2024: ಇಂದು ವಿಶ್ವ ಜೆಲ್ಲಿ ಫಿಶ್ ದಿನ; ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯಿರಿ
World Jellyfish Day
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on:Nov 03, 2024 | 10:14 AM

ಸಮುದ್ರದಲ್ಲಿ ಹಲವಾರು ಬಗೆಯ ಸಾಗರ ಜೀವಿಗಳಿವೆ. ಮೆದುಳು ಮತ್ತು ಹೃದಯವೇ ಇಲ್ಲದ ಈ ಜೀವಿಗಳು ಸಾಗರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಬಹು ಮುಖ್ಯ ಪಾತ್ರ ವಹಿಸುತ್ತದೆ. ಹೌದು ಈ ಜೀವಿಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್ ಆಗಿವೆ. ಅಂದರೆ ಇವು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಹಾಗಾಗಿ ಜೆಲ್ಲಿ ಮೀನುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಪರಿಸರ ವ್ಯವಸ್ಥೆಯಲ್ಲಿ ಅವುಗಳು ವಹಿಸುವ ಪಾತ್ರದ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲು ನವೆಂಬರ್ 3 ರಂದು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ. ಈ ವಿಶೇಷ ದಿನದಂದು ಜೆಲ್ಲಿ ಮೀನುಗಳಿಗೆ ಸಂಬಂಧಿಸಿದ ಕೆಲವು ಕೆಲವು ಕೂತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯಿರಿ

ಜೆಲ್ಲಿ ಫಿಶ್ ದಿನದ ಇತಿಹಾಸ:

ಜೆಲ್ಲಿ ಫಿಶ್ ಗಳು ಹೆಚ್ಚಾಗಿ ದಕ್ಷಿಣ ಗೋಳಾರ್ಧದಲ್ಲಿನ ಸಮುದ್ರದಲ್ಲಿ ವಾಸಿಸುತ್ತವೆ. ಆದರೆ ಹವಾಮಾನವು ಬದಲಾಗುತ್ತಿದ್ದಂತೆ ಜೆಲ್ಲಿ ಫಿಶ್ಗಳು ದಕ್ಷಿಣದಿಂದ ಉತ್ತರ ಗೋಳಾರ್ಧದ ಕಡೆಗೆ ವಲಸೆ ಹೋಗುತ್ತವೆ. ದಕ್ಷಿಣ ಗೋಳಾರ್ಧ ಭಾಗದಲ್ಲಿ ನವೆಂಬರ್ ತಿಂಗಳಲ್ಲಿ ವಸಂತಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಆಗುವಂತಹ ಹವಮಾನ ಬದಲಾವಣೆಯ ಕಾರಣದಿಂದಾಗಿ ಜೆಲ್ಲಿ ಮೀನುಗಳು ದಕ್ಷಿಣ ಗೋಳಾರ್ಧದಿಂದ ಉತ್ತರ ಗೋಳಾರ್ಧದ ಸಮುದ್ರ ತೀರಕ್ಕೆ ವಲಸೆ ಹೋಗುತ್ತವೆ. ಈ ಕಾರಣದಿಂದಾಗಿ ನವೆಂಬರ್ 2014 ರಿಂದ ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಬೇಕು ಎಂದು ತೀರ್ಮಾನಿಸಲಾಯಿತು. ಮತ್ತು ಜೆಲ್ಲಿ ಮೀನುಗಳ ಅಧ್ಯಯನಕ್ಕೆ ಮಹತ್ವದ ಕೊಡುಗೆ ನೀಡಿದ ಜರ್ಮನ್ ಜೀವಶಾಸ್ತ್ರಜ್ಞ ಡಾ. ಅರ್ನ್ಸ್ಟ್ ಹೆಕೆಲ್ ಅವರ ಜನ್ಮದಿನವಾದ ನವೆಂಬರ್ 3 ನೇ ತಾರೀಕನ್ನು ಆಯ್ಕೆ ಮಾಡಲಾಯಿತು. ಅಂದಿನಿಂದ ಪ್ರತಿವರ್ಷ ಈ ದಿನವನ್ನು ನವೆಂಬರ್ ತಿಂಗಳ 3 ನೇ ತಾರೀಕಿನಂದು ಆಚರಿಸಲಾಗುತ್ತದೆ.

