Daily Horoscope: ಇಂದಿನ ರಾಶಿ ಫಲ, ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿ ಭವಿಷ್ಯ
ಈ ಲೇಖನವು 12 ರಾಶಿಗಳಿಗೆ ಇಂದಿನ ದಿನದ ರಾಶಿ ಫಲವನ್ನು ಒಳಗೊಂಡಿದೆ. ಮೇಷ ರಾಶಿಯವರಿಗೆ ಮಾತಿನ ಮೇಲೆ ನಿಯಂತ್ರಣ ಇಟ್ಟುಕೊಳ್ಳುವುದು ಮುಖ್ಯ, ವಸ್ತು ಕಳ್ಳತನದ ಭಯ ಇದೆ ಎಂದು ಹೇಳಲಾಗಿದೆ. ವೃಷಭ ರಾಶಿಯವರಿಗೆ ನಿಧಾನವಾಗಿ ಚಲಿಸುವುದು ಉತ್ತಮ ಎಂದು ಸೂಚಿಸಲಾಗಿದೆ. ಮಿಥುನ ರಾಶಿಯವರಿಗೆ ಆರ್ಥಿಕ ಲಾಭ ಮತ್ತು ಅನಿರೀಕ್ಷಿತ ವೆಚ್ಚ ಎರಡೂ ಇರಬಹುದು ಎಂದು ಹೇಳಲಾಗಿದೆ. ಇತರ ರಾಶಿಗಳಿಗೂ ಅವುಗಳಿಗೆ ಸಂಬಂಧಿಸಿದ ಸಲಹೆಗಳನ್ನು ನೀಡಲಾಗಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಮಂಗಳ, ತಿಥಿ: ಚತುರ್ಥಿ, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಸಾಧ್ಯ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಿಗ್ಗೆ 03:09 ರಿಂದ 04:34ರವರೆಗೆ, ಯಮಘಂಡ ಕಾಲ ಬೆಳಗ್ಗೆ 09:27 ರಿಂದ ಬೆಳಗ್ಗೆ 10:53 ರವರೆಗೆ, ಗುಳಿಕ ಕಾಲ ಮಧ್ಯಾಹ್ನ 12:18ರಿಂದ 01:43 ರವರೆಗೆ.
ಮೇಷ ರಾಶಿ: ಸ್ವಂತ ಪ್ರಯತ್ನದಿಂದ ಎಲ್ಲವನ್ನೂ ಸಾಧಿಸಲಾಗದು. ಇಂದು ನಿಮ್ಮ ಮಾತಿನ ಮೇಲೆ ನಿಯಂತ್ರಣ ಅತ್ಯವಶ್ಯಕ. ನಿಮ್ಮ ವಸ್ತುವು ಕಳ್ಳತನ ಆಗುವ ಭಯವು ಕಾಡಲಿದೆ. ದಿನದ ಕಾರ್ಯದಲ್ಲಿ ಅಡೆತಡೆಯಾಗಲಿದೆ. ಆರ್ಥಿಕ ಸಂಕಟವನ್ನು ಸ್ನೇಹಿತರ ಸಹಾಯವನ್ನು ಪಡೆದು ಸರಿಮಾಡಿಕೊಳ್ಳುವಿರಿ. ನಿಮ್ಮ ಮಾತಿನ ಮೇಲೆ ನಿಯಂತ್ರಣವಿರಲಿ. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುತಗತದೆವೆಂಬ ಭಯವು ಇರುವುದು. ಬೇಕಾದುದನ್ನು ಹಣ ಕೊಟ್ಟೇ ಪಡೆಯುವಿರಿ. ಇನ್ನೊಬ್ಬರ ಬಳಿ ಇರುವ ನಿಮ್ಮ ವಸ್ತುವನ್ನು ಬಹಳ ಪ್ರಯತ್ನದಿಂದ ಪಡೆಯುವಿರಿ. ಬಂಧುಗಳಿಗಾಗಿ ಸಾಲ ಮಾಡುವ ಹಾಗೆ ಅಸದ ಆಗಬಹುದು. ಕೃಷಿಯಲ್ಲಿ ಆದ ಪ್ರಗತಿಯಿಂದ ಸಂತೋಷವಾಗುವುದು. ಅನಾರೋಗ್ಯವನ್ನು ಸರಿ ಮಾಡಿಕೊಳ್ಳುವಲ್ಲಿ ನಿಮ್ಮ ಪ್ರಯತ್ನವೂ ಬೇಕು. ಇಂದು ನಿಮ್ಮ ವಿವಾಹದ ಮಾತುಕತೆಯನ್ನು ಆಡಲು ಹೋಗಲಿದ್ದೀರಿ. ನಿಮ್ಮ ಬಗ್ಗೆ ಕೆಲವು ಊಹಾಪೋಹಗಳು ಹರಡುವುದು. ನಿಮ್ಮ ದಾಖಲೆಗಳನ್ನು ಬಹಳ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕಾಗುವುದು. ಯಾರಾದರೂ ನಿಮ್ಮ ಪೂಜ್ಯ ಭಾವನೆಯನ್ನು ಮಲಿನ ಮಾಡಬಹುದು.
