AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope: ರಾಶಿಭವಿಷ್ಯ; ಉದ್ಯೋಗಕ್ಕಾಗಿ ತಯಾರಿ, ಪ್ರಯತ್ನ ನಿಲ್ಲಿಸಬೇಡಿ

ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದರೆ, ಏಪ್ರಿಲ್ 06 ರ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ; ಉದ್ಯೋಗಕ್ಕಾಗಿ ತಯಾರಿ, ಪ್ರಯತ್ನ ನಿಲ್ಲಿಸಬೇಡಿ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Apr 06, 2024 | 12:12 AM

Share

ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಧನು, ಮಕರ, ಕುಂಭ, ಮೀನ ರಾಶಿಯವರ ಇಂದಿನ (ಏಪ್ರಿಲ್ 06) ಭವಿಷ್ಯ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮೀನ ಮಾಸ, ಮಹಾನಕ್ಷತ್ರ: ರೇವತೀ, ಮಾಸ: ಫಾಲ್ಗುಣ, ಪಕ್ಷ: ಕೃಷ್ಣ, ವಾರ: ಶನಿ, ತಿಥಿ: ದ್ವಾದಶೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ಶುಭ, ಕರಣ: ತೈತಿಲ, ಸೂರ್ಯೋದಯ ಬೆಳಗ್ಗೆ 06 ಗಂಟೆ 25 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 44 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:30ರಿಂದ 11:03ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 02:40 ರಿಂದ 03:40 ರ ವರೆಗೆ, ಗುಳಿಕ ಕಾಲ ಬೆಳಿಗ್ಗೆ 06: 26 ರಿಂದ ಬೆಳಗ್ಗೆ 07:58ರ ವರೆಗೆ.

ಧನು ರಾಶಿ: ಸಣ್ಣ ವಿಚಾರಕ್ಕೆ ಸಂಗಾತಿಯ ಜೊತೆ ವೈಮನಸ್ಯ ಉಂಟಾಗಬಹುದು. ಮನೆಯಲ್ಲಿ ನಿಮ್ಮ ಮಾತಿಗೆ ಬೆಲೆ ಸಿಗುತ್ತದೆ. ದಿನಚರಿಯ ವ್ಯತ್ಯಾಸದಿಂದ ಆರೋಗ್ಯ ಕೆಡಬಹುದು. ಅನಿರೀಕ್ಷಿತ ಸಂಪತ್ತು ಸಿಗುವ ಸಾಧ್ಯತೆ ಇದೆ. ಇಂದು ಬಂದ ಅತಿಥಿಯ ಜೊತೆ ಹರಟೆಯನ್ನು ಹೊಡೆಯುತ್ತೀರಿ. ಕಲಾತ್ಮಕ ಮತ್ತು ಸೃಜನಶೀಲ ವ್ಯಕ್ತಿತ್ವಕ್ಕೆ ಬಹಳಷ್ಟು ಮೆಚ್ಚುಗೆ ಬರಲಿದೆ. ನಿರೀಕ್ಷೆಗಿಂತಲೂ ಹೆಚ್ಚಿನ ಫಲವು ಸಿಗಲಿದೆ. ನಿಮ್ಮ ಯಾವುದೇ ಸಂಬಂಧದ ಜೊತೆ ರಾಜಿ ಮಾಡಿಕೊಳ್ಳಲು ಹೋಗಬಹುದು. ಅವಿವಾಹಿತರ ಜೀವನದಲ್ಲಿ ಹೊಸ ಅತಿಥಿಯ ಆಗಮನದ ನಿರೀಕ್ಷೆಯು ಇರುವುದು. ಆಧ್ಯಾತ್ಮದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗುತ್ತದೆ. ಸ್ಪರ್ಧೆಯ ವಿಷಯದಲ್ಲಿ ಮುನ್ನುಗ್ಗುವ ಸ್ವಭಾವವು ಇರಲಿದೆ. ಪ್ರೀತಿಪಾತ್ರರ ಜೊತೆ ನಿಮ್ಮ ಆಪ್ತತೆ ಹೆಚ್ಚಾಗಬಹುದು. ದೂರ ಪ್ರಯಾಣವನ್ನು ನೋವು ಹೆಚ್ಚು ಇಷ್ಟಪಡುವಿರಿ. ತಂದೆಯಿಂದ ಸಹಕಾರವನ್ನು ಪಡೆಯುವಿರಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿದುಬರುವುದು.