ವಿಶ್ವ ಜೆಲ್ಲಿ ಫಿಶ್ ದಿನದ ಮಹತ್ವ:

ಜೆಲ್ಲಿ ಮೀನುಗಳು ಸಮುದ್ರ ಪರಿಸರ ವ್ಯವಸ್ಥೆಯನ್ನು ಸಮತೋಲನದಲ್ಲಿಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಶೇಷವಾಗಿ ಈ ಮೀನುಗಳು ಸಮುದ್ರದಲ್ಲಿನ ಫಿಲ್ಟರ್ ಫೀಡರ್ ಆಗಿವೆ. ಅಂದರೆ ಈ ಮೀನು ಸಮುದ್ರದಲ್ಲಿ ತೇಳುತ್ತಿರುವ ಪ್ಲ್ಯಾಂಕ್ಟನ್ ಮತ್ತು ಇತರ ಜೀವಿಗಳನ್ನು ತಿನ್ನುವ ಮೂಲಕ ಸಾಗರದ ನೀರನ್ನು ಸ್ವಚ್ಛವಾಗಿರಿಸಲು ಸಹಾಯ ಮಾಡುತ್ತವೆ. ಅಲ್ಲದೆ ಇವುಗಳು ಸಂಶೋಧನೆಗೆ ಒಳಪಡುವ ಪ್ರಮುಖ ಸಮುದ್ರ ಜೀವಿಯಾಗಿದೆ. ಹೆಚ್ಚಾಗಿ ಚೀನಾದಲ್ಲಿ ಇವುಗಳನ್ನು ಆಹಾರ ರೂಪದಲ್ಲಿ ಸೇವಿಸಲಾಗುತ್ತದೆ ಮತ್ತು ಹಲವಾರು ಸಾಂಪ್ರದಾಯಿಯ ಚಿಕಿತ್ಸೆಗಳಲ್ಲೂ ಬಳಸಲಾಗುತ್ತದೆ. ಇವುಗಳು ಮೆದುಳು ಇಲ್ಲದ ಜೀವಿಯಾಗಿದ್ದು, ಈ ಜೀವಿಯ ಬಗ್ಗೆ ಜನರಿಗೆ ಇನ್ನಷ್ಟು ತಿಳುವಳಿಕೆ ಮೂಡಿಸಲು ವಿಶ್ವ ಜೆಲ್ಲಿ ಫಿಶ್ ದಿನವನ್ನು ಆಚರಿಸಲಾಗುತ್ತದೆ.

ಇದನ್ನೂ ಓದಿ: ರಾತ್ರಿ ನಿದ್ರೆ ಕಡಿಮೆ ಮಾಡಿದರೆ ಬೇಗನೆ ಹೃದಯಾಘಾತವಾಗುತ್ತದೆ

ಜೆಲ್ಲಿ ಮೀನುಗಳಿಗೆ ಸಂಬಂಧಿಸಿದ ಕೂತೂಹಲಕಾರಿ ಸಂಗತಿಗಳು:

  • ಜೆಲ್ಲಿ ಮೀನುಗಳ ವೈಜ್ಞಾನಿಕ ಹೆಸರು “ಕ್ಯಾಂಡರಿಯಾ”. ಸುಮಾರು 2000 ಜಾತಿಯ ಜೆಲ್ಲಿ ಮೀನುಗಳು ಸಮುದ್ರಗಳಲ್ಲಿ ಕಂಡುಬರುತ್ತವೆ.
  • PETA ಪ್ರಕಾರ, ಜೆಲ್ಲಿ ಮೀನುಗಳು ಭೂಮಿಯ ಮೇಲಿನ ಅತ್ಯಂತ ಹಳೆಯ ಬಹು-ಅಂಗ ಜೀವಿಗಳಾಗಿವೆ. ಪಳೆಯುಳಿಕೆ ದಾಖಲೆಯಲ್ಲಿ ಇವುಗಳು 500 ಮಿಲಿಯನ್ ವರ್ಷಗಳಷ್ಟು ಹಿಂದಿನದು ಎಂಬುದು ತಿಳಿದು ಬಂದಿದೆ.
  • ಈ ಜೆಲ್ಲಿ ಮೀನುಗಳಲ್ಲಿ ಕೆಲವು ಬೆಳಕನ್ನು ಹೊರಸೂಸುತ್ತವೆ. ಇದನ್ನು ಇವುಗಳು ಬೇಟೆಗೆ ಮತ್ತು ಶತ್ರುಗಳಿಂದ ರಕ್ಷಿಸಿಕೊಳ್ಳಲು ಬಳಸುತ್ತವೆ. ಕೆಲವು ಜಾತಿಯ ಜೆಲ್ಲಿ ಮೀನುಗಳು ಹೃದಯ, ಶ್ವಾಸಕೋಶ ಮತ್ತು ಮೆದುಳು ಇಲ್ಲದೆ ಬದುಕುತ್ತವೆ. ಅಲ್ಲದೆ ಇವುಗಳ ದೇಹ 95% ನೀರಿನಿಂದ ಕೂಡಿವೆ.
  • ಅಷ್ಟೇ ಅಲ್ಲದೆ ಟೂರಿಟೊಪ್ಸಿಸ್ ಡೊಹ್ರ್ನಿ (Turritopsis dohrnii) ಎಂಬ ಜಾತಿಯ ಜೆಲ್ಲಿ ಮೀನಿಗೆ ಸಾವೇ ಇಲ್ಲವಂತೆ. ಹೌದು ಸಂಶೋಧಕರು ಈ ವಿಷಯವನ್ನು ಬಹಿರಂಗ ಪಡಿಸಿದ್ದಾರೆ.
  • ಜೆಲ್ಲಿ ಮೀನುಗಳು ಒಂದೇ ದ್ವಾರವನ್ನು ಹೊಂದಿದ್ದು, ಅದರ ಮೂಲಕವೇ ತಿನ್ನಲು ಮತ್ತು ತ್ಯಾಜ್ಯವನ್ನು ಹೊರಹಾಕುತ್ತವೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:13 am, Sun, 3 November 24

ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ತ್ಯಾಜ್ಯದ ರಾಶಿ: ಭಕ್ತರ ಮೇಲೆ ಸಿಟ್ಟಾದ ವೈದ್ಯನಾಥ ದೈವ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ನಿನ್ನ ರೌಡಿಸಂ ನನ್ನ ಹತ್ರ ಬೇಡ: ರಜತ್​ಗೆ ಖಡಕ್ ಆವಾಜ್ ಹಾಕಿದ ಚೈತ್ರಾ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಶಿಕ್ಷಕರ ಕೊರತೆ ಬಗ್ಗೆ ವಿದ್ಯಾರ್ಥಿಗಳ ವಿಡಿಯೋ ವೈರಲ್​: ಶಾಲೆಗೆ ಸಂಸದ ಭೇಟಿ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
ಐತಿಹಾಸಿಕ ಶತಕ ಸಿಡಿಸಿದ ಮಗನನ್ನು ತಬ್ಬಿ ಕಣ್ಣೀರಿಟ್ಟ ನಿತೀಶ್ ಅಪ್ಪ-ಅಮ್ಮ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
70 ಅಡಿ ಸೇತುವೆ ಮೇಲಿಂದ ಗಂಗಾ ನದಿಗೆ ಹಾರಿದ ಯುವತಿ; ವಿಡಿಯೋ ಇಲ್ಲಿದೆ
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಮೋಸ ಮಾಡಿದವರಿಗೆ ಕರ್ಮವಾಗಿ ಕಾಡಲು ಬಂದ ಸುದೀಪ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಿಮಾವೃತ ರಸ್ತೆಯಿಂದ ಜಾರಿ ಪ್ರಪಾತಕ್ಕೆ ಬಿದ್ದ ಟ್ರಕ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಹಾಸನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ: ವಿದ್ಯಾರ್ಥಿಯ ವಿಡಿಯೋ ವೈರಲ್
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
ಗೋಕರ್ಣ, ಮುರುಡೇಶ್ವರಕ್ಕೆ ಪ್ರವಾಸಿಗರ ದಂಡು: ಹೊನ್ನಾವರದಲ್ಲಿ ಟ್ರಾಫಿಕ್ ಜಾಂ
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್
‘ಡೆವಿಲ್’ ಶೂಟಿಂಗ್ ಆರಂಭದ ಬಗ್ಗೆ ಮಾಹಿತಿ ನೀಡಿದ ದರ್ಶನ್ ಸಹೋದರ ದಿನಕರ್