ವೃಷಭ ರಾಶಿ: ನಿಮ್ಮ ಇಡುವ ಹೆಜ್ಜೆಗಳು ನಿಧಾನವಾದರೂ ತೊಂದರೆ ಇಲ್ಲ, ಹಿನ್ನಡಿಗೆಯಾಗುವುದು ಉಚಿತವಲ್ಲ. ಇಂದು ನೀವು ಗೌಪ್ಯವಾಗಿ ಸಮಾಲೋಚನೆ ನಡೆಸಿ ಮುಂದಿನ ಯೋಜನೆಯನ್ನು ಹೇಳುವಿರಿ. ಇಂದಿನ ನಿಮ್ಮ ವ್ಯವಹಾರವನ್ನು ಸರಿಯಾಗಿ ನಿರ್ವಹಿಸಿ. ಮನೆಯಲ್ಲಿ ಸಣ್ಣ ವಿಚಾರಕ್ಕೆ ನೀವು ವಿವಾದ ಮಾಡಿಕೊಳ್ಳುವಿರಿ. ನಿಮ್ಮ ನೆಮ್ಮದಿಯನ್ನು ಸಂಗಾತಿಯು ಭಂಗ ಮಾಡಬಹುದು. ಧಾರ್ಮಿಕ ವಿಚಾರದಲ್ಲಿ ನಿಮಗೆ ಸ್ಪಷ್ಟತೆ ಇರದು. ವಂಚನೆಯಲ್ಲಿ ಗೊತ್ತಾಗದಂತೆ ಸಿಕ್ಕಿಕೊಳ್ಳುವಿರಿ. ಹಲವು ನಕಾರಾತ್ಮಕ ಯೋಚನೆಯ ನಡುವೆಯೂ ಸಕಾರಾತ್ಮಕತೆ ಇರಲಿ. ರಾಜಕೀಯವನ್ನು ಬಂಧುಗಳ ನಡುವೆಯೂ ಮಾಡುವಿರಿ. ಆಸಕ್ತಿ ಇಲ್ಲದೇ ಇದ್ದರೂ ಕರ್ತವ್ಯದಲ್ಲಿ ಲೋಪವಿರಬಾರದು. ಮುರಿಯು ಮನಸ್ಸನ್ನು ಬಾಗಿಸಲು ಪ್ರಯತ್ನಿಸಿ. ದೂರದ ಬಂಧುಗಳು ಪರಿಚಿತರಾಗಿ ಅವರ ಜೊತೆ ಕಾಲ ಕಳೆಯುವಿರಿ. ನಿಮಗೆ ಕೃತಜ್ಞತೆ ಇರಲಿ. ಎಲ್ಲದರಲ್ಲಿಯೂ ಉತ್ತಮವಾದುದನ್ನೇ ಆರಿಸಿಕೊಳ್ಳುವಿರಿ. ಆಪ್ತರು ಕಾರಣಾಂತರಗಳಿಂದ ದೂರಾಗಬಹುದು.
