
ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಏಪ್ರಿಲ್ 07) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪೂರ್ವಾಭಾದ್ರ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಸಾಯಂಕಾಲ 05:12ರಿಂದ 06:44ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:35 ರಿಂದ 02:07 ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03: 40 ರಿಂದ ಬೆಳಗ್ಗೆ 05:12ರ ವರೆಗೆ.
ಮೇಷ ರಾಶಿ: ನೀವು ಈಗಲೇ ಮನೆಯ ಜವಾಬ್ದಾರಿಯನ್ನು ನಿರ್ವಹಿಸಲು ಸಮರ್ಥರಿಲ್ಲ. ಎಲ್ಲಸಕ್ಕೂ ಕುಟುಂಬದ ಸಹಕಾರವನ್ನು ಪಡೆಯುವಿರಿ. ಸಂಗಾತಿಯ ಸಂಪತ್ತಿನಿಂದ ಖುಷಿಪಡುವಿರಿ. ಬಲವನ್ನು ಪ್ರದರ್ಶಿಸಲು ಉತ್ತಮದಿನ. ಶಿಕ್ಷವೃತ್ತಿಯವರಿಗೆ ಯಶಸ್ಸು ಸಿಗುವ ದಿನ. ಸಂಪತ್ತು ಭಂಡಾರ ಏರುತ್ತಿರುವುದು. ಕಲೆ, ಮನೋರಂಜನೆಗೆ ಹಣವನ್ನು ವ್ಯಯಿಸುವಿರಿ. ನಿಮ್ಮ ಮೇಲಿನ ಪ್ರೀತಿಯಿಂದ ಯಾರಾದರೂ ಅಗತ್ಯ ಸಹಕಾರವನ್ನು ಕೊಡುವರು. ವ್ಯಾಪಾರವನ್ನು ವಿಸ್ತರಿಸಲು ಕುಟುಂಬದ ಸದಸ್ಯರ ಸಹಾಯವನ್ನು ತೆಗೆದುಕೊಳ್ಳಬೇಕಾಗಬಹುದು. ನೀವು ನಿಮ್ಮ ವೃತ್ತಿಗೆ ಸಂಬಂಧಿಸಿದ ಬೇರೆ ಬೇರೆ ಮಜಲುಗಳನ್ನು ಅರಿಯುವಿರಿ. ಬುದ್ಧಿವಂತಿಕೆಯಿಂದ ಹೂಡಿಕೆ ಮಾಡಿ. ಮುಖ್ಯ ಕೆಲಸವನ್ನು ನೀವು ಮರೆಯುವಿರಿ. ಅಪರಿಚಿತರಿಂದ ನಿಮಗೆ ಕೆಲಸ ಸಿಗಬಹುದು. ಇಂದು ನೀವು ಮಾನಸಿಕವಾಗಿ ತುಂಬಾ ಆಯಾಸವನ್ನು ಅನುಭವಿಸಬಹುದು. ಪ್ರೇಮ ಜೀವನದಲ್ಲಿ ಏರಿಳಿತಗಳಿರಬಹುದು. ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ.
ವೃಷಭ ರಾಶಿ: ಮಾನಸಿಕವಾಗಿ ಉತ್ಸಾಹವು ಭಂಗಗೊಳ್ಳುವ ಸಾಧ್ಯತೆಯಿದೆ. ಪಿತ್ರಾರ್ಜಿತ ಸಂಪತ್ತಿನಿಂದ ಸುಖವು ಇರುವುದು. ಸಹೋದರ ಜೊತೆ ಕಲಹವು ಆಗಬಹುದು. ಬಂಧುಗಳಿಂದ ಸಹಾಯ ದೊರೆಯಬಹುದು. ತಾಯಿಗೆ ಅನಾರೋಗ್ಯವು ಉಂಟಾಗಬಹುದು. ತಂತ್ರಜ್ಞರಿಗೆ ವೃತ್ತಿಯನ್ನು ಹೊರತುಪಡಿಸಿದ ಕೆಲಸಗಳು ಲಭ್ಯವಾಗಬಹುದು. ವೈರಾಗ್ಯಭಾವವನ್ನು ಉಂಟಾಗಲಿದೆ. ನೀವು ಕೆಲವು ನಿರಾಶಾದಾಯಕ ಮಾಹಿತಿಯನ್ನು ಇಂದು ಪಡೆಯುವಿರಿ. ನಿಮ್ಮ ದೀರ್ಘಾವಧಿಯ ಕಾನೂನು ಪ್ರಕರಣವು ನಿಮ್ಮ ಪರವಾಗಿ ಬಂದಿದ್ದು ಖುಷಿಕೊಡುವುದು. ಪರಿಚಯವಿಲ್ಲದ ಜನರಿಂದ ನೀವು ಅಂತರವನ್ನು ಕಾಯ್ದುಕೊಳ್ಳುವಿರಿ. ವೃತ್ತಿಗೆ ಸಂಬಂಧಿಸಿದ ಕೆಲವು ಒಳ್ಳೆಯ ಸುದ್ದಿಗಳ ನಿರೀಕ್ಷೆಯಲ್ಲಿ ಇರುವಿರಿ. ಶತ್ರುಗಳು ಪ್ರಬಲರಾಗದಂತೆ ನೋಡಿಕೊಳ್ಳಿ. ಕೆಲವು ಸಂಕೀರ್ಣವಾದ ವಿಷಯಗಳನ್ನು ಪರಿಹರಿಸಬಹುದು.
