ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿದ್ದು, ಪ್ರತಿಯೊಂದು ರಾಶಿಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ಹಾಗಿದ್ದರೆ, ಇಂದಿನ (ಮಾರ್ಚ್ 12) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಎಂಬ ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ: ಪೂರ್ವಾಭಾದ್ರ, ಮಾಸ: ಫಾಲ್ಗುಣ, ಪಕ್ಷ: ಶುಕ್ಲ, ವಾರ: ಬುಧ, ತಿಥಿ: ತೃತೀಯಾ, ನಿತ್ಯನಕ್ಷತ್ರ: ಅಶ್ವಿನಿ, ಯೋಗ: ಬ್ರಹ್ಮ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 42 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹುಕಾಲ ಮಧ್ಯಾಹ್ನ 12:42 ರಿಂದ 02:12ರ ವರೆಗೆ, ಯಮಘಂಡಕಾಲ ಬೆಳಿಗ್ಗೆ 08:12 ರಿಂದ 09:42ರ ವರೆಗೆ, ಗುಳಿಕಕಾಲ ಮಧ್ಯಾಹ್ನ 11:12 ರಿಂದ 12:42ರ ವರೆಗೆ.
ಮೇಷ ರಾಶಿ: ಮಕ್ಕಳನ್ನು ಯೋಗ್ಯವಾದ ಶಿಕ್ಷಣದ ಕಡೆಗೆ ಬರುವಂತೆ ನೋಡಿ. ಮಕ್ಕಳ ಒಡನಾಟದಿಂದ ನಿಮ್ಮ ಬಲವು ವರ್ತಿಸುವುದು. ಯಾರ ನಡುವೆಯೂ ವಾಗ್ವಾದಕ್ಕೆ ಅವಕಾಶ ಮಾಡಿಕೊಡುವುದು ಬೇಡ. ಮಿತ್ರರ ಸಹಕಾರವನ್ನು ನೆನಪಿಸಿಕೊಳ್ಳುವಿರಿ. ಪ್ರಮಾಣಿಕತೆಯನ್ನು ಹಣಕಾಸಿನ ವ್ಯವಹಾರವನ್ನು ಕೊಡಬಹುದು. ನಂಬಿಕೆಯನ್ನು ಗಳಿಸುವುದು ನಿಮಗೆ ಸವಾಲಾಗಬಹುದು. ನಿರೀಕ್ಷಿತ ಉಡುಗೊರೆಯಿಂದ ಸಂತೋಷವು ಸಿಗುವುದು. ಕಾರ್ಯದಲ್ಲಿ ಉಂಟಾದ ತೊಂದರೆಯನ್ನು ನೀವು ಲೆಕ್ಕಿಸದೇ ಮುನ್ನಡೆಯುವಿರಿ. ಆಭರಣ ಪ್ರಿಯರಿಗೆ ಸಂತೋಷವಾಗುವುದು. ಸಹೋದರರು ನಿಮ್ಮ ಯೋಜನೆಗೆ ಸಹಕರಿಸಬಹುದು. ಹಳೆಯ ವ್ಯವಹಾರವು ಪುನಃ ಮುನ್ನೆಲೆಗೆ ಬಂದು ಕಲಹದಲ್ಲಿ ಅಂತ್ಯವಾಗಬಹುದು. ಸಂಗಾತಿಯ ಪ್ರೀತಿಯನ್ನು ಅನುಭವಿಸಿ ಆನಂದಿಸುವಿರಿ.
ವೃಷಭ ರಾಶಿ: ಇಂದು ಸ್ಥಿರಾಸ್ತಿಯ ಮೇಲೆ ಹೂಡಿಕೆ ಮಾಡುವ ಯೋಚನೆ ಇರಲಿದೆ. ನಿಮ್ಮ ಕಾರ್ಯದ ಒತ್ತಡದಿಂದ ನಿಮ್ಮ ಕುಟುಂಬದ ಅಗತ್ಯಗಳನ್ನು ನಿರ್ಲಕ್ಷಿಸಬೇಡಿ. ಉದ್ಯೋಗದಲ್ಲಿ ಶ್ರಮವಿದ್ದರೂ ಯಶಸ್ಸು ನಿಮ್ಮದಾಗದು. ಕೆಲವು ಸನ್ನಿವೇಶವನ್ನು ನೀವಾಗಿಯೇ ಸೃಷ್ಟಿಸಿಕೊಳ್ಳುವಿರಿ. ಆರ್ಥಿಕತೆಯು ದುರ್ಬಲವಾಗಿದ್ದು ಇದೇ ದೊಡ್ಡ ಚಿಂತೆಯಾಗಬಹುದು. ಏಕಕಾಲಕ್ಕೆ ಹತ್ತಾರು ಚಿಂತನೆಯನ್ನು ಮನಸ್ಸು ಮಾಡಲಿದೆ. ಅಸಭ್ಯ ಮಾತುಗಳನ್ನು ಕಡಿಮೆ ಮಾಡಿ. ನಿಮ್ಮನ್ನು ನೋಡುವ ದೃಷ್ಟಿಕೋನವು ಬದಲಾದೀತು. ನಿಮ್ಮ ಕಾರ್ಯದಲ್ಲಿ ಗುಣಮಟ್ಟ ಕಡಿಮೆ ಆಗಬಹುದು. ಯಾರ ಬೆಂಬಲವನ್ನು ಬಯಸದೇ ಸ್ವತಂತ್ರವಾಗಿ ಕೆಲಸವನ್ನು ಮಾಡುವಿರಿ. ಮನೆಯಲ್ಲಿ ನಿಮಗೆ ಪೂರಕವಾದ ವಾತಾವರಣವಿದ್ದರೂ ಸಂತೋಷವು ಇರದು. ನೀವು ಯಾರ ಪರವಿರೋಧವೂ ಇಲ್ಲದೇ ತಟಸ್ಥರಾಗಿ ಇರುವಿರಿ.