ಮಿಥುನ ರಾಶಿ: ಹೊರ ಸಂಚಾರದಲ್ಲಿ ನಿಮಗೆ ಭಯ ಕಾಡಬಹುದು. ಸಂಗಾತಿಯ ದುರಭ್ಯಾಸವನ್ನು ನಿಲ್ಲಿಸುವುದು ಸುಲಭವಲ್ಲ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರಲಿದ್ದು ನಿಮ್ಮ ಮುಖದಲ್ಲಿ ನೆಮ್ಮದಿಯು ಕಾಣಲಿದೆ. ಅನಿರೀಕ್ಷಿತವಾಗಿ ಧನವ್ಯಯವಾಗಿದ್ದು ಆತಂಕವು ಆಗಲಿದೆ. ರಾಜಕೀಯದಿಂದ ನೀವು ಪ್ರೇರಣೆ ಪಡೆಯುವಿರಿ. ಮನಸ್ಸಿನ ಜಾಡ್ಯಕ್ಕೆ ನಿರಂತರ ಪ್ರೇರಣೆ ಅಗತ್ಯ. ಆರ್ಥಿಕ ಲಾಭದಿಂದ ನೀವು ಸಂತೋಷವಾಗಿ ಇರುವುದು ನಿಮ್ಮ ಮುಖದಲ್ಲಿ ಕಾಣಿಸುವುದು. ಹಳೆಯ ವಾಹನವನ್ನು ನೀವು ಖರೀದಿಸುವಿರಿ. ಸಾಲ ಮಾಡುವಾಗ ನಿಮ್ಮ ಆದಾಯವನ್ನು ಗಮನದಲ್ಲಿ ಇಟ್ಟುಕೊಳ್ಳುವುದು ಒಳ್ಳೆಯದು. ತಾಯಿಯ ಆರೋಗ್ಯದಲ್ಲಿ ಆದ ವ್ಯತ್ಯಾಸದಿಂದ ಚಿಂತೆಗೆ ಒಳಗಾಗುವಿರಿ. ಪ್ರಭಾವೀ ಜನರ ಭೇಟಿಯಿಂದ ಅನೇಕ ಲಾಭವನ್ನು ಮಾಡಿಕೊಳ್ಳುವಿರಿ. ಸಾಮಾಜಿಕ ಕಾರ್ಯಕ್ಕೆ ನಿಮ್ಮ ಸಣ್ಣ ಕೊಡುಗೆ ನೀಡುವಿರಿ.
ಕರ್ಕಾಟಕ ರಾಶಿ: ಸಣ್ಣ ಯೋಜನೆಯನ್ನೂ ಹೆಚ್ಚು ಲಾಭದಾಯಕವನ್ನಾಗಿ ಮಾಡಿಕೊಳ್ಳುವಿರಿ. ನಿಮ್ಮ ಮನಸ್ಸಿಗೆ ಯೋಗ್ಯರಾದವರ ಜೊತೆ ಮಾತ್ರ ಬಿಚ್ಚುಮನಸ್ಸಿನಿಂದ ಇರುವಿರಿ. ವ್ಯಾಪಾರದಲ್ಲಿ ಲಾಭವನ್ನು ಕಂಡು ಏನಾದರೂ ಯೋಜನೆಯನ್ನು ಮಾಡಿ ಕಷ್ಟಕ್ಕೆ ಸಿಲುಕಿಕೊಳ್ಳುವಿರಿ. ಪ್ರಶಂಸೆಯಿಂದ ಸಣ್ಣ ಅಹಂಕಾರವು ಬರಬಹುದು. ಯಂತ್ರಗಳನ್ನು ಬಳಸಿಕೊಂಡು ಸಣ್ಣ ಉದ್ಯೋಗವನ್ನು ಆರಂಭಿಸುವಿರಿ. ವಿದೇಶದಲ್ಲಿ ಜೀವನಕ್ಕೆ ಕುತ್ತು ಬರುವ ಸಾಧ್ಯತೆ ಇದೆ. ಗುಣಮಟ್ಟವನ್ನು ಉದ್ಯಮದಲ್ಲಿ ಕಾಯ್ದುಕೊಳ್ಳಲು ಯೋಚಿಸಿ. ದೌರ್ಬಲ್ಯವನ್ನು ನೀವು ಸಕಾರಾತ್ಮಕವಾಗಿ ತೆಗೆದುಕೊಂಡವು ಸಾಧಿಸುವಿರಿ. ವಿದೇಶದ ಬಂಧುಗಳು ನಿಮ್ಮ ಉದ್ಯಮಕ್ಕೆ ಸಹಾಯ ಮಾಡುವರು. ಪೂರ್ವಯೋಜಿತ ಕಾರ್ಯಕ್ಕೂ ನೀವು ಸಮಯವನ್ನು ಹೊಂದಿಸಿಕೊಳ್ಳಲಾಗದು. ನಿಮಗೆ ಎಲ್ಲವನ್ನೂ ಪ್ರತಿಭಟಿಸುವ ಮನೋಭಾವ ಬರುವುದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು.