ಮಕರ ರಾಶಿ: ಸಣ್ಣ ಬುದ್ಧಿಯನ್ನು ಬಿಟ್ಟು ವ್ಯವಹರಿಸಿ. ಅನೇಕ ಶುಭಸೂಚನೆಗಳು ನಿಮಗೆ ಕಾಣಿಸುವುದು. ನಿಮ್ಮನ್ನು ಗಮನಿಸುವವರು ಹತ್ತಾರು ಮಂದಿಯಿರುತ್ತಾರೆ. ಅವರೇನೇ ಹೇಳಿದರೂ ನಿಮ್ಮ ಸನ್ಮಾರ್ಗವನ್ನು ಬಿಡಬೇಡಿ. ಹಣದ‌ ತೊಂದರೆಗೆ ಮನೆಯಿಂದ ಸಹಾಯ ದೊರೆಯಬಹುದು. ನಿಮಗೆ ಕಲಿಸಿದವರ ಒಡನಾಟವು ಬೆಳೆಯುವುದು. ಸಂಬಂಧಿಕರ ಜೊತೆ ವ್ಯವಹಾರವನ್ನು ಮಾಡಬೇಡಿ. ನಿಮ್ಮ ಆದಾಯ ಮತ್ತು ಖರ್ಚುಗಳನ್ನು ನೀವು ಸಮವಲ್ಲದಿದ್ದರೂ ತೊಂದರೆಯಾಗದಂತೆ ನಿಭಾಯಿಸುವಿರಿ. ಅದು ನಿಮಗೆ ಒಳ್ಳೆಯದು. ಇಲ್ಲವಾದರೆ ಹೆಚ್ಚುತ್ತಿರುವ ಖರ್ಚುಗಳ ಬಗ್ಗೆ ನೀವು ಚಿಂತೆ ಮಾಡುತ್ತೀರಿ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಸಹೋದ್ಯೋಗಿಗಳ ಕಿರಿಕಿರಿಯಿಂದ ಉದ್ಯೋಗವನ್ನು ಬದಲಿಸುವಿರಿ. ಇಂದು ಸ್ತ್ರೀಯರಿಗೆ ಅನಿರೀಕ್ಷಿತ ತೊಂದರೆಗಳು ಇರಲಿದೆ. ನೆರೆಹೊರೆಯರ ಜೊತೆ ವಾಗ್ವಾದ‌ ಮಾಡುವಿರಿ. ಬಾಡಿಗೆ ಮನೆಯ ಮಾಲಿಕರಿಂದ ನಿಮಗೆ ಏನಾದರೂ ಆಗಬಹುದು.