ಮಿಥುನ ರಾಶಿ: ಕೆಲವು ಸವಾಲುಗಳನ್ನು ಎದುರಿಸುವುದು ಅನಿವಾರ್ಯವಾಗುವುದು. ನೀರಿಗೆ ಬಿದ್ದಾದ ಮೇಲೆ ಈಜಲಾರನು ಎಂದಂತಾದೀತು. ನೀವು ಐಚ್ಛಿಕ ಫಲಿತಾಂಶವನ್ನು ಪಡೆಯಲು ಪ್ರಯತ್ನವು ಹೆಚ್ಚು ಬೇಕು. ಕುಟುಂಬ ಸದಸ್ಯರು ನಿಮ್ಮ ಬೆಂಬಲಕ್ಕೆ ನಿಲ್ಲಲಿದ್ದು, ಕುಟುಂಬವೇ ನಿಮ್ಮ ಶಕ್ತಿ. ಸರಿಯಾದುದನ್ನು ಆಯ್ಕೆ ಮಾಡುವುದು ನಿಮ್ಮಿಂದಾಗದು. ಸರ್ಕಾರಿ ಉದ್ಯೋಗದ ಕಡೆ ನಿಮ್ಮ ಮನಸ್ಸು ಹೊರಳುವುದು. ನಿಶ್ಚಿತ ಕಾರ್ಯವು ನಿಮ್ಮಿಂದ ಆಗದೇ ಹೋಗಬಹುದು. ಆದಾಯದಿಂದ ಸಂತೋಷವಿದ್ದರೂ ಅದನ್ನು ರಕ್ಷಿಸುವ ಹೊಣೆಗಾರಿಕೆಯೂ ಇರುವುದು. ಗೊಂದಲವನ್ನು ನೀವು ಮೀರುವುದು ಕಷ್ಟವಾದೀತು. ಶತ್ರುಗಳನ್ನು ಹಿಮ್ಮೆಟ್ಟಿಸುವ ಕಾರ್ಯವು ನಿಮ್ಮ ಕಡೆಯಿಂದ ಆಗುವುದು. ಯಾವುದಾದರೂ ರೀತಿಯಲ್ಲಿ ನೀವು ಆರ್ಥಿಕ ಉಳಿತಾಯವನ್ನು ಮಾಡಬೇಕಾಗುವುದು. ನಿಮ್ಮ ಬಗ್ಗೆ ಇರುವ ನಕಾರಾತ್ಮಕ ವಿಚಾರಗಳೇ ನಿಮ್ಮ ಕಿವಿಗೆ ಬೀಳಬಹುದು.
ಕರ್ಕ ರಾಶಿ: ಹೊಸ ಉದ್ಯಮವನ್ನು ಆರಂಭಿಸುವ ಮೊದಲು ಸಕಾರ ಹಾಗೂ ಸಕಾರಾತ್ಮಕವಾಗಿ ಆಲೋಚಿಸಿರಿ. ಸ್ನೇಹಿತರ ಜೊತೆ ಬೆರೆಯಲು ಮನೆಯಲ್ಲಿ ಒಪ್ಪಿಗೆ ಸಿಗದಿರಬಹುದು. ಸುಳ್ಳನ್ನು ಹೇಳಿ ಸಿಕ್ಕಿ ಬೀಳುವಿರಿ. ಹಣಕಾಸಿನ ಹಿನ್ನಡೆ ತಪ್ಪಿನ ಅರಿವಾಗುವುದು. ಉದ್ಯಮವನ್ನು ಬಿಟ್ಟು ಬೇರೆಯ ಕಾರ್ಯವನ್ನು ಮಾಡಲು ಆಗದು. ಕುಟುಂಬದ ಜವಾಬ್ದಾರಿಯು ನಿಮ್ಮ ಮೇಲೇ ಬರಬಹುದು. ಯಾರನ್ನೋ ಆಡಿಕೊಳ್ಳುವುದು ಪ್ರಿಯವಾಗಬಹುದು. ವೇಗದ ನಡಿಗೆಯಿಂದ ಬೀಳುವಿರಿ. ಆರ್ಥಿಕ ನೆರವನ್ನು ನೀಡಿದವರಿಗೆ ಕೃತಜ್ಞತೆಯನ್ನು ಸಲ್ಲಿಸಿ. ಯಾವಿದೇ ವ್ಯವಸ್ಥೆಯಲ್ಲಿ ಮುಂದುವರಿಯಲು ಇಷ್ಟವಾಗದು. ವ್ಯಂಗ್ಯ ಮಾತುಗಳನ್ನು ಆಡಿ ಯಾರಿಂದಲೂ ಏನನ್ನೂ ನಿರೀಕ್ಷಿಸಲಾಗದು. ಸ್ತ್ರೀಯರಿಂದ ನಿಮಗೆ ಬೈಗುಳವು ಸಿಗಬಹುದು. ಅವಿವಾಹಿತರು ವಿವಾಹದ ಬಗ್ಗೆ ಚಿಂತೆಯಾದೀತು. ದೇಹವು ಹೆಚ್ಚು ವಿಶ್ರಾಂತಿಯನ್ನು ಬಯಸುವುದು.