ಸಿಂಹ ರಾಶಿ: ಅನಧಿಕೃತ ಪತ್ರವ್ಯವಹಾರದಿಂದ ದೂರವಿರಿ. ನಿಮ್ಮನ್ನು ನೀವು ಇನ್ನೊಬ್ಬರಿಗೆ ಸಾಕ್ಷಿಯಾಗಿ ತೋರಿಸಬೇಕಿಲ್ಲ. ನಂಬಿಕೆ ಇದ್ದವರು ಇರುತ್ತಾರೆ. ಇಂದು ನೀವು ಮನಸ್ಸಿಗೆ ಹಿಡಿಸದ ಸಂಗತಿಗಳ ವಿರುದ್ಧ ಧೈರ್ಯವಾಗಿ ಮಾತನಾಡುವಿರಿ. ದಾನವೇ ನಿಮಗೆ ಕುತ್ತನ್ನು ತರುವ ಸಾಧ್ಯತೆ ಇದೆ. ಉತ್ಸಾಹದಿಂದ ಇರಲು ನಿಮಗೆ ಮಾರ್ಗಗಳೂ ಕಡಿಮೆ ಇರಬಹುದು. ಇಷ್ಟವಿಲ್ಲದಿದ್ದರೂ ಉದ್ಯೋಗಕ್ಕೆ ತೆರಳಬೇಕಾದೀತು. ಮೇಲಧಿಕಾರಿಗಳ ಮಾತು ಕಿರಿಕಿರಿ ಎನಿಸಬಹುದು. ಉದ್ಯೋಗವನ್ನು ಬದಲಿಸುವ ಮೊದಲು ಸ್ನೇಹಿತರ ಸಲಹೆಯನ್ನು ಪಡೆಯುವಿರಿ. ಸ್ವಾರ್ಥದಿಂದ ನಿಮಗೇ ತೊಂದರೆಯಾಗುವುದು ಎಂದು ಮನವರಿಕೆ ಆಗುವುದು. ಯಾವ ಸಂಭಾವ್ಯತೆಯನ್ನು ಅಲ್ಲಗಳೆಯಲಾಗದು. ಪ್ರೀತಿಯನ್ನು ನೀವು ಲಘುವಾಗಿ ಕಂಡು ಪ್ರಿಯಕರನಿಂದ ದೂರಾಗುವಿರಿ. ಬೇಗ ಮುಗಿಯುವ ಕೆಲಸವನ್ನು ಮೊದಲು ಮಾಡಿ. ಸಹೋದರನ ಆರೋಗ್ಯವು ಕೆಡಬಹುದು.
ಕನ್ಯಾ ರಾಶಿ: ಕನ್ನಡಿಯನ್ನು ನೋಡಿದರೆ ಓರೆಕೋರೆಗಳು ಗೊತ್ತಾಗುವುದು. ಬೇರೆಯವರು ಹೇಳುವ ತನಕ ಕಾಯುವುದು ಬೇಡ. ಯಾರದೋ ಹಂಗಿನಿಂದ ದೂರವಿರಲು ಬಯಸುವಿರಿ. ಕುಟುಂಬದ ಜವಾಬ್ದಾರಿಯನ್ನು ನಿರ್ವಹಿಸಲು ಕಷ್ಟವಾಗುವುದು. ದೇವರ ಮೇಲೆ ನಂಬಿಕೆ ಇಟ್ಟ ಕಾರಣ ನಿಮ್ಮ ಮನೋರಥವು ಪೂರ್ತಿಯಾಗಿದ್ದು ನಿಮಗೆ ಅತಿಶಯ ಸಂತೋಷವಾಗಲಿದೆ. ಭೂಮಿಯನ್ನು ಖರೀದಿಸುವ ಸಂದರ್ಭ ಬಂದರೂ ಪೂರ್ತಿ ಹಣವನ್ನು ಸೇರಿಸಲು ಆಗದು. ಕೆಲವು ಸಂದರ್ಭಗಳು ನಿಮ್ಮನ್ನು ದಾರಿ ತಪ್ಪಿಸಬಹುದು. ನಿಮ್ಮ ಸಮಯಪಾಲನೆಗೆ ಅಧಿಕಾರಿಗಳಿಂದ ಪ್ರಶಂಸೆಯು ಸಿಗುವುದು. ನೀವು ಕಾರ್ಯಕ್ಕೆ ಸಂಬಂಧಪಟ್ಟಂತೆ ನಿಮ್ಮದೇ ಆದ ಚೌಕಟ್ಟನ್ನು ರಚಿಸಿಕೊಳ್ಳುವುದು ಕ್ಷೇಮ. ನಿಮ್ಮ ಸ್ಥಾನವನ್ನು ಬೇರೆಯವರು ಆಕ್ರಮಿಸಿಕೊಳ್ಳುವರು. ಒಂದೇ ಕಾರ್ಯಕ್ಕೆ ಯೋಜನೆಗಳು ಹಲವು ಇರುವುವು. ನಿಮ್ಮ ಇಂದಿನ ಮಾತು ನಕಾರಾತ್ಮಕ ಅಂಶವನ್ನೇ ಹೆಚ್ಚು ಪಡೆದುಕೊಳ್ಳಲಿದೆ. ಹೊಂದಾಣಿಕೆಯನ್ನು ಸುಲಭದಲ್ಲಿ ಮಾಡಿಕೊಳ್ಳುವಿರಿ.