ಕುಂಭ ರಾಶಿ: ಇಂದು ನಿಮ್ಮವರ ಕೆಲವು ಮಾತುಗಳು ಆತುರದ ನಿರ್ಧಾರವನ್ನು ತೆಗದುಕೊಳ್ಳುವಂತೆ ಮಾಡಬಹುದು. ಕುಟುಂಬದ ಅಪರೂಪದ ವ್ಯಕ್ತಿಗಳನ್ನು ಭೇಟಿಯಾಗುವ ಸಂದರ್ಭ ಬರಬಹುದು. ಎಷ್ಟೋ ದಿನದ ಸಾಲಗಳು ಇಂದು ಮುಕ್ತಾಯಗೊಳ್ಳುವುವು‌. ಕಛೇರಿಯಲ್ಲಿ ಅನಿರೀಕ್ಷಿತ ಒತ್ತಡಗಳು ಕಾಣಿಸಿಕೊಳ್ಳುವುದು. ಸಮಾಧಾನದಿಂದ ನಿಭಾಯಿಸಿ. ಕಾಲು ಕೆರೆದುಕೊಂಡು ಪತ್ನಿಯ ಜೊತೆ ಜಗಳವಾಡಬೇಡಿ. ಇಂದು ನೀವು ಬೇರೆ ಬೇರೆ ಕಾರಣಗಳಿಂದ ವಿಶ್ರಾಂತಿ ಪಡೆಯುವುದಿಲ್ಲ. ಕೌಟುಂಬಿಕ ಕಲಹದಿಂದಾಗಿ ನಿಮ್ಮ ತಲೆನೋವು ಇರುತ್ತದೆ. ಇದರಿಂದ ನೀವು ಯಾವುದೇ ಕೆಲಸ ಮಾಡಲು ಬಯಸುವುದಿಲ್ಲ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನೀವು ಎಣಿಸಿದ್ದನ್ನು ಬಂಧುಗಳು ಮಾಡಿಕೊಡುವರು. ನಿಮ್ಮ ವಿನಂತಿಯನ್ನು ಯಾರೂ ಪುರಸ್ಕರಿಸದೇ ಇರಬಹುದು. ನಿಮಗೆ ಬೇರೆ ಬೇರೆ ಮೂಲಗಳಿಂದ ಸಂಪಾದನೆಗೆ ಇಂದು ಅವಕಾಶಗಳು ಸಿಗುವುದು. ಇಷ್ಟಮಿತ್ರರ ಭೇಟಿಯಿಂದ ಖುಷಿಯು ಹೆಚ್ಚಾಗುವುದು.

ಮೀನ ರಾಶಿ: ಇಂದು ನೀವು ಧಾರ್ಮಿಕ ಕಾರ್ಯಗಳಿಗೆ ಹಣವನ್ನು ನೀಡುತ್ತೀರಿ. ಇದರಿಂದ ನೀವು ದಿವ್ಯವಾದ ಆನಂದವೊಂದು ನಿಮ್ಮದಾಗಲಿದೆ. ಹಾಸ್ಯಪ್ರವೃತ್ತಿಯುಳ್ಳ ನೀವು ಇತರರನ್ನೂ ನಗೆಗಡಲಲ್ಲಿ ತೆಲಿಸುವಿರಿ. ಹಿರಿಯ ಹಾಗೂ ಪ್ರಮುಖ ವ್ಯಕ್ತಿಗಳನ್ನು ಇಂದು ಭೇಟಿಯಾಗುತ್ತೀರಿ. ನೀವು‌ ಮಾಡುವ ಕಾರ್ಯಕ್ಕೆ ಇತರರ ಸಹಾಯವೂ ಲಭ್ಯವಾಗಲಿದೆ. ನೀವು ಕ್ರಿಯಾ ಯೋಜನೆಯನ್ನು ತಯಾರಿಸಿದರೆ ಯಶಸ್ಸಿಗೆ ಸಮೀಪವಾಗುವಿರಿ. ಉದ್ಯೋಗಕ್ಕಾಗಿ ತಯಾರಿ ನಡೆಸುತ್ತಿರುವವರು ತಮ್ಮ ಪ್ರಯತ್ನಗಳಲ್ಲಿ ಯಾವುದೇ ಸಡಿಲಿತೆ ಬೇಡ. ದೂರದ ಪ್ರಯಾಣಕ್ಕೆ ಹೋಗುವ ಯೋಗ ಆಕಸ್ಮಿಕವಾಗಿ ಬರಬಹುದು. ಬಂಧುಗಳು ಮನೆಗೆ ಬಂದ ಕಾರಣ ಖರ್ಚು ಹೆಚ್ಚಾದೀತು. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ. ವ್ಯರ್ಥ ಸುತ್ತಟದಿಂದ ನೀವು ಸಿಟ್ಟಾಗುವಿರಿ.