ಮಿಥುನ ರಾಶಿ: ಇಂದು ನಿಮ್ಮ ಪ್ರಭಾವವು ಜನರಿಗೆ ತಾನಾಗಿಯೇ ಗೊತ್ತಾಗುತ್ತದೆ. ಕುಟುಂಬದಲ್ಲಿ ನೆಮ್ಮದಿ ಸಿಗದೆಂದು ಮತ್ತೇನನ್ನೋ ಮಾಡಲು ಹೋಗುವುದು ಬೇಡ. ನಿಮ್ಮ ಪ್ರತಿಭೆಯನ್ನು ಗುರುತಿಸುವುದೂ ಕಷ್ಟವೇ. ಅನಾರೋಗ್ಯದಿಂದ ಬಳಲುವಿರಿ. ಇಂದು ಆನಾರೋಗ್ಯದ ಕಾರಣದಿಂದ ಸಂಪತ್ತು ನಷ್ಟವಾಗುವುದು. ಪೂರ್ವಪುಣ್ಯ ನಿಮ್ಮನ್ನು ರಕ್ಷಿಸುತ್ತದೆ. ವ್ಯಾಪಾರದಲ್ಲಿ ಲಾಭವಾಗಲಿದೆ. ಪುತ್ರನಿಂದ ಧನಸಹಾಯ ಸಿಗಲಿದೆ. ಧರ್ಮಕಾರ್ಯಕ್ಕೆ ಧನವ್ಯಯವಾಗಲಿದೆ. ನಿಮ್ಮ ನಾಯಕತ್ವದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಿರಿ. ನಿಮ್ಮ ಆಪ್ತರ ಜೊತೆ ಕೆಲವು ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಸ್ನೇಹಿತರ ಜೊತೆ ಸಂಬಂಧದಲ್ಲಿ ನಡೆಯುತ್ತಿರುವ ಭಿನ್ನಾಭಿಪ್ರಾಯವು ಪರಿಹರಿಸಲ್ಪಡುತ್ತದೆ. ಭೂಮಿಯ ವ್ಯವಹಾರದಲ್ಲಿ ಬೇಸರ ಬರಬಹುದು. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗುವುದು. ನೀವು ಆಡಂಬರದಿಂದ ದೂರವಿರಿ. ಆರ್ಥಿಕ ಪರಿಸ್ಥಿತಿಗೆ ಸಂಬಂಧಿಸಿದಂತೆ ಬಂಧುಗಳ ಜೊತೆ ಚರ್ಚಿಸುವಿರಿ. ಹೆಚ್ಚುವರಿ ಜವಾಬ್ದಾರಿಯನ್ನು ಪಡೆಯಲು ನೀವು ನಿರಾಕರಿಸುವಿರಿ.
ಕರ್ಕಾಟಕ ರಾಶಿ: ನೀವು ನಿಮ್ಮನ್ನು ನೋಡಿಕೊಳ್ಳುವುದು ಉಚಿತ. ಮಾತಿನಿಂದ ಇಂದು ಆಗಬೇಕಾದ ಕೆಲಸವು ಆಗುವುದು. ಕುಟುಂಬದಲ್ಲಿ ಸ್ವಸ್ಥವಾತಾವರಣ. ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸವಾಗಬಹುದು. ಆರೋಗ್ಯವು ಹದಗೆಡಲಿದೆ. ಹೆಂಡತಿಯ ಕಡೆಯಿಂದ ಸಂಪತ್ತು ಸಿಗಬಹುದು. ಕುಟುಂಬದ ಹಿರಿಯರ ಆರೋಗ್ಯದಲ್ಲಿ ತೊಂದರೆ ಕಾಣಿಸಿಕೊಂಡೀತು. ಪೂರ್ವಜರ ಪುಣ್ಯ ನಿಮ್ಮನ್ನು ಆಪತ್ತಿಂದ ಕಾಪಾಡಲಿದೆ. ಶಿಕ್ಷಕವೃತ್ತಿಯಲ್ಲಿ ಮಾನಸಿಕ ನೆಮ್ಮದಿ ಇಲ್ಲ. ಧನಾಗಮನವಾಗುವ ಸಾಧ್ಯತೆ ಇದೆ. ಅನಾರೋಗ್ಯದ ಕಾರಣಕ್ಕೆ ಹಣವನ್ನು ವ್ಯಯಿಸುವಿರಿ. ಇಂದು ನೀವು ಯಾರಿಂದಲೋ ಪಡೆದ ಹಣವನ್ನು ಮರಳಿಸುವುದು ಸೂಕ್ತ. ನಿಮ್ಮ ಇಂದಿನ ದಿನಚರಿಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ನೀವು ದೊಡ್ಡ ಅಪಾಯವನ್ನು ತೆಗೆದುಕೊಳ್ಳುವ ಶಕ್ತಿಯನ್ನು ಇಟ್ಟುಕೊಂಡಿಲ್ಲ. ನಿಮ್ಮ ವೃತ್ತಿಜೀವನಕ್ಕೆ ಮುಖ್ಯವಾದ ಜನರು ಇಂದು ನಿಮಗೆ ಸ್ವಲ್ಪ ತೊಂದರೆ ನೀಡಬಹುದು. ಕೆಲವು ವಿಶೇಷ ಕೆಲಸಗಳನ್ನು ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಅದು ಇಂದು ಪೂರ್ಣಗೊಳ್ಳುವುದಕ್ಕೆ ಒತ್ತಡವು ಅನಿವಾರ್ಯವಾದೀತು.