ತುಲಾ ರಾಶಿ: ಸ್ತ್ರೀಯರು ಅಹಂಕಾರವನ್ನು ಬಿಟ್ಟರೆ ಉತ್ತಮ. ಸಣ್ಣ ಕಾರ್ಯಗಳಿಗೆ ಇಂದು ಹೆಚ್ಚು ಸಮಯ ಬೇಕಾಗುವುದು. ಪಡೆದ ಸಾಲವನ್ನು ಬೇರೆ ರೀತಿಯಲ್ಲಿ ಹಿಂದಿರುಗಿಸುವಿರಿ. ಸಹೋದ್ಯೋಗಿಗಳು ಸುಮ್ಮನೇ ಕಿರಿಕಿರಿ ಮಾಡುವರು. ಸ್ವಾಭಿಮಾನವನ್ನು ಬಿಟ್ಟು ಇರುವುದು ಅಸಾಧ್ಯ ಎನಿಸಬಹುದು. ಕೆಲವರಿಂದ ತಪ್ಪಿಸಿಕೊಳ್ಳಲು ನೋಡುವಿರಿ. ಯಾರ ಮೇಲೂ ದ್ವೇಷ ಬೇಡ. ಸಿಟ್ಟು ಬಂದರೆ ತೋರಿಸಿ, ಯಥಾಸ್ಥಿತಿಯಲ್ಲಿ ಇರಿ. ಹೂಡಿಕೆಯನ್ನು ಮಾಡುವುದು ನಿಮಗೆ ಅನಿವಾರ್ಯವಾಗಬಹುದು. ನಿಮ್ಮ ದಿವಸದ ವ್ಯವಸ್ಥೆಯನ್ನು ಕ್ರಮಬದ್ಧಗೊಳಿಸಿಕೊಳ್ಳಿ. ಮಾತಿನಿಂದ ಅಳೆದ ನಿಮ್ಮ ಮಾಪನವು ಸರಿಯಾಗದೇ ಇರುವುದು. ನಿಮ್ಮದೇ ಆದ ಸಂಸ್ಥೆಯನ್ನು ಆರಂಭಿಸಲು ಕೆಲವರನ್ನು ಸೇರಿಸಿಕೊಳ್ಳುವಿರಿ. ಮಾನಸಿಕ ಆಯಾಸದಿಂದ ನೀವು ವಿಶ್ರಾಂತಿಯನ್ನು ತೆಗೆದುಕೊಳ್ಳಬೇಕಾಗಬಹುದು. ಯಾವುದನ್ನೇ ಆದರೂ ಸ್ವಾಭಿಮಾನವನ್ನು ಬಿಟ್ಟು ಇರಲಾಗದು. ನಿಮ್ಮ ಘನತೆಗೆ ಧಕ್ಕೆ ಬರುವುದು.
