ದಿನನಿತ್ಯ ಪೂಜೆಗೆ ಬಳಸುವ ಕರ್ಪೂರ ಅಸಲಿಯೇ? ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಟಿಪ್ಸ್

ಪೂಜೆಗೆ ಅಗತ್ಯವಾಗಿ ಬೇಕಾಗುವ ಸಾಮಗ್ರಿಗಳಲ್ಲಿ ಕರ್ಪೂರ ಕೂಡ ಒಂದು. ಇದು ಪೂಜೆಗೆ ಮಾತ್ರವಲ್ಲದೇ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಆದರೆ ಕಲಬೆರಕೆ ಕರ್ಪೂರವನ್ನು ಸುಡುವುದರಿಂದ ಉಸಿರಾಟದ ತೊಂದರೆ, ರಕ್ತದೊತ್ತಡದಲ್ಲಿ ಏರುಪೇರು, ತಲೆಸುತ್ತು ಮುಂತಾದ ಸಮಸ್ಯೆಗಳು ಒಕ್ಕರಿಸಿಕೊಂಡು ಬಿಡುತ್ತದೆ. ಹೀಗಾಗಿ ಸಾಧ್ಯವಾದಷ್ಟು ಕಲಬೆರಕೆ ರಹಿತವಾದ ಕರ್ಪೂರವನ್ನು ಬಳಸುವುದು ಉತ್ತಮ. ಆದರೆ ಮಾರುಕಟ್ಟೆಯಿಂದ ತಂದ ಕರ್ಪೂರವು ಅಸಲಿಯೇ ಅಥವಾ ನಕಲಿಯೇ ಎಂದು ಕಂಡು ಹಿಡಿಯುವುದು ಹೇಗೆ? ಎನ್ನುವುದರ ಮಾಹಿತಿ ಇಲ್ಲಿದೆ

ದಿನನಿತ್ಯ ಪೂಜೆಗೆ ಬಳಸುವ ಕರ್ಪೂರ ಅಸಲಿಯೇ? ಕಂಡು ಹಿಡಿಯುವುದು ಹೇಗೆ? ಇಲ್ಲಿದೆ ಟಿಪ್ಸ್
ಸಾಂದರ್ಭಿಕ ಚಿತ್ರ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Nov 01, 2024 | 5:47 PM

ಬಹುತೇಕರು ದಿನನಿತ್ಯ ಪೂಜೆಯ ವೇಳೆಗೆ ಕರ್ಪೂರವನ್ನು ಬಳಸುತ್ತಾರೆ. ಇದರ ಬಳಕೆ ಮಾಡುವುದರಿಂದ ಗಾಳಿಯಲ್ಲಿರುವ ಬ್ಯಾಕ್ಟೀರಿಯಾವನ್ನು ತೆಗೆದುಹಾಕುತ್ತದೆ. ಅದಲ್ಲದೇ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಿ ಧನಾತ್ಮಕತೆಯನ್ನು ತರುತ್ತದೆ ಎನ್ನಲಾಗುತ್ತದೆ. ಕರ್ಪೂರದಲ್ಲಿರುವ ಔಷಧೀಯ ಗುಣಗಳು ಆರೋಗ್ಯ ಸಮಸ್ಯೆಗಳನ್ನು ನಿವಾರಿಸಿ ಆರೋಗ್ಯವನ್ನು ಕಾಪಾಡುತ್ತದೆ. ಅದಲ್ಲದೇ, ತ್ವಚೆ ಹಾಗೂ ಕೂದಲಿನ ಆರೈಕೆಯಲ್ಲಿಯೂ ಕರ್ಪೂರದ ಪಾತ್ರ ಅಗಾಧವಾಗಿದೆ. ಆದರೆ ನೀವು ಪೂಜೆಗೆ ಬಳಸುವ ಕರ್ಪೂರವು ಅಸಲಿಯೇ ಎಂದು ಕಂಡು ಹಿಡಿಯಲು ಈ ಸಲಹೆಗಳನ್ನು ಅನುಸರಿಸಿದರೆ ಸಾಕು.

  • ಬಣ್ಣದ ಆಧಾರದ ಮೇಲೆ ನಕಲಿ ಕರ್ಪೂರವನ್ನು ಗುರುತಿಸಬಹುದಾಗಿದೆ. ಸಾಮಾನ್ಯವಾಗಿ ನಕಲಿ ಕರ್ಪೂರ ಬಿಳಿಯಾಗಿರುವುದಿಲ್ಲ. ಸ್ವಲ್ಪ ತಿಳಿ ಕಂದು ಅಥವಾ ಸ್ವಲ್ಪ ಹಳದಿ ಹಸಿರು ಬಣ್ಣದಲ್ಲಿರುತ್ತದೆ.
  • ಶುದ್ಧ ಕರ್ಪೂರವನ್ನು ಸುಟ್ಟ ನಂತರ ಯಾವುದೇ ಬೂದಿ ಉಳಿಯುವುದಿಲ್ಲ. ಒಂದು ವೇಳೆ ಕರ್ಪೂರವನ್ನು ಸುಟ್ಟ ಬಳಿಕವು ಬೂದಿ ಉಳಿದಿದ್ದರೆ ಅದು ಸಂಪೂರ್ಣವಾಗಿ ನಕಲಿಯಾಗಿದೆ ಎಂದರ್ಥ.
  • ಶುದ್ಧ ಕರ್ಪೂರವು ಬೇಗನೇ ಕರಗುವುದಿಲ್ಲ. ಇದು ಉರಿಯಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ. ಆದರೆ ನೀವು ಹೊತ್ತಿಸಿದ ಕರ್ಪೂರವು ಬೇಗನೇ ಉರಿದು ಕರಗಿದರೆ ಅದು ಶುದ್ಧವಲ್ಲ ಎಂದು ಅರ್ಥೈಸಿಕೊಳ್ಳಬಹುದು.
  • ಕಲಬೆರಕೆಯುಳ್ಳ ಕರ್ಪೂರವನ್ನು ಸುಡುವಾಗ ಜ್ವಾಲೆಯು ಸ್ವಲ್ಪ ಕಿತ್ತಳೆ ಬಣ್ಣವನ್ನು ಹೊಂದಿರುತ್ತದೆ. ಅದೇ ಶುದ್ಧ ಕರ್ಪೂರವನ್ನು ಸುಟ್ಟರೆ, ಅದು ಉತ್ತಮ ಪರಿಮಳದೊಂದಿಗೆ ಕಪ್ಪು ಹೊಗೆಯನ್ನು ಹೊರಸೂಸುತ್ತದೆ.
  • ಶುದ್ಧ ಕರ್ಪೂರವನ್ನು ನೀರಿನಲ್ಲಿ ಹಾಕಿದರೆ ಅದು ತಳವನ್ನು ತಲುಪುತ್ತದೆ. ಏಕೆಂದರೆ ಶುದ್ಧ ಕರ್ಪೂರವು ಭಾರವಾಗಿರುತ್ತದೆ. ಆದರೆ ನಕಲಿ ಕರ್ಪೂರವು ನೀರಿನ ಮೇಲೆ ತೇಲುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