ವೃಶ್ಚಿಕ ರಾಶಿ: ವಿಪರಿಮಿತ ಉತ್ಸಾಹವನ್ನು ಉದ್ಯೋಗದಲ್ಲಿ ತೋರಿಸುವಿರಿ. ನಿಮ್ಮ ಸಹೋದ್ಯೋಗಿಗಳ ಬಗ್ಗೆ ಸದಭಿಪ್ರಾಯವನ್ನು ಇಟ್ಟುಕೊಳ್ಳುವುದು ಸಾಧ್ಯವಾಗದು. ರಾಜಕೀಯ ವ್ಯಕ್ತಿಗಳ ವಿರುದ್ಧ ಸುಳ್ಳು ಸುದ್ದಿಗಳು ಬರಬಹುದು. ನಿಮ್ಮನ್ನು ಅಸ್ತ್ರವನ್ನಾಗಿ ಮಾಡಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವರು. ಕುಟುಂಬದ ಗುಟ್ಟನ್ನು ಬಿಟ್ಟುಕೊಡಬಾರದು. ರಕ್ಷಣೆಯ ಸ್ಥಾನದಲ್ಲಿ ಇರುವವರಿಗೆ ಭಯವಿರುವುದು. ಮಹಾತ್ಮರ ಸೇವೆಗೆ ಅನಿರೀಕ್ಷಿತ ಅವಕಾಶವು ಸಿಗಲಿದೆ. ಸಂಕಟವನ್ನು ಪರಿಹರಿಸಿಕೊಳ್ಳುವ ಮಾರ್ಗವು ವಿಳಂಬವಾಗಿ ಸಿಗುವುದು. ಪರರ ವಸ್ತುವನ್ನು ಅವರಿಗೆ ಹಿಂತಿರುಗಿಸಲು ನಿಮಗೆ ಆಗದೇ ಹೋಗುವುದು. ನಿದ್ರೆ ಇಲ್ಲದೇ ಎಲ್ಲವೂ ಅಸ್ತವ್ಯಸ್ತದಂತೆ ಕಾಣುವುದು. ದಾಂಪತ್ಯದಲ್ಲಿ ಹೊಂದಾಣಿಕೆಗೆ ಇಬ್ಬರೂ ಪ್ರಯತ್ನಶೀಲರಾಗುವುದು ಉತ್ತಮ. ವಿದೇಶದಲ್ಲಿರುವ ಮಕ್ಕಳ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಳ್ಳಬಹುದು. ಆತ್ಮವಿಶ್ವಾಸ ಕಳೆದುಕೊಳ್ಳದಂತೆ ಎಚ್ಚರವಿರಲಿ. ನಿಮ್ಮಿಂದ ಆಗದ ಕೆಲಸವನ್ನು ಬೇರೆಯವರು ಮಾಡಿ ಮುಗಿಸುವರು.
ಧನು ರಾಶಿ: ವ್ಯವಹಾರದಲ್ಲಿ ಆಗುವ ಮಂದಗತಿಯಿಂದ ಆದಾಯವೂ ನಷ್ಟವಾಗಲಿದೆ. ಇಂದು ನೀವು ಕುಟುಂಬದ ಜೊತೆ ಕುಳಿತು ಕುಶಲೋಪರಿಗಳನ್ನು ಹಂಚಿಕೊಳ್ಳುವಿರಿ. ನಿಮ್ಮ ಸಮಸ್ಯೆಯನ್ನು ಬಗೆಹರಿಸಲು ಗೌಪ್ಯವಾಗಿ ಅಧಿಕಾರಿಗಳನ್ನು ಭೇಟಿ ಮಾಡುವಿರಿ. ಕೆಲವು ವಿಚಾರಕ್ಕೆ ಬುದ್ಧಿಯು ಸೂಚಿಸದೇ ಇರಬಹುದು. ಬೇರೆಯವರ ವಿಷಯದಲ್ಲಿ ಮೂಗು ತೂರಿಸುವುದು ಬೇಡ. ನಿಮ್ಮ ಶ್ರಮಕ್ಕೆ ಯೋಗ್ಯ ವರಮಾನ ಇಲ್ಲ ಎನಿಸಬಹುದು. ಕುಟುಂಬವರ ಜೊತೆ ಸಮಯವನ್ನು ಕಳೆಯುವುದು ಆಗದು. ಸಮಾರಂಭದಲ್ಲಿ ಸಂತೋಷದಿಂದ ಇರಲಾಗದು. ಕಾರಣಾಂತರಗಳಿಂದ ನಿಮ್ಮ ಜೀವನದ ಮಾರ್ಗವು ಬದಲಾಗುವುದು. ನಿಮಗೆ ಇಂದು ವಾದದಲ್ಲಿ ಸೋಲಾಗಬಹುದು. ನಿಮ್ಮ ಸಾಮರ್ಥ್ಯವನ್ನು ಎಲ್ಲಿಯೋ ಪ್ರದರ್ಶಿಸಲು ಹೋಗಿ ಮುಗ್ಗರಿಸುವಿರಿ. ಇಂದು ಮೋಸದ ಕರೆಗಳಿಂದ ವಂಚನೆಯ ಜಾಲಕ್ಕೆ ಸಿಕ್ಕಿಕೊಳ್ಳಬಹುದು. ನಿಮ್ಮ ಬೇಡಿಕೆಯನ್ನು ಮೇಲಧಿಕಾರಿಗಳು ತಿರಸ್ಕರಿಸಬಹುದು. ಮಿತ್ರರಿಗೆ ವಂಚಿಸುವ ಆಲೋಚನೆ ಬರಲಿದೆ.
ಮಕರ ರಾಶಿ: ಯಾವುದಕ್ಕೋ ಕೂಡಿಟ್ಟ ಹಣವನ್ನು ಮತ್ಯಾವುದಕ್ಕೋ ಖರ್ಚು ಮಾಡುವಿರಿ. ಇಂದು ಸಂಬಂಧವನ್ನು ಖುಷಿಪಡಿಸಲು ನಿಮಗೆ ಅವಕಾಶ ಸಿಗುವುದು. ಮಕ್ಕಳ ಕುರಿತು ನಿಮಗೆ ಅಭಿಮಾನ ಮೂಡಬಹುದು. ಪ್ರಯಾಣವು ಅಹಿತವೆನಿಸಬಹುದು. ನಿಮಗೆ ಬೇಕಾದುದನ್ನು ಕೇಳಿ ಪಡೆಯುವಿರಿ. ವೃತ್ತಿಯ ಸ್ಥಳದಲ್ಲಿ ನಿಮ್ಮನ್ನು ಗುರುತಿಸುವರು. ಇಂದು ಒತ್ತಡವಿಲ್ಲದೇ ಕಾರ್ಯವನ್ನು ಮುಗಿಸುವಿರಿ. ಅನುಭವಿಸಬೇಕಾದ್ದನ್ನು ಅನುಭವಿಸಿಯೇ ತೀರಬೇಕು. ದುರಭ್ಯಾಸವನ್ನು ರೂಢಿಸಿಕೊಂಡಿದ್ದು ಅರಿವಿಗೆ ಬರುವುದು. ಆತ್ಮವಿಶ್ವಾಸದ ಕೊರತೆಯನ್ನು ನೀಗಿಸಿಕೊಳ್ಳುವುದು ಮುಖ್ಯವಾಗುವುದು. ನಿಮ್ಮ ಸಾಮಾಜಿಕ ಕಾರ್ಯಕ್ಕೆ ಬೆಂಬಲವನ್ನು ಅಪೇಕ್ಷಿಸುವಿರಿ. ಖುಷಿಯಾಗಿರಲು ನಾನಾ ಮಾರ್ಗಗಳನ್ನು ಹುಡುಕುವಿರಿ. ಅಲ್ಪವನ್ನು ಕೊಟ್ಟು ಅನಂತವನ್ನು ಪಡೆಯುವುದು ಜಾಣತನ. ತಾಳ್ಮೆಯಲ್ಲಿ ಇಂದು ನೀವು ಉತ್ತೀರ್ಣರಾಗುವುದು ಕಷ್ಟ. ಕುಟುಂಬದ ಜೊತೆ ಇದ್ದರೂ ಅಲ್ಲಿಂದ ದೂರವಿರಲು ಪ್ರಯತ್ನಿಸುವಿರಿ. ಧಾರ್ಮಿಕ ಆಚರಣೆಗಳನ್ನು ಬಹಳ ಶ್ರದ್ಧೆ ಭಕ್ತಿಯಿಂದ ಮಾಡುಬಿರಿ. ತಾರತಮ್ಯ ಭಾವವನ್ನು ಬಿಡಬೇಕಾಗುವುದು.
ಕುಂಭ ರಾಶಿ: ಇಂದು ನಿಮ್ಮ ಮಾತು ಆಕರ್ಷಣೀಯವಾಗಿ ಇರುವುದು. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದು ಸ್ಥಿರಾಸ್ತಿಯನ್ನು ಮಾರಾಟ ಮಾಡಲೂ ನಿಮಗೆ ಕಷ್ಟವಾದೀತು. ನಿಮ್ಮ ಜೊತೆಗಿರುವವರೇ ನಿಮ್ಮ ವಸ್ತುವನ್ನು ಅಪಹರಿಸುವರು. ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಹೆಜ್ಜೆ ಇಡಬಹುದು. ಇಂದು ಏನಾದರೂ ಆಗುತ್ತದೆ ಎಂಬ ಅಪಾಯವು ಇರಲಿದೆ. ವೃತ್ತಿಯ ಏಕತಾನತೆಯಿಂದ ಹೊರಬರಲು ಬಯಸುವಿರಿ. ನೀವು ನಿಜವನ್ನು ಅಷ್ಟು ಸುಲಭವಾಗಿ ನಂಬಲಾರಿರಿ. ಸಕಾರಾತ್ಮಕ ಆಲೋಚನೆಯನ್ನು ನೀವು ಹೆಚ್ಚು ಮಾಡಿಕೊಳ್ಳುವಿರಿ. ಯಾರನ್ನೂ ಮೆಚ್ಚುವ ನಿಮ್ಮ ಗುಣವು ಪ್ರಶಂಸನೀಯವೇ. ನಿಮ್ಮದೇ ವಚನವನ್ನು ಮುರಿಯಬೇಕಾದೀತು. ಪ್ರಾರಂಭಿಸಿದ ಕೆಲಸದಲ್ಲಿ ಉತ್ಸಾಹ ಹೆಚ್ಚಿದ್ದರೂ ಮಾರ್ಗದಲ್ಲಿ ಗೊಂದಲವೂ ಇರುವುದು. ಎಲ್ಲರ ಮೇಲೂ ವಿನಾ ಕಾರಣ ಕೋಪ ಮಾಡಿಕೊಳ್ಳುವಿರಿ. ಹಸಿವು ಹೆಚ್ಚಾಗಿ ಸಂಕಟಪಡುವಿರಿ. ವಿದೇಶ ಪ್ರವಾಸಕ್ಕೆ ವಿಘ್ನಗಳು ಬರಬಹುದು. ಧೈರ್ಯದಿಂದ ಮುನ್ನಡೆಯುವಿರಿ. ಬಂಧುಗಳ ನಡುವೆಯೂ ರಾಜಕೀಯವನ್ನು ಮಾಡುವಿರಿ.
ಮೀನ ರಾಶಿ: ಸ್ವಾಮಿನಿಷ್ಠೆಯನ್ನು ತೋರಿ, ಪ್ರೀತಿಗೆ ಪಾತ್ರರಾಗುವಿರಿ. ಕಛೇರಿಯ ಕಾರ್ಯಗಳಲ್ಲಿ ಆತುರತೆ ಬೇಡ. ಏಕೆಂದರೆ ಸಣ್ಣ ತಪ್ಪಾದರೂ ಪುನಃ ಮಾಡಬೇಕಾಗುವುದು. ನಿಮ್ಮ ಆಶಾವಾದಕ್ಕೆ ಸರಿಯಾದ ಉತ್ತರ ಸಿಗಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ನಿಮಿತ್ತ ಪ್ರಯಾಣ ಮಾಡಬೇಕಾಗುವುದು. ಬಂಧುಗಳ ಆರೋಗ್ಯದ ಆರೈಕೆಯಲ್ಲಿ ನೀವು ತೊಡಗುವಿರಿ. ಅವಾಚ್ಯ ಮಾತುಗಳಿಂದ ನಿಂದನೆಗೆ ಒಳಗಾಗಬಹುದು. ನಿಮಗೆ ಸಿಗುವ ಅವಕಾಶವನ್ನು ಬಳಸಿಕೊಳ್ಳಲು ಭಯವಾಗಬಹುದು. ಗೊತ್ತಿಲ್ಲದೇ ನಿಮ್ಮದಲ್ಲದ ವಸ್ತುವನ್ನು ತೆಗೆದುಕೊಳ್ಳುವಿರಿ. ಸಮಸ್ಯೆಯ ಕುರಿತೇ ಹೆಚ್ಚು ಆಲೋಚನೆಯಲ್ಲಿ ಮಗ್ನರಾಗುವುದು ಬೇಡ. ನಾಯಕತ್ವವನ್ನು ನೀವು ಸ್ವತಂತ್ರದ ಕಾರಣ ನಿರಾಕರಿಸುವಿರಿ. ಹುಡುಗಾಟಿಕೆಯಿಂದ ಏನಾದರೂ ಅವಗಡವಾದೀತು. ಹೊಸತನ್ನು ಕಲಿಯಲು ಹಿಂದೇಟು ಹಾಕುವುದಿಲ್ಲ. ನಿಮಗೆ ಸಿಕ್ಮಿದ್ದನ್ನು ಸದುಪಯೋಗ ಮಾಡಿಕೊಳ್ಳುವತ್ತ ಗಮನವಿರಲಿ. ನಿಮ್ಮ ವಸ್ತುವು ಕಳ್ಳರಿಂದ ಅಪಹರಣ ಆಗುವುದೆಂಬ ಭಯವು ಇರುವುದು.
Published On - 12:15 am, Tue, 19 November 24